Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಯಾರದೋ ದುಡ್ಡು, ಎಲ್ಲಮ್ಮನ ಜಾತ್ರೆ !

ಉಪ್ಪಿನಕಾಯಿ-25: ಶ್ರೀರಾಮ ದಿವಾಣ

 

 • ತ್ರಿವಳಿ ತಲಾಖ್ ಪದ್ಧತಿಯನ್ನು ನಿಷೇಧಿಸುವ ‘ಮುಸ್ಲೀಂ ಮಹಿಳೆಯರ ವೈವಾಹಿಕ ಹಕ್ಕುಗಳ ರಕ್ಷಣಾ ಮಸೂದೆ-2017’ಕ್ಕೆ ರಾಜ್ಯ ಸರಕಾರ ವಿರೋಧ ವ್ಯಕ್ತಪಡಿಸಿದೆ. – ಪತ್ರಿಕಾ ವರದಿ.

# ನಾಗರಿಕರ ಹಕ್ಕುಗಳ ಪಟ್ಟಿಗೆ ‘ಮುಸ್ಲೀಂ ಮಹಿಳೆಯರನ್ನು ಪುರುಷರು ಶೋಷಿಸುವ ಹಕ್ಕು’ ಎನ್ನುವುದನ್ನೂ ಸೇರಿಸಲು ಕಾಂಗ್ರೆಸ್ ಪಕ್ಷ ಮತ್ತು ಕಾಂಗ್ರೆಸ್ ಸರಕಾರಗಳು ಕೂಡಲೇ ಒತ್ತಾಯಿಸಲಿ !

 

 • 9 ಮಂದಿ ಲಿಂಗಾಯತ ಸಂಸದರು ಇದ್ದರೂ, ಯಾರನ್ನು ಸಚಿವರನ್ನಾಗಿ ಮಾಡಿದ್ದಾರೆ ಎಂಬುದು ಎಲ್ಲರಿಗೂ ತಿಳಿದಿದೆ. ಇವರನ್ನೆಲ್ಲ ಗುಡಿಯ ಹೊರಗಡೆ ಇಟ್ಟಿದ್ದಾರೆ. ಯಾರನ್ನು ಎಲ್ಲಿ ಇಡಬೇಕು ಎಂಬುದು ಆರ್ ಎಸ್ ಎಸ್ ನವರಿಗೆ ಚೆನ್ನಾಗಿ ಗೊತ್ತಿದೆ. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೂ ಬಿ.ಎಸ್.ಯಡಿಯೂರಪ್ಪನವರ ಬದಲಿಗೆ ಕೇಂದ್ರ ಮಂತ್ರಿ ಅನಂತಕುಮಾರ್ ಹೆಗಡೆ ಅವರನ್ನು ಮುಖ್ಯಮಂತ್ರಿ ಮಾಡ್ತಾರೆ. – ಬಸವರಾಜ ಹೂರಟ್ಟಿ (ವಿದಾನ ಪರಿಷತ್ ಸದಸ್ಯರು, ಜೆಡಿಎಸ್ ನಾಯಕರು)

# ಆರ್ ಎಸ್ ಎಸ್ ಗುಲಾಮಗಿರಿಯೇ ಇಲ್ಲಿ ಎಲ್ಲಕ್ಕೂ ಯೋಗ್ಯತೆ, ಅರ್ಹತೆ, ಜಾತ್ಯಾತೀತತೆ, ಮಾನದಂಡ, ದೇಶಪ್ರೇಮ !

 

 • ಲಿಂಗ ತಾರತಮ್ಯ ನಿವಾರಿಸುವಲ್ಲಿ ಭಾರತ ಭಾರೀ ದೊಡ್ಡ ಸವಾಲು ಎದುರಿಸುತ್ತಿದೆ. – ಲಕ್ಷ್ಮಿ ಪುರಿ (ವಿಶ್ವಸಂಸ್ಥೆ ಸಹಾಯಕ ಮಹಾ ಪ್ರಧಾನ ಕಾರ್ಯದರ್ಶಿ)

# ಕೇಂದ್ರ ಸರಕಾರ ಮಂಡಿಸಿದ ‘ಮುಸ್ಲೀಂ ಮಹಿಳೆಯರ ವೈವಾಹಿಕ ಹಕ್ಕುಗಳ ರಕ್ಷಣಾ ಮಸೂದೆ’ಯನ್ನು ರಾಜ್ಯ ಕಾಂಗ್ರೆಸ್ ಸರಕಾರ ವಿರೋಧಿಸಿದ್ದೇ ನಿಮ್ಮ ಮಾತಿಗೆ ಸಾಕ್ಷಿ !

