Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ರಾಮ-ಸೀತೆಯ ಕಾಲಕ್ಕೂ ಹಿಂದೆ ಮನುಷ್ಯರು ಹುಟ್ಟುಡುಗೆಯಲ್ಲೇ ಇರುತ್ತಿದ್ದರಂತೆ ! ಈಗಲೂ ಹಾಗೆಯೇ ಇರೋಣವೇ ?

ಉಪ್ಪಿನಕಾಯಿ-36: ಶ್ರೀರಾಮ ದಿವಾಣ

 

  • ಮಹದಾಯಿ ನೀರಿಗಾಗಿ ಕನ್ನಡ ಸಂಘಟನೆಗಳ ಒಕ್ಕೂಟ ಕರೆ ನೀಡಿರುವ ಕರ್ನಾಟಕ ಬಂದ್‌ಗೆ ಟ್ವಿಟರ್‌ನಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. – ಪ್ರಜಾವಾಣಿ ವರದಿ.

# ಫೇಸ್ ಬುಕ್, ವಾಟ್ಸಾಪ್ ಇತ್ಯಾದಿಗಳಲ್ಲಿಯೂ ಯಾವ ಯಾವ ರೀತಿಯ ಪ್ರತಿಕ್ರಿಯೆಗಳು ಬಂದಿವೆ ಎಂಬ ವರದಿಗಳು ಇನ್ನೂ ಬಂದಿಲ್ಲ !

 

  • ಉಪೇಂದ್ರ ನೇತೃತ್ವದ ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷ (ಕೆಪಿಜೆಪಿ) ಶಿಕ್ಷಣದ ಬಗ್ಗೆ ಸಂಭಾವ್ಯ ಪ್ರಣಾಳಿಕೆ (ಭಾಗ 3)ಯನ್ನು ಗುರುವಾರ ಬಿಡುಗಡೆ ಮಾಡಲಾಗಿದೆ. ಪ್ರಣಾಳಿಕೆ ಓದಿ ಅಭಿಪ್ರಾಯ ಹಾಗೂ ಸಲಹೆ ಹಂಚಿಕೊಳ್ಳುವಂತೆ ಉಪೇಂದ್ರ ಟ್ವೀಟ್‌ ಮಾಡಿದ್ದಾರೆ. – ಪತ್ರಿಕಾ ವರದಿ.

# ಟ್ವೀಟರ್ ನಲ್ಲೇ ಪ್ರಣಾಳಿಕೆ, ಪಕ್ಷ ಸಂಘಟನೆ, ಚುನಾವಣಾ ಪ್ರಚಾರ, ಅಧಿಕಾರಕ್ಕೆ !

 

  • ರಾಮ- ಸೀತೆ ಕೂಡಾ ಗೋಮಾಂಸ ತಿನ್ನುತ್ತಿದ್ದರು ಎಂದು ವಾಲ್ಮೀಕಿ ರಾಮಾಯಣದಲ್ಲಿ ಉಲ್ಲೇಖವಾಗಿದೆ. ಯಜ್ಞ-ಯಾಗಾದಿಗಳ ಸಂದರ್ಭದಲ್ಲೂ ಗೋಮಾಂಸ ಸೇವನೆ ನಡೆಯುತ್ತಿತ್ತು. ಇದನ್ನು ಮರೆತಿರುವ ಆರ್‌ಎಸ್‌ಎಸ್‌ –ಬಿಜೆಪಿ, ಸಾಂಸ್ಕೃತಿಕ ಸರ್ವಾಧಿಕಾರ ನಡೆಸುತ್ತಿರುವುದು ಪ್ರಜಾಪ್ರಭುತ್ವಕ್ಕೆ ಎದುರಾಗಿರುವ ದೊಡ್ಡ ಅಪಾಯ.                                                                             – ನಿಡುಮಾಮಿಡಿ ವೀರಭದ್ರ ಚನ್ನಮಲ್ಲ ಸ್ವಾಮೀಜಿ.

 

# ರಾಮ-ಸೀತೆಯ ಕಾಲಕ್ಕೂ ಹಿಂದೆ ಮನುಷ್ಯರು ಹುಟ್ಟುಡುಗೆಯಲ್ಲೇ ಇರುತ್ತಿದ್ದರಂತೆ ! ಈಗಲೂ ಹಾಗೆಯೇ ಇರೋಣವೇ ?

 

  • ಮಹದಾಯಿ ವಿಚಾರದಲ್ಲಿ ತಮ್ಮ ನಿಲುವು ಸ್ಪಷ್ಟಪಡಿಸುವಂತೆ ಒತ್ತಾಯಿಸಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ರಾಜ್ಯದಲ್ಲಿ ಪ್ರವಾಸ ಮಾಡುವ ಸಮಯದಲ್ಲಿ ಬಂದ್ ನಡೆಸಲಾಗುವುದು. ಆ ಮೂಲಕ ಕಾಂಗ್ರೆಸ್ ನಾಯಕರಿಗೆ ಬಿಸಿ ಮುಟ್ಟಿಸಲಾಗುವುದು. – ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ.

# ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮಂಗಳೂರಿಗೆ ಬರುವಾಗ ಬಂದ್ ನಡಸಿದ ಅನುಭವವಿರುವ ಪಕ್ಷ ನಿಮ್ಮದು. ನಿಮ್ಮ ಪಕ್ಷಕ್ಕೆ ನಿಮ್ಮ ಪಕ್ಷವೇ ಮಾದರಿ, ಮುಂದುವರಿಸಿ !

 

  • ಮುಸ್ಲಿಮರನ್ನು ಕೊಂದವರು, ದಲಿತರನ್ನು ಸುಟ್ಟವರು ಈಗ ನಮ್ಮ ಮನೆ, ಮಕ್ಕಳಿಗೂ ಅಪಾಯಕಾರಿಯಾಗಿದ್ದಾರೆ. – ಅರವಿಂದ ಕೇಜ್ರಿವಾಲ್ (ದೆಹಲಿ ಮುಖ್ಯಮಂತ್ರಿಗಳು)

#   ಅಪಾಯಕಾರಿಗಳನ್ನು ಗುರುತಿಸುವಲ್ಲಿ ಭ್ರಮಾಧೀನ ಮತದಾರರ ಅಸಮರ್ಥರಾದರೆ ಮತ್ತೇನಾದೀತು !

 

  • ಪ್ರಧಾನಿ ನರೇಂದ್ರ ಮೋದಿ ಅವರ 56 ಇಂಚಿನ ಎದೆ ಏನಿದ್ದರು ಮುಸ್ಲಿಮರ ಮುಂದೆ ಮಾತ್ರ.                                           – ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್‌ ಒವೈಸಿ.

# ತಪ್ಪು ಅಭಿಪ್ರಾಯ. ಅದೇನಿದ್ದರೂ ಟಿವಿ ಕ್ಯಾಮರಾಗಳೆದುರು, ಸಮಾವೇಶಗಳ ವೇದಿಕೆಯಲ್ಲಿ ಮಾತ್ರವಂತೆ !

 

Leave a Reply

Your email address will not be published. Required fields are marked *