Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಅಮಿ ಷಾಕ್ಕೆ ಒಳಗಾದ ಬಿಜೆಪಿ ನಾಯಕರು !  

ಉಪ್ಪಿನಕಾಯಿ-27: ಶ್ರೀರಾಮ ದಿವಾಣ

 

  • ತನ್ನ ಮೇಲೆ ಕೆಲವರು ತಲವಾರಿನಿಂದ ಹಲ್ಲೆಗೆ ಯತ್ನಿಸಿದ್ದಾರೆ ಎಂದು ಆರೋಪಿಸಿ ಹಿಂದೂ ಜಾಗರಣ ವೇದಿಕೆ ಸುರತ್ಕಲ್ ಘಟಕದ ಸಹ ಸಂಚಾಲಕ ಭರತ್ ರಾಜ್ ಅಗರಮೇಲು ಸುರತ್ಕಲ್ ಪೊಲೀಸ್ ಠಾಣೆಗೆ ಸೋಮವಾರ (08.01.2018) ನೀಡಿರುವ ದೂರಿನ ಬಗ್ಗೆ ಸಂಶಯ ವ್ಯಕ್ತವಾಗಿದೆ. ‘ದೂರಿನಲ್ಲಿ ನೀಡಿರುವ‌ ಮಾಹಿತಿಗೂ ದೂರುದಾರರ ವಿಚಾರಣೆ ವೇಳೆ ನೀಡುತ್ತಿರುವ ಹೇಳಿಕೆಗೂ ಹೋಲಿಕೆ‌ಯಾಗುತ್ತಿಲ್ಲ. ದೂರಿನ ಕುರಿತು ಈಗ ಸಂಶಯ ಉಂಟಾಗಿದೆ. ಈ ಕುರಿತು ತನಿಖೆ ನಡೆಸಲಾಗುತ್ತಿದೆ’ – ಹನುಮಂತರಾಯ (ಮಂಗಳೂರು ನಗರ‌ ಕಾನೂನು ಸುವ್ಯವಸ್ಥೆ ಡಿಸಿಪಿ)

# ಸುಳ್ಳು, ವದಂತಿ ಮತ್ತು ಅಪಪ್ರಚಾರವನ್ನೇ ಪ್ರೀತಿಸುವ, ಪ್ರೇಮಿಸುವ, ಉಸಿರಾಡುವ ಸಂಘ-ವೇದಿಕೆ ಕಾರ್ಯಕರ್ತರು ಸುಳ್ಳು ದೂರು ಕೊಡದೆ ಬೇರೇನೂ ಕೊಡಲು ಸಾಧ್ಯ ? ಹಿಂಸೆಯನ್ನೇ ನೆಚ್ಚಿಕೊಂಡವರಿಗೆ ಹಿಂಸೆಯ ಭಯ !

 

  • ಧರ್ಮದ ಧ್ವೀಪಕ್ಕೆ ಮಾನವೀಯತೆಯ ಸೇತುವೆ. – ಪತ್ರಿಕೆಯಲ್ಲಿ ಪ್ರಕಟವಾದ ಲೇಖನವೊಂದರ ಶಿರ್ಷಿಕೆ.

# ಅಧರ್ಮದ ರೂವಾರಿಗಳಿಗೆ ಸನ್ಮಾನ, ಪ್ರಶಸ್ತಿ, ಬಿರುದು-ಬಾವಲಿಗಳಗಳ ಕಿರೀಟ !

 

  • ಹಾನಗಲ್ ತಾಲ್ಲೂಕಿನ ಹುಲ್ಲತ್ತಿ ಗ್ರಾಮದಲ್ಲಿನ ಬಾಲೇಹೊಸೂರು ದಿಂಗಾಲೇಶ್ವರ ಶಾಖಾಮಠದ ಮಹಾಲಿಂಗ ಸ್ವಾಮೀಜಿ (38) ಮಠದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. – ಪತ್ರಿಕಾ ವರದಿ.