 

 • ಗೋವಾ ಮುಖ್ಯಮಂತ್ರಿ ಮನೋಹರ್ ಪಾರಿಕ್ಕರ್ ಗೆ ಕನಿಷ್ಟ ಸೌಜನ್ಯವಿಲ್ಲ. ನಾನು ಬರೆದಿರುವ ಪತ್ರಕ್ಕೆ ನೀಡುವ ಗೋಜಿಗೂ ಅವರು ಹೋಗಿಲ್ಲ. – ಸಿದ್ಧರಾಮಯ್ಯ (ಕರ್ನಾಟಕ ಮುಖ್ಯಮಂತ್ರಿ)

# ನಿಮಗೆ ಬಂದ ಎಷ್ಟು ಪತ್ರಕ್ಕೆ ನೀವು ಉತ್ತರ ಕೊಟ್ಟು ಸೌಜನ್ಯ ಮೆರೆದಿದ್ದೀರಿ, ಮೊದಲು ತಿಳಿಸಿ ಮುಖ್ಯಮಂತ್ರಿಗಳೇ ?

 

 • ನಕಲಿ ಬಾಬಾಗಳ ಎರಡನೇ ಪಟ್ಟಿಯನ್ನು ಅಖಿಲ ಭಾರತೀಯ ಅಖಾಡ ಪರಿಷತ್ ಬಿಡುಗಡೆ ಮಾಡಿದೆ. – ಪತ್ರಿಕಾ ವರದಿ.

# ನಕಲಿ ಸ್ವಾಮೀಜಿಗಳ, ಗುರೂಜಿಗಳ ಪಟ್ಟಿಯೂ ಬಿಡುಗಡೆಯಾಗಲಿ.

 

 • ರಾಷ್ಟ್ರಕವಿ ಕುವೆಂಪು ಜನ್ಮ ದಿನಾಚರಣೆ ಪ್ರಯುಕ್ತ ಆಚರಿಸುತ್ತಿರುವ ವಿಶ್ವ ಮಾನವ ದಿನಾಚರಣೆಯಲ್ಲಿ ಉಡುಪಿ ಜಿಲ್ಲೆಯ ಯಾವುದೇ ಜನಪ್ರತಿನಿಧಿಗಳೂ ಭಾಗವಹಿಸಲಿಲ್ಲ. ಜಿಲ್ಲಾಧಿಕಾರಿ ಉಪಸ್ಥಿತರಿರಲಿಲ್ಲ. ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಅವರು ಇದೇ ಅವಧಿಯಲ್ಲಿ ಕಮರ್ಷಿಯಲ್ ಕಾರ್ಯಕ್ರಮಗಳಿಗೆ ಹಾಜರಾದರು. – ಪತ್ರಿಕಾ ವರದಿ.

# ಕಲೆ, ಸಾಹಿತ್ಯ, ಸಂಸ್ಕೃತಿ ಇತ್ಯಾದಿಗಳ ಬಗ್ಗೆ ಜನಪ್ರತಿನಿಧಿಗಳ, ಅಧಿಕಾರಿಗಳ ಕಾಳಜಿ ಅಮೋಘವಾದುದು !

 

 • ಮುಖ್ಯಮಂತ್ರಿ ಸಿದ್ಧರಾಮಯ್ಯನವರು 4-5 ಬಾರಿ ಉಡುಪಿಗೆ ಆಗಮಿಸಿದರೂ ಕೃಷ್ಣ ಮಠಕ್ಕೆ ಭೇಟಿ ನೀಡಿಲ್ಲ. ಪರ್ಯಾಯಕ್ಕೂ ಅನುದಾನ ಕೊಟ್ಟಿಲ್ಲ. ಅವರು ಹಿಂದೂ ವಿರೋಧಿ. – ಉಡುಪಿ ನಗರಸಭಾ ಸಾಮಾನ್ಯ ಸಭೆಯಲ್ಲಿ ವಿಪಕ್ಷ ಬಿಜೆಪಿ ಸದಸ್ಯರ ಆರೋಪ.

