Realtime blog statisticsweb statistics
udupibits.in
Breaking News
ಉಡುಪಿ: ಶಿರ್ವ ಸಂತ ಮೇರಿ ಪದವಿ ಕಾಲೇಜಿನ ಹಿರಿಯ ಅರ್ಥಶಾಸ್ತ್ರ ಪ್ರಾಧ್ಯಾಪಕ ಡಾ.ರಾಧಾಕೃಷ್ಣ ಭಟ್ ಪೆರ್ಲ ನಿಧನ.

ಪಡುಬೆಳ್ಳೆ-ಪಾಂಬೂರು ರಸ್ತೆಯ ಕಾಡಿಗೆ ಬೆಂಕಿ: ಕಿಡಿಗೇಡಿ ಕೃತ್ಯ ಶಂಕೆ- ಪರಿಸರವಾಸಿಗಳಲ್ಲಿ ಆತಂಕ

ಉಡುಪಿ: ಮೂಡುಬೆಳ್ಳೆ – ಪಡುಬೆಳ್ಳೆ – ಪಾಂಬೂರು ರಸ್ತೆಯ ಗೊಂದಲ್ಕೆ ಎಂಬಲ್ಲಿ ರಸ್ತೆ ಬದಿ ಒಣ ಹುಲ್ಲಿಗೆ ಕಿಡಿಗೇಡಿಗಳು ಬೆಂಕಿ ಕೊಟ್ಟ ಪರಿಣಾಮವಾಗಿ ಸುತ್ತಮುತ್ತಲ ಪ್ರದೇಶದ ಬಹಳಷ್ಟು ಗಿಡ ಮರಗಳು ಬೆಂಕಿಗೆ ಅಹುತಿಯಾಗಿದ್ದು, ಪರಿಸರವಾಸಿಗಳಲ್ಲಿ ಆತಂಕ ಹುಟ್ಟಿದೆ.

ಜನವರಿ 8ರಂದು ಮೊದಲ ಬಾರಿ ಈ ಪರಿಸರದಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಬೆಂಕಿಯ ಕೆನ್ನಾಲಿಗೆ ವ್ಯಾಪಕವಾಗಿ ಪರಿಸರದಲ್ಲಿ ಹಬ್ಬುತ್ತಾ, ಗಿಡ ಮರಗಳನ್ನು ಆಹುತಿ ತೆಗೆದುಕೊಳ್ಳುತ್ತಿರುವುದನ್ನು ಕಂಡು ಆತಂಕಿತರಾದ ಸಾರ್ವಜನಿಕರು ಕೂಡಲೇ ವಿಷಯವನ್ನು ಅಗ್ನಶಾಮಕ ದಳಕ್ಕೆ ನೀಡಿದ ಹಿನ್ನೆಲೆಯಲ್ಲಿ, ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದವರು ಬೆಂಕಿಯನ್ನು ನಂದಿಸಿ, ಸಂಭವಿಸಬಹುದಾಗಿದ್ದ ಹೆಚ್ಚಿನ ಅನಾಹುತವನ್ನು ತಪ್ಪಿಸಿದ್ದರು.

ಜ.8ರಂದು ಮೊದಲ ಬಾರಿ ಇಲ್ಲಿ ಬೆಂಕಿ ಕಾಣಿಸಿಕೊಂಡಾಗ ಇದುಅಕಸ್ಮಾತ್ ಸಂಬವಿಸಿರಬಹುದಾದ ಅನಾಹುತ ಆಗಿರಬಹುದೆಂದು ಅಥವಾ ಯಾರಾದರೂ ಸಿಗರೇಟು ಸೇದಿ ಎಸೆದ ಕಾರಣ ಸಂಭವಿಸಿರಬಹುದೆಂದು ಪರಿಸರವಾಸಿಗಳು ಭಾವಿಸಿದ್ದರು. ಆದರೆ, ಮರುದಿನವೇ ಮತ್ತೆ ಇದೇ ಪರಿಸರದಲ್ಲಿ ಬೆಂಕಿ ಕಾಣಿಸಿಕೊಂಡು, ಸುತ್ತಮುತ್ತಲಿನ ಪ್ರದೇಶಗಳನ್ನು ಆವರಿಸಲಾರಂಭಿಸಿದಾಗ, ಇದು ಆಕಸ್ಮಿಕವಲ್ಲ, ಯಾರೋ ಕಿಡಿಗೇಡಿಗಳು ಉದ್ಧೇಶಪೂರ್ವಕವಾಗಿ ನಡೆಸುವ ಕೃತ್ಯ ಎಂಬ ಬಲವಾದ ಅನುಮಾನ ಪರಿಸರವಾಸಿಗಳಲ್ಲಿ ಮೂಡಲು ಕಾರಣವಾಯಿತು.

 

Leave a Reply

Your email address will not be published. Required fields are marked *