# ಬ್ರಾಹ್ಮಣ ಸ್ವಾಮೀಜಿಗಳಾಗುತ್ತಿದ್ದರೆ, ಇದನ್ನು ‘ಸ್ವಾಮೀಜಿಗಳು ಅದೃಶ್ಯರಾದರು’ ಎಂದೋ, ‘ಹಿಮಾಲಯಕ್ಕೆ ಹೋಗಿ ತಪಸ್ಸಿಗೆ ಕುಳಿತಿದ್ದಾರೆ’ ಎಂದೋ, ‘ಜೀವಂತ ಸಮಾಧಿಕಾದರು’ ಏನಾದರೂ ಹೇಳಿಬಿಟ್ಟು ಕಾಗಕ್ಕ ಗುಬ್ಬಕ್ಕ ಕಥೆ ಕಟ್ಟಿ ಜನಾಕರ್ಷಿಸಿ ತಮ್ಮ ಉದ್ಯಮ ಸಂಪತ್ತನ್ನು ವೃದ್ಧಿಸಿಕೊಳ್ಳುತ್ತಿದ್ದರು.

 

  • ಮಂಗಳೂರಿನಲ್ಲಿ ನಡೆದ ದೀಪಕ್ ರಾವ್ ಕೊಲೆಯಲ್ಲಿ ಕೆಲವು ಬಿಜೆಪಿ ನಾಯಕರ ಕೈವಾಡವಿದೆ ಎಂಬ ಮಾಹಿತಿ ನನಗೆ ಲಭ್ಯವಾಗಿದೆ. – ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ.

# ಮಾಹಿತಿ ಮೂಲವನ್ನು ಪೊಲೀಸ್ ಅಧಿಕಾರಿಗಳಿಗೆ ನೀಡಿ, ತನಿಖೆಯಲ್ಲಿ ಸಹಕರಿಸಿ, ಮಾದರಿ ನಡೆ ನಿಮ್ಮದಾಗಲಿ.

 

  • ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ಶವದ ಮೇಲೆ ರಾಜಕೀಯ ಮಾಡಲು ಹೊರಟಿವೆ. ರಾಜ್ಯದ ಆಭಿವೃದ್ಧಿಯ ಹೆಸರಿನಲ್ಲಿ ಚುನಾವಣೆ ಎದುರಿಸಬೇಕೆಂಬ ಭಾವನೆ ಎರಡೂ ಪಕ್ಷಗಳಿಗೂ ಇಲ್ಲ. – ಎಚ್.ಡಿ.ಕುಮಾರಸ್ವಾಮಿ (ಜೆಡಿಎಸ್ ರಾಜ್ಯಾದ್ಯಕ್ಷರು)

# ಶವ ರಾಜಕೀಯ ಮತ್ತು ಶವ ಚುನಾವಣೆಯ ವಿರುದ್ಧ ಜೀವಪರ-ಜೀವಂತ ರಾಜಕೀಯ ನಡೆಸಿ.

 

  • ಬಿಜೆಪಿಯ ಶೋಭಾ ಕರಂದ್ಲಾಜೆ ನಿಮ್ಹಾನ್ಸ್‌ನಿಂದಲೇ ಬಂದಿದ್ದು, ಅವರು ಇದೇ ರೀತಿ ಮಾತನಾಡುತ್ತಿದ್ದರೆ ಅವರನ್ನು ಮತ್ತೆ ಅಲ್ಲಿಗೇ ಸೇರಿಸಬೇಕಾಗುತ್ತದೆ. – ರಾಮಲಿಂಗಾರೆಡ್ಡಿ (ಗೃಹ ಸಚಿವರು)

#    ಅವರದು ಹರಡುವ ಖಾಯಿಲೆಯೇ ಇರಬೇಕು ಅನ್ಸುತ್ತೆ. ಹಾಗಾಗಿ ನಿಮ್ಹಾನ್ಸ್ ನಲ್ಲಿರುವ ಇತರರ ಬಗ್ಗೆ ಮೊದಲ ಕಾಳಜಿಯಿರಲಿ !

 

  • ಎಸ್‌ಡಿಪಿಐ ಜತೆಗೆ ಬಿಜೆಪಿ ಹೊಂದಾಣಿಕೆ ಮಾಡಿಕೊಂಡಿರುವುದು ನಿಜ. ಪುತ್ತೂರು ತಾಲ್ಲೂಕಿನ (ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಹುಟ್ಟಿದ ತಾಲ್ಲೂಕು) ಸವಣೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಚುನಾವಣೆಯಲ್ಲಿ ಎಸ್‌ಡಿಪಿಐನ ಚೌರಾಬಿಗೆ ಬಿಜೆಪಿ ಬೆಂಬಲ ನೀಡಿದ್ದರಿಂದ 10 ಮತಗಳಿಂದ ಅವರು ಗೆದ್ದಿದ್ದರು. – ರಾಮಲಿಂಗಾ ರೆಡ್ಡಿ.

