Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಆರೋಪಿಯೇ ವಕೀಲ, ಆರೋಪಿಯೇ ನ್ಯಾಯಾಧೀಶ, ಯೋಗಿಗೆ ಯೋಗ ಅಚ್ಛೆ ದಿನ್ !

ಉಪ್ಪಿನಕಾಯಿ-24: ಶ್ರೀರಾಮ ದಿವಾಣ

 

 • ಅಂತಿಮವಾಗಿ ನಾನು ರೈತರ ಪರವಾಗಿ ನಿಲ್ಲುತ್ತೇನೆ. – ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ (ಮಹದಾಯಿ ನೀರಾವರಿ ವಿವಾದದ ಬಗ್ಗೆ ನಡೆದ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಪಾರ್ಟಿ ನಾಯಕತ್ವಕ್ಕೆ ನೀಡಿದ ಎಚ್ಚರಿಕೆ)

#  ಬಿಜೆಪಿ ರಾಜ್ಯಾಧ್ಯಕ್ಷರ ಬಾಯಿಯಿಂದಲೇ ಉಳಿದ ಬಿಜೆಪಿ ನಾಯಕರ ಅಸಲಿಯತ್ತು ಬಯಲು !

 

 • ಕೇಂದ್ರ ಮಂತ್ರಿ ಅನಂತಕುಮಾರ್ ಹೆಗಡೆ ಜಾತ್ಯಾತೀತರ ಅಪ್ಪ ಯಾರೆಂದು ಪ್ರಶ್ನಿಸುತ್ತಾರೆ. ಜಾತ್ಯಾತೀತ ತತ್ವದಲ್ಲಿ ಅಚಲ ನಂಬಿಕೆ ಹೊಂದಿರುವ ಎಡಪಕ್ಷಗಳ ಸದಸ್ಯರಿಗೆ ಬುದ್ದ, ಬಸವಣ್ಣರೇ ತಾತಂದಿರು, ಭಗತ್ ಸಿಂಗ್ ತಂದೆ, ಮಹಾತ್ಮಾ ಗಾಂಧಿ ದೊಡ್ಡಪ್ಪ, ಡಾ.ಬಿ.ಆರ್.ಅಂಬೇಡ್ಕರ್ ಚಿಕ್ಕಪ್ಪ, ಪೆರಿಯಾರ್, ನಾರಾಯಣ ಗುರುಗಳು, ಸಂತ ಶಿಶುನಾಳ ಶರೀಫರು ಬಂಧುಗಳು. – ಡಾ.ಸಿದ್ದನಗೌಡ ಪಾಟೀಲ (ಸಿಪಿಐ ರಾಜ್ಯ ಕಾರ್ಯದರ್ಶಿಗಳು)

#  ಹೊಲಸು ಬಾಯಿಯ ಪ್ರಶ್ನೆಗೆ, ಶ್ರೇಷ್ಠ ಚಿಂತನೆಯ ಉತ್ತರ.

 

 • ಧ್ವೇಷವೇ ನಿಮ್ಮ ತಂದೆ, ಅಸಹನೆಯೇ ನಿಮ್ಮ ತಾಯಿ, ಭ್ರಮೆಯೇ ನಿಮ್ಮ ಮೂಲ ಪುರುಷ, ಮಿಥ್ಯಾ ಎಂಬುದೇ ನಿಮ್ಮ ಜ್ಞಾನ ಸಂಪತ್ತು. – ಕೇಂದ್ರ ಮಂತ್ರಿ ಅನಂತ ಕುಮಾರ್ ಹೆಗಡೆಗೆ ಬರೆದ ಬಹಿರಂಗ ಪತ್ರದಲ್ಲಿ ದೇವನೂರ ಮಹಾದೇವ (ಹಿರಿಯ ಸಾಹಿತಿ, ಚಿಂತಕರು)

#  ಶ್ರೇಷ್ಠ ವೈಚಾರಿಕ ವ್ಯಾಖ್ಯಾನ 

 

 • ದೇಶದಲ್ಲಿ ಮೊಟ್ಟ ಮೊದಲ ರಾಜಕೀಯ ಕೊಲೆ ಗೋಡ್ಸೆ ವಂಶ ನಿಮ್ಮದು (ಬಿಜೆಪಿ), ಸ್ವಾತಂತ್ರ್ಯ ಹೋರಾಟ ಮಾಡಿದ್ದು ತಪ್ಪು ಎಂದು ಬ್ರಿಟೀಷರಿಗೆ ಮುಚ್ಚಳಿಕೆ ಬರೆದುಕೊಟ್ಟ ವೀರ್ ಸಾವರ್ಕರ್ ವಂಶಸ್ಥರು ನೀವು (ಬಿಜೆಪಿ). – ಡಾ.ಸಿದ್ದನಗೌಡ ಪಾಟೀಲ (ಸಿಪಿಐ ರಾಜ್ಯ ಕಾರ್ಯದರ್ಶಿಗಳು)

