Realtime blog statisticsweb statistics
udupibits.in
Breaking News
ಉಡುಪಿ: ಜಿಲ್ಲಾ ಸರಕಾರಿ ಆಸ್ಪತ್ರೆಯ ಸಾರ್ವಜನಿಕ ಮಾಹಿತಿ ಅಧಿಕಾರಿಯಿಂದ ಮಾಹಿತಿ ಹಕ್ಕು ಕಾಯಿದೆ ಉಲ್ಲಂಘನೆ.

ಉಡುಪಿ ಜಿಲ್ಲಾಧಿಕಾರಿಯವರೇ, ಆರ್‌ಟಿಸಿ ಸಮಸ್ಯೆಗೆ ಯಾರನ್ನು ಅಮಾನತು ಮಾಡಬೇಕು ?

# ಜಿಲ್ಲಾಧಿಕಾರಿಗಳೇ, ನೀವು ಉಡುಪಿ ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯಾಗಿ ಸೇವೆ ಸಲ್ಲಿಸಿ ಬಳಿಕ ಜಿಲ್ಲಾಧಿಕಾರಿಯಾಗಿ ಪದೋನ್ನತಿ ಹೊಂದಿ ಸೇವೆ ಸಲ್ಲಿಸುತ್ತಾ ಇದ್ದೀರಿ. ತಮ್ಮ ಸೇವಾವಧಿಯಲ್ಲಿ ಕರ್ತವ್ಯಲೋಪದ ಕಾರಣ ನೀಡಿ ತಮ್ಮ ಅಧಿಕಾರವನ್ನು ಬಳಸಿ ತಾವು  ರನ್ನು ಅಮಾನತು ಮಾಡಿದ್ದೀರಿ.

ಪಿಡಿಒ ಗಳಿಂದ ಹಿಡಿದು ಉಪ ತಹಶೀಲುದಾರರ ವರೆಗಿನ  (ಉಪ ತಹಶೀಲುದಾರರ ಅಮಾನತಿಗೆ ಜಿಲ್ಲಾಧಿಕಾರಿಗೆ ಅವಕಾಶ ಇಲ್ಲ, ಪ್ರಾದೇಶಿಕ ಆಯುಕ್ತರು ಅಮಾನತು ಮಾಡಬಹುದು ಎಂಬ ಮಾತುಗಳೂ ಕೇಳಿ ಬರುತ್ತಿವೆ.)  ಅಧಿಕಾರಿಗಳೂ ತಾವು ಅಮಾನತು ಮಾಡಿದವರ ಯಾದಿಯಲ್ಲಿ ಇದ್ದಾರೆ. ಇಷ್ಟೆಲ್ಲ ಕಟ್ಟುನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ನೀವು ಕಳೆದ ಸೆಪ್ಟಂಬರ್‌ನಿಂದ ಉಡುಪಿ ಜಿಲ್ಲೆಯ ಗ್ರಾಮ ಪಂಚಾಯತ್‌ಗಳ ಬಾಪೂಜಿ ಸೇವಾ ಕೇಂದ್ರಗಳಲ್ಲಿ ಆರ್‌ಟಿಸಿ ದೊರೆಯದೆ ಜನರು ಸಮಸ್ಯೆ ಅನುಭವಿಸುತ್ತಿದ್ದರೂ ತಾವು ಈ ಸಮಸ್ಯೆಗೆ ಈ ವರೆಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಿರುವುದಿಲ್ಲ. ಇದು ತಮ್ಮ ಆಡಳಿತ ವೈಫಲ್ಯವಲ್ಲವೇ ? ಕರ್ತವ್ಯಲೋಪವಲ್ಲವೇ ? ಇದಕ್ಕೆ ಯಾರನ್ನು ಅಮಾನತು ಮಾಡುವುದು ?

