Realtime blog statisticsweb statistics
udupibits.in
Breaking News
ಉಡುಪಿ: ಕೂಸಮ್ಮ ಶಂಭು ಶೆಟ್ಟಿ ಸ್ಮಾರಕ ಹಾಜಿ ಅಬ್ದುಲ್ಲಾ ತಾಯಿ-ಮಕ್ಕಳ ಆಸ್ಪತ್ರೆಯಲ್ಲಿ ಶಿಶು ಮರಣ ?

ಸಾವಿರ ಸುಳ್ಳು ಹೇಳಿ ಮದುವೆ ಮಾಡು, ಹಳೆಯ ಗಾದೆ. ಸಾವಿರ ಸುಳ್ಳು ಹೇಳಿ ಅಧಿಕಾರಕ್ಕೆ ಬರಬೇಕು, ಹೊಸ ಗಾದೆ !

ಉಪ್ಪಿನಕಾಯಿ-20: ಶ್ರೀರಾಮ ದಿವಾಣ

 

  • 1975ರಲ್ಲಿ ಇಂದಿರಾ ಗಾಂಧಿ ಸರ್ಕಾರ ಹೇರಿದ್ದ ತುರ್ತುಪರಿಸ್ಥಿತಿ ವಿರೋಧಿಸಿ ಜೈಲುವಾಸ ಅನುಭವಿಸಿದವರಿಗೆ ಸ್ವಾತಂತ್ರ್ಯ ಹೋರಾಟಗಾರರ ಸ್ಥಾನಮಾನ ನೀಡುವ ಕುರಿತು ಸರ್ಕಾರ ಕ್ರಮವಹಿಸಿದೆ. – ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌.

#  ಹಿಂದೂ ಯುವತಿಯರ ಜತೆ ಮಾತನಾಡಿದ್ದಕ್ಕೆ ಮುಸ್ಲೀಂ ಯುವಕರ ಮೇಲೆ ಹಲ್ಲೆ ನಡೆಸಿ ಜೈಲಿಗೆ ಹೋದವರಿಗೆ ಮತ್ತು ಗೋಸಾಗಾಟ ಮಾಡುತ್ತಿದ್ದವರ ಮೇಲೆ ಹಲ್ಲೆ ನಡೆಸಿ, ಕೊಲೆಗೈದು ಜೈಲಿಗೆ ಹೋದವರಿಗೆ ಬಿಜೆಪಿ ಸರಕಾರಗಳು ಸ್ಥಾನಮಾನ ಕೊಟ್ಟರೆ ಆಶ್ಚರ್ಯವಿಲ್ಲ.

 

  • ದೆಹಲಿಯಲ್ಲಿನ ರೋಹಿಣಿ ಆಶ್ರಮದಲ್ಲಿ ಅಕ್ರಮವಾಗಿ ಬಂಧನದಲ್ಲಿ ಇರಿಸಿಕೊಳ್ಳಲಾಗಿದ್ದ 40ಕ್ಕೂ ಹೆಚ್ಚು ಹುಡುಗಿಯರನ್ನು ಗುರುವಾರ ರಕ್ಷಣೆ ಮಾಡಲಾಗಿದೆ. – ಪತ್ರಿಕಾ ವರದಿ.

# ಹಿಂದೂ ಧರ್ಮದ ಮೇಲೆ ನಡೆಸಿದ ಕ್ರೂರ ದಾಳಿ ಇದು. ಇದರ ಹಿಂದೆ ಕಾಂಗ್ರೆಸ್ ಮತ್ತು ಪಾಕಿಸ್ಥಾನದ ಕೈವಾಡವಿದೆ. – ಬಿಡುಗಡೆಯಾಗದ ಹೇಳಿಕೆ.

 

