Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಆದರೆ… ಹೋದರೆ… ಅಜ್ಜಿಗೆ ಮೀಸೆ ಬಂದರೆ…

ಉಪ್ಪಿನಕಾಯಿ-26: ಶ್ರೀರಾಮ ದಿವಾಣ

 

 • ಜಿಲ್ಲೆಯಲ್ಲಿ ಶಾಂತಿ ನೆಮ್ಮದಿ ನೆಲೆಸಿದಾಗ ದೇಶದಲ್ಲಿ ಮಂಗಳೂರು ನಂ. ಒನ್ ಆಗುವುದರಲ್ಲಿ ಸಂದೇಹವಿಲ್ಲ. – ಡಾ.ಶಾಂತಾರಾಮ ಶೆಟ್ಟಿ (ಖ್ಯಾತ ಮೂಳೆ ತಜ್ಞರು)

# ಆದರೆ… ಹೋದರೆ… ಅಜ್ಜಿಗೆ ಮೀಸೆ ಬಂದರೆ…

 

 • ವೈದ್ಯರು, ವಕೀಲರು, ಎಂಜಿನಿಯರ್, ಶಿಕ್ಷಕರು ಸೇರಿದಂತೆ ವಿವಿಧ ಕ್ಷೇತ್ರಗಳ ವೃತ್ತಿಪರರಿಗೆ ಸೂಕ್ತವಾದ ಶಿಕ್ಷಣ-ತರಬೇತಿ ಇದೆ. ಆದರೆ ರಾಜಕಾರಣಿಗಳಿಗೆ ಯಾವುದೇ ಶಿಕ್ಷಣ, ತರಬೇತಿ ಇಲ್ಲ. ರಾಜಕಾರಣಿಗಳಿಗೂ ತರಬೇತಿ ನೀಡುವ ಅಗತ್ಯವಿದೆ. – ಯು.ಟಿ.ಖಾದರ್ (ಆಹಾರ ಮತ್ತು ನಾಗರಿಕ ಸರಬರಾಜು ಸಚಿವರು)

# ರಾಜಕಾರಣಿಗಳ ಜತೆಗೆ ರಾಜಕಾರಣದಲ್ಲಿ ಸಕ್ರಿಯವಾಗಿದ್ದುಕೊಂಡೇ ಕಲಿತಿರುತ್ತಾರೆ, ಭ್ರಷ್ಟತನ, ದುಷ್ಟತನ, ಕಪಟತನ !

 

 • ಸಮಾಜದಲ್ಲಿ ಅನಕ್ಷರಸ್ಥರಿಗಿಂತ ಹೆಚ್ಚಾಗಿ ಅಕ್ಷರಸ್ಥರಿಂದಲೇ ಭ್ರಷ್ಟಾಚಾರ ನಡೆಯುತ್ತಿದೆ. – ಯು.ಟಿ.ಖಾದರ್

# ಕೇವಲ ಅಕ್ಷರಸ್ಥರಿಂದ ಅಲ್ಲ, ಪದವೀಧರರಿಂದಲೇ ನಡೆಯುತ್ತಿದೆ ಎನ್ನಿ !

 

 • ಮಟ್ಕಾ ದಂಧೆಯನ್ನು ನಿಯಂತ್ರಣಕ್ಕೆ ತಂದಿದ್ದ ಎಸ್ಪಿ ಡಾ/ಸಂಜೀವ ಎಂ.ಪಾಟೀಲ್ ಅವರು, 11 ಮಂದಿ ಆರೋಪಿಗಳನ್ನು ಗಡಿಪಾರು ಮಾಡುವಂತೆ ಜಿಲ್ಲಾಡಳಿತಕ್ಕೆ ಶಿಫಾರಸು ಮಾಡಿದ್ದರು. – ಪತ್ರಿಕಾ ವರದಿ.

# ಆ 11 ಮಂದಿ ಕೋಟ್ಯಧಿಪತಿಗಳನ್ನು ಗಡಿಪಾರು ಮಾಡುವುದು ಕಷ್ಟ ಎಂದು ಭಾವಿಸಿದ ಸರಕಾರ, ಒಬ್ಬರು ದಕ್ಷ ಸರಕಾರಿ ಸೇವಕನನ್ನು ಸುಲಭವಾಗಿ ಗಡಿಪಾರು ಮಾಡಿತು !  

