Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಭ್ರಷ್ಟಾಚಾರವನ್ನೇ ಮನೆ ದೇವ್ರು ಮಾಡಿಕೊಂಡವರ ಸ್ಟೇಟ್ ಮೆಂಟ್ !

ಉಪ್ಪಿನಕಾಯಿ-19: ಶ್ರೀರಾಮ ದಿವಾಣ

 

 • ಗೃಹ ರಕ್ಷಕರ ಬದುಕಿಗೆ ಭದ್ರತೆಯೇ ಇಲ್ಲ. – ಪತ್ರಿಕಾ ವರದಿ.

# ರಕ್ಷಕರ ಬದುಕಿಗೆ ಭದ್ರತೆ ಇಲ್ಲ ಅಂತೀರಿ ! ಇಲ್ಲಿ ಮತ್ತಿನ್ಯಾರ ಬದುಕಿಗೆ ಭದ್ರತೆ ಇದೆ ಹೇಳಿ ?

 

 • ರ್ಯಾನ್ ಅಂತಾರಾಷ್ಟ್ರೀಯ ಶಾಲೆಯ ರಜೆಗಾಗಿ ಪ್ರದ್ಯುಮ್ನ ಠಾಕೂರ್ (7 ವರ್ಷ)ನನ್ನು ಕೊಲೆಗೈದ 16 ವರ್ಷ ಪ್ರಾಯದ ಆರೋಪಿಯನ್ನು ವಯಸ್ಕನಂತೆ ಪರಿಗಣಿಸಿ ಕಾನೂನು ಕ್ರಮ ಮತ್ತು ವಿಚಾರಣೆ ನಡೆಸಲು ಬಾಲ ನ್ಯಾಯ ಮಂಡಳಿ ನಿರ್ದೇಶನ ನೀಡಿದೆ. – ಪತ್ರಿಕಾ ವರದಿ.

# ವಯಸ್ಸಿನಲ್ಲಿ ಅಪ್ರಾಪ್ತರು, ವಿಕೃತ ಮನಸ್ಥಿತಿಯಲ್ಲಿ ಪ್ರಾಪ್ತರು.

 

 •  ರಾಜಧಾನಿ ಸೇರಿದಂತೆ ರಾಜ್ಯದ ನಾನಾ ಕಡೆಗಳಲ್ಲಿ ಪ್ರಮುಖ ಸಂಸ್ಥೆಗಳಿಂದಲೇ ವಿದ್ಯುತ್ ಕಳ್ಳತನವಾಗುತ್ತಿದೆ.        – ಡಿ.ಕೆ.ಶಿವಕುಮಾರ್ (ಇಂಧನ ಸಚಿವರು)

# ಆನೆ ಕದ್ದರೂ ಕಳ್ಳ, ಅಡಿಕೆ ಕದ್ದರೂ ಕಳ್ಳ. ವಿದ್ಯುತ್ ಕಳ್ಳತನ ಮಾಡಿದ ಪ್ರಮುಖ ಸಂಸ್ಥೆಗಳ ಮಾಲೀಕರ ವಿರುದ್ಧ ತೆಗೆದುಕೊಂಡ ಕಾನೂನು ಕ್ರಮದ ಬಗ್ಗೆ ತಿಳಿಸಿ.

 

 • ಕಾಂಗ್ರೆಸ್, ಸೋಲಿನಲ್ಲೂ ಸಂಭ್ರಮ ಕಾಣುತ್ತಿದೆ. – ಸಿ.ಟಿ.ರವಿ (ಬಿಜೆಪಿ ನಾಯಕ)

# ಬಿಜೆಪಿಯ ಅನುಕರಣೆ

 

 • ರಾಜ್ಯದಲ್ಲಿ ಯಾರಿಗೂ ಸುರಕ್ಷತೆ ಇಲ್ಲದಂತಾಗಿದೆ. – ಸಿ.ಟಿ.ರವಿ (ಮಾಜಿ ಸಚಿವ)

# ಅಸುರರ ಆರ್ಭಟ ಹೆಚ್ಚಾಯಿತು, ಸುರಕ್ಷತೆ ಮಾಯವಾಯಿತು.

 