#  ಕೊಲೆಗಡುಕರ, ದ್ರೋಹಿಗಳ ಮಕ್ಕಳು !

 

 • ಕೇಂದ್ರ ಮಂತ್ರಿ ಅನಂತ ಕುಮಾರ್ ಹೆಗಡೆ, ನಾಥೂರಾಂ ಗೋಡ್ಸೆ ಸಂತಾನ. – ಡಾ.ಸಿದ್ದನಗೌಡ ಪಾಟೀಲ (ಸಿಪಿಐ ರಾಜ್ಯ ಕಾರ್ಯದರ್ಶಿಗಳು)

#  ಥೂ…

 

 • ಕೇಂದ್ರ ಮಂತ್ರಿ ಅನಂತ ಕುಮಾರ್ ಹೆಗಡೆ ಗ್ರಾಮ ಪಂಚಾಯತ್ ಸದಸ್ಯನಾಗಲೂ ನಾಲಾಯಕ್. – ಮುಖ್ಯಮಂತ್ರಿ ಸಿದ್ಧರಾಮಯ್ಯ.

#  ಗ್ರಾಮ ಪಂಚಾಯತ್ ನ ಘನತೆ ಮತ್ತು ಗೌರವ ಉಳಿಸಿದವರಿಗೆ ಅಭಿನಂದನೆಗಳು !

 

 • ಪ್ರಪಂಚದಲ್ಲಿ ತನ್ನ ಸ್ವಾರ್ಥ ರಾಜಕಾರಣಕ್ಕಾಗಿ ಅಪಾಯಕಾರಿ ಸುಳ್ಳು ಹೇಳುವ ಪ್ರಧಾನಿ, ನರೇಂದ್ರ ಮೋದಿ. – ದಿನೇಶ್ ಗುಂಡೂರಾವ್ (ಕಾಂಗ್ರೆಸ್ ರಾಜ್ಯ ಕಾರ್ಯಾಧ್ಯಕ್ಷರು)

#  ಸುಳ್ಳು ನನ್ನ ತಾಯಿ-ತಂದೆ, ಸುಳ್ಳೇ ನನ್ನ ಬಂಧು-ಬಳಗವು, ಸುಳ್ಳು ಹೇಳದೆ ಸತ್ಯ ನುಡಿದರೆ ಮೆಚ್ಚಲಾರರು ಅಂಧಾಭಿಮಾನಿಗಳು !

 

 • ಗೃಹ ಬಳಕೆ ಎಲ್‌ಪಿಜಿ ಸಿಲಿಂಡರ್ ದರವನ್ನು ಪ್ರತಿ ತಿಂಗಳು 4ರಂತೆ ಹೆಚ್ಚಿಸಲು ತೈಲ ಕಂಪೆನಿಗಳಿಗೆ ನೀಡಿದ್ದ ಸೂಚನೆಯನ್ನು ಕೇಂದ್ರ ಸರ್ಕಾರ ಹಿಂಪಡೆದಿದೆ. – ಪತ್ರಿಕಾ ವರದಿ.

#  ಚುನಾವಣಾ ಪೂರ್ವಭಾವಿ ತಾಲೀಮನ್ನು ಸ್ವಾಗತಿಸೋಣ, ಚುನಾವಣಾ ನಂತರ ಮತ್ತೆ, ಗೃಹ ಬಳಕೆ ಎಲ್ ಪಿ ಜಿ ದರವನ್ನು ಪ್ರತಿ ತಿಂಗಳು 8ರಂತೆ ಹೆಚ್ಚಿಸಲು ತೈಲ ಕಂಪೆನಿಗಳಿಗೆ ಸೂಚನೆ ನೀಡಬಹುದೆಂಬ ಎಚ್ಚರವೂ ನಮ್ಮಲ್ಲಿರಲಿ.

