Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಪ್ರಧಾನಿ ಮೋದಿ ಕಾಲದ ಪ್ರಜಾತಂತ್ರ ವ್ಯವಸ್ಥೆಯ 4 ಆಧಾರ ಸ್ಥಂಬಗಳು ನೀವು, ದೇಶ ನಿಮಗೆ ಕೃತಜ್ಞವಾಗಿದೆ

ಉಪ್ಪಿನಕಾಯಿ-29: ಶ್ರೀರಾಮ ದಿವಾಣ

 

 • ಮೂಡಿಗೆರೆಯ ವಿದ್ಯಾರ್ಥಿನಿ ಧನ್ಯಶ್ರೀ ಆತ್ಮಹತ್ಯೆ ಪ್ರಕರಣದಲ್ಲಿ ಬಂಧನದಲ್ಲಿರುವ ಆರೋಪಿ ಬಿಜೆಪಿಯ ಎಂ.ವಿ.ಅನಿಲ್‌ ಅವರ ಮನೆಗೆ ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಭೇಟಿ ನೀಡಿದರು. ಅನಿಲ್‌ ಅವರ ತಂದೆ–ತಾಯಿ ಅವರಿಗೆ ಧೈರ್ಯ ಹೇಳಿದರು. – ಪತ್ರಿಕಾ ವರದಿ.

# ಆರೋಪಿಗಳ ಮನೆಗೆ ಭೇಟಿ ನೀಡಿ ಧೈರ್ಯ ಹೇಳುವ ಪರಂಪರೆಗೆ ಸಂಸದೆ ಶೋಭಾ ನಾಂದಿ !

 

 • ರಾಜ್ಯ ಸರ್ಕಾರಕ್ಕೆ ತಾಕತ್ತಿದ್ದರೆ ಆರ್‌ಎಸ್‌ಎಸ್‌, ಶ್ರೀರಾಮಸೇನೆ, ಬಜರಂಗದಳ ಸಂಘಟನೆಗಳನ್ನು ನಿಷೇಧಿಸಲಿ ಎಂದು ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್‌ ಮುತಾಲಿಕ್‌ ಸವಾಲು ಹಾಕಿದರು. – ಪತ್ರಿಕಾ ವರದಿ.

# ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಇರುವ ವರೆಗೆ ನಿಮ್ಮ ಆಶಯ, ನಿರೀಕ್ಷೆ ಈಡೇರದು.

 

 • ಹಿಂದು ವಿರೋಧಿ ನೀತಿ, ಮುಸ್ಲಿಂ ತುಷ್ಟೀಕರಣದಿಂದ ಕಾಂಗ್ರೆಸ್‌ ಮೂಲೆಗುಂಪಾಗಿದೆ. – ಪ್ರಮೋದ್ ಮುತಾಲಿಕ್ (ಶ್ರೀರಾಮ ಸೇನೆ ಸಂಸ್ಥಾಪಕರು)

# ಕಾಂಗ್ರೆಸ್ ಮೂಲೆಗುಂಪಾದರೆ ನಿಮಗೇ ಲಾಭ, ನಿಮಗೆ ಲಾಭವಾಗಬೇಕಾದರೆ ಕಾಂಗ್ರೆಸ್ ನೀತಿಯನ್ನು ಮುಕ್ತಕಂಠದಿಂದ ಪ್ರೋತ್ಸಾಹಿಸಿ, ಬೆಂಬಲಿಸಿ.

 

