Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಅನಧಿಕೃತವಾಗಿ, ಮೌಖಿಕವಾಗಿ ಮೋದಿಯ ಸಲಹೆ ಪಡೆದು ನಿಮ್ಮ ಬೇಡಿಕೆ ಬಗ್ಗೆ ಪರಿಶೀಲನೆ ಮಾಡಲಾಗುವುದು !

ಉಪ್ಪಿನಕಾಯಿ-17: ಶ್ರೀರಾಮ ದಿವಾಣ

 

  • ವಿದ್ಯುನ್ಮಾನ ಮತಯಂತ್ರಗಳು ದುರ್ಬಳಕೆಯಾಗುತ್ತಿವೆ ಎಂಬ ಶಂಕೆ ವ್ಯಕ್ತವಾಗಿದ್ದು, ಅವುಗಳ ಪರಿಶೀಲನೆಗೆ ‘ಹ್ಯಾಕಥಾನ್‌’ಗೆ ಚುನಾವಣಾ ಆಯೋಗ ಅವಕಾಶ ಕಲ್ಪಿಸಬೇಕು. – ಐಟಿ ಬಿಟಿ ಸಚಿವ ಪ್ರಿಯಾಂಕ್‌ ಖರ್ಗೆ.

# ಅನಧಿಕೃತವಾಗಿ ಮತ್ತು ಮೌಖಿಕವಾಗಿ ಮೋದಿಯ ಸಲಹೆ ಪಡೆದು ನಿಮ್ಮ ಬೇಡಿಕೆ ಬಗ್ಗೆ ಪರಿಶೀಲನೆ ಮಾಡಲಾಗುವುದು !

 

  • ನಾನು ಮತಯಂತ್ರಗಳ ವಿರೋಧಿ ಅಲ್ಲ. ಮತಯಂತ್ರಗಳಲ್ಲಿ ದೋಷ ಇದೆ ಎಂಬ ಕಾರಣಕ್ಕೇ ಮುಂದುವರೆದ ದೇಶಗಳಲ್ಲಿ ಮರಳಿ ಮತಪತ್ರ ಬಳಸಲಾಗುತ್ತಿದೆ. ಚುನಾವಣೆಯಲ್ಲಿ ಮತಪತ್ರ ಬಳಸಿ ಎಂಬ ನಮ್ಮ ಬೇಡಿಕೆ ಪ್ರಜಾತಂತ್ರದ ವಿರೋಧಿ ಅಲ್ಲ. – ಪ್ರಯಾಂಕ್ ಖರ್ಗೆ (ಐಟಿ ಬಿಟಿ ಸಚಿವ)

# ಯಂತ್ರವೇ ಪ್ರಜಾತಂತ್ರ ವಿರೋಧಿ.

 

  • ಶ್ರೀರಾಮ ವಿವಾಹವಾದ ಈ ನಾಡಿನಲ್ಲಿ ಮದುವೆಯಾಗಲು ಯಾವುದೇ ಸ್ಥಳ ಅವರಿಗೆ ಸಿಗಲಿಲ್ಲವೇ ? – ಇಟೆಲಿಯಲ್ಲಿ ವಿವಾಹವಾದ ಕ್ರಿಕೆಟಿಗ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮರಿಗೆ ಮಧ್ಯಪ್ರದೇಶದ ಬಿಜೆಪಿ ಶಾಸಕ ಪನ್ನಾಲಾಲ್ ಶಕ್ಯಾ ಪ್ರಶ್ನೆ.

# ಅನುಷ್ಕಾಳನ್ನು ಕಾಡಿಗೆ ಬಿಟ್ಟು ಬರಬೇಕಾದೀತು ಎಂಬ ಭಯ ಇರಬಹುದೇ ?

 

  • ಪೊಲೀಸರು ಈ ಸಭೆಯಲ್ಲಿ ಇರದಿದ್ದರೆ ಇಲ್ಲಿ ಸೇರಿದ ಪ್ರತಿಭಟನಾಕಾರರ ಕೈಯಲ್ಲಿ ತಲ್ವಾರ್‌ಗಳು ಇರುತ್ತಿದ್ದವು.                 – ರಾಷ್ಟ್ರೀಯ ಸ್ವಯಂ ಸೇವಕ‌‌ ಸಂಘದ ಪ್ರಜ್ಞಾ ಪ್ರವಾಹದ ಸಂಚಾಲಕ ರಘುನಂದನ್.

#  ಪೌರುಷದ ಮಾತು ಸಾಕು, ತಾಕತ್ತಿದ್ದರೆ ತಲ್ವಾರ್ ಹಿಡಕೊಂಡು ನಾಗಪುರದ ಬಸ್ ಹತ್ತಿ ನೋಡೋಣ !

 

  • ‘ಮುಲ್ಲಾ ಸಿದ್ದರಾಮಯ್ಯ ಸರ್ಕಾರ ‌ದೇಶದ್ರೋಹಿಗಳನ್ನು ಪೋಷಿಸುತ್ತಿದೆ. ಪಾಕಿಸ್ತಾನ ಜಿಂದಾಬಾದ್ ಎಂದವರ ನಾಲಿಗೆ ಕತ್ತರಿಸುತ್ತೇವೆ. – ಬಿಜೆಪಿ ಸಂಸದ ಪ್ರಹ್ಲಾದ ಜೋಷಿ.

