Realtime blog statisticsweb statistics
udupibits.in
Breaking News
ಉಡುಪಿ: ನೌಕರರಿಗೆ ಕಿರುಕುಳ ಆರೋಪ- ಬ್ರಹ್ಮಾವರ ಸಮುದಾಯ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಮಹೇಶ್ ಐತಾಳ್ ಅಮಾನತಿಗೆ ಶ್ರೀರಾಮ ದಿವಾಣ ಒತ್ತಾಯ

udupibits.inಗೆ 7 ವರ್ಷ: ಕೃತಜ್ಞತೆಗಳು

ಮಾನ್ಯರೇ,

www.udupibits.in ಜಾಲತಾಣ ಸಂಸ್ಥೆಯು ಏಳು ವರ್ಷಗಳನ್ನು ಪೂರ್ಣಗೊಳಿಸಿದೆ. 2010, ಡಿಸೆಂಬರ್ 29ಕ್ಕೆ ಆರಂಭಗೊಂಡ ಉಡುಪಿಬಿಟ್ಸ್ ಸಂಸ್ಥೆಯು, ಕಳೆದ ಏಳು ವರ್ಷಗಳ ಅವಧಿಯಲ್ಲಿ ಸಾಕಷ್ಟು ಸಕಾರಾತ್ಮಕವಾಗಿ ಬೆಳೆದಿದೆ. ಸಂಸ್ಥೆಯು ತನ್ನ ಪ್ರಚಾರಕ್ಕಾಗಿ ಇದುವರೆಗೂ ಯಾವುದೇ ರೀತಿಯ ಜಾಹೀರಾತುಗಳನ್ನೂ ನೀಡಿದ್ದಿಲ್ಲ. ಮಾತ್ರವಲ್ಲ, ಈ ತನಕ ಯಾವುದೇ ರೀತಿಯ ಗಿಮಿಕ್ ಗಳನ್ನೂ ಮಾಡಿದ್ದಿಲ್ಲ. ಹೀಗಿದ್ದೂ ಜಾಲತಾಣವು ಪ್ರಸ್ತುತ ರಾಜ್ಯಮಟ್ಟದಲ್ಲಿ ತನ್ನ ಛಾಪನ್ನು ಮೂಡಿಸಿದ್ದರೆ, ಅದಕ್ಕೆ ಇದರಲ್ಲಿ ಪ್ರಕಟವಾದ ವಿಶೇಷ ವರದಿಗಳು ಮತ್ತು ಪರಿಣಾಮಕಾರಿಯಾದ ವಿಮರ್ಶೆಗಳೇ ಕಾರಣವಾಗಿದೆ ಎಂದು ತಿಳಿಸಲು ಹೆಮ್ಮೆ ಇದೆ.                                                             

ಸದಭಿರುಚಿಯ ಮತ್ತು ಪರಿಣಾಮಕಾರಿಯಾದ ವಿಶೇಷ ವರದಿಗಳು, ತನಿಖಾ ವರದಿಗಳು, ಲೇಖನಗಳು, ವಿಶ್ಲೇಷಣೆಗಳು, ವಿಮರ್ಶೆಗಳಿಂದಾಗಿ ಜಾಲತಾಣವನ್ನು ಜಿಲ್ಲೆಯ, ರಾಜ್ಯದ, ಹೊರ ರಾಜ್ಯದ ಮತ್ತು ವಿದೇಶಗಳಲ್ಲಿನ ಜನರು ಸಹ ನಿರಂತರವಾಗಿ ಓದುತ್ತಿದ್ದಾರೆ. ಈ ಮೂಲಕ ಸಂಸ್ಥೆಯು ಅಪಾರ ಜನ ಮೆಚ್ಚುಗೆಯನ್ನೂ ಪಡೆದಿದೆ. ಒಂದು ಜಿಲ್ಲೆಯ ಹೆಸರಲ್ಲಿ ಸಂಸ್ಥೆ ಕಾರ್ಯವೆಸಗುತ್ತಿದ್ದರೂ, ಇದರಲ್ಲಿ ಪ್ರಕಟವಾದ, ಆಗುವ ವರದಿಗಳು ಜಿಲ್ಲೆಗೆ ಸೀಮಿತವಾದುದಲ್ಲ. ರಾಜ್ಯವ್ಯಾಪೀ ಪರಿಣಾಮ ಬೀರುವ ವರದಿಗಳಿಂದಾಗಿ ಜಾಲತಾಣವು ರಾಜ್ಯ ಮಟ್ಟದಲ್ಲಿ ತನ್ನ ಛಾಪನ್ನು ಮೂಡಿಸಿರುವುದು ಸಹ ಒಂದು ಮಹತ್ವದ ಬೆಳವಣಿಗೆಯಾಗಿದೆ.