 • ಎಸಿಬಿ ಮುಖ್ಯಮಂತ್ರಿ ಸಿದ್ಧರಾಮಯ್ಯರ ಕೈಗೊಂಬೆ. – ಬಿ.ಜೆ.ಪುಟ್ಟಸ್ವಾಮಿ (ಬಿಜೆಪಿ ನಾಯಕ)

# ಹ್ಯೂಬ್ಲೋಟ್ ವಾಚ್ ಪ್ರಕರಣದಲ್ಲೇ ಅದು ಸ್ಪಷ್ಟವಾಗಿದೆ !

 

 • ತಮ್ಮ ತವರು ರಾಜ್ಯ ಗುಜರಾತ್ ಮತ್ತು ಹಿಮಾಚಲ ಪ್ರದೇಶದಲ್ಲಿ ಬಿರುಸಿನ ಪ್ರಚಾರ ನಡೆಸಿ ಅಲ್ಲಿನ ಚುನಾವಣೆ ಮುಗಿದ ತಕ್ಷಣ, ಮುಂದಿನ ವರ್ಷ ನಡೆಯಲಿರುವ ವಿಧಾನಸಬೆಗಳ ಚುನಾವಣೆಗೆ ಪ್ರಧಾನಿ ಸಜ್ಜಾಗಿದ್ದಾರೆ. – ಪತ್ರಿಕಾ ವರದಿ.

# ವಿದೇಶ ಪ್ರವಾಸದಿಂದ ರಾಜ್ಯ ಪ್ರವಾಸದತ್ತ…!

 

 • ಸುಳ್ಳೇ ಬಿ.ಎಸ್.ಯಡಿಯೂರಪ್ಪ ಅವರ ಮನೆ ದೇವ್ರು. – ಮುಖ್ಯಮಂತ್ರಿ ಸಿದ್ಧರಾಮಯ್ಯ.

# ಭ್ರಷ್ಟಚಾರವನ್ನೇ ಮನೆ ದೇವ್ರು ಮಾಡಿಕೊಂಡವರ ಸ್ಟೇಟ್ ಮೆಂಟ್ !

 

 • ಕೆಲವು ಜಿಹಾದಿ ಮನೋಭಾವನೆಯವರು ಪರೇಶ್ ಎಂಬ ಅಮಾಯಕ ಯುವಕನನ್ನು ಸಾರ್ವಜನಿಕರ ಎದುರೇ ಭೀಭತ್ಸವಾಗಿ ಕೊಲೆ ಮಾಡಿದ್ದಾರೆ. – ಜಗದೀಶ ಶೇಣವ (ವಿಶ್ವ ಹಿಂದೂ ಪರಿಷತ್ತು ದ.ಕ.ಜಿಲ್ಲಾಧ್ಯಕ್ಷರು)

# ಐವಿಟ್ನೆಸ್ ಯಾರೋ ಅವರನ್ನು ಪೊಲೀಸ್ ಠಾಣೆಗೆ ಕರೆದೊಯ್ದು ಮೊದಲು ಹೇಳಿಕೆ ಕೊಡಿಸುವ ಜವಾಬ್ದಾರಿಯನ್ನು ನಿರ್ವಹಿಸಿ. ಕೊಲೆ ನಡೆದು ಇಷ್ಟು ದಿನ ಕಳೆದ್ರೂ ಇನ್ನೂ ಸಹ ಎಲ್ಲಾ ಗೊತ್ತಿದ್ದೂ ಸುಮ್ಮನಿರುವುದು ಪರೇಶ ಮೇಸ್ತ ಹಾಗೂ ಕಾರ್ಯಕರ್ತರಿಗೆ ನೀವು ಮಾಡುವ ದ್ರೋಹವಾಗುತ್ತೆ. ವಿಷಯ ಸಿದ್ಧರಾಮಯ್ಯರಿಗೆ ಗೊತ್ತಾದರೆ, ನಿಮ್ಮ ಮೇಲೆಯೇ ಸಾಕ್ಷ್ಯನಾಶದ ಕೇಸು ಹಾಕಿಬಿಟ್ಟಾರು ಜಾಗ್ರತೆ !