ಟೆಂಡರ್‌ ಅವಧಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ಆರ್‌ಟಿಸಿ ಮುದ್ರಣಕ್ಕೆ ಪೇಪರ್‌ ಪೂರೈಕೆ ಸ್ಥಗಿತಗೊಂಡಿತ್ತು. ಇದರಿಂದ ಬಾಪೂಜಿ ಕೇಂದ್ರಗಳ ಸಹಿತ ಇಡೀ ಜಿಲ್ಲೆಯಲ್ಲಿ ಆರ್‌ಟಿಸಿ ವಿತರಣೆ ಸ್ಥಗಿತಗೊಂಡಿತ್ತು (ಸ್ಟಾಕ್‌ ಇರುವವರೆಗೆ ನಡೆದು). ಈ ಬಳಿಕ ತಾವು ಕಪ್ಪು ಬಿಳುಪು ಆರ್‌ಟಿಸಿ ಬಗ್ಗೆ ಗೊಂದಲ ಬೇಡ ಎಂದು ಹೇಳಿಕೆ ನೀಡಿ ಹೊಸ ತಂತ್ರಾಂಶದ ಮೂಲಕ ಆರ್‌ಟಿಸಿ ಒದಗಿಸುವ ಬಗ್ಗೆ ಪತ್ರಿಕಾ ಹೇಳಿಕೆ ನೀಡಿದ್ದಿರಿ. ಉಡುಪಿ ತಹಶೀಲುದಾರರಾದ ಪ್ರದೀಪ್‌ ಕುರುಡೇಕರ್‌ ಅವರು ಕುಂದಾಪುರದ ಸಂಸ್ಥೆಗೆ ಟೆಂಡರ್‌ ವಹಿಸಿಕೊಡಲಾಗಿದ್ದು 3-4 ದಿನಗಳಲ್ಲಿ ಸಮಸ್ಯೆ ಪರಿಹಾರವಾಗಲಿದೆ ಎಂದು ಹೇಳಿಕೆ ನೀಡಿದ್ದರು. ಭೂಮಿ ಕೇಂದ್ರದ ಅಧಿಕಾರಿಗಳೂ ಹೊಸ ತಂತ್ರಾಂಶ ಸಿದ್ಧವಾಗಿದ್ದು ಒಂದು ವಾರದಲ್ಲಿ ಬಾಪೂಜಿ ಕೇಂದ್ರಗಳ ಸಮಸ್ಯೆ ಬಗೆಹರಿಯಲಿದೆ ಎಂದು ಹೇಳಿಕೆ ನೀಡಿದ್ದರು. ಆದರೆ ಇಂದಿನ ವರೆಗೂ ಸಮಸ್ಯೆ ಬಗೆಹರಿದಿಲ್ಲ. ಇದಕ್ಕೆ ಯಾರು ಹೊಣೆ ?

ತಹಶೀಲುದಾರರು ಹೇಳಿದಂತೆ ಕುಂದಾಪುರ ಸಂಸ್ಥೆಗೆ ನೀಡಿದ ಟೆಂಡರ್‌ ಏನಾಯಿತು ? ಬಾಪೂಜಿ ಕೇಂದ್ರಗಳ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಈ ವರೆಗೆ ಯಾವ ಕ್ರಮ ಕೈಗೊಂಡಿದ್ದಾರೆ ಎಂಬುದನ್ನು ಜಿಲ್ಲಾಧಿಕಾರಿ ಸ್ಪಷ್ಟಪಡಿಸಬೇಕು.

ಸರಕಾರ ಸೃಷ್ಟಿಸುವ ತ್ರಿಶಂಕು ಸ್ವರ್ಗಗಳು

ಸರಕಾರಗಳು ಹೊಸ ಹೊಸ ಯೋಜನೆಗಳನ್ನು ಘೋಷಿಸುವುದರಲ್ಲಿಯೇ ನಿರತವಾಗಿವ. ಈ ಯೋಜನೆಗಳ ಅನುಷ್ಠಾನಕ್ಕೆ ಯಾವ ಲಕ್ಷ್ಯವನ್ನೂ ವಹಿಸುತ್ತಿಲ್ಲ. ಇವರಿಗೆ ಘೋಷಣೆಗಳೇ ಮುಖ್ಯವಾಗಿವೆ ಹೊರತು ಅವುಗಳು ಕಾರ್ಯರೂಪಕ್ಕೆ ಬರುವುದು ಅಲ್ಲ. ಇದಕ್ಕೆ ಉತ್ತಮ ಉದಾಹರಣೆ ಎಂದರೆ ಕಾಪು ಸಹಿತ ಹೊಸ ತಾಲೂಕುಗಳ ಘೋಷಣೆ. ಬಾಪೂಜಿ ಕೇಂದ್ರದ ಆರ್‌ಟಿಸಿ ವಿತರಣೆ ಸಮಸ್ಯೆ ಸರಿಪಡಿಸಲು ತಿಂಗಳುಗಳು ಕಳೆದರೂ ಸಾಧ್ಯವಾಗದ ಸರಕಾರ, ಹೊಸ ತಾಲೂಕುಗಳನ್ನು ಘೋಷಿಸಿ ಅವುಗಳಿಂದ ಜನರಿಗೆ ಯಾವ ರೀತಿಯ ಸೇವೆಯನ್ನು ನೀಡಲು ಸಾಧ್ಯ ? ಈಗಾಗಲೇ ಇರುವ ತಾಲೂಕು ಕಚೇರಿಗಳಲ್ಲಿ ಸಿಬಂದಿ ಕೊರತೆ ಎದ್ದು ಕಾಣುತ್ತಿದ್ದೆ. ಮೇಲಧಿಕಾರಿಗಳು ಪ್ರಭಾರಗಳ ಸರಮಾಲೆಯನ್ನೇ ಹೊಂದಿದ್ದರೆ ಕೆಳ ಅಧಿಕಾರಿಗಳು ನಾಲ್ಕೈದು ಅಧಿಕಾರಿಗಳು ನಿರ್ವಹಿಸುವ ಕಾರ್ಯಭಾರ ಹೊಂದಿದ್ದಾರೆ. ಒಂದು ಕಡತ ಒಂದು ಮೇಜಿನಿಂದ ಕದಲಲು ಕನಿಷ್ಟ 1 ವಾರದ ಅಗತ್ಯವಿದೆ. ಜನರು ಹಿಂದೆ ಬೀಳದಿದ್ದರೆ “ಪ್ರಭಾವಿತ” ಕಡತಗಳನ್ನು ಹೊರತು ಪಡಿಸಿ ಉಳಿದ ಕಡತಗಳು ನಿಶ್ಚಲವಾಗುತ್ತವೆ/ಮಾಯವಾಗುತ್ತವೆ. ಈ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯವಾಗದ ಸರಕಾರ ಹೊಸ ಘೋಷಣೆಗಳನ್ನು ಘೋಷಿಸಿ ಅವುಗಳನ್ನು ಸಮರ್ಪಕವಾಗಿ ಅನುಷ್ಠಾನಿಸದೆ ತ್ರಿಶಂಕು ಸ್ಥಿತಿಯಲ್ಲಿಡುತ್ತಿದೆ.

