Realtime blog statisticsweb statistics
udupibits.in
Breaking News
ಉಡುಪಿ: ಶಿರ್ವ ಸಂತ ಮೇರಿ ಪದವಿ ಕಾಲೇಜಿನ ಹಿರಿಯ ಅರ್ಥಶಾಸ್ತ್ರ ಪ್ರಾಧ್ಯಾಪಕ ಡಾ.ರಾಧಾಕೃಷ್ಣ ಭಟ್ ಪೆರ್ಲ ನಿಧನ.

ಮಹಾಯೋಗಿ ವೇಮನ ಅವರ ಹತ್ತು ಗೀತೆಗಳು

# ಆತ್ಮಶುದ್ಧಿಯಿರದ ಆಚಾರವದೇಕೆ ?
ಮಡಿಕೆ ಶುದ್ಧಿಯಿರದ ಅಡುಗೆಯೇಕೆ ?
ಭಾವ ಶುದ್ಧಿಯಿರದ ದೇವಪೂಜೆಯೇಕೆ ?
ವಿಶ್ವದಾಭಿರಾಮ ಕೇಳು ವೇಮ.

# ನೈಜವಾದ ಚೊಕ್ಕ ನೀಲವೊಂದೇ ಸಾಕು.
ಥಳಕು-ಬೆಳಕಿನ ಶಿಲೆ-ತಟ್ಟೆಯೇಕೆ ?
ಓದಲರ್ಹ ಪದ್ಯವೊಂದನೋದೆ, ಸಾಕು.
ವಿಶ್ವದಾಭಿರಾಮ ಕೇಳು ವೇಮ.

# ಗಾಜುಕೊಳಿವೆಯೊಳಗೆ ಬೆಳಗುತಿಪ್ಪ ದೀಪ
ಎಂತಿಹುದೋ ಜ್ಞಾನವಂತೆ ಇಹುದು.
ತಿಳಿದ ಜನರ ದೇಹದಂತರಾಳದಲ್ಲಿ-
ವಿಶ್ವದಾಭಿರಾಮ ಕೇಳು ವೇಮ.

# ಕೊಟ್ಟು ಹೋಗದಂಥ ಖೊಟ್ಟಿ ನರರು ಜಗದಿ
ಹುಟ್ಟಲೇನು ? ಅವರು ಸತ್ತರೇನು ?
ಹುಟ್ಟವೇನು ಹುತ್ತದಿ ಗೆದ್ದಲು ? ಸಾಯವೆ ?
ವಿಶ್ವದಾಭಿರಾಮ ಕೇಳು ವೇಮ.

# ತಾವೆ ಹಡೆದ ಸುತರು, ತಮ್ಮನೆ ಹಡೆದವರು
ಸಾವುದೆಲ್ಲ ತಮಗೆ ಸಾಕ್ಷಿಯಲ್ತೆ ?
ಜೀವನವದು ತಮಗೆ ಬ್ರಹ್ಮಕಲ್ಪನೆಯೇ ?
ವಿಶ್ವದಾಭಿರಾಮ ಕೇಳು ವೇಮ.

# ಓದನೆಷ್ಟು ಓದಲೇನು, ಅರಿಯದನರ ?
ಓದುತಿಪ್ಪಕಾಲ ಸುಗುಣಿಯಂತೆ ತೋರ್ಪ;
ಘನವೆನಿಸದೆ ಕಪ್ಪೆ ಕಮಲವೇರಿದಾಗ
ವಿಶ್ವದಾಭಿರಾಮ ಕೇಳು ವೇಮ.

# ಬೇರಿನ ಹುಳು ಹತ್ತಿ ಮರವೆ ಹಾಳಾಯ್ತು.
ಸೀಡೆ ಹುಳವು ಹತ್ತಿ ಗಿಡವೆ ಹಾಳು.
ಕುತ್ಸಿತ ಜನ ಸೇರಿ ಸುಗುಣವಂತ ಕೆಡುವ
ವಿಶ್ವದಾಭಿರಾಮ ಕೇಳು ವೇಮ.

# ಉಪ್ಪು ಕಪ್ಪುರಗಳಿಗೊಂದೆ ಹೋಲಿಕೆಯಿದೆ.
ನೋಡೆ ನೋಡೆ, ರುಚಿಯ ಮೂಲ ಬೇರೆ,
ಪುರುಷರೊಳಗೆ ಪುಣ್ಯ ಪುರುಷ ಬೇರೆ ಇಹರು.
ವಿಶ್ವದಾಭಿರಾಮ ಕೇಳು ವೇಮ.

# ಅಲ್ಲದೆಡೆಗಳಲ್ಲಿ ಅಧಿಕನೆನಿಸೆ ಹೊಲ್ಲ.
ಅಲ್ಪನೆಂದುಕೊಳಲು ಚಿಂತೆ ಬೇಡ
ಅಲ್ಪವಾಗಿ ಕಾಣದೆ ಗಿರಿ ಕನ್ನಡಿಯೊಳು ?
ವಿಶ್ವದಾಭಿರಾಮ ಕೇಳು ವೇಮ.

# ಕೊಲ್ಲಲರ್ಹನೆನಿಪ ಶತ್ರು, ವಶವಾಗಲು,
ಮುಳ್ಳನಾಡಿಸದಿರು ಸಿಕ್ಕನೆಮದು;
ಒಳ್ಳೆಯದನೆ ಬಗೆದು ಹೋಗೆನುವುದೆ ಸಾವು.
ವಿಶ್ವದಾಭಿರಾಮ ಕೇಳು ವೇಮ.

ಮೂಲ ತೆಲುಗು. ಕನ್ನಡಾನುವಾದ: ಕೆ.ಎಚ್.ಪಾಟೀಲ

Leave a Reply

Your email address will not be published. Required fields are marked *