# ಹಾಗಾದರೆ ಎಸ್ ಡಿಪಿಐ ಜೊತೆಗೆ ಶೋಭಾ ಕರಂದ್ಲಾಜೆಯವರನ್ನು ನಿಷೇಧಿಸಬೇಕಾಗಬಹುದು !

 

  • ಕೇವಲ ಗೋಹತ್ಯೆ ನಿಷೇಧಿಸುವುದು ಏಕೆ. 14 ಲಕ್ಷದಷ್ಟಿರುವ ಪ್ರಾಣಿ, ಪಕ್ಷಿಗಳ ಹತ್ಯೆಯೂ ನಡೆಯುವುದು ಬೇಡ. ಪ್ರಾಣಿ ಹತ್ಯೆಯನ್ನು ಅವರು ನಿಲ್ಲಿಸಲಿ. – ರಾಮಲಿಂಗಾ ರೆಡ್ಡಿ.

#  ಸರಿಯಾದ ಜೀವಪರ ನಿಲುವು, ಅಭಿಪ್ರಾಯ ಮತ್ತು ಒತ್ತಾಯ. ಉಡುಪಿ ಧರ್ಮ ಸಂಸದ್ ನಲ್ಲಿ ಭಾಗಿಯಾದ ಸಾಧು ಸಂತರು ಇದಕ್ಕೆ ಸ್ಪಂದಿಸಲಿ.

 

  • ಮೂಡಿಗೆರೆಪಟ್ಟಣದ ಛತ್ರ ಮೈದಾನದಲ್ಲಿ ಜನವರಿ 6ರಂದು ನಡೆದ ಕಾಲೇಜು ವಿದ್ಯಾರ್ಥಿನಿ ಧನ್ಯಶ್ರೀ ಆತ್ಮಹತ್ಯೆ ಪ್ರಕರಣ ತಿರುವು ಪಡೆದುಕೊಂಡಿದ್ದು, ಐವರ ವಿರುದ್ಧ ಪ್ರಕರಣ ದಾಖಲಿಸಿರುವ ಸ್ಥಳೀಯ ಪೊಲೀಸರು, ಬಿಜೆಪಿ ಯುವ ಮೋರ್ಚಾ ನಗರಾಧ್ಯಕ್ಷ ಎಂ.ವಿ. ಅನಿಲ್‌ ಎಂಬಾತನನ್ನು ಭಾನುವಾರ ತಡರಾತ್ರಿ ಬಂಧಿಸಿದ್ದಾರೆ. – ಪತ್ರಿಕಾ ವರದಿ.

# ಹೆಣ್ಮಕ್ಕಳನ್ನು ಸಾರ್ವಜನಿಕವಾಗಿ ಅವಮಾನಿಸೋದು, ಅವರ ಸಾವಿಗೆ ಕಾರಣವಾಗೋದು ಬಿಜೆಪಿ ಪರಿವಾರದ ಜನರ ಧರ್ಮ ರಕ್ಷಣಾ ಕಾರ್ಯ !

 

  • ರಾಜ್ಯಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತಾ ಷಾ ಬಂದು ಹೋದ ಬಳಿಕ ಕೋಮು ಗಲಭೆಗಳು ಹೆಚ್ಚಾಗಿವೆ. ಬಿಜೆಪಿ ನಾಯಕರಾದ ಅನಂತಕುಮಾರ್ ಹೆಗಡೆ, ಶೋಭಾ ಕರಂದ್ಲಾಜೆ, ಪ್ರತಾಪಸಿಂಹ ಅವರು ಬಾಯಿಗೆ ಬಂದಂತೆ ಮಾತನಾಡಿ ಪ್ರಚೋದನೆ ನೀಡುತ್ತಿದ್ದಾರೆ. – ಸಾರಿಗೆ ಸಚಿವ ಎಚ್‌.ಎಂ. ರೇವಣ್ಣ.

# ಅಮಿ ಷಾಕ್ಕೆ ಒಳಗಾದ ಬಿಜೆಪಿ ನಾಯಕರು !  

Leave a Reply

Your email address will not be published. Required fields are marked *