 • ನಮ್ಮ ಲೆಕ್ಕ ಕೇಳಲು ಅಮಿತ್ ಷಾ ಯಾರು ? ಮನಮೋಹನ್ ಸಿಂಗ್ ಪ್ರಧಾನಿ ಆಗಿದ್ದಾಗ ಕೇಂದ್ರಕ್ಕೆ ಗುಜರಾತ್ ಸರ್ಕಾರ ಲೆಕ್ಕ ನೀಡಿತ್ತೇ ? ಹಣಕಾಸು ವ್ಯವಸ್ಥೆ ಬಗ್ಗೆ ಅವರಿಗೇನು ಗೊತ್ತು ? ನಮ್ಮಿಂದ ಸಂಗ್ರಹವಾದ ತೆರಿಗೆ ಹಣವನ್ನು ಕೇಂದ್ರ ಸರ್ಕಾರ ನಮಗೆ ನೀಡಿದೆ ಅಷ್ಟೆ. ಅದರಲ್ಲೂ 11 ಸಾವಿರ ಕೋಟಿ ಕಡಿಮೆ ನೀಡಿದೆ. ಆ ಲೆಕ್ಕವನ್ನು ನಾನು ವಿಧಾನಮಂಡಲ ಹಾಗೂ ರಾಜ್ಯದ ಜನರಿಗೆ ನೀಡುತ್ತೇನೆ. – ಮುಖ್ಯಮಂತ್ರಿ ಸಿದ್ದರಾಮಯ್ಯ.

#  ಮಾತು ಎಂದರೆ ಇದು, ಹೀಗೆ ಬರಲಿ-ಬರಬೇಕು ಮಾತು.  

 

 • ಲಿಂಗಾಯತ ಮನುಷ್ಯ ಧರ್ಮ. ಮನುಷ್ಯತ್ವ ಒಪ್ಪುವ ಎಲ್ಲರೂ ಇದರಲ್ಲಿ ಸೇರ್ಪಡೆಯಾಗಬಹುದು. ಜಾತಿ ವ್ಯವಸ್ಥೆಯ ಶ್ರೇಣೀಕೃತ ಸಮಾಜದಲ್ಲಿ ಜಾತ್ಯತೀತ ಕಲ್ಪನೆಗೆ ಬಸವಣ್ಣ ನಾಂದಿ ಹಾಡಿದರು. ಅಂದು ಅವರು ತಂದು ಕೊಟ್ಟ ಸಮಾನತೆಯಿಂದ ಇಂದು ನಾನು ಸಚಿವನಾಗಿದ್ದೇನೆ. – ಎಚ್. ಆಂಜನೇಯ (ಸಮಾಜ ಕಲ್ಯಾಣ ಸಚಿವರು)

#  ಮನುಷ್ಯತ್ವ ಇಲ್ಲದಿರೆ ಮನುಷ್ಯ ಧರ್ಮವ ಕಳೆದುಕೊಳ್ಳುವ ಭಯ, ಆತಂಕ ವಿಶ್ವ ಹಿಂದೂಗಳದ್ದು !

 

 • ಬಿಜೆ‍ಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಈಸ್ಟ್ ಇಂಡಿಯಾ ಕಂಪನಿಯಿದ್ದಂತೆ. ನಾನು ವ್ಯಾಪಾರ ಮಾಡುವುದಕ್ಕೆ ಬಂದಿರುವುದು ಎಂದು ಷಾ ಹೇಳಿದ್ದಾರೆ. ಹಣ ಕೊಟ್ಟು ರಾಜ್ಯದ ಜನರ ಮತ ಖರೀದಿಸುತ್ತೇವೆ ಎಂಬುದು ಅವರ ಕನಸು. ಅದು ರಾಜ್ಯದಲ್ಲಿ ನಡೆಯುವುದಿಲ್ಲ. – ರಾಮಲಿಂಗಾ ರೆಡ್ಡಿ (ಗೃಹ ಸಚಿವರು)

# ಸಂಘದಕ್ಷ ಕಂಪೆನಿಯಂತೂ ಹೌದು.

 

 • ರಾಜ್ಯ ಸರ್ಕಾರದ ಸಚಿವರು ಮತ್ತು ಕಾಂಗ್ರೆಸ್‌ ನಾಯಕರ ಟೆಲಿಫೋನ್ ಸಂಭಾಷಣೆಗಳನ್ನು ಕೇಂದ್ರ ಸರ್ಕಾರ ಕದ್ದಾಲಿಸುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ಅನೇಕ ದಿನಗಳಿಂದ ಇದು ನಡೆಯುತ್ತಿದೆ. ಚುನಾವಣಾ ವರ್ಷವಾಗಿರುವುದರಿಂದ ಕೇಂದ್ರ ಇಂತಹ ಕೆಲಸ ಮಾಡುತ್ತಿದೆ. – ರಾಮಲಿಂಗಾ ರೆಡ್ಡಿ (ಗೃಹ ಸಚಿವರು)