 

 • ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ಅವರ ಕಾಲ್ತೋಡು ಗ್ರಾಮದ ಮೂರೂರು ಕೊರಗರ ಕಾಲೋನಿ ವಾಸ್ತವ್ಯಕ್ಕೆ ಡಿಸೆಂಬರ್ 31ಕ್ಕೆ ಒಂದು ವರ್ಷ ತುಂಬಿದೆ. ವಾಸ್ತವ್ಯದ ಬಳಿಕ ಅಭಿವೃದ್ಧಿ, ಒಳಮೀಸಲಾತಿ ಸಹಿತ ಸಚಿವರು ಹಲವು ಭರವಸೆ ನೀಡಿದ್ದರು. ಆದರೆ ಕಳೆದ ಒಂದು ವರ್ಷದಲ್ಲಿ ಕಾಲೋನಿಯ ಪ್ರಗತಿ ಬದಿಗಿರಲಿ, ಸಚಿವರ ಭೇಟಿಯ ಬಳಿಕ ಒಬ್ಬನೇ ಒಬ್ಬ ಅಧಿಕಾರಿಯೂ ಇತ್ತ ಸುಳಿದಿಲ್ಲ. – ಪತ್ರಿಕಾ ವರದಿ.

#  ಸಚಿವರ ಗ್ರಾಮ ವಾಸ್ತವ್ಯಕ್ಕೂ, ಭರವಸೆಗಳಿಗೂ, ಅಭಿವೃದ್ಧಿಗೆ ಎತ್ತಣಿಂದೆತ್ತ ಸಂಬಂಧವಯ್ಯಾ ?

 

 • ಸಂವಿಧಾನದ ಬದಲಾವಣೆ ಮಾತುಗಳನ್ನಾಡುವವರನ್ನು ಕೂಡಲೇ ಆಸ್ಪತ್ರೆಗೆ ಸೇರಿಸಿ ಮಾನಸಿಕ ಚಿಕಿತ್ಸೆ ಕೊಡಿಸಬೇಕು. – ಅಣ್ಣಾ ಹಜಾರೆ (ಗಾಂಧಿ ವಾದಿ, ಸಾಮಾಜಿ ಹೋರಾಟಗಾರರು)

#  ಈ ಮಾನಸಿಕ ಚಿಕಿತ್ಸೆ ಮೊದಲು ಕೆಲವೇ ಕೆಲವರಲ್ಲಿತ್ತು. ಈ ಕೆಲವರು ತಮ್ಮ ಮಾನಸಿಕ ಖಾಯಿಲೆ ಇತರರದ್ದೂ ಆಗಬೇಕೆಂಬ ದುರುದ್ಧೇಶದಿಂದ ಸಂಘದ ಮೂಲಕ ಇತರರಿಗೂ ಅತ್ಯಂತ ವ್ಯವಸ್ಥಿತವಾಗಿ ವಿವಿಧ ನೆಪಗಳೊಂದಿಗೆ ವಿವಿಧ ಹೆಸರುಗಳಲ್ಲಿ ಹರಡಿದರು. ಈ ಖಾಯಿಲೆ ಕೆಲವರಲ್ಲಿ ಕಂಡುಬಂದ ಕೂಡಲೇ ಸರಕಾರ, ಸಮಾಜ, ಚುನಾವಣಾ ಆಯೋಗ ಇದಕ್ಕೆ ಕಡಿವಾಣ ಹಾಕಬೇಕಾಗಿತ್ತು. ಅದಾಗಲಿಲ್ಲ. ಈಗ ಈ ಖಾಯಿಲೆ ಬಹಳಷ್ಟು ವ್ಯಾಪಿಸಿಯಾಗಿದೆ. ಇನ್ನು ಕಷ್ಟ ಹಜಾರೆಯವರೇ… ಯುಪಿಎ ಸರಕಾರದ ಅವಧಿಯಲ್ಲಿ ನೀವು ಜನಲೋಕಪಾಲ್ ಗಾಗಿ ಹೋರಾಟಕ್ಕೆ ಇಳಿದಾಗ ಈ ಖಾಯಿಲೆ ಪೀಡಿತರೇ ನಿಮ್ಮ ಬೆನ್ನಿಗೆ ಇದ್ದರು !