#    ಅಷ್ಟೆನಾ ? ದೇಶದ್ರೋಹಿ ಮತ್ತು ಪಾಕಿಸ್ಥಾನ ಏಜೆಂಟ್ ಅಂತಲೂ ಹೇಳಿಬಿಡಿ !

 

 • ಮಂಗಳೂರಿನಲ್ಲಿ ನಡೆಯುತ್ತಿರುವ ಕರಾವಳಿ ಉತ್ಸವದ ಪ್ರವೇಶ ಶುಲ್ಕ 30 ರೂಪಾಯಿ, ಉಡುಪಿ ಉತ್ಸವಕ್ಕೆ 50 ರೂಪಾಯಿ. ಉತ್ಸವ ನಡೆಯುವ ಪ್ರದೇಶ ಡಂಪಿಂಗ್ ಯಾರ್ಡ್ ನಂತಾಗಿದೆ. ಗಾಳಿ ಇಲ್ಲ. ಧೂಳು ತುಂಬಿದೆ. – ಉಡುಪಿ ನಗರಸಭೆ ಸಾಮಾನ್ಯ ಸಭೆಯಲ್ಲಿ ಸದಸ್ಯರ ಅಸಮಾಧಾನ.

# ಧೂಳು ಮತ್ತು ದುರ್ಗಂಧಕ್ಕೆ 20 ರೂಪಾಯಿ !

 

 • ಮೊಬೈಲ್ ಮಿಸ್ಡ್ ಕಾಲ್ ಗಳಿಂದ ಇಂದು ಹೆಣ್ಣು ಮಕ್ಕಳು ಮನೆಯಿಂದ ಮಿಸ್ ಆಗುತ್ತಿದ್ದಾರೆ. ಮೊಬೈಲ್ ದುರ್ಬಳಕೆಯಿಂದ ಇಡೀ ಸಮಾಜವೇ ತಪ್ಪಿತಸ್ಥವಾಗುತ್ತಿದೆ. – ಪ್ರೇಮಾನಂದ ಕಲ್ಮಾಡಿ (ಸಂಪನ್ಮೂಲ ವ್ಯಕ್ತಿ)

# ಆಧುನಿಕ ಭಸ್ಮಾಸುರನ ಕರಾಮತ್ತು !

 

 • ಯುವಜನತೆ ದಾರಿ ತಪ್ಪಿದಲ್ಲಿ ದೇಶದ ಭವಿಷ್ಯ ದಿಕ್ಕು ತಪ್ಪುತ್ತದೆ. – ಅಶೋಕ್ ಕುಮಾರ್ ಕೊಡವೂರು (ಕಾಂಗ್ರೆಸ್ ಸೇವಾದಳ ನಾಯಕ)

# ಯುವಜನತೆ ದಾರಿ ತಪ್ಪಿದ್ದಲ್ಲ, ದಿಕ್ಕು ತಪ್ಪಿದ್ದು ! ದಿಕ್ಕು ತಪ್ಪಿದ ಯುವಜನತೆ ಸರಿ ದಾರಿಯಲ್ಲಿ ಮುನ್ನಡೆಯಲೆಂದು ಅವರ ಕೈಗೆ 5ಜಿ ಮೊಬೈಲ್ ಕೊಟ್ಟು ದಿನವಿಡೀ  ವಾಟ್ಸಾಪ್ ನಲ್ಲಿ ಚಾಟ್ ಮಾಡುತ್ತಾ ಸಕ್ರಿಯವಾಗಿರಲು ಪ್ರೋತ್ಸಾಹಿಸುತ್ತಿದ್ದೇವೆ, ಗದ್ದೆ ಗದ್ದೆಗಳಲ್ಲಿ ಕ್ರಿಕೆಟ್ ಆಡುವಂತೆ ಪ್ರೋತ್ಸಾಹಿಸುತ್ತಿದ್ದೇವೆ, ಸಿನಿಮಾ ನಟ-ನಟಿಯರನ್ನು ಅನುಸರಿಸುವಂತೆ ಹೇಳಿಕೊಡುತ್ತಿದ್ದೇವೆ, ಪೇಟೆ ಪೇಟೆಗಳಲ್ಲಿ ಗಾಂಜಾ ವಿತರಿಸುವ ವ್ಯವಸ್ಥೆ ಮಾಡಿಕೊಟ್ಟಿದ್ದೇವೆ !!