# ಅಧಿಕಾರಕ್ಕಾಗಿ ತಂತ್ರ-ಕುತಂತ್ರ, ಅಧಿಕಾರ ಕಳೆದುಕೊಳ್ಳುವ ಭಯ-ಹತಾಶೆ !

 

 • ರಾಜ್ಯದಲ್ಲಿನ ಸೌಹಾರ್ದ ವಾತಾವರಣ ಹಾಳು ಮಾಡಿ, ಅಶಾಂತಿ ಸೃಷ್ಟಿಸಲು ಬಿಜೆಪಿ ಕ್ರಿಮಿನಲ್‌ ರಾಜಕಾರಣ ಮಾಡುತ್ತಿದೆ. ಈ ನಿಟ್ಟಿನಲ್ಲಿ ವ್ಯವಸ್ಥಿತ ಪಿತೂರಿ ನಡೆಸುತ್ತಿದೆ. ಎಲ್ಲೆಡೆ ಕೋಮುವಾದದ ವಿಷ ಬೀಜ ಬಿತ್ತುತ್ತಿದೆ. ಸಾವನ್ನು ರಾಜಕೀಯ ಕೊಲೆಗಳನ್ನಾಗಿ ಪರಿವರ್ತಿಸಿ, ಅಶಾಂತಿ ಸೃಷ್ಟಿಸುವುದೇ ಬಿಜೆಪಿ ನಾಯಕರ ಕೆಲಸವಾಗಿದೆ. ಇದಕ್ಕೆ ಅವಕಾಶ ಕೊಡಬಾರದು. – ಕೆ.ಸಿ.ವೇಣುಗೋಪಾಲ್ (ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ)

#  ಆಧುನಿಕ ರಾಜಕಾರಣವೇ ಕ್ರಿಮಿನಲ್ !

 

 • ಮತೀಯ ಪಕ್ಷಪಾತ, ಅಸಹಿಷ್ಣುತೆ, ಮತಾಂಧತೆ ಈ ಸುಂದರ ವಸುಂಧರೆಯನ್ನು ಬಹು ಹಿಂದಿನಿಂದಲೂ ಕಾಡುತ್ತಲೇ ಇವೆ. ಇದರಿಂದಾಗಿ ಜಗತ್ತಿನಲ್ಲಿ ಹಿಂಸೆ, ರಕ್ತಪಾತ ಮಡುಗಟ್ಟಿವೆ; ನಾಗರಿಕತೆಗಳು ನಾಶವಾಗಿ, ರಾಷ್ಟ್ರಗಳು ಹತಾಶವಾಗಿವೆ. ಒಂದೊಮ್ಮೆ ಈ ರಾಕ್ಷಸೀ ಪ್ರವೃತ್ತಿಗಳು ಇಲ್ಲದೇ ಹೋಗಿದ್ದರೆ ಮನುಕುಲವು ಈಗಿರುವುದಕ್ಕಿಂತ ಅದೆಷ್ಟೋ ಉನ್ನತ ಮಟ್ಟದಲ್ಲಿರುತ್ತಿತ್ತು. – ಎಂ.ವೆಂಕಯ್ಯ ನಾಯ್ಡು (ರಾಷ್ಟ್ರಪತಿಗಳು)

#  ರಾಕ್ಷಸೀ ಪ್ರವೃತ್ತಿಯವರಿಂದಲೇ ರಾಕ್ಷಸೀ ಪ್ರವೃತ್ತಿಯವರ ನಾಶವಾಗಲಿ.

 

 • ಕೇರಳದ ಯುವತಿಯನ್ನು ಬಲವಂತವಾಗಿ ಇಸ್ಲಾಂಗೆ ಮತಾಂತರ ಮಾಡಿ, ಆಕೆಯನ್ನು ಲೈಂಗಿಕವಾಗಿ ಶೋಷಿಸಿ, ಸಿರಿಯಾದ ಇಸ್ಲಾಮಿಕ್‌ ಸ್ಟೇಟ್‌ ಉಗ್ರರಿಗೆ ಮಾರಾಟ ಮಾಡಲು ಯತ್ನಿಸಿದ ಆರೋಪದ ಪ್ರಕರಣದಲ್ಲಿ ಎರ್ನಾಕುಲ ಗ್ರಾಮೀಣ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. – ಪತ್ರಿಕಾ ವರದಿ.