 

 • ಭಾರತದ ವ್ಯವಸ್ಥೆ ನಿಂತಿರುವುದೇ ಸಂವಿಧಾನ ಮತ್ತು ಅದರ ಆಶಯಗಳ ಮೇಲೆ. – ಅಣ್ಣಾ ಹಜಾರೆ (ಗಾಂಧಿವಾದಿ, ಸಾಮಾಜಿಕ ಹೋರಾಟಗಾರರು)

# ಈ ವ್ಯವಸ್ಥೆಯನ್ನು ಹಾಳುಗೆಡವಬೇಕು ಎನ್ನುವುದೇ ಕೆಲವು ಸಂಘಗಳ ಮೂಲೋದ್ಧೇಶವಾಗಿದೆಯಲ್ಲ !

 

 • ಗರಿಷ್ಟ ಮುಖಬೆಲೆಯ ನೋಟುಗಳ ಚಲಾವಣೆಯನ್ನು ರದ್ದು ಮಾಡಿದ್ದರಿಂದ ದೇಶದಲ್ಲಿ ಭ್ರಷ್ಟಾಚಾರ ಕಡಿಮೆಯಾಗಿಲ್ಲ. ದೇಶದಲ್ಲಿನ ಭ್ರಷ್ಟಾಚಾರವನ್ನು ಮುಕ್ತಗೊಳಿಸಲು ಪ್ರಧಾನಿ ನರೇಂದ್ರ ಮೋದಿ ವಿಫಲರಾಗಿದ್ದಾರೆ. – ಅಣ್ಣಾ ಹಜಾರೆ.

# ಮೋದಿಯ ಬೆನ್ನಿಗೆ ನಿಂತಿರುವವರಿಗೆ, ಇವರ ಕಂಪೆನಿಗಳಿಗೆ ಲಾಭವಾಗಿದೆಯಂತಲ್ಲ !

 

 • ಭಾರತ ಸರಕಾರದ ಆಧಾರ್ ಮಾಹಿತಿ ಕೋಶಕ್ಕೆ ಕನ್ನ ಹಾಕಬಹುದಾಗಿದೆ ಮತ್ತು ಮಾಹಿತಿಗಳನ್ನು ದುರ್ಬಳಕೆ ಮಾಡಿಕೊಳ್ಳಬಹುದಾಗಿದೆ. – ಎಡ್ವರ್ಡ್ ಸ್ನೋಡೆನ್, ವಿಸಲ್ ಬ್ಲೋವರ್, ಅಮೇರಿಕಾ.

# ಪ್ರಧಾನಿ ನರೇಂದ್ರ ಮೋದಿಯವರ ಸಾಧನೆಯ ಕಿರೀಟಕ್ಕೆ ಆ-ಧಾರವೇ ಈ ಆಧಾರ !  

 

 • ಕಾಂಗ್ರೆಸ್ ಗೆ ಮುಸ್ಲೀಂ ಮಹಿಳೆಯರ ಹಿತಾಸಕ್ತಿಗಿಂತಲೂ ಮುಸ್ಲೀಂ ಮೂಲಭೂತವಾದಿಗಳನ್ನು ಓಲೈಸುವುದೇ ಪ್ರಮುಖ ಉದ್ಧೇಶವಾಗಿದೆ. – ಹೊಸದಿಗಂತ.

# ಬಿಜೆಪಿಗೂ ಅಷ್ಟೆ. ಮುಸ್ಲೀಂ ಮಹಿಳೆಯರ ಹಿತಾಸಕ್ತಿಗಿಂತಲೂ, ಮುಸ್ಲೀಮರನ್ನು ಧ್ವೇಷಿಸುವ ಹಿಂದೂ ಕೋಮುವಾದಿಗಳನ್ನು ಓಲೈಸುವುದೇ ಪ್ರಮುಖ ಉದ್ಧೇಶವಾಗಿದೆ.

 

 • ತ್ರಿವಳಿ ತಲಾಕ್ ಕುರಿತಂತೆ ಕಾಂಗ್ರೆಸ್ ನ ದ್ವಂದ್ವ ನೀತಿ ಮತ್ತೆ ಬಯಲಾಗಿದೆ. – ಹೊಸದಿಗಂತ.