 

 • ಸುವರ್ಣ ಕವಚ, ಹೊದಿಕೆ ನಿರ್ಮಾಣಕ್ಕೆ ಕೋಟಿಗಟ್ಟಲೆ ಕರ್ಚು ಮಾಡುವುದು ಖೇದಕರ. – ಬನ್ನಂಜೆ ಗೋವಿಂದಾಚಾರ್ಯ (ಉಡುಪಿ ರಾಜಾಂಗಣದಲ್ಲಿ)

# ಧಾರ್ಮಿಕ ಉದ್ಯಮದಲ್ಲಿ ಸುವರ್ಣವೇ ಯಶಸ್ಸಿನ ಸೂತ್ರ !

 

 • ಮಧ್ವಾಚಾರ್ಯರ ಮೂಲ ಉದ್ಧೇಶ ವೇದ ರಕ್ಷಣೆ. ಶುದ್ಧ ವೇದವನ್ನು ಓದುವ ಪರಂಪರೆ ನಿರ್ಮಾಣ ಮಾಡಬೇಕು. ಹಾಗಾಗಿ ಸುವರ್ಣದ ಬದಲು ವೇದವರ್ಣ ಬೇಕು. ತುಳು ಶಿವಳ್ಳಿ ಮಾಧ್ವ ಮಹಾಮಂಡಲವು ಭಾವೀ ಪರ್ಯಾಯ ಶ್ರೀಗಳಿಗೆ ಇದನ್ನು ಮನವರಿಕೆ ಮಾಡಿಕೊಡಬೇಕು. – ಬನ್ನಂಜೆ ಗೋವಿಂದಾಚಾರ್ಯ.

#  ಭಾವೀ ಪರ್ಯಾಯ ಪಲಿಮಾರು ಸ್ವಾಮೀಜಿ ಮಹಾಭಾರತ ಮತ್ತು ವೇದವನ್ನು ತೂಕ ಮಾಡಿ ನೋಡಿದ್ದಾರಂತೆ. ಎರಡೂ ಸಮಾನವಾಗಿ ತೂಗುತ್ತದೆಯಂತೆ. ಹಾಗಾಗಿ ಅವರು ವೇದದ ಬದಲು ಮಹಾಭಾರತವನ್ನು ರಕ್ಷಣೆ  ಮಾಡುವ ಉದ್ಧೇಶ ಹೊಂದಿದ್ದಾರಂತೆ !

 

 • ಉಡುಪಿ ಕೃಷ್ಣ ಮಠದ ಸ್ವರ್ಣ ಗೋಪುರ ನಿರ್ಮಾಣಕ್ಕೆ 4 ಚದರ ಅಡಿಗೆ ಅಗತ್ಯವಿರುವ ಚಿನ್ನವನ್ನು ಕರ್ಣಾಟಕ ಬ್ಯಾಂಕ್ ಪೂರೈಸಲಿದೆ. – ಎಂ.ಎಸ್.ಮಹಾಬಲೇಶ್ವರ (ಮುಖ್ಯ ಕಾರ್ಯನಿರ್ವಾಹಣಾಧಿಕಾರಿ, ಕರ್ಣಾಟಕ ಬ್ಯಾಂಕ್)

# ಯಾರದೋ ದುಡ್ಡು, ಎಲ್ಲಮ್ಮನ ಜಾತ್ರೆ !

 

 • ಉಡುಪಿ ಕೃಷ್ಣ ಮಠದಲ್ಲಿ ಮುಸ್ಲೀಮರಿಗೆ ಇಫ್ತಾರ್ ಕೂಟ ನಡೆಸಿದ್ದೇವೆ. ನಮಾಜ್ ಸಲ್ಲಿಸಲು ಅವಕಾಶ ನೀಡಲಾಗಿದೆ. ಅದೇ ರೀತಿ ಮಸೀದಿಗಳಲ್ಲಿ ಕೃಷ್ಣನ ಪೂಜೆಗೆ ಅವಕಾಶ ನೀಡಲಿ. –ವಿದ್ಯಾಧೀಶ ಸ್ವಾಮೀಜಿ (ಪಲಿಮಾರು ಮಠ)

# ಒಂದು ಕಲ್ಲು, ಎರಡು ಗುರಿ !

 

 • ಬಂಟ್ವಾಳ, ಬಿ.ಸಿ.ರೋಡ್, ಕಲ್ಲಡ್ಕ, ಗೋಳ್ತಮಜಲು ಮೊದಲಾದೆಡೆ ಮತೀಯ ಗಲಭೆ, ದೊಂಬಿಗಳಿಗೆ ಕಾರಣರಾದ ಹಿಂದೂ ಜಾಗರಣಾ ವೇದಿಕೆಯ ಜಿಲ್ಲಾದ್ಯಕ್ಷ ಕಲ್ಲಡ್ಕ ರತ್ನಾಕರ ಶೆಟ್ಟಿ ಉಡುಪಿಗೆ ಗಡಿಪಾರು. – ಪತ್ರಿಕಾ ವರದಿ.