 

 • ಚುನಾವಣೆ ಅಂಗವಾಗಿ ಚಲೋ ಗುಜರಾತ್‌ ಚಳವಳಿ ಕೈಗೊಂಡಿದ್ದೆವು. ಜಿಗ್ನೇಶ್ ಅದರ ಭಾಗವಾಗಿದ್ದರು. ಜಿಗ್ನೇಶ್ ಗೆಲುವು ವೈಯುಕ್ತಿಕ ಅಲ್ಲ, ಅದು ಚಳವಳಿಗೆ ಸಂದ ಜಯ. – ತೀಸ್ತಾ ಸೆಟಲ್ವಾಡ್ (ಖ್ಯಾತ ವಕೀಲೆ, ಪತ್ರಕರ್ತೆ, ಕೋಮುವಾದ ವಿರೋಧಿ ಹೋರಾಟಗಾರ್ತಿ)

#  ಸ್ವ ಕುಚ ಮರ್ದನ !

 

 • ಗುಜರಾತ್‌ನಲ್ಲಿ ಹಿಂದುತ್ವದ ಅಲೆ ಸಡಿಲಗೊಂಡಿದೆ. ಜಿಗ್ನೇಶ್ ಮೇವಾನಿ ಗೆಲುವು ಇದಕ್ಕೆ ಸಾಕ್ಷಿ. – ತೀಸ್ತಾ ಸೆಟಲ್ವಾಡ್ (ಸಾಮಾಜಿಕ ಕಾರ್ಯಕರ್ತೆ)

#  ಹ್ಹ ಹ್ಹ ಹ್ಹ….

 

 • ಎತ್ತಿನಹಳೆಯಿಂದ ನೀರು ಹರಿಯುವುದಿಲ್ಲ. ಬದಲಾಗಿ ಹಣದ ಹೊಳೆ ಹರಿಯುತ್ತಿದೆ ಎಂದ ಅವರು, ಎತ್ತಿನಹೊಳೆಯಿಂದ ನೀರು ಸಿಗುವುದಾದರೆ, 1,500 ಕೋಟಿ ವರ್ಷದ ವೆಚ್ಚದಲ್ಲಿ ಬೆಂಗಳೂರಿನ ತ್ಯಾಜ್ಯ ನೀರನ್ನು ಸಂಸ್ಕರಿಸುವ ಅಗತ್ಯ ಏನಿತ್ತು ? – ಎಚ್.ಡಿ.ಕುಮಾರಸ್ವಾಮಿ (ಜೆಡಿಎಸ್ ರಾಜ್ಯಾಧ್ಯಕ್ಷರು, ಮಾಜಿ ಮುಖ್ಯಮಂತ್ರಿಗಳು)

#  ಎತ್ತಿನಹೊಳೆ ಗುತ್ತಿಗೆದಾರರ ಅಗತ್ಯಕ್ಕೆ, ತ್ಯಾಜ್ಯ ನೀರಿನ ಸಂಸ್ಕರಣೆ ಅಧಿಕಾರಿಗಳ ಅಗತ್ಯಕ್ಕೆ ! ಎರಡರಿಂದಲೂ ಬರುವ ಆದಾಯ ಚುನಾವಣೆ ಸಮಯದಲ್ಲಿ ಮತದಾರರ ಹೊಟ್ಟೆ ಮತ್ತು ಜೇಬು ತುಂಬಿಸಲು ಸದುಪಯೋಗವಾಗುವುದಾದರೆ, ನಿಮ್ಮದೇನು ಅನಗತ್ಯ ಪ್ರಶ್ನೆ ?

 

 • ಪ್ರತಿಬಂಧಕ ಆದೇಶವನ್ನು ಉಲ್ಲಂಘಿಸಿದ ವಿಚಾರದಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರ ವಿರುದ್ಧ 1995ರಲ್ಲಿ ದಾಖಲಾಗಿದ್ದ ಪ್ರಕರಣವನ್ನು ಹಿಂಪಡೆಯಲು ಉತ್ತರ ಪ್ರದೇಶ ಸರ್ಕಾರ ತೀರ್ಮಾನಿಸಿದೆ. – ಪತ್ರಿಕಾ ವರದಿ.

