Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಅಜ್ಞಾನದ ಪರಮಾವಧಿ !

ಉಪ್ಪಿನಕಾಯಿ-23: ಶ್ರೀರಾಮ ದಿವಾಣ

 

  • ವೇದಕ್ಕಿರುವಷ್ಟು ತೂಕ ಮಹಾಭಾರತಕ್ಕಿದೆ. – ವಿದ್ಯಾಧೀಶ ತೀರ್ಥ ಸ್ವಾಮೀಜಿ (ಪಲಿಮಾರು ಮಠ)

# ಅಜ್ಞಾನದ ಪರಮಾವಧಿ !

 

  • ಕೇಂದ್ರ ಸಚಿವ ಅನಂತಕುಮಾರ ಹೆಗಡೆಗೆ ಸಂಸ್ಕೃತಿ ಇಲ್ಲ. ರಾಜಕೀಯ ಭಾಷೆ, ಸಂಸದೀಯ ಭಾಷೆ ಗೊತ್ತಿಲ್ಲ. ದೇಶದ ಸಾಮಾಜಿಕ ವ್ಯವಸ್ಥೆ ಬಗ್ಗೆ ಅರಿವಿಲ್ಲ. ದೇಶದ ಸಂವಿಧಾನದ ಬಗ್ಗೆ ಗೌರವ ಇಲ್ಲ. – ಮುಖ್ಯಮಂತ್ರಿ ಸಿದ್ದರಾಮಯ್ಯ.

# ಬಾವಿಯೊಳಗಿನ ಕಪ್ಪೆ ಎನ್ನಿ !

 

  • ತಲೆ ಕೆಟ್ಟು ಹುಚ್ಚರಂತೆ ಮಾತನಾಡುವ ಅನಂತಕುಮಾರ ಹೆಗಡೆಯನ್ನು ಹುಚ್ಚಾಸ್ಪತ್ರೆಗೆ ಸೇರಿಸಬೇಕು. – ರುದ್ರಪ್ಪ ಲಮಾಣಿ (ಮುಜರಾಯಿ ಮತ್ತು ಜವಳಿ ಸಚಿವರು)

# ಹುಚ್ಚಾಸ್ಪಾತ್ರೆಯಲ್ಲಿರುವವರೂ ಕಣ್ಣು, ಮೂಗು, ಬಾಯಿ ಮುಚ್ಚಲು ನಿರ್ಧರಿಸಿದ್ದಾರಂತೆ !

 

  • ಒಂದು ಗ್ರಾಮ ಪಂಚಾಯ್ತಿ ಸದಸ್ಯನಾಗಲೂ ಹೆಗಡೆಗೆ ಯೋಗ್ಯತೆ ಇಲ್ಲ. – ಮುಖ್ಯಮಂತ್ರಿ ಸಿದ್ಧರಾಮಯ್ಯ

# ಸಂಸತ್ತನ್ನು ಗ್ರಾಮ ಪಂಚಾಯತ್ ಎಂದು ಅವರು ತಿಳಿದುಕೊಂಡಿದ್ದಾರೆ !

 

  • ಜನರು ಸ್ವಂತ ವಾಹನಗಳನ್ನು ಬಿಟ್ಟು ಸಾರ್ವಜನಿಕ ಸಾರಿಗೆ ಬಳಸುವುದರಿಂದ ಹಣ ಉಳಿತಾಯವಾಗಲಿದೆ. ಇಂಧನದ ಬಳಕೆ ತಗ್ಗಿ ಪರಿಸರಕ್ಕೂ ಅನುಕೂಲವಾಗಲಿದೆ. – ಪ್ರಧಾನಿ ನರೇಂದ್ರ ಮೋದಿ

# ಡೈಲಾಗ್ ಸಾಕು, ಮೊದಲು, ನಮ್ಮ ಯಾವುದೇ ಪರಿವಾರ ಸಂಘಟನೆಗಳು ಇನ್ನು ಮುಂದೆ ಎಲ್ಲಿಯೂ, ಯಾವ ಕಾರಣಕ್ಕೂ ಬೈಕ್ ರ್ಯಾಲಿ ನಡೆಸುವುದಿಲ್ಲ ಎಂದು ಘೋಷಿಸಿ.

