Realtime blog statisticsweb statistics
udupibits.in
Breaking News
ಉಡುಪಿ: ಹಿರಿಯ ಕಾರ್ಮಿಕ ನಾಯಕ, ಚಿಂತಕ ಅದಮಾರು ಶ್ರೀಪತಿ ಆಚಾರ್ಯರ ಅನುವಾದಿತ ಕೃತಿ ‘ಎಸ್ ಡಿ.ಬರ್ಮನ್ ಸಂಗೀತ ಪ್ರಪಂಚ’ ಲೋಕಾರ್ಪಣೆ.

ಸೂರ್ಯನಿಗೆ ಚಿಮಿಣಿ ದೀಪದ ಅಗತ್ಯವಿಲ್ಲ.

  • ವಿಜಯಪುರದ ಜ್ಞಾನ ಯೋಗಾಶ್ರಮದ ಸಿದ್ಧೇಶ್ವರ ಸ್ವಾಮೀಜಿ ಅವರು ‘ಪದ್ಮಶ್ರೀ’ ಪ್ರಶಸ್ತಿ ಪುರಸ್ಕೃತಗೊಂಡಿದ್ದು, ಅದನ್ನು ಅವರು ಗೌರವವಾಗಿ ಹಿಂತಿರುಗಿಸುವ ನಿರ್ಧರಿಸಿದ್ದಾರೆ. – ಪತ್ರಿಕಾ ವರದಿ.

# ಸೂರ್ಯನಿಗೆ ಚಿಮಿಣಿ ದೀಪದ ಅಗತ್ಯವಿಲ್ಲ.

 

  • ಸಂವಿಧಾನವೇ ನನ್ನ ಧರ್ಮ ಮತ್ತು ಸಂವಿಧಾನದ ಆಶಯಗಳನ್ನು ಸಾಕಾರಗೊಳಿಸುವುದೇ ನನ್ನ ರಾಜಧರ್ಮ ಎಂದು ಮುಖ್ಯಮಂತ್ರಿಯಾದ ನಾನು ತ್ರಿಕರಣಪೂರ್ವಕವಾಗಿ ನಂಬಿಕೊಂಡು ಬಂದಿದ್ದೇನೆ. ಸಂವಿಧಾನ ಎನ್ನುವುದು ಪ್ರಜಾಪ್ರಭುತ್ವದ ಆತ್ಮ. ಸಂವಿಧಾನ ಇಲ್ಲದ ಪ್ರಜಾಪ್ರಭುತ್ವ, ಆತ್ಮ ಇಲ್ಲದ ಜೀವ. ಇತ್ತೀಚೆಗೆ ಸಂವಿಧಾನ ಬದಲಾವಣೆಯ ಕೂಗು ಅಲ್ಲಲ್ಲಿ ಕೇಳಿಬರುತ್ತಿದೆ. ಇದನ್ನು ಪ್ರಜಾಪ್ರಭುತ್ವ ಪ್ರೇಮಿಗಳೆಲ್ಲರೂ ಒಕ್ಕೊರಲಿನಿಂದ ಖಂಡಿಸಬೇಕಾಗಿದೆ. – ಸಿದ್ದರಾಮಯ್ಯ (ಮುಖ್ಯಮಂತ್ರಿಗಳು)

#  ‘ನುಡಿ’ದರೆ ಸಾಲದು, ‘ನಡೆ’ದು ತೋರಿಸಿದರೆ ಮಾತ್ರ ‘ಮಾತು ಮುತ್ತು’.  

 

  • ಅಮಿತ್ ಶಾ ಹುಲಿ, ಮೋದಿ ಸಿಂಹ ಎಂಬ ಈಶ್ವರಪ್ಪ ಹೇಳಿಕೆಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ತಿರುಗೇಟು ನೀಡಿದ್ದಾರೆ. ಕರ್ನಾಟಕದಲ್ಲಿ ಹುಲಿ ಸಂರಕ್ಷಣೆ ಯೋಜನೆ ಜಾರಿಯಲ್ಲಿದೆ. ಬನ್ನೇರುಘಟ್ಟ, ನಾಗರಹೊಳೆ, ದಾಂಡೇಲಿಯಲ್ಲಿ ಸಾಕಷ್ಟು ‌ಕಾಡಿದೆ ಎಲ್ಲಿಬೇಕಾದರೂ ಓಡಾಡಲಿ. – ದಿನೇಶ್ ಗುಂಡೂರಾವ್ (ಕಾಂಗ್ರೆಸ್ ನಾಯಕರು)