 

 • ಪರೇಶನ ಹತ್ಯೆಗೆ ಪ್ರತೀಕಾರವಾಗಿ 10 ಜನರನ್ನು ಕೊಲ್ಲುವ ಶಕ್ತಿ ಹಿಂದೂ ಸಮಾಜಕ್ಕಿದೆ. – ಜಗದೀಶ ಶೇಣವ (ವಿಹಿಂಪ ಮುಖಂಡ)

# ಇಲ್ಲಿ ನೀವು ಹೇಳಿದ ಹಿಂದೂ ಸಮಾಜದಲ್ಲಿ ನಿಮ್ಮ ಹೆಸರೂ ಸೇರಿದೆಯಾ ಶೇಣವರೇ ?

 

 • ಮಕ್ಕಳನ್ನು ಸಾಮಾಜಿಕ ಜಾಲತಾಣದಿಂದ ದೂರವಿರಿಸಿ. – ಶ್ರೀಧರ ನಾಯಕ್ (ಸಬ್ ಇನ್ಸ್ ಪೆಕ್ಟರ್, ಕುಂದಾಪುರ ಗ್ರಾಮೀಣ ಪೊಲೀಸ್ ಠಾಣೆ)

# ಸರಕಾರವೇ ಉಚಿತವಾಗಿ ಇಂಟರ್ ನೆಟ್ ಕೊಡುತ್ತಿರುವಾಗ ದೂರವಿರಿಸಬೇಕು ಅಂತೀರಲ್ಲಾ ? ಯಥಾ ರಾಜಾ, ತಥಾ ಪ್ರಜಾ !

 

 • ಯಂತ್ರಗಳು ತಪ್ಪು ಮಾಡುವುದಿಲ್ಲ, ಮನುಷ್ಯರು ಮಾಡುತ್ತಾರೆ. – ಟಿ.ಎಸ್.ಕೃಷ್ಣಮೂರ್ತಿ (ನಿವೃತ್ತ ಮುಖ್ಯ ಚುನಾವಣಾ ಆಯುಕ್ತರು)

# ತಪ್ಪು ಮಾಡುವ ಮನುಷ್ಯರೇ ಯಂತ್ರಗಳನ್ನು ತಯಾರಿಸುತ್ತಾರೆ, ಕಂಡುಹಿಡಿಯುತ್ತಾರೆ.

 

 • ಬಿಜೆಪಿ ಅಧಿಕಾರಕ್ಕೆ ಬಂದರೆ 1 ಲಕ್ಷ ಕೋಟಿಯನ್ನು ನೀರಾವರಿಗೆ ತೆಗೆದಿಡುತ್ತೇನೆ ಎಂದು ರಕ್ತದಲ್ಲಿ ಬರೆದು ಕೊಡಲು ಸಿದ್ಧ. – ಬಿ.ಎಸ್.ಯಡಿಯೂರಪ್ಪ (ಬಿಜೆಪಿ ರಾಜ್ಯಾಧ್ಯಕ್ಷರು)

# ಆದರೆ ಹೋದರೆ ಅಜ್ಜಿಗೆ ಮೀಸೆ ಬಂದರೆ ಎತ್ತು ಕರು ಹಾಕಿದರೆ ಕೋಣ ಹಾಲು ಕೊಟ್ಟರೆ…

 

 • ‘ಸನ್ನಿ ಲಿಯೋನ್ ರಸಮಂಜರಿ ಕಾರ್ಯಕ್ರಮಕ್ಕೆ ಏಕೆ ಅಡ್ಡಿ ಮಾಡುತ್ತಿದ್ದೀರಿ’ ಎಂದು ಸರ್ಕಾರವನ್ನು ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ. – ಪತ್ರಿಕಾ ವರದಿ.

# ನೀಲಿ ಚಿತ್ರಗಳ ನಟಿ ಸನ್ನಿ ಮೇಲೆ ಕೆಲವರಿಗೆ ಎಲ್ಲಿಲ್ಲದ ಕಾಳಜಿ ! ಆಗದಿರಲಿ ಸಮೂಹ ಸನ್ನಿ !! ಹೆಣ್ಮಕ್ಕಳ ಮೇಲೆ ನಡೆಯುತ್ತಿರುವ ವಿಕೃತ ಅತ್ಯಾಚಾರ ಕೊಲೆಗಳ ವಿರುದ್ಧ ಹೋರಾಡೋಣ ಬನ್ನಿ.   

Leave a Reply

Your email address will not be published. Required fields are marked *