  • 2ಜಿ ತರಂಗಾಂತರ ಹಂಚಿಕೆಯಿಂದ ಸರ್ಕಾರಕ್ಕೆ 76 ಲಕ್ಷ ಕೋಟಿ ನಷ್ಟವಾಗಿದೆ ಎಂಬ ಕಾಲ್ಪನಿಕ ಅಂದಾಜಿನ ವರದಿ ನೀಡಿದ ಮಾಜಿ ಮಹಾಲೇಖಪಾಲ (ಸಿಎಜಿ) ವಿನೋದ್‌ ರಾಯ್‌ ರನ್ನುನರೇಂದ್ರ ಮೋದಿ ನೇತೃತ್ವದ ಸರ್ಕಾರ ಹಲವು ಪ್ರಮುಖ ಹುದ್ದೆಗಳಿಗೆ ನೇಮಿಸಿದೆ. ಈ ಎಲ್ಲವುಗಳಿಗೂ ಅವರು ರಾಜೀನಾಮೆ ಕೊಡಬೇಕು. ಕೇಂದ್ರ ಸರ್ಕಾರ ನೀಡಿರುವ ಪದ್ಮಭೂಷಣ ಪುರಸ್ಕಾರವನ್ನು ಹಿಂದಕ್ಕೆ ಪಡೆಯಬೇಕು. – ಕಾಂಗ್ರೆಸ್ ನಾಯಕರು.

#  ನರೇಂದ್ರ ಮೋದಿಗೆ ತಾನು ಮಾಡಿದ ಉಪಕಾರಕ್ಕೆ ಪ್ರತಿಯಾಗಿ ತನ್ನನ್ನು ಉಪ ಪ್ರಧಾನಿ ಮಾಡಬೇಕು ಎಂಬುದು ವಿನೋದ್ ರಾಯ್ ಹಕ್ಕೊತ್ತಾಯವಂತೆ !  

 

  • ದೊಡ್ಡ ಹಗರಣ (2ಜಿ) ವೊಂದರಲ್ಲಿ ಸರ್ಕಾರದ ಉನ್ನತ ವ್ಯಕ್ತಿಗಳು ಭಾಗಿಯಾಗಿದ್ದಾರೆ ಎಂಬುದು ಸುಳ್ಳಾಗಿತ್ತು. ಈಗ ಅದು ಸುಳ್ಳು ಎಂಬುದು ಸಾಬೀತಾಗಿದೆ. 2014ರ ಲೋಕಸಭಾ ಚುನಾವಣೆಯಲ್ಲಿ ಯುಪಿಎ ಮೇಲಿನ ಈ ಭ್ರಷ್ಟಾಚಾರ ಆರೋಪಗಳನ್ನೇ ಬಿಜೆಪಿ ಮುಖ್ಯ ವಿಷಯವಾಗಿಸಿತ್ತು. ಈ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಹೀನಾಯ ಸೋಲಾಗಿತ್ತು. ಬಿಜೆಪಿ ಪ್ರಚಂಡ ವಿಜಯ ಗಳಿಸಿತ್ತು. – ಪತ್ರಿಕಾ ವರದಿ.

# ಸಾವಿರ ಸುಳ್ಳು ಹೇಳಿ ಮದುವೆ ಮಾಡು, ಹಳೆಯ ಗಾದೆ. ಸಾವಿರ ಸುಳ್ಳು ಹೇಳಿ ಅಧಿಕಾರಕ್ಕೆ ಬರಬೇಕು, ಹೊಸ ಗಾದೆ !

 

  • ಏಳು ವರ್ಷಗಳಿಂದ ಬೇಸಿಗೆ ರಜೆಯಲ್ಲಿಯೂ ಬೆಳಿಗ್ಗೆ 10ರಿಂದ ಸಂಜೆ 5ರ ವರೆಗೂ ಕೋರ್ಟ್‌ನಲ್ಲಿ ಕಾನೂನಾತ್ಮಕವಾಗಿ ಪರಿಗಣಿಸಬಹುದಾದ ಸಾಕ್ಷ್ಯಾಧಾರಗಳಿಗಾಗಿ ಕಾದು ಕುಳಿತಿದ್ದೆ. ಆದರೆ, ಎಲ್ಲವೂ ವ್ಯರ್ಥ. – ಸಿಬಿಐ ವಿಶೇಷ ನ್ಯಾಯಾಧೀಶ ಒ.ಪಿ. ಸೈನಿ (2ಜಿ ಹಗರಣದ ತೀರ್ಪಿನಲ್ಲಿ)