#  ಆರೋಪಿಯೇ ವಕೀಲ, ಆರೋಪಿಯೇ ನ್ಯಾಯಾಧೀಶ, ಯೋಗಿಗೆ ಯೋಗ ಅಚ್ಛೆ ದಿನ್ !

 

 • ನನ್ನ ಮಾತಿನಿಂದ ಯಾರಿಗಾದರೂ ನೋವಾಗಿದ್ದರೆ ನಾನು ಕ್ಷಮೆ ಕೋರುತ್ತೇನೆ. ನನಗೆ ಸಂವಿಧಾನ, ಸಂಸತ್ತು ಮತ್ತು ಬಾಬಾ ಸಾಹೇಬ್‌ ಅಂಬೇಡ್ಕರ್‌ ಅವರ ಬಗ್ಗೆ ಅಪಾರ ಗೌರವವಿದೆ. ನನಗೆ ಸಂವಿಧಾನವೇ ಸರ್ವೋಚ್ಛ. ದೇಶದ ಪ್ರಜೆಯಾಗಿ ನಾನು ಸಂವಿಧಾನಕ್ಕೆ ವಿರುದ್ಧವಾಗಿ ನಡೆಯಲಾರೆ. – ಅನಂತ ಕುಮಾರ್ ಹೆಗಡೆ (ಕೇಂದ್ರ ಮಂತ್ರಿ)

#   ಅನಂತನ ಗರ್ವಭಂಗ

 

 • ರಾಷ್ಟ್ರಪತಿ ಅವರ ಭಾಷಣ ಮುಂದುವರಿಯುತ್ತಿದ್ದಂತೆಯೇ ಸಂಘಟಕರು ಸಭಿಕರಿಗೆ ಆಹಾರದ ಪೊಟ್ಟಣಗಳನ್ನು ವಿತರಿಸಲು ಆರಂಭಿಸಿದರು. ಆಗ ಸಮಾವೇಶದ ಪ್ರತಿನಿಧಿಗಳು, ಸುದ್ದಿಗಾರರು, ವಿದ್ಯಾರ್ಥಿಗಳು ಅವುಗಳನ್ನು ಪಡೆಯಲು ಮುಗಿಬಿದ್ದಾಗ ಗದ್ದಲದ ವಾತಾವರಣ ನಿರ್ಮಾಣವಾಯಿತು. ಇದರಿಂದ ಮುಜುಗರಕ್ಕೆ ಒಳಗಾದ ಕೋವಿಂದ್‌, ತಮ್ಮ ಮಾತು ಮುಗಿದ ಮೇಲೆ ಪೊಟ್ಟಣಗಳನ್ನು ವಿತರಿಸುವಂತೆ ಮನವಿ ಮಾಡಿದರು. – ರಮಾನಾಥ ಕೋವಿಂದ್ (ರಾಷ್ಟ್ರಪತಿಗಳು)

#  ಶೇಮ್ ಶೇಮ್.

 

 • ಆರ್ಥಿಕ ಜಗತ್ತಿನಾದ್ಯಂತ ಏನು ನಡೆಯುತ್ತಿದೆಯೋ ಅದನ್ನು ನಾನಿಲ್ಲಿ ಕಾಣುತ್ತಿದ್ದೇನೆ. ಆಹಾರದ ಪೊಟ್ಟಣಗಳನ್ನು ವಿತರಿಸಬೇಕಾದುದು ಅತ್ಯಗತ್ಯ. ಆದರೆ ಅದೀಗ ಇಲ್ಲಿನ ವ್ಯವಸ್ಥೆಯನ್ನೇ ಹಾಳುಗೆಡವುತ್ತಿದೆ. – ರಾಷ್ಟ್ರಪತಿ ರಮಾನಾಥ ಕೋವಿಂದ್.

# ನೆನಪಾಯಿತು ಅಮಾನ್ಯಗೊಂಡ ನೋಟು

ನೆಪವಾಯಿತು ಭಾರತೀಯ ಆರ್ಥಿಕ ಸಂಘದ ಸಮಾವೇಶ

ಬೇಡವಾಗಿದೆ ಜನಕ್ಕೆ ಭಾಷಣ, ಪ್ರವಚನ, ಮನದ ಮಾತು

ಬಯಲಾಯಿತು ಅಶಿಸ್ತು, ಹಸಿವು, ವಿಕಾಸ !

 

 • ಶಾಂತಿ ಸಮಯದಲ್ಲಿ ಭಾರತೀಯ ಯೋಧರ ಬಲಿದಾನವು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರದ ವೈಫಲ್ಯದ ಪ್ರತೀಕ. – ‘ಸಾಮ್ನಾ’ ಸಂಪಾದಕೀಯದಲ್ಲಿ ಶೀವಸೇನೆ.