#  ಇಸ್ಲಾಂನಲ್ಲಿ ಬಲವಂತದ ಮತಾಂತರಕ್ಕೆ ಅವಕಾಶವಿಲ್ಲ. ಬಂಧಿತರು ಮುಸ್ಲೀಮರಲ್ಲ ! – ಅತೀ ಬುದ್ಧಿವಂತ ಮುಸ್ಲೀಮರು ಕೊಡಬಹುದಾದ ಹೇಳಿಕೆ !! ಹೀಗೂ ಉಂಟೇ ?

 

 • ಸುಪ್ರೀಂಕೋರ್ಟ್ ನ ಹಿರಿಯ ನ್ಯಾಯಾಧೀಶರು ಶುಕ್ರವಾರ (12.01.2018) ಸುದ್ದಿಗೋಷ್ಠಿ ನಡೆಸಿ ನ್ಯಾಯಾಂಗ ವ್ಯವಸ್ಥೆ ಬಗ್ಗೆ ಅಸಮಧಾನ ವ್ಯಕ್ತ ಪಡಿಸಿದ್ದಾರೆ. ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಚೆಲಮೇಶ್ವರ್, ರಂಜನ್ ಗೊಗೋಯಿ, ಎಂ.ಬಿ. ಲೋಕೂರ್ ಹಾಗೂ ಕುರಿಯನ್ ಜೋಸೆಫ್ ಸುದ್ದಿಗೋಷ್ಠಿ ನಡೆಸಿದ್ದು, ಸುಪ್ರೀಂಕೋರ್ಟ್ ಮುಖ್ಯ ನ್ಯಾಯಾಧೀಶ ದೀಪಕ್ ಮಿಶ್ರಾ ಅವರ ವಿರುದ್ಧ ದನಿಯೆತ್ತಿದ್ದಾರೆ. ನ್ಯಾಯಾಂಗ ವ್ಯವಸ್ಥೆಯ ಅವ್ಯವಸ್ಥೆ ಬಗ್ಗೆ ತಮ್ಮ ಅಸಮಾಧಾನವನ್ನು ವ್ಯಕ್ತ ಪಡಿಸಿದ ಈ ನ್ಯಾಯಾಧೀಶರು, ಈ ಬಗ್ಗೆ ದೀಪಕ್ ಮಿಶ್ರಾ ಅವರಿಗೆ ಪತ್ರವನ್ನು ಬರೆದಿದ್ದಾರೆ. – ಪತ್ರಿಕಾ ವರದಿ.

# ಪ್ರಧಾನಿ ನರೇಂದ್ರ ಮೋದಿಯವರ ಅನಧಿಕೃತ ತುರ್ತು ಪರಿಸ್ಥಿತಿ ಕಾಲದ ಪ್ರಜಾತಂತ್ರ ವ್ಯವಸ್ಥೆಯ ನಾಲ್ಕು ಆಧಾರ ಸ್ಥಂಬಗಳು ನೀವು, ದೇಶ ನಿಮಗೆ ಕೃತಜ್ಞವಾಗಿದೆ, ಆಗಿರಬೇಕು.

