Realtime blog statisticsweb statistics
udupibits.in
Breaking News
# ಮಾಹಿತಿ ಹಕ್ಕು ಕಾಯಿದೆ ಉಲ್ಲಂಘನೆ ಮಾಡಿದವರಿಗೆ ದಂಡ, ಅರ್ಜಿದಾರರಿಗೆ ಪರಿಹಾರ ಕೊಡಿಸುವಲ್ಲಿ ರಾಜ್ಯ ಮಾಹಿತಿ ಆಯುಕ್ತರುಗಳ ಹಿಂದೇಟು: ಶ್ರೀರಾಮ ದಿವಾಣ ಆರೋಪ.

ಪಳ್ಳಿ ಗೋಕುಲದಾಸ್ ರಿಗೆ ‘ಉಡುಪಿಬಿಟ್ಸ್ ಶತಮಾನದ ಶಕ್ತಿ’ ಗೌರವಾರ್ಪಣೆ ಪ್ರದಾನ

ಉಡುಪಿ: www.udupibits.in ಜಾಲತಾಣ ಸಂಸ್ಥೆಯು ವಾರ್ಷಿಕವಾಗಿ ಕೊಡಮಾಡುವ ಮೂರನೇ ವರ್ಷದ 2017ನೇ ಸಾಲಿನ ‘ಉಡುಪಿಬಿಟ್ಸ್ ಶತಮಾನದ ಶಕ್ತಿ’ ಗೌರವಾರ್ಪಣೆಯನ್ನು ಕೇರಳ-ಕರ್ನಾಟಕ ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟದ ಗೌರವಾಧ್ಯಕ್ಷರಾದ ಪಳ್ಳಿ ಗೋಕುಲದಾಸ್ ಅವರಿಗೆ ಡಿಸೆಂಬರ್ 31ರಂದು ಮಂಗಳೂರು ಬಿಜೈ ಕಾಪಿಕಾಡ್ ಕುದ್ಮುಲ್ ಗಾರ್ಡನ್ನ ಅವರ ಸ್ವಗೃಹದಲ್ಲಿ ಪ್ರದಾನಿಸಲಾಯಿತು.

ಉಡುಪಿ ದೊಡ್ಡಣಗುಡ್ಡೆಯ ಡಾ.ಎ.ವಿ.ಬಾಳಿಗಾ ಸ್ಮಾರಕ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರು ಮತ್ತು ಖ್ಯಾತ ಮನೋವಿಜ್ಞಾನಿಗಳಾದ ಡಾ.ಪಿ.ವಿ.ಭಂಡಾರಿಯವರು, ಕೊರಗ ಸಮುದಾಯದ ಮೊದಲ ಸರಕಾರಿ ಅಧಿಕಾರಿಯೂ, ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟದ ಮೊದಲ ಅಧ್ಯಕ್ಷರೂ ಆದ ಪಳ್ಳಿ ಗೋಕುಲದಾಸ್ ಅವರಿಗೆ ಶಾಲು ಹೊದೆಸಿ, ಹಣ್ಣು ಹಂಪಲು, ಪುಸ್ತಕ ಸ್ಮರಣಿಕೆ, ಗೌರವ ಸಂಭಾವನೆ ಮತ್ತು ಶತಮಾನದ ಶಕ್ತಿ ಫಲಕ ನೀಡಿ ಗೌರವಾರ್ಪಣೆ ಸಲ್ಲಿಸಿದರು.

ಹಿರಿಯ ಲೇಖಕಿಯರಾದ ಬಿ.ಎಂ.ರೋಹಿಣಿ ಕುಡುಪು, ದೇವಿಕಾ ನಾಗೇಶ್ ಚಿಲಿಂಬಿ, ಪತ್ರಕರ್ತರಾದ ಪ್ರಕಾಶ್ ಮಂಜೇಶ್ವರ್, ಕೆ.ಪಿ.ಅಶ್ವಿನ್ ರಾವ್ ಪದವಿನಂಗಡಿ, ಅಶ್ವಿನ್ ಲಾರೆನ್ಸ್ ಮೂಡುಬೆಳ್ಳೆ, ಸಾಮಾಜಿಕ ಕಾರ್ಯಕರ್ತರಾದ ಚಂದ್ರಶೇಖರ ಶೆಟ್ಟಿ ವಂಡ್ಸೆ ಹಾಗೂ ಉಡುಪಿಬಿಟ್ಸ್ ಡಾಟ್ ಇನ್ ಜಾಲತಾಣ ಸಂಸ್ಥೆಯ ಸಂಪಾದಕರೂ, ಪ್ರವರ್ತಕರೂ ಆದ ಶ್ರೀರಾಮ ದಿವಾಣ ಉಪಸ್ಥಿತರಿದ್ದರು.

 

Leave a Reply

Your email address will not be published. Required fields are marked *