Realtime blog statisticsweb statistics
udupibits.in
Breaking News
# ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕಮಲಾದೇವಿ ಚಟ್ಟೋಪಾಧ್ಯಾಯ ಹೆಸರಿಡಲು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ನಿವೃತ್ತ ಪತ್ರಕರ್ತ ಅಮ್ಮೆಂಬಳ ಆನಂದರಿಂದ ಸಿಎಂ ಕುಮಾರಸ್ವಾಮೀಗೆ ಮನವಿ.

ಮೂವರು ಐದನ್ನು ಮೀರುವುದೇ ಇಂದಿನ ನಿಜವಾದ ಸವಾಲು !

ಉಪ್ಪಿನಕಾಯಿ-33: ಶ್ರೀರಾಮ ದಿವಾಣ

 

 • ಸೊಹ್ರಾಬುದ್ದೀನ್‌ ಶೇಖ್‌ ಎನ್‌ಕೌಂಟರ್‌ ಪ್ರಕರಣದಲ್ಲಿ ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಖುಲಾಸೆಯನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸದಿರುವ ಸಿಬಿಐ ನಿರ್ಧಾರದ ವಿರುದ್ಧ ಬಾಂಬೆ ವಕೀಲರ ಸಂಘ ಬಾಂಬೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ. – ಪತ್ರಿಕಾ ವರದಿ.
 • # ಸಿಬಿಐ ಅಮಿ ಷಾಗೆ ಬಲಿಯಾಗುತ್ತಿದೆಯೇ ?

 

 • ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹಿಂದೆಂದಿಗಿಂತಲೂ ಹೆಚ್ಚು ತೀವ್ರವಾಗಿ ಹತ್ತಿಕ್ಕುವ ಪ್ರಯತ್ನ ನಡೆಯುತ್ತಿದೆ. ಕಲಾವಿದರು, ಬರಹಗಾರರು, ನಿರ್ದೇಶಕರ ಅಭಿವ್ಯಕ್ತಿಗೆ ಮುಕ್ತ ಅವಕಾಶ ಸಿಗುತ್ತಿಲ್ಲ. ಯಾವ ಪಕ್ಷದ ಒಬ್ಬ ರಾಜಕಾರಣಿಯೂ ಇದುವರೆಗೆ ಅಭಿವ್ಯಕ್ತಿ ಸ್ವಾತಂತ್ರ್ಯದ ರಕ್ಷಣೆಯ ಬಗ್ಗೆ ಮಾತನಾಡಿಲ್ಲ. – ರಾಮಚಂದ್ರ ಗುಹಾ (ಖ್ಯಾತ ಇತಿಹಾಸಕಾರರು)
 • # ಅಭಿವ್ಯಕ್ತಿ ಸ್ವಾತಂತ್ರ್ಯದ ವಿಷಯದಲ್ಲಿ ಸರ್ವ ಪಕ್ಷಗಳಲ್ಲಿ ಸಮಾನತೆ, ಐಕ್ಯತೆ !

 

 • ಇಂದು ಭಾರತದ ಹಲವು ವಿಶ್ವವಿದ್ಯಾಲಯಗಳಲ್ಲಿ ಮಾರ್ಕ್ಸಿಸ್ಟ್‌ಗಳು ಇತಿಹಾಸ ಬರೆಯುತ್ತಿದ್ದಾರೆ. ಮಾರ್ಕ್ಸಿಸಂಗೆ ಅಂಟಿಕೊಂಡಿರುವ ಇತಿಹಾಸಕಾರರು ಅಪರಿಪೂರ್ಣರಾಗಿರುತ್ತಾರೆ, ಸಂಕುಚಿತ ಮನಸ್ಥಿತಿಯವರಾಗಿರುತ್ತಾರೆ ಎನ್ನುವುದು ನಿಜ. ಆದರೆ ಅವರ ಬದಲಿಗೆ ಆರ್‌ಎಸ್‌ಎಸ್‌ನವರು ನಮ್ಮ ಇತಿಹಾಸ ಬರೆಯಲು ತೊಡಗಿದರೆ ಇತಿಹಾಸ ಕೆಡುವುದಷ್ಟೇ ಅಲ್ಲ, ಬೀದಿ ಜಗಳಕ್ಕೂ ಕಾರಣವಾಗುತ್ತದೆ. – ರಾಮಚಂದ್ರ ಗುಹಾ
 • # ಧ್ವೇಷಪೂರಿತ ಇತಿಹಾಸದ ದಾಖಲೀಕರಣದಿಂದ ಕತ್ತಲೆಯತ್ತ ಭವಿಷ್ಯ !

 

 •  ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಹನುಮಜಯಂತಿ ಆಚರಿಸುವುದನ್ನೂ ನಾನು ಬೆಂಬಲಿಸುವುದಿಲ್ಲ. ಶ್ರೀರಂಗಪಟ್ಟಣದ ಸ್ಥಳೀಯರು ಟಿಪ್ಪು ಜಯಂತಿ ಆಚರಿಸಿಕೊಳ್ಳಲಿ. ಯಾವುದೋ ಒಂದು ಶಾಖೆಯಲ್ಲಿ ಆರ್‌ಎಸ್‌ಎಸ್‌ನವರು ಹನುಮಜಯಂತಿ ಆಚರಿಸಲಿ, ತೊಂದರೆಯಿಲ್ಲ. ಆದರೆ ಸರ್ಕಾರ ಯಾವುದೋ ಶತಮಾನದ ಐತಿಹಾಸಿಕ ಮನುಷ್ಯರ ಜಯಂತಿಗಳನ್ನು ಯಾಕೆ ಆಚರಿಸಬೇಕು? ಅದರ ಬದಲು ನಮ್ಮ ಸರ್ಕಾರ ಶಿವರಾಮ ಕಾರಂತ, ಕೆ.ವಿ. ಸುಬ್ಬಣ್ಣ ಅವರಂಥ ನಮ್ಮ ಗಣರಾಜ್ಯದಲ್ಲಿ ಬದುಕಿದ್ದವರ ಜಯಂತಿಗಳನ್ನು ಆಚರಿಸಲಿ. – ರಾಮಚಂದ್ರ ಗುಹಾ.
 • # ಕಿವುಡು ಸರಕಾರಗಳಿಗೆ ನಿಮ್ಮ ಮಾತು ಕೇಳುತ್ತಾ ?

 

 • ಗುರುತಿನ (ಐಡೆಂಟಿಟಿ) ಅಂಧಾಭಿಮಾನವನ್ನೂ ಇತಿಹಾಸಕಾರರು ಮೀರಲೇಬೇಕು. ನಾವು ಯಾರು, ಯಾವ ಲಿಂಗದವರು, ಯಾವ ದೇಶ, ಭಾಷೆ, ಶಿಕ್ಷಣ, ಜಾತಿಯವರು ಎನ್ನುವುದರ ಮೇಲೆ ಜಗತ್ತನ್ನು ನೋಡುವ ರೀತಿಯೂ ಒಬ್ಬರಿಂದ ಒಬ್ಬರಿಗೆ ಭಿನ್ನವಾಗಿರುತ್ತದೆ. ಆದರೆ ಇತಿಹಾಸಕಾರ ಈ ಎಲ್ಲ ಅಂಶಗಳನ್ನು ಮೀರಬೇಕು. ಐತಿಹಾಸಿಕ ಸತ್ಯವನ್ನು ಅರಿಯುವುದು, ಇತಿಹಾಸಕಾರ ತನ್ನ ವೈಯಕ್ತಿಕ ಗುರುತುಗಳನ್ನು ಎಷ್ಟರ ಮಟ್ಟಿಗೆ ಮೀರಲು ಯಶಸ್ವಿಯಾಗಿದ್ದಾನೆ ಎನ್ನುವುದನ್ನು ಅವಲಂಬಿಸಿದೆ. ಸಾಂಪ್ರದಾಯಿಕವಾಗಿ ಇತಿಹಾಸ ಬರವಣಿಗೆಯಲ್ಲಿ ಮೇಲ್ಜಾತಿಯ ಬ್ರಾಹ್ಮಣ ಪುರುಷರೇ ಹೆಚ್ಚಾಗಿದ್ದಾರೆ. ದಲಿತರು, ಮುಸ್ಲಿಮರು, ಮಹಿಳೆಯರೂ ಇತಿಹಾಸ ಬರೆಯುವಂತಾಗಬೇಕು. ಆದರೆ ಅವರು ಕೂಡ ತಮ್ಮ ಗುರುತಿನ ಅಂಧಾಭಿಮಾನವನ್ನು ಮೀರಬೇಕು. ಬರೀ ಭಾಷೆ, ಜಾತಿ, ಧರ್ಮದ ಅಂಧಾಭಿಮಾನ ಅಷ್ಟೇ ಅಲ್ಲ, ರಾಷ್ಟ್ರೀಯ ಅಂಧಾಭಿಮಾನವನ್ನೂ ಮೀರಬೇಕು. – ರಾಮಚಂದ್ರ ಗುಹಾ.
 • # ಮೂವರು ಐದನ್ನು ಮೀರುವುದೇ ಇಂದಿನ ನಿಜವಾದ ಸವಾಲು !