 • ಪ್ರಕರಣಗಳನ್ನು ವಿಚಾರಣೆ ನಡೆಸುವ ನ್ಯಾಯಪೀಠಗಳ ಬಗ್ಗೆ ತೀರ್ಮಾನ ತೆಗೆದುಕೊಳ್ಳುವ ಬಗ್ಗೆ ವಿವೇಚನೆ ಹೊಂದಿದ್ದೇವೆ. ಇದರ ಬಗ್ಗೆ ಮುಖ್ಯ ನ್ಯಾಯಾಧೀಶರ ಅಧಿಕಾರ ನಡೆಯುವುದಿಲ್ಲ. ಅವರಿಗೆ ಉಸ್ತುವಾರಿ ಮಾತ್ರ ಇರುತ್ತದೆ. ನಾವೆಲ್ಲರೂ ಸಮಾನರು, ಅದರ ನೇತೃತ್ವ ಮಾತ್ರ ಮುಖ್ಯ ನ್ಯಾಯಾಧೀಶರಿಗೆ ಇರುತ್ತದೆ. ಆಚಾರಗಳನ್ನು ಗಾಳಿಯಲ್ಲಿ ತೂರುವುದು ನ್ಯಾಯಾಲದ ವಿಶ್ವಾಸರ್ಹತೆಗೆ ಧಕ್ಕೆಯನ್ನುಂಟು ಮಾಡುತ್ತದೆ. ಮನಸೋ ಇಚ್ಛೆ ನ್ಯಾಯಪೀಠಗಳನ್ನು ಬದಲಿಸುವ ಅಧಿಕಾರ ಯಾರಿಗೂ ಇಲ್ಲ.  ಸುಪ್ರೀಂಕೋರ್ಟ್ ಆದೇಶಗಳು ನೀತಿ ನಿಯಮಗಳಿಗೆ ತಡೆಯೊಡ್ಡುತ್ತಿವೆ. ಹೈಕೋರ್ಟ್ ಗಳ ಕೆಲಸಗಳನ್ನೂ ಇದು ಅಡ್ಡಿ ಪಡಿಸುತ್ತದೆ. –  ನ್ಯಾ.ಚೆಲಮೇಶ್ವರ್, ನ್ಯಾ.ರಂಜನ್ ಗೊಗೋಯಿ, ನ್ಯಾ.ಎಂ.ಬಿ. ಲೋಕೂರ್, ನ್ಯಾ.ಕುರಿಯನ್ ಜೋಸೆಫ್ (ಸುಪ್ರೀಂ ಕೋರ್ಟ್ ಹಿರಿಯ ನ್ಯಾಯಮೂರ್ತಿಗಳು)

# ಮುಖ್ಯ ನ್ಯಾಯಮೂರ್ತಿಗಳು ಸರ್ವಾಧಿಕಾರಿಗಳಾಗಬಾರದು !

 

 • ನ್ಯಾಯಾಂಗ ವ್ಯವಸ್ಥೆ ಬಗ್ಗೆ ನಾವೇನೂ ಕಾಳಜಿ ವಹಿಸಿಲ್ಲ ಎಂದು 20 ವರ್ಷಗಳು ಕಳೆದ ನಂತರ ಜನರು ಮಾತನಾಡಿಕೊಳ್ಳುವಂತೆ ಆಗಬಾರದು. ಹಾಗಾಗಿ ನಾವು ಜನರ ಮುಂದೆ ಬರುವುದು ಬಿಟ್ಟರೆ ನಮ್ಮಲ್ಲಿ ಬೇರೆ ಯಾವುದೇ ಆಯ್ಕೆಗಳು ಇರಲಿಲ್ಲ . ಈ ರೀತಿ ಸುದ್ದಿಗೋಷ್ಠಿ ನಡೆಸಲು ನಮಗೇನೂ ಖುಷಿ ಅನಿಸುವುದಿಲ್ಲ. ಆದರೆ ನಡೆಸಲೇ ಬೇಕಾದ ಅನಿವಾರ್ಯತೆ ಬಂದೊದಗಿದೆ. –ನ್ಯಾ.ಚೆಲಮೇಶ್ವರ್ (ಸುಪ್ರೀಂ ಕೋರ್ಟ್ ಹಿರಿಯ ನ್ಯಾಯಮೂರ್ತಿಗಳು)

# ಭಾರತ ಭಾಗ್ಯ ವಿಧಾತಾ !

 