# ಹುಲಿ ಮತ್ತು ಸಿಂಹಕ್ಕೆ ಬೋನು ತಯಾರು ಮಾಡಿಡುವ ಅಗತ್ಯವಿದೆ !

 

  • ಗಣರಾಜ್ಯೋತ್ಸವ ಸಮಾರಂಭಕ್ಕೆ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರನ್ನು ಸರ್ಕಾರ ಆಹ್ವಾನಿಸಿದೆ. ಆದರೆ, ಅವರಿಗೆ ನಾಲ್ಕನೇ ಸಾಲಿನಲ್ಲಿ ಆಸನ ನಿಗದಿಪಡಿಸಲಾಗಿದೆ. ಈ ಹಿಂದೆ ಗಣರಾಜ್ಯೋತ್ಸವ ಸಮಾರಂಭದಲ್ಲಿ ಮೊದಲ ಸಾಲಿನಲ್ಲಿ ರಾಹುಲ್‌ ಅವರಿಗೆ ಆಸನ ಮೀಸಲಿಡಲಾಗುತ್ತಿತ್ತು. ಆದರೆ, ಈಗ ಇಂತಹ ವಿಷಯದಲ್ಲೂ ಮೋದಿ ನೇತೃತ್ವದ ಸರ್ಕಾರ ಕೀಳುಮಟ್ಟದ ರಾಜಕೀಯ ಮಾಡುತ್ತಿದೆ. – ಕಾಂಗ್ರೆಸ್‌ ನಾಯಕರ ಆಕ್ಷೇಪ.

# ಅಧಿಕಾರದ ಅಮಲಿನಲ್ಲಿ ತೇಲಾಡುತ್ತಿರುವವರಿಗೆ ಇಂಥ ಕೀಳು ಮಟ್ಟದ ರಾಜಕೀಯದಲ್ಲೇ ಸಂತೋಷ, ಸಂತೃಪ್ತಿ !

 

  • ಕಾರಣ ಎಷ್ಟು ದೊಡ್ಡದೇ ಇರಲಿ, ಮಕ್ಕಳ ಮೇಲಿನ ಹಿಂಸೆಗೆ ಸಮರ್ಥನೆಯೇ ಇಲ್ಲ. ಹಿಂಸಾಚಾರ ಮತ್ತು ಹಗೆತನ ದುರ್ಬಲರ ಆಯುಧಗಳು. ಬಿಜೆಪಿಯು ಇವುಗಳನ್ನು ಬಳಸಿ ದೇಶವೇ ಉರಿಯುವಂತೆ ಮಾಡುತ್ತಿದೆ. – ರಾಹುಲ್ ಗಾಂಧಿ (ಏಐಸಿಸಿ ಅಧ್ಯಕ್ಷರು)

# ಭಕ್ತರಿಗೆ ಹೀಗೆ ದೇಶ ಉರಿದರೆ ಮಾತ್ರ ದೇಶಪ್ರೇಮ-ಅಚ್ಛೇ ದಿನ್ !  

 

  • ಸಮಾನತೆ, ಜಾತ್ಯತೀತತೆಯೇ ಭಾರತದ ಆಧಾರ ಸ್ತಂಭಗಳು. – ರಾಮನಾಥ್ ಕೋವಿಂದ್ (ರಾಷ್ಟ್ರಪತಿಗಳು)
  • ನರೇಂದ್ರ ಮೋದಿ ಸರಕಾರದ ಮಂತ್ರಿ ಅನಂತಕುಮಾರ್ ಹೆಗಡೆ ಕೇಳಿಸಿಕೊಂಡಿದ್ರೆ, ಓದಿದ್ರೆ ಕಷ್ಟ !

Leave a Reply

Your email address will not be published. Required fields are marked *