Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

2002ರಲ್ಲಿ ಜನಸಂಖ್ಯೆ ನಿಯಂತ್ರಿಸಲು ಜನಾಂಗೀಯ ಹತ್ಯಾಕಾಂಡ ನಡೆಸಿದ್ದು ಅಭಿವೃದ್ಧಿಯ ಮಾದರಿಯಲ್ಲ ಅಂತೀರಾ ? 

ಉಪ್ಪಿನಕಾಯಿ-21: ಶ್ರೀರಾಮ ದಿವಾಣ

 

  • ಭಾರತದಲ್ಲಿ ಕ್ರೀಡೆಯ ಬಗ್ಗೆ ಪ್ರಿತಿ ಇದೆ. ಭಾರತವನ್ನು ಕ್ರೀಡಾ ರಾಷ್ಟ್ರವನ್ನಾಗಿ ಮಾರ್ಪಡಿಸುವ ಅಗತ್ಯವಿದೆ. – ಸಚಿನ್ ತೆಂಡುಲ್ಕರ್ (ಖ್ಯಾತ ಕ್ರಿಕೇಟಿಗ, ರಾಜ್ಯ ಸಭಾ ಸದಸ್ಯರು)

# ಕ್ರಿಕೆಟ್ ಆಡ್ತಾ, ನೋಡ್ತಾ ಕಾಲ ಕಳಿಬೇಕು, ಹೀಗೆ ಮಾನವ ಸಂಪನ್ಮೂಲ ಸದ್ಬಳಕೆ ಆಗ್ಬೇಕು, ದೇಶ ಖಂಡಿತಾ ಉದ್ಧಾರ ಆದ ಹಾಗೆ !

 

  • ಸುಳ್ಳಿನ ಕಂತೆಯೇ ಬಿಜೆಪಿ ಬಂಡವಾಳ. – ರಾಹುಲ್ ಗಾಂಧಿ (ಕಾಂಗ್ರೆಸ್ ಅಧ್ಯಕ್ಷರು)

# ಸತ್ಯವನ್ನು ಬಂಡವಾಳ ಮಾಡೋಕೆ ನಿಮಗಾಗುತ್ತಿಲ್ಲವಲ್ಲ ?

 

  • ಗುಜರಾತ್ ನಲ್ಲಿ ಅಭಿವೃದ್ಧಿಯ ಯಾವುದೇ ಮಾದರಿ ಇಲ್ಲ, ಕೇವಲ ಸಂಪನ್ಮೂಲವನ್ನು ಲೂಟಿ ಹೊಡೆಯಲಾಗುತ್ತಿದೆ, ಅಷ್ಟೆ. – ರಾಹುಲ್ ಗಾಂಧಿ.

#    2002ರಲ್ಲಿ ಜನಸಂಖ್ಯೆ ನಿಯಂತ್ರಿಸಲು ಜನಾಂಗೀಯ ಹತ್ಯಾಕಾಂಡ ನಡೆಸಿದ್ದು ಅಭಿವೃದ್ಧಿಯ ಮಾದರಿಯಲ್ಲ ಅಂತೀರಾ ? 

 

  • ಹೊನ್ನಾವರದ 9ನೇ ತರಗತಿ ಬಾಲಕಿಯೊಬ್ಬಳ ಮೇಲೆ ಜಿಹಾದಿಗಳು ಅತ್ಯಾಚಾರಕ್ಕೆ ಪ್ರಯತ್ನಿಸಿ, ಕೊಲೆ ಮಾಡಲು ಯತ್ನಿಸಿದ್ದಾರೆ’ ಎಂದು ಟ್ವೀಟ್‌ ಮಾಡಿದ್ದ ಆರೋಪದ ಮೇಲೆ ಉಡುಪಿ ಸಂಸದೆ ಶೋಭಾ ಕರಂದ್ಲಾಜೆ ವಿರುದ್ಧ ಪಟ್ಟಣದ ಪೊಲೀಸರು ಶುಕ್ರವಾರ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ. – ಪತ್ರಿಕಾ ವರದಿ.

# ಎಷ್ಟು ಬೇಕಾದರೂ ಕೇಸು ದಾಖಲಿಸಿ. ಬಿಜೆಪಿ ಸರಕಾರ ಇಂಥವರೆಲ್ಲರಿಗೂ ಸ್ವಾತಂತ್ರ್ಯ ಹೋರಾಟಗಾರರ ಸ್ಥಾನಮಾನ ನೀಡುವ ದಿನ ದೂರವಿಲ್ಲ. ಆದರ್ಶಕ್ಕೆ, ಮಾದರಿಗೆ, ನಾಯಕತ್ವಕ್ಕೆ ಕೇಸುಗಳೇ ಮಾನದಂಡವಾಗುತ್ತಿರುವ ಕಾಲವಿದು !

 

  • ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವೆ ಸ್ಮೃತಿ ಇರಾನಿ ಅವರು 2015ರಲ್ಲಿ ದತ್ತು ತೆಗೆದುಕೊಂಡಿರುವ ಗುಜರಾತಿನ ಆನಂದ್ ಜಿಲ್ಲೆಯ ಮಗ್‌ರೋಲ್ ಗ್ರಾಮದಲ್ಲಿ ಜಾತಿ ಆಧಾರದಲ್ಲಿ ತಾರತಮ್ಯ ಮಾಡಲಾಗುತ್ತಿದೆ ಎಂಬ ಆರೋಪ ವರದಿಯಾಗಿದೆ. ಈ ಗ್ರಾಮದಲ್ಲಿ ಒದಗಿಸಲಾಗಿರುವ ಕುಡಿಯುವ ನೀರಿನ ವ್ಯವಸ್ಥೆ ಮತ್ತು ಇತರ ಸೌಲಭ್ಯಗಳನ್ನು ಜಾತಿ ಆಧಾರದಲ್ಲಿ ವಿಭಜಿಸಲಾಗಿದೆ. ದಲಿತರು ಪ್ರತ್ಯೇಕ ಬಾವಿಗಳನ್ನು ಬಳಸುತ್ತಿದ್ದಾರೆ. ಕೌಶಲ ಕೇಂದ್ರವನ್ನು ಮುಚ್ಚಲಾಗಿದೆ ಎಂದು ಗುಜರಾತಿನ ವೆಬ್‌ಸೈಟ್ಮೇರಾ ನ್ಯೂಸ್ ವರದಿ ಮಾಡಿದೆ. – ಪತ್ರಿಕಾ ವರದಿ.

# ಮೋದಿಯ ಏಕ ಭಾರತ್ ಗೆ ಗುಜರಾತ್ ಮಾದರಿಯ ಸವಾಲು !

Leave a Reply

Your email address will not be published. Required fields are marked *