Realtime blog statisticsweb statistics
udupibits.in
Breaking News
ಉಡುಪಿ: ಶಿರ್ವ ಸಂತ ಮೇರಿ ಪದವಿ ಕಾಲೇಜಿನ ಹಿರಿಯ ಅರ್ಥಶಾಸ್ತ್ರ ಪ್ರಾಧ್ಯಾಪಕ ಡಾ.ರಾಧಾಕೃಷ್ಣ ಭಟ್ ಪೆರ್ಲ ನಿಧನ.

ಪಾಂಬೂರು, ಪಡುಬೆಳ್ಳೆ ಬಳಿ ಕಳಪೆ ಡಾಮರೀಕರಣ: ನಾಗರಿಕರ ಅಸಮಾಧಾನ

ಉಡುಪಿ: ಉಡುಪಿ ತಾಲೂಕು ಮೂಡುಬೆಳ್ಳೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಪಾಂಬೂರಿನ ವಿಶ್ವನಾಥ ಅವರ ಅಂಗಡಿ ಎದುರಿನಿಂದ ತೆಂಕುಮನೆವರೆಗಿನ ರಸ್ತೆ ಕಳೆದ ತಿಂಗಳು ಡಾಮರೀಕರಣ ಮಾಡಿದ್ದು, ಕಳಪೆ ಕಾಮಗಾರಿಯಿಂದಾಗಿ ದ್ವಿಚಕ್ರ ವಾಹನ ಸಂಚಾರಕ್ಕೆ ಸಮಸ್ಯೆಯಾಗಿ ಪರಿಣಮಿಸಿದೆ.

ಬಿ.ಸಿ.ರೋಡ್ – ಮೂಡುಬೆಳ್ಳೆ ಮುಖ್ಯ ರಸ್ತೆಯ ‘ಮಾನಸ’ ಬಳಿ ವಿಶ್ವನಾಥರವರ ಅಂಗಡಿ ಇದ್ದು, ಇಲ್ಲಿಂದ ತೆಂಕುಮನೆ ಕಡೆಗೆ ಹೋಗುವ ರಸ್ತೆಗೆ ಡಿಸೆಂಬರ್ ತಿಂಗಳಲ್ಲಿ ಡಾಮರೀಕರಣ ಮಾಡಲಾಗಿದೆ. ಇದಕ್ಕೆ ಕಾಪು ವಿಧಾನಸಭಾ ಕ್ಷತ್ರದ ಶಾಸಕ ವಿನಯ ಕುಮಾರ್ ಸೊರಕೆ ಅವರ ಶಾಸಕರ ನಿಧಿಯಿಂದ ಐದು ಲಕ್ಷ ರೂಪಾಯಿ ಮತ್ತು ಮೂಡುಬೆಳ್ಳೆ ಗ್ರಾಮ ಪಂಚಾಯತ್ ಒಂದು ಲಕ್ಷ ರೂಪಾಯಿ, ಹೀಗೆ ಒಟ್ಟು ಆರು ಲಕ್ಷ ರೂಪಾಯಿ ವಿನಿಯೋಗಿಸಲಾಗಿದೆ.

ರಸ್ತೆ ಬದಿ ಚರಂಡಿಯಾಗಲೀ, ಅಗತ್ಯ ಇರುವ ಒಂದು ಕಡೆ ಮೋರಿಯನ್ನಾಗಲೀ ನಿರ್ಮಿಸದೇ ಕಳಪೆ ಕಾಮಗಾರಿ ಮಾಡಲಾಗಿದೆ. ಕಳಪೆ ಕಾಮಗಾರಿ ಸಾರ್ವಜನಿಕರ ಗಮನ ಸೆಳೆಯಬಾರದೆಂಬ ಕಾರಣಕ್ಕೆ, ಕಳಪೆ ಡಾಮರೀಕರಣದ ಮೇಲೆ ಬೂದಿ ಹುಡಿಯನ್ನು ಚೆಲ್ಲಲಾಗಿದೆ. ಇದು, ಬೋರ್ ವೆಲ್ ಹುಡಿ ಅಥವಾ ನಂದಿಕೂರು ಸ್ಥಾವರದ ಕಲ್ಲಿದ್ದಲಿನ ಬೂದಿ ಇರಬಹುದೆಂದು ಸಾರ್ವಜನಿಕರು ಅನುಮಾನ ವ್ಯಕ್ತಪಡಿಸಿದ್ದಾರೆ.

ಅಂದಾಜು 250 ಮೀಟರ್ ನಷ್ಟು ಪ್ರದೇಶದಲ್ಲಿ ಕಳಪೆ ಡಾಮರೀಕರಣ ಮಾಡಲಾಗಿದೆ. ಫಿನಿಶಿಂಗ್ ಸ್ವಲ್ಪವೂ ಇಲ್ಲ.  ಉಳಿದ ಸುಮಾರು 200 ಮೀಟರ್ ನಷ್ಟು ಪ್ರದೇಶಕ್ಕೆ ಕೇವಲ ಮೆಟ್ ಲಿಂಗ್ ನಷ್ಟನ್ನೇ ಮಾಡಲಾಗಿದೆ. ಮೆಟ್ ಲಿಂಗ್ ಪ್ರದೇಶದಲ್ಲಿ ದ್ವಿಚಕ್ರ ವಾಹನ ಸಂಚರಿಸಲು ಇದೀಗ ಕಷ್ಟಸಾಧ್ಯವಾಗಿ ಪರಿಣಮಿಸಿದೆ.

ಇದೇ ಅವಧಿಯಲ್ಲಿ, ಪಡುಬೆಳ್ಳೆಯಿಂದ ಹೊಸವೂರು ಅಥವಾ ಹೊಸೊಕ್ಕಲು (ಮಿತ್ರ ವೃಂದ) ಪ್ರದೇಶವನ್ನು ಸಂಪರ್ಕಿಸುವ ರಸ್ತೆಗೂ ಶಾಸಕರ ಐದು ಲಕ್ಷ ರೂಪಾಯಿ ನಿಧಿಯಲ್ಲಿ ಡಾಮರೀಕರಣ ಮಾಡಲಾಗಿದೆ. ಇದು ಸಹ ಕಳಪೆಯಾಗಿದೆ ಎಂದು ನಾಗರೀಕರು ದೂರಿಕೊಂಡಿದ್ದಾರೆ.

 

 

Leave a Reply

Your email address will not be published. Required fields are marked *