Realtime blog statisticsweb statistics
udupibits.in
Breaking News
ಉಡುಪಿ: ನೌಕರರಿಗೆ ಕಿರುಕುಳ ಆರೋಪ- ಬ್ರಹ್ಮಾವರ ಸಮುದಾಯ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಮಹೇಶ್ ಐತಾಳ್ ಅಮಾನತಿಗೆ ಶ್ರೀರಾಮ ದಿವಾಣ ಒತ್ತಾಯ

ಅಮ್ಮೆಂಬಳ ಆನಂದರಿಗೆ ‘ಮಿಂಚು ಶ್ರೀನಿವಾಸ ಪತ್ರಿಕಾ ಪ್ರಶಸ್ತಿ’ ಪ್ರದಾನ

ಧಾರವಾಡ: ಪತ್ರಕರ್ತರಾಗಿದ್ದ ಮಿಂಚು ಶ್ರೀನಿವಾಸ ಅವರ ಹೆಸರಿನಲ್ಲಿ ಸ್ಥಾಪಿಸಿ ಕೊಡಮಾಡಲಾಗುತ್ತಿರುವ ‘ಮಿಂಚು ಶ್ರೀನಿವಾಸ ಪತ್ರಿಕಾ ಪ್ರಶಸ್ತಿ’ಯನ್ನು ಹಿರಿಯ ಪತ್ರಕರ್ತರಾದ ಅಮ್ಮೆಂಬಳ ಅನಂದ ಅವರಿಗೆ ಜನವರಿ ಏಳರಂದು ಧಾರವಾಡದ ವಿದ್ಯಾವರ್ಧಕ ಸಂಘದಲ್ಲಿ ನಡೆದ ಸಮಾರಂಭದಲ್ಲಿ ಪ್ರಧಾನಿಸಲಾಯಿತು.

ಈ ಮೊದಲು ಡಾ.ಪಾಟೀಲ ಪುಟ್ಟಪ್ಪ, ಎಸ್.ವಿ.ಜಯಶೀಲ ರಾವ್, ರಾಜಶೇಖರ ಕೋಟೆ ಹಾಗೂ ಡಾ.ಎಚ್.ಎಸ್.ದೊರೆಸ್ವಾಮಿ ಅವರು ‘ಮಿಂಚು ಶ್ರೀನಿವಾಸ ಪ್ರಶಸ್ತಿ’ಗೆ ಪಾತ್ರರಾಗಿದ್ದರು.

ಧಾರವಾಡದ ಸಾಂಸ್ಕೃತಿಕ ಮತ್ತು ಮಾಧ್ಯಮ ಪ್ರತಿಷ್ಠಾನ ‘ಸಾಕಾರ’ದ ಐದನೇ ವಾರ್ಷಿಕೋತ್ಸವ ಮತ್ತು ಪ್ರಶಸ್ತಿ ಪ್ರಧಾನ ಸಮಾರಂಭಗಳು ಶಿವಮೊಗ್ಗದ ಮಿಂಚು ಶ್ರೀನಿವಾಸ ಕುಟುಂಬದ ಜಂಟೀ ಆಶ್ರಯದಲ್ಲಿ ಜ.7ರಂದು ನಡೆದ ಕಾರ್ಯಕ್ರಮದಲ್ಲಿ ಧಾರವಾಡದ ಇನ್ ಟ್ಯಾಕ್ ಸಂಚಾಲಕರಾದ ಎನ್.ಪಿ.ಭಟ್ ಅಧ್ಯಕ್ಷತೆ ವಹಿಸಿದ್ದರು. ರಾಷ್ಟ್ರ ಪ್ರಶಸ್ತಿ ವಿಜೇತ ಚಿತ್ರ ನಿರ್ಮಾಪಕರು ಮತ್ತು ನಿರ್ದೇಶಕರಾದ ಬಿ.ಸುರೇಶ್ ಅವರು ಅಮ್ಮೆಂಬಳ ಆನಂದ ಅವರಿಗೆ ಪ್ರಶಸ್ತಿ ಪ್ರಧಾನ ಮಾಡಿದರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷರಾದ ಎನ್.ಮಂಜುನಾಥ, ಧಾರವಾಡದ ರತಿಕಾ ನೃತ್ಯ ನಿಕೇತನದ ನಿರ್ದೇಶಕರಾದ ವಿದುಷಿ ಶ್ರೀಮತಿ ನಾಗರತ್ನ ಹಡಗಲಿ ಹಾಗೂ ಸಾಕಾರದ ಕಾರ್ಯಾಧ್ಯಕ್ಷರಾದ ಡಾ.ಸಿ.ಶುಭದಾ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಮಿಂಚು ಶ್ರೀನಿವಾಸ ಅವರ ಕುಟುಂಬಸ್ಥರು ಉಪಸ್ಥಿತರಿದ್ದರು. ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀ ವೈದ್ಯ ಅವರು ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *