Realtime blog statisticsweb statistics
udupibits.in
Breaking News
# ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕಮಲಾದೇವಿ ಚಟ್ಟೋಪಾಧ್ಯಾಯ ಹೆಸರಿಡಲು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ನಿವೃತ್ತ ಪತ್ರಕರ್ತ ಅಮ್ಮೆಂಬಳ ಆನಂದರಿಂದ ಸಿಎಂ ಕುಮಾರಸ್ವಾಮೀಗೆ ಮನವಿ.

ಮೊದಲೊಂದಿಪೆ ನಿನಗೆ ಗಣನಾಥ…ಎನ್ನುವ ಬದಲು; ”ನಮೋ ನಮಃ” ಎನ್ನಿ, ವಿಘ್ನಗಳೆಲ್ಲವೂ ನಿವಾರಣೆಯಾಗಿಬಿಡುತ್ತೆ ! 

ಉಪ್ಪಿನಕಾಯಿ-32: ಶ್ರೀರಾಮ ದಿವಾಣ

 

  • ಲಾಭದಾಯಕ ಹುದ್ದೆ ಹೊಂದಿದ್ದಾರೆ ಎಂಬ ಆರೋಪದ ಮೆರೆಗೆ ಆಮ್‌ ಆದ್ಮಿ ಪಕ್ಷದ 20 ಶಾಸಕರನ್ನು ಚುನಾವಣಾ ಆಯೋಗವು ಅನರ್ಹಗೊಳಿಸಿರುವ ಕ್ರಮಕ್ಕೆ ತಾತ್ಕಾಲಿಕ ತಡೆ ನೀಡಲು ದೆಹಲಿ ಹೈಕೋರ್ಟ್‌ ನಿರಾಕರಿಸಿದೆ. ಎಎಪಿಯ 20 ಶಾಸಕರನ್ನು ಆಯೋಗವು ಅನರ್ಹಗೊಳಿಸಿ, ಈ ಕ್ರಮವನ್ನು ಅನುಮೋದಿಸಲು ರಾಷ್ಟ್ರಪತಿಗೆ ಪಟ್ಟಿ ಕಳುಹಿಸಿದೆ. 2015ರಲ್ಲಿ ದೆಹಲಿಯ ವಿಧಾನಸಭಾ ಚುನಾವಣೆಯಲ್ಲಿ ಎಎಪಿ 70 ಕ್ಷೇತ್ರಗಳಲ್ಲಿ 67ರಲ್ಲಿ ಅಭೂತಪೂರ್ವ ಗೆಲುವು ದಾಖಲಿಸಿತ್ತು. ಆ ಬಳಿಕ ಗೆದ್ದ ಪ್ರತಿನಿಧಿಗಳ ಮೇಲೆ ಬಿಜೆಪಿ ಆರೋಪಗಳನ್ನು ಮಾಡುತ್ತಲೇ ಬರುತ್ತಿತ್ತು. – ಪತ್ರಿಕಾ ವರದಿ.
  • # ಫಾಲೋ ಅಪ್ ಮಾಡುವುದನ್ನು ಬಿಜೆಪಿ ಪರಿವಾರ ಸಂಘಟನೆಗಳ ನಾಯಕರನ್ನು ನೋಡಿ ಕಲಿಯಬೇಕು.

 

  • ರಾಜಕೀಯದಲ್ಲಿ ಧರ್ಮ ಇರಬೇಕೇ ಹೊರತು, ಧರ್ಮವನ್ನು ರಾಜಕೀಯ ಲಾಭಕ್ಕೆ ಬಳಸಿಕೊಳ್ಳಬಾರದು.                                    – ಮುಖ್ಯಮಂತ್ರಿ ಸಿದ್ದರಾಮಯ್ಯ.
  • # ರಾಜಕೀಯ ಲಾಭಕ್ಕೆ ಧರ್ಮವನ್ನು ಬಳಸಿಕೊಳ್ಳದಿದ್ದಲ್ಲಿ ತನ್ನಿಂತಾನೇ ಬಿಜೆಪಿ ಮುಕ್ತ ಭಾರತ ಆಗಿಬಿಡುತ್ತೆ.

 

  • ಎಲ್ಲರೂ ಸರಕಾರಿ ಕಾರ್ಯಕ್ರಮದಲ್ಲಿ ನಾಡಗೀತೆ ಹಾಡುತ್ತಾರೆ. ಆದರೆ, ಆಮೇಲೆ ನಾಡಗೀತೆಯ ಆಶಯಗಳ ವಿರುದ್ಧವಾಗಿ ನಡೆದುಕೊಳ್ಳುತ್ತಾರೆ. – ಮುಖ್ಯಮಂತ್ರಿ ಸಿದ್ದರಾಮಯ್ಯ.
  • # ಸಂವಿಧಾನದ ಕಥೆಯೂ ಇದುವೇ !

 

  • ಮೈಸೂರಿನ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯ (ksou)ಯ 2017-18ನೇ ಸಾಲಿನ ತಾಂತ್ರಿಕೇತರ ಕೋರ್ಸ್ ಗಳಿಗೆ ಮಾನ್ಯತೆ ನೀಡುವಂತೆ ಹೈಕೋರ್ಟ್ ಆದೇಶ ಹೊರಡಿಸಿದ್ದರೂ, ಮಾನ್ಯತೆ ನೀಡದೆ ಆದೇಶ ಉಲ್ಲಂಘಿಸಿದ ವಿಶ್ವವಿದ್ಯಾಲಯ ಅನುದಾನ ಆಯೋಗ (ugc)ದಿಂದ ನ್ಯಾಯಾಂಗ ನಿಂದನೆ. – ಪತ್ರಿಕಾ ವರದಿ.
  • # ಮೊದಲೊಂದಿಪೆ ನಿನಗೆ ಗಣನಾಯಕ… ಎನ್ನುವ ಬದಲು; ”ನಮೋ ನಮಃ” ಎನ್ನಿ, ವಿಘ್ನಗಳೆಲ್ಲವೂ ನಿವಾರಣೆಯಾಗಿಬಿಡುತ್ತೆ ! 
 

Leave a Reply

Your email address will not be published. Required fields are marked *