 • ರಾಮಕಥಾ ಗಾಯಕಿ ಮೇಲಿನ ಅತ್ಯಾಚಾರ ಆರೋಪದಲ್ಲಿ ಹೊಸನಗರ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಶ್ರೀಗಳನ್ನು ಆರೋಪ ಮುಕ್ತಗೊಳಿಸಿದ್ದ ಸೆಷನ್ಸ್ ನ್ಯಾಯಾಲಯದ ಆದೇಶ ಪ್ರಶ್ನಿಸಿದ್ದ ಮೇಲ್ಮನವಿ ವಿಚಾರಣೆಯಿಂದ ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ ಅವರು ಹಿಂದೆ ಸರಿದಿದ್ದಾರೆ. ‘ನಾಲ್ಕು ವರ್ಷಗಳ ಅವಧಿಯಲ್ಲಿ ಸ್ವಾಮೀಜಿ ನನ್ನ ಮೇಲೆ 154 ಬಾರಿ ಅತ್ಯಾಚಾರ ನಡೆಸಿದ್ದಾರೆ’ ಎಂದು ರಾಮಕಥಾ ಗಾಯಕಿ ಮಾಡಿದ್ದ ಆರೋಪ ಪ್ರಕರಣದಲ್ಲಿ ಸ್ವಾಮೀಜಿ ಖುಲಾಸೆಯಾಗಿದ್ದು, ಸೆಷನ್ಸ್‌ ನ್ಯಾಯಾಲಯದ ಈ ತೀರ್ಪನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಲಾಗಿತ್ತು. ಪ್ರಕರಣ ಸಂಬಂಧಏಕಸದಸ್ಯ ನ್ಯಾಯಪೀಠದ ಮುಂದಿರುವ ಈ ಮೇಲ್ಮನವಿ ವಿಚಾರಣೆ ಇಂದು(ಶುಕ್ರವಾರ) ನಿಗದಿಯಾತ್ತು. – ನ್ಯಾ.ಕೆ.ಎನ್.ಫಣೀಂದ್ರ (ಹೈಕೋರ್ಟ್ ನ್ಯಾಯಮೂರ್ತಿಗಳು)

# ಮಠಧ ಕಡೆಯ ಒತ್ತಡಕ್ಕೆ ಹಿಂದೆ ಸರಿದರೆ ? ಬೆದರಿಕೆಗೆ ಬಗ್ಗಿದರೆ ? ಸತ್ಯ ಬಯಲಾಗಬೇಕು. ನ್ಯಾಯಾಂಗದಲ್ಲಿ ನ್ಯಾಯಮೂರ್ತಿ ನಿಷ್ಪಕ್ಷಪಾತಿಯಾಗಿರಬೇಕು. ಹಿಂದೆ ಸರಿಯುವುದೆಂದರೆ ನ್ಯಾಯಾಂಗಕ್ಕೆ ಅಪಚಾರವೇ ಸರಿ.

 

 • ರಾಜ್ಯದ 29 ಜಿಲ್ಲೆಗಳಲ್ಲಿ ಇರದೇ ಇರುವ ಕೋಮು ಸಂಘರ್ಷ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಾತ್ರ ಹೆಚ್ಚಾಗಿದೆ. ಇದಕ್ಕೆ ಕೋಮುವಾದಿ ಸಂಘಟನೆಗಳೇ ಕಾರಣ. ಜನರಿಗೆ ಇದಾವುದೂ ಬೇಕಾಗಿಲ್ಲ. ಸಂಘಟನೆಗಳು ಸುಮ್ಮನಿದ್ದರೆ, ಇಂತಹ ಘಟನೆಗಳೂ ನಡೆಯುವುದಿಲ್ಲ. – ಗೃಹ ಸಚಿವ ರಾಮಲಿಂಗಾರೆಡ್ಡಿ.

# ಕೋಮು ಸಂಘರ್ಷಗಳನ್ನು ಯಾವಾಗ, ಎಲ್ಲಿ, ಹೇಗೆ ಜಾರಿಗೊಸಬಹುದು ಎಂಬಿತ್ಯಾದಿ ವಿಷಯಗಳ ಬಗ್ಗೆ ಒಂದು ಷ್ಪಷ್ಟ ನಿರ್ಣಯಕ್ಕೆ ಬರುವ ಸಲುವಾಗಿ ನಮ್ಮ ಸಂಘ ಪ್ರಾಯೋಗಿಕವಾಗಿ ಪರೀಕ್ಷಿಸಿ ನೋಡಲು ದಕ್ಷಿಣ ಕನ್ನಡ ಜಿಲ್ಲೆಯನ್ನು ಆಯ್ಕೆ ಮಾಡಿರಬೇಕು !

 

 

Leave a Reply

Your email address will not be published. Required fields are marked *