Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಜನವರಿ 28: ಕಾಂತಾವರದಲ್ಲಿ ಡಾ.ಪಿ.ವಿ.ಭಂಡಾರಿ ವಿಶೇಷ ಉಪನ್ಯಾಸ

ಕಾಂತಾವರ (ಬೆಳುವಾಯಿ): ಅಲ್ಲಮಪ್ರಭು ಪೀಠ ಕಾಂತಾವರ ಇದರ ಸಾಂಸ್ಕೃತಿಕ ಧರ್ಮ ಸಂವರ್ಧನ ತಿಂಗಳ ಕಾರ್ಯಕ್ರಮದ 7ನೇ ವರ್ಷದ 73ನೇ ‘ಅನುಭವದ ನಡೆ ಅನುಭಾವದ ನುಡಿ’ ಕಾರ್ಯಕ್ರಮವು ಜನವರಿ 28ರಂದು ಮಧ್ಯಾಹ್ನ 3 ಗಂಟೆಗೆ ಕಾಂತಾವರ ಕನ್ನಡ ಭವನದ ‘ಅಲ್ಲಮಪ್ರಭು ವೇದಿಕೆ’ಯಲ್ಲಿ ಜರುಗಲಿದೆ.

ಜ.28ರ ಆದಿತ್ಯವಾರ ನಡೆಯುವ ಈ ಕಾರ್ಯಕ್ರಮದಲ್ಲಿ, ಉಡುಪಿ ದೊಡ್ಡಣಗುಡ್ಡೆಯ ಡಾ.ಎ.ವಿ.ಬಾಳಿಗಾ ಸ್ಮಾರಕ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರೂ, ಡಾ.ಎ.ವಿ.ಬಾಳಿಗಾ ಸಮೂಹ ಸಂಸ್ಥೆಗಳ ನಿರ್ದೇಶಕರೂ ಆದ ಡಾ.ಪಿ.ವಿ.ಭಂಡಾರಿ ಅವರು ‘ಒತ್ತಡ ಮತ್ತು ಸಮಾಜ’ ಎಂಬ ವಿಷಯದಲ್ಲಿ ವಿಶೇಷ ಉಪನ್ಯಾಸ ನೀಡಲಿದ್ದಾರೆ.

ದಾವಣಗೆರೆಯಲ್ಲಿ ಪ್ರೌಢ ಶಿಕ್ಷಣ, ಬೆಂಗಳೂರಿನ ವಿಜಯಾ ಕಾಲೇಜಿನಲ್ಲಿ ಪದವಿಪೂರ್ವ ಶಿಕ್ಷಣ, ದಾವಣಗೆರೆಯ ಜೆ.ಜೆ.ಎಂ. ಮೆಡಿಕಲ್ ಕಾಲೇಜಿನಿಂದ ಪ್ರಥಮ ಶ್ರೇಣಿಯಲ್ಲಿ ವೈದ್ಯಕೀಯ ಶಿಕ್ಷಣ, ಮಂಗಳೂರಿನ ಕಂಕನಾಡಿಯ ಫಾದರ್ ಮುಲ್ಲರ್ಸ್ ವೈದ್ಯಕೀಯ ಕಾಲೇಜಿನಿಂದ ಮನೋರೋಗ ಚಿಕಿತ್ಸೆ ಬಗ್ಗೆ ಡಿಪ್ಲೋಮಾ ಪದವಿ ಮತ್ತು ಮಣಿಪಾಲ ಕಸ್ತೂರ್ಬಾ ವಿಶ್ವವಿದ್ಯಾಲಯದಲ್ಲಿ ಮನೋರೋಗಗಳ ಚಿಕಿತ್ಸೆ ಹಾಗೂ ಔಷಧೋಪಚಾರಗಳ ಬಗ್ಗೆ ಅಧ್ಯಯನ ನಡೆಸಿ ಬಂಗಾರದ ಪದಕದೊಂದಿಗೆ ಡಿಪ್ಲೋಮಾ ಪದವಿಯನ್ನು ತನ್ನದಾಗಿಸಿಕೊಮಡವರು ಡಾ.ಪಿ.ವಿ.ಭಂಡಾರಿಯವರು.