# ನೀವು ಇದುವರೆಗೂ ಒಬ್ಬರೇ ಒಬ್ಬರ ನಾಲಿಗೆ ಕತ್ತರಿಸಿಲ್ಲ !

 

  • ಬಿಜೆಪಿ ಕೆಲ ನಾಯಕರು ಕಾಂಗ್ರೆಸ್‌ಗೆ ಬರಲು ಸಿದ್ಧರಿದ್ದಾರೆ. ಸಂಪರ್ಕದಲ್ಲಿ ಕೂಡಾ ಇದ್ದಾರೆ. – ಸಿಎಂ ಸಿದ್ಧರಾಮಯ್ಯ.

# ನಿಮ್ಮ ಸಂಪರ್ಕದಲ್ಲಿರುವ ಬಿಜೆಪಿ ನಾಯಕರು, ನಿಮ್ಮನ್ನೇ ಬಿಜೆಪಿಗೆ ಕರೆಯುತ್ತಿದ್ದಾರೆ ಎಂಬ ಸುದ್ಧಿ ಇದೆಯಲ್ಲ ಸಿದ್ದಣ್ಣ ?

 

  • ರಾಜ್ಯವೊಂದರ ವಿಧಾನಸಭೆಗೆ ನಡೆದ ಚುನಾವಣೆಗಾಗಿ ದೇಶದ ಪ್ರಧಾನಿಯೊಬ್ಬರು ಸಾಕಷ್ಟು ಸಮಯ ಮೀಸಲಿರಿಸಿದ್ದು ದೇಶದ ಇತಿಹಾಸದಲ್ಲಿ ಇದೇ ಮೊದಲಿರಬಹುದು. ನರೇಂದ್ರ ಮೋದಿ ತಮ್ಮ ಎಲ್ಲ ಶಕ್ತಿಯನ್ನೂ ಪಣಕ್ಕಿಟ್ಟು ಸೆಣಸಿದರು. – ಎಚ್.ಡಿ.ದೇವೇಗೌಡ (ಮಾಜಿ ಪ್ರಧಾನಿ)

# ಇನ್ನೊಬ್ಬ ನಾಯಕ ಬೆಳೆಯಬಾರದಲ್ಲ !

 

  • ಜಮ್ಮು ಮತ್ತು ಕಾಶ್ಮೀರದ ಗಡಿ ನಿಯಂತ್ರಣ ರೇಖೆ(ಎಲ್ಒಸಿ) ಮತ್ತು ಅಂತರರಾಷ್ಟ್ರೀಯ ಗಡಿಯಲ್ಲಿ ಈ ವರ್ಷ ಪಾಕಿಸ್ತಾನ ಒಟ್ಟು 881 ಬಾರಿ ಕದನ ವಿರಾಮ ಉಲ್ಲಂಘಿಸಿದ್ದು, 30 ಜನರು ಸಾವಿಗೀಡಾಗಿದ್ದಾರೆ. – ಹಂಸರಾಜ್ ಅಹಿರ್ (ಕೇಂದ್ರ ಗೃಹ ಇಲಾಖೆಯ ರಾಜ್ಯ ಸಚಿವರು)

# ನರೇಂದ್ರ ಮೋದಿಯವರ 56 ಇಂಚಿನ ಎದೆ ನೋಡಿ ಭಯದಿಂದ ದಾಳಿ ನಡೆಸಿರಬೇಕು ! ಇದನ್ನು ಮೋದಿ ಸರಕಾರದ ಸಾಧನೆಯ ಪಟ್ಟಿಗೆ ಸೇರಿಸೋಣವೇ ?

 

  • ಗುಜರಾತ್‌ ಜನತೆ ಪ್ರಧಾನಿ ಮೋದಿಯವರ ಮಾದರಿಯನ್ನು ಒಪ್ಪಿಲ್ಲ. ಅವರ ಪ್ರಚಾರ ವೈಖರಿ ಮತ್ತು ಮಾರುಕಟ್ಟೆ ತಂತ್ರಗಾರಿಕೆ ಚೆನ್ನಾಗಿತ್ತು. ಆದರೆ, ನಮ್ಮ ಪ್ರಶ್ನೆಗಳಿಗೆ ಉತ್ತರಿಸಲು ಅವರಿಂದ ಸಾಧ್ಯವಾಗಿಲ್ಲ. – ರಾಹುಲ್ ಗಾಂಧಿ (ಕಾಂಗ್ರೆಸ್ ಅಧ್ಯಕ್ಷರು)

# ಉತ್ತರ ಕುಮಾರರು ಪ್ರಶ್ನೆಗಳಿಗೆ ಉತ್ತರಿಸುವ ಕ್ರಮವಿಲ್ಲ !

 

Leave a Reply

Your email address will not be published. Required fields are marked *