Realtime blog statisticsweb statistics
udupibits.in
Breaking News
ಉಡುಪಿ: ಬೈಲೂರು ನಿವಾಸಿ, ಮಿಷನ್ ಕಂಪೌಂಡ್ ಸ್ಟಾಂಡ್ ನ ರಿಕ್ಷಾ ಚಾಲಕ, ಮಾಲಕ ರಾಘವೇಂದ್ರ ಭಟ್ (ರಾಘು ಭಟ್) ನಿಧನ.

ಪಿಯು ಕಾಲೇಜು ಬೋಧಕೇತರ ಸಿಬ್ಬಂದಿಗಳ ಶೋಷಣೆ ಬಯಲು: ಕೆಲಸದ ಸಮಯದ ಬಗ್ಗೆ ಇಲಾಖಾಧಿಕಾರಿಗಳಿಂದ ಸ್ಪಷ್ಟನೆ

ಉಡುಪಿ: ರಾಜ್ಯದ ಎಲ್ಲಾ ಸರಕಾರಿ, ಅನುದಾನಿತ ಮತ್ತು ಅನುದಾನ ರಹಿತ ಪದವಿ ಪೂರ್ವ ಕಾಲೇಜುಗಳ ಬೋಧಕೇತರ ಸಿಬ್ಬಂದಿಗಳಿಗೂ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರಂತೆ ಬೆಳಗ್ಗೆ ಗಂಟೆ 9.30ರಿಂದ 10.30ರ ಒಳಗೆ ಕಾಲೇಜಿನ ಕೆಲಸದ ಆರಂಭದ ಸಮಯ ಮತ್ತು ಸಂಜೆ ಗಂಟೆ 3.30ರಿಂದ 4.30ರ ಒಳಗೆ ಮುಕ್ತಾಯದ ಸಮಯವಾಗಿದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕರು ಸ್ಪಷ್ಟಪಡಿಸಿದ್ದಾರೆ.

ಇಲಾಖೆಯ ಅಧಿಕೃತ ಪ್ರಥಮ ಮತ್ತು ದ್ವಿತೀಯ ದಾಖಲಾತಿ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳ ಮಾರ್ಗಸೂಚಿಯಲ್ಲಿ ರಾಜ್ಯದ ಎಲ್ಲಾ ಸರಕಾರಿ, ಅನುದಾನಿತ ಮತ್ತು ಅನುದಾನ ರಹಿತ ಪದವಿ ಪೂರ್ವ ಕಾಲೇಜುಗಳ ವಿದ್ಯಾರ್ಥಿಗಳ, ಉಪನ್ಯಾಸಕರ ಪಠ್ಯ ಮತ್ತು ಬೋಧಕೇತರ ಸಿಬ್ಬಂದಿಗಳ ಕೆಲಸದ ಆರಂಭದ ಸಮಯ ಮತ್ತು ಮುಕ್ತಾಯದ ಸಮಯವನ್ನು ನಿಗದಿಪಡಿಸಲಾಗಿದೆ ಎಂದು ಜಂಟಿ ನಿರ್ದೇಶಕರು ತಿಳಿಸಿದ್ದಾರೆ.

ರಾಜ್ಯದ ಕೆಲವು ಕಾಲೇಜುಗಳಲ್ಲಿ ಕಾಲೇಜು ಅಧಿಕೃತರು ಬೋಧಕೇತರ ಸಿಬ್ಬಂದಿಗಳನ್ನು ಬೆಳಗ್ಗೆ ನಿಗದಿತ ಸಮಯಕ್ಕಿಂತ ಮುಂಚಿತವಾಗಿಯೇ ಕಾಲೇಜಿಗೆ ಬಂದು ಕೆಲಸ ಆರಂಭಿಸುವಂತೆ ಮತ್ತು ಸಂಜೆ ನಿಗದಿತ ಕೆಸಲದ ಅವಧಿ ಮುಕ್ತಾಯವಾದ ಬಳಿಕವೂ ಕೆಲಸ ಮುಂದುವರಿಸುವಂತೆ ಅನಧಿಕೃತವಾಗಿ ಸೂಚಿಸುವ ಮೂಲಕ ಸಿಬ್ಬಂದಿಗಳಿಂದ ಹೆಚ್ಚು ಸಮಯ ದುಡಿಸುವ ಮೂಲಕ ಶೋಷಣೆ ಮಾಡುತ್ತಿದ್ದರು.