 

  • ಮೆಟ್ರೊದಲ್ಲಿ ಪ್ರಯಾಣ ಮಾಡುವುದು ಘನತೆಯ ವಿಷಯವಾಗಬೇಕು. – ಪ್ರಧಾನಿ ನರೇಂದ್ರ ಮೋದಿ

# ಇತರ ವಾಹನಗಳಲ್ಲಿ ಪ್ರಯಾಣಿಸುವುವವರು ಘನತೆ ಇಲ್ಲದವರು ಎನ್ನಿ, ಸುತ್ತು ಬಳಸಿ ಮಾತು ಸಾಕು !

 

  • ದೇಶದ ಅತಿ ದೊಡ್ಡ ಭ್ರಷ್ಟಾಚಾರ ಹಗರಣ ಮತ್ತು ಮಾಧ್ಯಮಗಳಲ್ಲಿ ಅತಿಯಾಗಿ ವಿಜೃಂಭಿತವಾದ ಸುದ್ದಿ ಎಂದ ಮಾತ್ರಕ್ಕೆ ಸೂಕ್ತ ಸಾಕ್ಷ್ಯಗಳಿಲ್ಲದೆ ಯಾರಿಗೂ ಶಿಕ್ಷೆ ನೀಡಲು ಸಾಧ್ಯವಿಲ್ಲ. – 2ಜಿ ತರಂಗಾಂತರ ಹಗರಣದ ತೀರ್ಪು ನೀಡಿದ ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಒ.ಪಿ. ಸೈನಿ ಸ್ಪಷ್ಟನೆ.

# ಟಿಆರ್ ಪಿಗಾಗಿ ಮಾಧ್ಯಮಗಳು, ಪ್ರಸಿದ್ಧಿ, ಜನಪ್ರಿಯತೆಗಾಗಿ ಕೆಲವು ಗಣ್ಯರು, ಸಂಘಟನೆಗಳು, ರಾಜಕಾರಣಿಗಳು ಹಿಂದೆ ಮುಂದೆ ಯೋಚಿಸಿದೆ ಬಾಯಿಗೆ ಬಂದಂತೆ ಬೊಬ್ಬಿಡುವುದು ಇಲ್ಲಿನ ಸ್ಪೆಷಾಲಿಟಿ !

 

  • ನಮ್ಮ ಸರ್ಕಾರ ಪಾಕಿಸ್ತಾನಕ್ಕೆ ತಕ್ಕ ಪ್ರತ್ಯುತ್ತರ ನೀಡಬೇಕು. ಆದರೆ ಕೇಂದ್ರ ಸರಕಾರ ಯಾವ ಕ್ರಮವನ್ನೂ ಕೈಗೊಳ್ಳುತ್ತಿಲ್ಲವೇಕೆ ? – ಮೃತ ಯೋಧ ಪರ್ಗತ್‌ ಸಿಂಗ್‌ ತಂದೆ ರತನ್‌ ಸಿಂಗ್.

# ಕೊಚ್ಚಿಕೊಳ್ಳುವುದನ್ನೇ ಅಡಳಿತ ಎಂದು ತಿಳಿದುಕೊಂಡವರಲ್ಲಿ ನೀವು ಪ್ರಶ್ನೆ ಕೇಳುತ್ತಿದ್ದೀರಿ !

 

  • ಒಂದು ದಿನ ನೀವೂ ಬಿಳಿ ಮೇಲಂಗಿ ಧರಿಸಿ ವೈದ್ಯರಾಗಿ. – ಪ್ರಧಾನಿ ನರೇಂದ್ರ ಮೋದಿಯವರಿಗೆ ಬರೆದ ಪತ್ರದಲ್ಲಿ, ಅಖಿಲ ಭಾರತ ವೈದ್ಯ ವಿಜ್ಞಾನ ಸಂಸ್ಥೆ(ಏಮ್ಸ್)ಯ ನಿವಾಸಿ ವೈದ್ಯರ ಸಂಘಟನೆ (ಆರ್‌ಡಿಎ) ಸಲಹೆ.

# ಫೋಟೋಗಾಗಿ, ಪ್ರಚಾರಕ್ಕಾಗಿ ಒಂದು ಕ್ಷಣ ಚರಕಾ ಜೊತೆಗೆ ಕುಳಿತು ಮಹಾತ್ಮಾ ಗಾಂಧಿ ಆಗಿದ್ದಾಗಿದೆ !

Leave a Reply

Your email address will not be published. Required fields are marked *