 

 • ಇತಿಹಾಸ ವಿಷಯದಲ್ಲಿ ಪದವಿ ಗಳಿಸಿದವರು ಮಾತ್ರ ಇತಿಹಾಸಕಾರರಾಗಬಲ್ಲರು. ಇತಿಹಾಸಕಾರರು ಆ ವಿಭಾಗಕ್ಕೆ ಮಾತ್ರ ನಿಷ್ಠರಾಗಿರಬೇಕು ಎನ್ನುವುದು ಎಲ್ಲ ಕಡೆಗಳಲ್ಲಿ ಸಾಮಾನ್ಯವಾಗಿ ಕಾಣುವ ಅಂಧಾಭಿಮಾನ. ನಾನು ಯಾವತ್ತೂ ವಿದ್ಯಾಲಯಗಳಲ್ಲಿ ಇತಿಹಾಸವನ್ನು ಕಲಿತಿಲ್ಲ. ನಾನು ಇತಿಹಾಸಕಾರನಾಗಿದ್ದು ಆಕಸ್ಮಿಕ ಅಷ್ಟೆ. ಭಾರತದ ಹಲವು ಶ್ರೇಷ್ಠ ಇತಿಹಾಸಕಾರರು ಇತಿಹಾಸವನ್ನು ವಿದ್ಯಾಲಯಗಳಲ್ಲಿ ಕಲಿತವರಲ್ಲ. ಇತಿಹಾಸಕಾರನಾಗಲು ಪದವಿ ಬೇಕಾಗಿಲ್ಲ. ಸಂಶೋಧನೆಯ ಕಲೆ, ಬೇರೆ ಯಾರೂ ಕಂಡುಹಿಡಿಯದ ದಾಖಲೆಗಳನ್ನು ಹುಡುಕಿ ಅದನ್ನು ತುಲನಾತ್ಮಕವಾಗಿ ಮಂಡಿಸಬಲ್ಲ ಭಿನ್ನ ದೃಷ್ಟಿಕೋನ ಇರುವುದು ಮುಖ್ಯ. – ರಾಮಚಂದ್ರ ಗುಹಾ.
 • # ಹಲವರಿಗೆ ಹಲವು ಭ್ರಮೆ-ಅಂಧಾಭಿಮಾನಗಳು. ಪದವಿ ಎಂಬ ಭ್ರಮೆ, ಅಂಧಾಭಿಮಾನದಲ್ಲಿ ಇತಿಹಾಸದಲ್ಲಿ ಕಲಬೆರಕೆ !

 

 • ರಾಜಕೀಯ ಪಕ್ಷವೊಂದರ ಬಾಲ ಬಡಿಯುತ್ತಾ ಶಾಸನ ಸಭೆ, ಪ್ರಾಧಿಕಾರ ಹಾಗೂ ಅಕಾಡೆಮಿಗಳಂಥ ಆಯಕಟ್ಟಿನ ಸ್ಥಾನ ಆಕ್ರಮಿಸಿ
  ಕೊಂಡಿರುವ ಚಿಕ್ಕ ಗುಂಪು ನಮ್ಮ ಸರ್ಕಾರದ ಸಾಂಸ್ಕೃತಿಕ ನೀತಿಯನ್ನು ನಿಯಂತ್ರಿಸುತ್ತಿದೆ. – ಡಾ.ಗಿರಡ್ಡಿ ಗೋವಿಂದರಾಜ (ಧಾರವಾಡ ಸಾಹಿತ್ಯ ಸಂಭ್ರಮ ಟ್ರಸ್ಟ್‌ ಅಧ್ಯಕ್ಷರು)
 • # ಅವರದು ಪರಸ್ಪರ ಕೊಡು ಕೊಳ್ಳುವಿಕೆಯ ನೀತಿ-ನಿಯತ್ತು !

 

 • ‘ಸಾಹಿತ್ಯ ಸಂಭ್ರಮ’ದ ಪ್ರಾಮಾಣಿಕ ಪ್ರಯತ್ನವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಬಲಿಸಬೇಕು. ಇಲ್ಲವಾದಲ್ಲಿ ಸಂಭ್ರಮ ನಿಲ್ಲಿಸುವುದು ಅನಿವಾರ್ಯ. – ಡಾ. ಗಿರಡ್ಡಿ ಗೋವಿಂದರಾಜ (ಅಧ್ಯಕ್ಷರು, ಧಾರವಾಡ ಸಾಹಿತ್ಯ ಸಂಭ್ರಮ ಟ್ರಸ್ಟ್‌)
 • # ಬಾಲ ಬಡಿಯುವ ಚಿಕ್ಕ ಗುಂಪಿನ ಜೊತೆ ಸೇರಿಕೊಳ್ಳುವ ಯತ್ನವೇ ?

 

 

Leave a Reply

Your email address will not be published. Required fields are marked *