ಉಡುಪಿಯ ಲೋಂಬಾರ್ಡ್ ಸ್ಮಾರಕ ಆಸ್ಪತ್ರೆಯಲ್ಲಿ ಮನೋರೋಗ ತಜ್ಞರಾಗಿ ವೃತ್ತಿ ಸೇವೆ ಆರಂಭಸಿದ ಡಾ.ಭಂಡಾರಿಯವರು,  ಬಳಿಕ ಯೇನಪೋಯ ವೈದ್ಯಕೀಯ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ, ಮಣಿಪಾಲ ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ, ಉಡುಪಿ ಅಜ್ಜರಕಾಡಿನಲ್ಲಿರುವ ಜಿಲ್ಲಾ ಸರಕಾರಿ ಆಸ್ಪತ್ರೆಯ ಮನೋರೋಗ ವಿಭಾಗದ ಗೌರವ ವೈದ್ಯಾಧಿಕಾರಿಯಾಗಿ ಒಂಭತ್ತು ವರ್ಷಗಳ ಕಾಲ ಸೇವೆ ಸಲ್ಲಿಸಿದವರು. ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಮನೋರೋಗ ಚಿಕಿತ್ಸಾ ಘಟಕವನ್ನು ಸ್ಥಾಪಿಸುವಲ್ಲಿ, ಇವರು ಪ್ರಮುಖ ಪಾತ್ರವನ್ನು ವಹಿಸಿದ್ದರು.

ಕರ್ನಾಟಕ ಮಾನಸಿಕ ಆರೋಗ್ಯ ಸಮಿತಿಗೆ ವಿಶೇಷ ಆಹ್ವಾನಿತರಾಗಿರುವ ಡಾ.ಪಿ.ವಿ.ಭಂಡಾರಿ ಅವರು, ಮನೋರೋಗ ಮತ್ತು ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದಂತೆ ದೂರದರ್ಶನಗಳಿಗೆ ಸಂಪನ್ಮೂಲ ವ್ಯಕ್ತಿಯಾಗಿಯೂ ಚಿರಪರಿಚಿತರು. ಇವರ ಕನ್ನಡ ಮತ್ತು ಇಂಗ್ಲೀಷ್ ಬರಹಗಳು ನಾಡಿನ ವಿವಿಧ ಮಾಧ್ಯಮಗಳಲ್ಲಿ ಪ್ರಕಟವಾಗಿವೆ, ಈಗಲೂ ಆಗುತ್ತಿವೆ. ಮದ್ಯವರ್ಜನ ಶಿಬಿರಗಳ ಮೂಲಕ ಜನರನ್ನು ಮದ್ಯವ್ಯಸನ ವಿಮುಕ್ತಿಗೊಳಿಸುವಲ್ಲಿ ಶ್ರಮಿಸುತ್ತಿರುವ ಡಾ.ಭಂಡಾರಿಯವರು, ಒತ್ತಡ ನಿರ್ವಹಣಾ ತಂತ್ರಗಳ ಕುರಿತು ವೈದ್ಯರಿಗೆ ಮತ್ತು ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳಿಗೆ ನಿರಂತರವಾಗಿ ಕಾರ್ಯಾಗಾರಗಳನ್ನು ಹಮ್ಮಿಕೊಳ್ಳುತ್ತಿದ್ದಾರೆ. ಜನಪರ ಹೋರಾಟಗಾರರಾಗಿಯೂ ಸಕ್ರಿಯರಾಗಿರುವವರು ಪಿ.ವಿ.ಭಂಡಾರಿ.

ಡಾ.ಪಿ.ವಿ.ಭಂಡಾರಿಯವರಿಗೆ ಕರ್ನಾಟಕ ಮನೋವೈದ್ಯರ ಸಂಘದ ಪ್ರತಿಷ್ಠಿತ ‘ಎಸ್.ಎಸ್.ಜಯರಾಮ ಪ್ರಶಸ್ತಿ’, ಮದ್ಯವರ್ಜನ ಕ್ಷೇತ್ರದಲ್ಲಿ ಸಲ್ಲಿಸಿದ ವಿಶೇಷ ಸೇವೆಗಾಗಿ ‘ಸ್ಪಂದನಾ ಪ್ರಶಸ್ತಿ’, ಕರ್ನಾಟಕ ಮದ್ಯಪಾನ ಸಂಯಮ ಮಂಡಳಿ ಕೊಡಮಾಡುವ ‘ಸಂಯಮ ಪ್ರಶಸ್ತಿ’, ‘ತಾಲೂಕು ಸಾಹಿತ್ಯ ಸಮ್ಮೇಳನ ಪ್ರಶಸ್ತಿ’ ,‘ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ’ ಸಹಿತ ಅನೇಕ ಪ್ರಶಸ್ತಿಗಳು, ಪುರಸ್ಕಾರಗಳು, ಗೌರವ ಅಭಿನಂದನೆಗಳನ್ನು ಪಡೆದುಕೊಂಡಿದ್ದಾರೆ.

Leave a Reply

Your email address will not be published. Required fields are marked *