Realtime blog statisticsweb statistics
udupibits.in
Breaking News
ಉಡುಪಿ: ಜಿಲ್ಲೆಯ 25 ಮಂದಿ ಪೊಲೀಸ್ ವಾಹನ ಚಾಲಕ ಸಿಬ್ಬಂದಿಗಳ ಪರಸ್ಪರ ವರ್ಗಾವಣೆ.

ಬಿಷಪ್, ಕ್ರೈಸ್ತ ಧರ್ಮಗುರುಗಳ ಮುಂದೆಯೂ ದುರಹಂಕಾರ ಮೆರೆದ ಸಿಎಂ ಸಿದ್ದರಾಮಯ್ಯ !

ಉಡುಪಿ: ಸಾಧನಾ ಸಮಾವೇಶ ಹಿನ್ನೆಲೆಯಲ್ಲಿ ಉಡುಪಿ ಪ್ರವಾಸದಲ್ಲಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಾವು ತಂಗಿದ್ದ ಸ್ಥಳಕ್ಕೆ ಬಿಷಪ್ ಸಹಿತ ಕ್ರೈಸ್ತ ಧರ್ಮಗುರುಗಳು ಬಂದಾಗ ಎದ್ದು ನಿಂತು ಸ್ವಾಗತಿಸುವ ಮೂಲಕ ಕನಿಷ್ಟ ಸೌಜನ್ಯವನ್ನೂ ತೋರಿಸದೆ, ಕುಳಿತುಕೊಂಡೇ ಧರ್ಮಗುರುಗಳ ಜೊತೆ ಮಾತನಾಡುವ ಮೂಲಕ ದುರಹಂಕಾರ ಮೆರೆದೆ ಪ್ರಸಂಗ ನಡೆದಿದೆ.

ಉಡುಪಿ ಧರ್ಮ ಪ್ರಾಂತ್ಯದ ಬಿಷಪ್ ಪರಮ ಪೂಜ್ಯ ಜೆರಾಲ್ಡ್ ಐಸಾಕ್ ಲೋಬೊ, ಛಾನ್ಸೆಲರ್ ವಂ. ವಲೇರಿಯನ್, ಛಾನ್ಸೆಲರ್, ವಂ. ಡೆನ್ನಿಸ್ ಡೇಸಾ ಸಹಿತ ವಿವಿಧ ಕ್ರೈಸ್ತ ಧರ್ಮಗುರುಗಳು ಸಿದ್ಧರಾಮಯ್ಯನವರನ್ನು ಭೇಟಿಯಾಗಿದ್ದರು. ಈ ಸಂದರ್ಭದಲ್ಲಿ ಗೌರವಸೂಚಕವಾಗಿ ಎದ್ದು ನಿಲ್ಲುವ ಕನಿಷ್ಟ ಸೌಜನ್ಯವನ್ನೂ ತೋರಿಸದ ಸಿದ್ದರಾಮಯ್ಯನವರು, ಕುಳಿತಲ್ಲಿಂದಲೇ ಬಿಷಪ್ ಜೊತೆಗೆ ಮಾತುಕತೆ ನಡೆಸಿದರು.

ಮುಖ್ಯಮಂತ್ರಿಗಳ ಈ ನಡವಳಿಕೆಯಿಂದಾಗಿ ಕ್ರೈಸ್ತ ಸಮಾಜದ ಜನಸಾಮಾನ್ಯರಲ್ಲಿ ಅಸಮಾಧಾನ ವ್ಯಕ್ತವಾಗಿದೆ. ತಮಗೆ ಗೌರವ ಸೂಚಿಸುವ ನಿಟ್ಟಿನಲ್ಲಿ ಎದ್ದು ನಿಲ್ಲದೇ ಇದ್ದರೂ, ಕ್ರೈಸ್ತ ಧರ್ಮಗುರುಗಳು, ‘ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕಳೆದ ನಾಲ್ಕೂವರೆ ವರ್ಷಗಳಿಂದ ಅನೇಕ ಉತ್ತಮ ಕಾರ್ಯಗಳನ್ನು ಮಾಡಿದ್ದಾರೆ. ಬರಲಿರುವ ಚುನಾವಣೆಯಲ್ಲಿ ಅವರನ್ನು ಮತ್ತೆ ಮರು ಆಯ್ಕೆ ಮಾಡಬೇಕು. ಮರು ಆಯ್ಕೆಯಾಗುವ ನಿಟ್ಟಿನಲ್ಲಿ ಮುಖ್ಯಮಂತ್ರಿಗಳಿಗೆ ಸರ್ವಶಕ್ತನು ಶಕ್ತಿಯನ್ನು ದಯಪಾಲಿಸಲಿ’ ಎಂದು ಪ್ರಾರ್ಥಿಸಿದರು.

ಕಳೆದ ಬಾರಿ ಉದ್ಯಮಿ ಬಿ.ಆರ್.ಶೆಟ್ಟಿಯವರು ಸರಕಾರಿ ಆಸ್ಪತ್ರೆಗೆ ಸೇರಿದ ಜಮೀನಿನಲ್ಲಿ ಕಟ್ಟಿದ ಅಪೂರ್ಣ ಆಸ್ಪತ್ರೆ ಕಟ್ಟಡವನ್ನು ಉದ್ಘಾಟಿಸಲು ಬಂದಿದ್ದ ಸಿದ್ದರಾಮಯ್ಯನವರು ಕಾರ್ಯಕ್ರಮ ನಿರ್ವಹಣೆ ಮಾಡುತ್ತಿದ್ದ ಉದಯವಾಣಿ ಮಂಗಳೂರು ಬ್ಯೂರೋ ಮುಖ್ಯಸ್ಥರಾದ ಮನೋಹರ ಪ್ರಸಾದ್ ಅವರನ್ನು ವೇದಿಕೆಯಲ್ಲಿಯೇ ಸಾರ್ವಜನಿಕವಾಗಿ ಹಿಂದಕ್ಕೆ ದೂಡುವ ಮೂಲಕ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಅವರ ಮಾತನ್ನು ಕಡೆಗಣಿಸಿ ಅವಮಾನಿಸಿದ ವಿದ್ಯಾಮಾನ ನಡೆದುದನ್ನು ಇಲ್ಲಿ ಸ್ಮರಿಸಬಹುದು.

 

One Comment

  1. v.aditya.rao@gmail.com'

    Vikram Aditya Rao

    January 10, 2018 at 8:54 pm

    What else can u expect from this imbecile moron! Goodluck to the Fathers who’s wishing his re-election!

Leave a Reply

Your email address will not be published. Required fields are marked *