#  ವೈಫಲ್ಯದ ಆಗಲ 56 ಇಂಚು ಇದೆಯೇ ?

 

 • ಜಮ್ಮು ಮತ್ತು ಕಾಶ್ಮೀರ ಸಹಜ ಸ್ಥಿತಿಗೆ ಮರಳುತ್ತಿದೆ ಎಂಬ ಕೇಂದ್ರದ ವಾದ ಹಸಿ ಸುಳ್ಳು. ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರವಾದರೂ ಯೋಧರ ಹತ್ಯೆಗೆ ಕಡಿವಾಣ ಬೀಳಬಹುದು ಎಂಬ ನಂಬಿಕೆ ಹುಸಿಯಾಗಿದೆ.

#  ಹಸಿ ಸುಳ್ಳು + ಹುಸಿ ನಂಬಿಕೆ = ಮೋದಿಯ ಅಚ್ಛೇ ದಿನ್ !

 

 • ಪಾಕಿಸ್ತಾನದ ವಿರುದ್ಧ ಭಾರತ ಯುದ್ಧ ಸಾರಿ, ಅದನ್ನು ನಾಲ್ಕು ತುಂಡುಗಳನ್ನಾಗಿ ವಿಭಜಿಸಬೇಕು. – ಬಿಜೆಪಿ ರಾಜ್ಯಸಭಾ ಸದಸ್ಯ ಸುಬ್ರಮಣಿಯನ್‌ ಸ್ವಾಮಿ.

# ಮೊದಲು ಕಾಂಗ್ರೆಸ್ ಮುಕ್ತ ಭಾರತವಾಗಲಿ, ಅಷ್ಟೊತ್ತಿಗೆ 56 ಇಂಚಿನ ಎದೆ ನೋಡಿ ಗಡಗಡ ನಡುಗಿ ಪಾಕಿಸ್ತಾನ ನಾಲ್ಕು ತುಂಡಾಗುವುದು ಗ್ಯಾರಂಟಿ !

 

 • ನಾಲ್ಕು ವರ್ಷಗಳಲ್ಲಿ ಸರ್ಕಾರಿ ನೌಕರರ ಮೇಲೆ ಸಿಬಿಐ ದಾಖಲಿಸಿದ ಭ್ರಷ್ಟಾಚಾರ ಪ್ರಕರಣದ ಪೈಕಿ 3,268 ಮಂದಿ ನಿರ್ದೋಷಿ ಎಂದು ಸಿಬಿಐ ನ್ಯಾಯಾಲಯದಲ್ಲಿ ತೀರ್ಪು ಬಂದಿದೆ. – ಜಿತೇಂದ್ರ ಸಿಂಗ್ (ಕೇಂದ್ರದ ಸಿಬ್ಬಂದಿ ಇಲಾಖೆಯ ರಾಜ್ಯ ಖಾತೆ ಸಚಿವರು).

# ‘ನಮೋ’ ನಮಃ

 

 • ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಮತ್ತು ಮಾಜಿ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಅವರು ದೇಶದ ಬಗ್ಗೆ ಹೊಂದಿರುವ ಬದ್ಧತೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಚುನಾವಣಾ ಭಾಷಣದಲ್ಲಿ ಪ್ರಶ್ನಿಸಿಲ್ಲ. ಅಥವಾ ಪ್ರಶ್ನಿಸುವ ಉದ್ದೇಶ ಹೊಂದಿರಲಿಲ್ಲ. ಈ ಇಬ್ಬರೂ ನಾಯಕರ ಮತ್ತು ಭಾರತದ ಬಗ್ಗೆ ಅವರಿಗಿರುವ ಬದ್ಧತೆ ಕುರಿತು ನಮಗೆ ಅಪಾರ ಗೌರವ ಇದೆ. – ಅರುಣ್ ಜೇಟ್ಲಿ (ಕೇಂದ್ರ ಮಂತ್ರಿ)

# ಉಪ್ಪು ತಿಂದು ನೀರು ಕುಡಿದ ಮೌನೇಂದ್ರ !

 

 • ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯ ವಿದ್ಯಾರ್ಥಿನಿಲಯಗಳ ‘ಬುಕ್‌ ಬ್ಯಾಂಕ್‌’ಗಳಿಗೆ ಒಂದೇ ಪ್ರಕಾಶನದ ಅತಿ ಹೆಚ್ಚು ಪುಸ್ತಕಗಳನ್ನು ಖರೀದಿಸಲು ಮುಂದಾಗಿರುವುದು ಆಕ್ಷೇಪಕ್ಕೆ ಕಾರಣವಾಗಿದೆ. – ಪತ್ರಿಕಾ ವರದಿ.

# ಆಂಜನೇಯ ಕಲ್ಯಾಣ !

Leave a Reply

Your email address will not be published. Required fields are marked *