# ಆಧಾರ್ ಕುರಿತಂತೆ ಬಿಜೆಪಿಯ ದ್ವಂದ್ವ ನೀತಿ ಬಯಲಾದಂತೆಯೇ ಇದು ಸಹ !

 

 • ಶಿವಮೊಗ್ಗ, ಮೈಸೂರಿನಲ್ಲಿ ನಡೆದ ಕೋಮುಗಲಭೆ, ಹುಣಸೂರಿನಲ್ಲಿ ವಿದ್ಯಾರ್ಥಿಗಳ ಅಪಹರಣ ಮತ್ತು ಕೊಲೆ ಹೀಗೆ ಸುಮಾರು 175 ಕೇಸುಗಳು ಪಿಎಫ್ಐ ಮೇಲೆ ದಾಖಲಾಗಿದ್ದವು. ಸಿದ್ಧರಾಮಯ್ಯನವರ ತುಘಲಕ್ ಸರಕಾರ ಅಧಿಕಾರಕ್ಕೆ ಬಂದ ಕೂಡಲೇ 175 ಕೇಸುಗಳನ್ನೂ ಹಿಂಪಡೆದುಕೊಂಡಿತು. – ರಾಕೇಶ್ ಶೆಟ್ಟಿ (ಲೇಖಕರು)

# ಯಡಿಯೂರಪ್ಪನವರ ತುಘಲಕ್ ಸರಕಾರ ಅಧಿಕಾರದಲ್ಲಿದ್ದಾಗಲೂ ಇದೇ ರೀತಿ ತಮ್ಮವರ ಮೇಲಿನ ಕೇಸುಗಳನ್ನು ಸರಕಾರ ಹಿಂಪಡೆದುಕೊಂಡಿತ್ತು.

 

 • ಮುಖ್ಯಮಂತ್ರಿ ಸಿದ್ಧರಾಮಯ್ಯ ಜನತೆಯ ಹಣದಲ್ಲಿ ಸಮಾವೇಶ ನಡೆಸುವ ಮೂಲಕ ಜನರ ಹಣವನ್ನು ದುರ್ಬಳಕೆ ಮಾಡುತ್ತಿದ್ದಾರೆ. – ಎಚ್.ಡಿ.ಕುಮಾರಸ್ವಾಮಿ (ಜೆಡಿಎಸ್ ನಾಯಕ, ಮಾಜಿ ಮುಖ್ಯಮಂತ್ರಿ)

# ಭ್ರಷ್ಟ ಜನಪ್ರತಿನಿಧಿಗಳು, ರಾಜಕಾರಣಿಗಳು ಯಾವತ್ತಾದರೂ ತಮ್ಮ ಜೇಬಿನ ಹಣದಿಂದ ಪಕ್ಷದ, ಸರಕಾರದ ಕೆಲಸ ಮಾಡಿದ್ದು ಇದೆಯೇ ?

 

 • ಸಿದ್ಧರಾಮಯ್ಯನವರೇ, ನೀವು ಯಾವ ಯಾವ ಸಮಯದಲ್ಲಿ ಯಾರ್ಯಾರ ಕಾಲು ಹಿಡಿದಿದ್ದೀರಿ ಎನ್ನುವುದು ನನಗೆ ಗೊತ್ತಿದೆ. – ಎಚ್.ಡಿ.ಕುಮಾರಸ್ವಾಮಿ.

# ಹೋ, ನೀವೂ ಆಗ ಸಿದ್ದರಾಮಯ್ಯರ ಜೊತೆಗಿದ್ದೀರಿ ಅನ್ನೋದು ಸ್ಪಷ್ಟವಾಯಿತು !

 

 • ಪಿಎಫ್ಐ ಸಂಘಟನೆಯ ನಿಷೇಧಕ್ಕೆ ಒತ್ತಾಯಿಸುವ ಬಿಜೆಪಿ, ಭಟ್ಕಳ ತಾಲೂಕಿನ ಸಜ್ಜವಾಡ ಗ್ರಾಮ ಪಂಚಾಯತ್ ನಲ್ಲಿ ಪಿಎಫ್ಐ ಜತೆ ಹೊಂದಾಣಿಕೆ ಮಾಡಿಕೊಂಡಿದೆ. – ರಾಮಲಿಂಗಾ ರೆಡ್ಡಿ (ಗೃಹ ಸಚಿವರು)

# ಬಿಜೆಪಿ ಜತೆಗಿದ್ದರೆ, ಇರುವಷ್ಟು ಕಾಲ ಅವರು ದೇಶಪ್ರೇಮಿಗಳು !

 

 

 

 

Leave a Reply

Your email address will not be published. Required fields are marked *