# ಉಡುಪಿಯನ್ನು ದೇವರೇ ಕಾಪಾಡಬೇಕು !

 

 •  ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಬಿಜೆಪಿ ರಾಜ್ಯಾದ್ಯಕ್ಷ ಬಿ.ಎಸ್.ಯಡಿಯೂರಪ್ಪ ಿಬ್ಬರೂ ನಾಗರಹಾವು ಇದ್ದಂತೆ. – ವರ್ತೂರು ಪ್ರಕಾಶ್ (‘ನಮ್ಮ ಕಾಂಗ್ರೆಸ್ ಪಕ್ಷ’ದ ಸಂಸ್ಥಾಪಕರು)

#  ನಾಗರಹಾವು ಕಚ್ಚಿದರೆ ವಿಷ, ಕೆಲವರಿಗೆ ದೇವರು, ಕೆಲವೆಡೆ ತಿನ್ನುವ ಆಹಾರ !

 

 • ರಕ್ಷಣಾ ಖಾತೆ ಸಚಿವೆಯಾದ ನಂತರ ಮೊದಲ ಬಾರಿಗೆ ಬೆಂಗಳೂರಿಗೆ ಆಗಮಿಸಿದ್ದ ನಿರ್ಮಲಾ ಸೀತಾರಾಮನ್ ಅವರು ಯಾವುದೇ ಭದ್ರತೆ ಇಲ್ಲದೆ ನಡೆದುಕೊಂಡದ್ದು ಪ್ರಶಂಸೆಗೆ ಪಾತ್ರವಾಗಿದೆ. – ಪತ್ರಿಕಾ ವರದಿ.

# ಸಚಿವೆಯ ನಡವಳಿಕೆಯಿಂದಾಗಿ ಯಾವುದಾದರೂ ಸಮಸ್ಯೆ ಆಗುತ್ತಿದ್ದಲ್ಲಿ, ಪತ್ರಿಕೆಯ ಮುಖಪುಟದಲ್ಲಿ ಪ್ರಕಟವಾಗುತ್ತಿದ್ದ ದೊಡ್ಡ ಸುದ್ದಿಯ ಹೆಡ್ಡಿಂಗ್ ಹೀಗಿರುತ್ತಿತ್ತು: ‘ರಾಜ್ಯ ಸರಕಾರದಿಂದ ಗಂಭೀರ ಭದ್ರತಾಲೋಪ: ಕೇಂದ್ರ ರಕ್ಷಣಾ ಸಚಿವೆಗೆ ರಕ್ಷಣೆ ಕೊಡದ ಸಿದ್ದರಾಮಯ್ಯ- ಸಿಬಿಐ ತನಿಖೆಗೆ ಬಿಜೆಪಿ ಒತ್ತಾಯ’

 

 • ಆರೋಗ್ಯ ಸಚಿವ ಕೆ.ಆರ್.ರಮೇಶ್ ಕುಮಾರ್ ಅವರು ನನಗಿಂತ ಬುದ್ದಿವಂತ ರಾಜಕಾರಣಿ. ಸಾಮಾಜಿಕ ನ್ಯಾಯದ ಪರವಾಗಿರುವವರು. – ಮುಖ್ಯಮಂತ್ರಿ ಸಿದ್ದರಾಮಯ್ಯ.

# ಉಡುಪಿಯ ಸರಕಾರಿ ಆಸ್ಪತ್ರೆಯನ್ನು ಜಮೀನು ಸಹಿತ ಅನಿವಾಸಿ ಉದ್ಯಮಿ ಬಿ.ಆರ್.ಶೆಟ್ಟಿಗೆ ಕೊಟ್ಟು ಕೈತೊಳದುಕೊಂಡಾಗಲೇ ನಿಮ್ಮ ಅತೀ ಬುದ್ದಿವಂತಿಕೆ, ಸಾಮಾಜಿಕ ನ್ಯಾಯ ಎಲ್ಲವೂ ಗೊತ್ತಾಗಿದೆ !  

 

Leave a Reply

Your email address will not be published. Required fields are marked *