ಸಂಸ್ಥೆಯು ಇಷ್ಟು ವರ್ಷ ಉಳಿಯಲು ಕಾರಣರಾದವರು, ಸ್ವಯಂಸ್ಪೂರ್ತಿಯಿಂದ ಜಾಹೀರಾತು ನೀಡಿದವರು ಮತ್ತು ಸ್ವಯಂಸ್ಪೂರ್ತಿಯಿಂದ ಧನಸಹಾಯ ಮಾಡಿದ ಮಹನೀಯರು. ಈ ಮಹಾನುಭಾವರಿಗೆ ಸಂಸ್ಥೆಯು ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸುತ್ತದೆ.

ಒಳ್ಳೆಯ ಮನಸ್ಸಿನ, ಭ್ರಷ್ಟಾಚಾರ ವಿರೋಧಿ ಮನೋಭಾವದ, ಸಕಾರಾತ್ಮಕ ದೃಷ್ಠಿಕೋನವುಳ್ಳ ಸಹೃದಯರು ಈ ಜಾಲತಾಣವನ್ನು ಉಳಿಸಿ ಬೆಳೆಸಲು ಸ್ವಯಂಸ್ಪೂರ್ತಿಯಿಂದ ಧನಸಹಾಯ ಮಾಡಿ ಸಹಕರಿಸಬೇಕು ಎಂದು ಈ ಶುಭವಸರದಲ್ಲಿ ನಾವು ಕೇಳಿಕೊಳ್ಳುತ್ತಿದ್ದೇವೆ. ಪ್ರತ್ಯಕ್ಷವಾಗಿಯೂ, ಪರೋಕ್ಷವಾಗಿಯೂ ಸಂಸ್ಥೆಯು ಉಳಿದು ಬೆಳೆಯಲು ಕಾರಣರಾದ ಎಲ್ಲರಿಗೂ ವಂದನೆಗಳು, ಅಭಿವಂದನೆಗಳು, ಕೃತಜ್ಞತೆಗಳು.

*ಶ್ರೀರಾಮ ದಿವಾಣ

ಸಂಪಾದಕರು

ಮೊಬೈಲ್: 8105749711.

E mail: nimmadiwan@gmail.com

ಹಿತೈಷಿಗಳು ಈ ಕೆಳಗಿನ ಉಳಿತಾಯ ಖಾತೆಗೆ ಧನಸಹಾಯವನ್ನು ಕಳುಹಿಸಿಕೊಡುವ ಮೂಲಕ www.udupibits.in ಜಾಲತಾಣವನ್ನು ಉಳಿಸಿ, ಬೆಳೆಸಬೇಕಾಗಿ ವಿನಮ್ರ ವಿನಂತಿ.

ಹೆಸರು/NAME: ಶ್ರೀರಾಮ ದಿವಾಣ/SHREERAMA DIWANA

ಬ್ಯಾಂಕ್/BANK: ಬ್ಯಾಂಕ್ ಆಫ್ ಬರೋಡಾ, ಉಡುಪಿ ಶಾಖೆ/BANK OF BARODA.

ಉಳಿತಾಯ ಖಾತೆ ಸಂಖ್ಯೆ/ A/C NO.: 09220100005645.

ಐ ಎಫ್ ಎಸ್ ಸಿ ಕೋಡ್/IFSC COD: BARBOUDIPIX.              

Leave a Reply

Your email address will not be published. Required fields are marked *