Realtime blog statisticsweb statistics
udupibits.in
Breaking News
ಉಡುಪಿ: ಬೈಲೂರು ನಿವಾಸಿ, ಮಿಷನ್ ಕಂಪೌಂಡ್ ಸ್ಟಾಂಡ್ ನ ರಿಕ್ಷಾ ಚಾಲಕ, ಮಾಲಕ ರಾಘವೇಂದ್ರ ಭಟ್ (ರಾಘು ಭಟ್) ನಿಧನ.

ಗೂಗಲ್ ನಲ್ಲಿ ಮಿಂಚಿದ ಕನ್ನಡ, ಕುವೆಂಪು

ಉಡುಪಿ: ಅಂತಾರಾಷ್ಟ್ರೀಯ ಮಟ್ಟದಲ್ಲಿ ಕನ್ನಡ ಭಾಷೆ ಮಿಂಚಿದೆ. ಅತ್ಯುನ್ನತ ಪ್ರಶಸ್ತಿಯಾದ ಜ್ಞಾನಪೀಠ ಪುರಸ್ಕೃತರಾದ ಕುವೆಂಪು ಅವರು ಸಹ ಅಂತರಾಷ್ಟ್ರೀಯ ಮಟ್ಟದಲ್ಲಿ ಸಕ್ಕರೆ ನಗುಮೊಗದಲ್ಲಿ ಮೆರೆದಿದ್ದಾರೆ. ಗೂಗಲ್ ಇದಕ್ಕೆ ಕಾರಣವಾಗಿದೆ.

ಅಂತಾರಾಷ್ಟ್ರೀಯ ಸಂಸ್ಥೆಯಾದ ‘ಗೂಗಲ್’ (google), ಇಂದು ಗೂಗಲ್ ನ ಮುಖಪುಟದಲ್ಲಿ ಕನ್ನಡದಲ್ಲಿ ‘ಗೂಗಲ್’ ಎಂದು ಬರೆದಿದೆ. ಈ ಮೂಲಕ ಕನ್ನಡಿಗರಿಗೆ ಅನಿರೀಕ್ಷಿತ ಆನಂದವನ್ನು ತಂದುಕೊಟ್ಟಿದೆ. ಮಾತ್ರವಲ್ಲ, ಕನ್ನಡಕ್ಕೆ ಅಂತಾರಾಷ್ಟ್ರೀಯ ಮನ್ನಣೆಯನ್ನು ನೀಡಿದೆ.

ಗೂಗಲ್ ಎಂದು ಕನ್ನಡದಲ್ಲಿ ಬರೆದು ತನ್ನ ಮುಖಪುಟದಲ್ಲಿ ಪ್ರಕಟಿಸಿದ ಗೂಗಲ್ ಸಂಸ್ಥೆಯು, ಇದರ ಜತೆಗೆ ಕವಿ ಕುವೆಂಪು ಅವರ ಭಾವಚಿತ್ರವನ್ನು ಪ್ರಕಟಿಸುವ ಮೂಲಕ ಕನ್ನಡ ಕುಲಕೋಟಿಗೆ ವಿಶೇಷ ಕೊಡುಗೆಯನ್ನು ನೀಡಿ ಸಮಸ್ತ ಕನ್ನಡಿಗರ ಪ್ರಶಂಸೆಗೆ ಪಾತ್ರವಾಗಿದೆ.

www.udupibits.in ಜಾಲತಾಣ ಸಂಸ್ಥೆಯು ಕನ್ನಡಿಗರೆಲ್ಲರ ಪರವಾಗಿ ಗೂಗಲ್ ಸಂಸ್ಥೆಯನ್ನು ಅಭಿನಂದಿಸಿದೆ.

Leave a Reply

Your email address will not be published. Required fields are marked *