ಜಿಲ್ಲಾಧಿಕಾರಿಗಳೇ ನೀವು ಘೋಷಿಸಿದ ಪ್ಲಾಸ್ಟಿಕ್‌ ಮುಕ್ತ ಮೂಡುಬೆಳ್ಳೆಯನ್ನು ಗ್ರಾ.ಪಂ. ಆಡಳಿತವೇ ಗಾಳಿಗೆ ತೂರಿತು

ಮೂಡುಬೆಳ್ಳಯ ಮಕ್ಕಳ ದಿನಾಚರಣೆಯಂದು ಶಿಕ್ಷಣ ಸಂಸ್ಥೆಗಳ ಮಕ್ಕಳಿಂದ ಪೇಟೆಯ ಕಸ ಹೆಕ್ಕಿಸಿ ಅವರಿಗೆ ಸಿಹಿ ತಿಂಡಿಯನ್ನೂ ನೀಡದೆ ಬಿಸಿಲಿನ ಬೇಗೆಯಲ್ಲಿ ಕುಳ್ಳಿರಿಸಿ ಸ್ವಚ್ಛ ಹಾಗೂ ಪ್ಲಾಸ್ಟಿಕ್‌ ಮುಕ್ತ ಮೂಡುಬೆಳ್ಳೆಯ ಘೋಷಣೆಯನ್ನು ಮಾಡಿದ ಜಿಲ್ಲಾಧಿಕಾರಿಯವರೇ, ನಿಮ್ಮೊಂದಿಗೆ ಪ್ಲಾಸ್ಟಿಕ್‌ ಮುಕ್ತದ ಘೋಷಣೆಯಲ್ಲಿ ಪ್ರಮುಖ ಭಾಗಿಯಾಗಿದ್ದ ಬೆಳ್ಳೆ ಗ್ರಾಪಂ ಆಡಳಿತವೇ ಪ್ಲಾಸ್ಟಿಕ್‌ ಮುಕ್ತ ಘೋಷಣೆಗೆ ಚಿಕ್ಕಾಸಿನ ಬೆಲೆಯನ್ನೂ ನೀಡದೆ ಅದು ಜನಸಾಮಾನ್ಯರಿಗೆ ಮಾತ್ರ ನಮಗಲ್ಲ ಎಂಬಂತೆ ವರ್ತಿಸಿ ತಮ್ಮ ಭಾಷಣದ ಎಲ್ಲ ಬಣ್ಣ ಮಸಿ ನುಂಗುವಂತೆ ಮಾಡಿದೆ. ಪಂಚಾಯತ್‌ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷರು/ಉಪಾಧ್ಯಕ್ಷರು, ಸದಸ್ಯರು, ಪಿಡಿಒ ಆದಿಯಾಗಿ ಎಲ್ಲರೂ ಕುಡಿಯುವ ಶುದ್ಧ ನೀರು ಲಭ್ಯವಿದ್ದರೂ ಪ್ಲಾಸ್ಟಿಕ್‌ನ ನೀರಿನ ಬಾಟಲಿಗಳನ್ನು ಮುಂದಿಟ್ಟುಕೊಂಡು ಸಭೆ ಮಾಡಿ ಆದರ್ಶ ಮೆರೆದಿದ್ದಾರೆ.

Leave a Reply

Your email address will not be published. Required fields are marked *