ಬೋಧಕೇತರ ಸಿಬ್ಬಂದಿಗಳನ್ನು ಹೆಚ್ಚು ಸಮಯ ದುಡಿಸುವ ಬಗ್ಗೆ ಕಾಲೇಜು ಅಧಿಕೃತರಲ್ಲಿ ಕೇಳಿದಾಗಲೆಲ್ಲಾ, ಕಾಲೇಜು ಅಧಿಕೃತರು ಇಲಾಖೆಯ ಆದೇಶ ಎಂದು ಮೌಖಿಕವಾಗಿ ಹೇಳುತ್ತಾ ಸಾಗ ಹಾಕುತ್ತಿದ್ದರು. ಆದರೆ, ಇದೀಗ ಕೆಲಸದ ಆರಂಭ ಮತ್ತು ಮುಕ್ತಾಯದ ಸಮಯದ ಬಗ್ಗೆ ಬೋಧಕೇತರ ಸಿಬ್ಬಂದಿಗಳಲ್ಲಿ ಇದ್ದ ಗೊಂದಲ ಮತ್ತು ಅಸ್ಪಷ್ಟತೆ ಪದವಿ ಪೂರ್ವ ಶಿಕ್ಷಣ ಇಲಾಖೆಯ ಅಧಿಕೃತ ಸ್ಪಷ್ಟನೆಯಿಂದಾಗಿ ಬಗೆಹರಿದಂತಾಗಿದೆ.

ಉಡುಪಿ ತಾಲೂಕು ಮೂಡುಬೆಳ್ಳೆಯ ಮಾಹಿತಿ ಹಕ್ಕು ಕಾರ್ಯಕರ್ತರಾದ ಅಶ್ವಿನ್ ಲಾರೆನ್ಸ್ ಅವರು ಬೋಧಕೇತರ ಸಿಬ್ಬಂದಿಗಳ ಕೆಲಸದ ಅವಧಿಯ ಬಗ್ಗೆ ಮಾಹಿತಿ ಹಕ್ಕು ಅರ್ಜಿ ಸಲ್ಲಿಸಿ ಕೇಳಿದ ಮಾಹಿತಿಗೆ ಇಲಾಖೆಯ ಜಂಟಿ ನಿರ್ದೇಶಕರು ಕರ್ನಾಟಕ ಮಾಹಿತಿ ಆಯೋಗ ನೋಟೀಸ್ ನಿಡಿದ ಬಳಿಕ ವಿಳಂಬವಾಗಿ ಈ ಸ್ಪಷ್ಟನೆಯನ್ನು ನೀಡಿದ್ದು, ಇದರಿಂದಾಗಿ ಇನ್ನು ಮುಂದೆ ಬೋಧಕೇತರ ಸಿಬ್ಬಂದಿಗಳು ಕಾಲೇಜು ಅಧಿಕೃತರ ಮೌಖಿಕ ಸೂಚನೆಯಂತೆ ಅನಧಿಕೃತವಾಗಿ ಹೆಚ್ಚಿನ ಸಮಯ ದುಡಿಯುವ ಅಗತ್ಯ ಇರುವುದಿಲ್ಲ. ಮಾತ್ರವಲ್ಲ, ಕಾಲೇಜು ಆರಂಭದ ಮತ್ತು ಮುಕ್ತಾಯದ ಸಮಯದ ಅವಧಿಗಿಂತ ಮುಂಚಿತವಾಗಿ ಮತ್ತು ಮುಕ್ತಾಯದ ಬಳಿಕವೂ ಕಾಲೇಜಿನ ಒಳಗೆ ಕೆಲಸ ಮಾಡುವುದು ಅನಧಿಕೃತವಾಗಿದ್ದು, ಇದರ ವಿರುದ್ಧ ಸರಕಾರಕ್ಕೆ ದೂರು ಸಲ್ಲಿಸಿ ಶೋಷಣೆ ಮಾಡುವ ಕಾಲೇಜು ಅಧಿಕೃತರ ವಿರುದ್ಧ ಸೂಕ್ತ ಕ್ರಮಕ್ಕೆ ಕೋರಬಹುದಾಗಿದೆ.

Leave a Reply

Your email address will not be published. Required fields are marked *