# ವ್ಯರ್ಥ ನಷ್ಟಕ್ಕೆ ಯಾರು ಹೊಣೆ ? ನಷ್ಟಕ್ಕೆ, ಮಾನಹಾನಿಗೆ ಹೊಣೆಗಾರರನ್ನಾಗಿ ಮಾಡುವ ಕೆಲಸವನ್ನು, ವ್ಯವಸ್ಥೆಯನ್ನು ಜಾರಿಗೊಳಿಸುವುದು ಯಾರು, ಯಾವಾಗ ?

 

  • ಪ್ರಕಾಶ್ ರೈ ಅಥವಾ ಪ್ರಕಾಶ್ ರಾಜ್. ನಾನು ಯಾರು ಎಂದು ಪ್ರತಾಪ ಸಿಂಹ ಪ್ರಶ್ನಿಸಿದ್ದಾರೆ. ನನ್ನ ತವರಿನ ಈ ವೇದಿಕೆಯಿಂದಲೇ ಅವರಿಗೆ ಉತ್ತರ ನೀಡುತ್ತಿದ್ದೇನೆ ಎಂದ ಅವರು, ನಾನು ಪ್ರಕಾಶ್ ರೈ ಆಗಿರಲಿ, ಪ್ರಕಾಶ್ ರಾಜ್ ಆಗಿರಲಿ. ಇದರಿಂದ ನಿಮಗೇನು‌‌ ಸಮಸ್ಯೆ ಎಂದು ಪ್ರಶ್ನಿಸಿದರು. – ಪತ್ರಿಕಾ ವರದಿ.

# ಸಮಸ್ಯೆ ಮಾನಸಿಕದ್ದು !

 

  • ಪ್ರಕಾಶ್ ರೈ ನನ್ನ ನಿಜವಾದ ಹೆಸರು. ಪ್ರಕಾಶ್ ರಾಜ್ ಸಿನಿಮಾ ಹೆಸರು. ನನ್ನನ್ನು ಪ್ರಶ್ನಿಸುವ‌‌ ನೀವು, ರಜನೀಕಾಂತ್‌, ರಾಜ್‌ಕುಮಾರ್‌, ವಿಷ್ಣುವರ್ಧನ್ ಅವರನ್ನು‌ ಪ್ರಶ್ನಿಸುತ್ತೀರಾ ? – ಪ್ರಕಾಶ್ ರೈ (ಖ್ಯಾತ ಬಹುಭಾಷಾ ನಟ)

# ಕೊನೆಗೂ ಬೆತ್ತಲಾದ ಪ್ರತಾಪ !

 

  • ನಮ್ಮದು ಆಧ್ಯಾತ್ಮಿಕ, ಧಾರ್ಮಿಕ ಪರಂಪರೆಯ, ಸಾಧು– ಸಂತರ, ಪುಣ್ಯ ಪುರುಷರ ದೇಶ. ಅವರನ್ನು ಪೂಜಿಸಬೇಕೇ ಹೊರತು ಟಿಪ್ಪು ಸುಲ್ತಾನನನ್ನಲ್ಲ. – ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ.

# ನಿಮ್ಮ ಹಿಂದೂ ಧರ್ಮ ಶುರುವಾಗುವುದಕ್ಕಿಂತ ಮೊದಲಿನ ಕಥೆಯನ್ನೇ ಮತ್ತೆ ಮತ್ತೆ ಹೇಳ್ತಿದ್ದೀರಲ್ಲಾ ? ಹಳೆ ಕಥೆ ಸಾಕು, ಹೊಸ ಕಥೆ ಹೇಳಿ…

Leave a Reply

Your email address will not be published. Required fields are marked *