Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ನುಡಿದಂತೆ ನಡೆಯಲು ಮೋದಿ ಕರ್ಣನೂ ಅಲ್ಲ, ಸತ್ಯ ಹರಿಶ್ಚಂದ್ರನೂ ಅಲ್ವಲ್ಲ ?

ಉಪ್ಪಿನಕಾಯಿ-37: ಶ್ರೀರಾಮ ದಿವಾಣ

 

  • ಮಹಿಳೆಯರು ಎಲ್ಲ ಕ್ಷೇತ್ರದಲ್ಲಿಯೂ ಪ್ರಗತಿ ಸಾಧಿಸುತ್ತಿದ್ದಾರೆ. ಮಹಿಳೆಯರನ್ನು ಗೌರವಿಸುವುದು ನಮ್ಮ ಸಂಸ್ಕೃತಿ ಎಂದು ಪ್ರಧಾನಿ ನರೇಂದ್ರ ಮೋದಿ ಮನದ ಮಾತು ಕಾರ್ಯಕ್ರಮದಲ್ಲಿ ಹೇಳಿದ್ದಾರೆ. – ನರೇಂದ್ರ ಮೋದಿ (ಪ್ರಧಾನಮಂತ್ರಿಗಳು)

# ನೀವು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ನಿಮಗದು ಗೊತ್ತಿರಲಿಲ್ಲವೆಂದು ಕಾಣುತ್ತದೆ. ಈಗಲಾದರೂ ಗೊತ್ತಾಗಿದ್ದು ನೆಮ್ಮದಿಯ ವಿಷಯ. ಇನ್ನಾದರೂ ನಮ್ಮ ಸಂಸ್ಕೃತಿಯ ಬಗ್ಗೆ ನಿಮ್ಮ ಭಕ್ತರಿಗೆ ತಿಳಿಹೇಳುವ ಕೆಲಸ ಮಾಡುವ ಅಗತ್ಯವಿದೆ. ಹೆಣ್ಮಕ್ಕಳ ಮೇಲೆ ಹಲ್ಲೆ ನಡೆಸುವುದು, ಅವರ ಫೋಟೋವನ್ನು ವಾಟ್ಸಾಪ್, ಫೇಸ್ ಬುಕ್ ಇತ್ಯಾದಿಗಳಲ್ಲಿ ಹಾಕಿ ಅಪಮಾನಿಸುವ ಕೆಲಸ ನಿಮ್ಮ ಭಕ್ತಿರಿಂದ ಆಗುತ್ತಿದೆ.

 

  • ತಳಸಮುದಾಯಗಳಿಗೆ ತಮ್ಮದೇ ಗುರುಪೀಠಗಳನ್ನು ಕಲ್ಪಿಸಿದ ಪರಿಣಾಮ ಸಮಾಜದಲ್ಲಿ ಸಮಾನತೆ ಮೂಡುತ್ತಿದೆ. ತಾರತಮ್ಯ ಮತ್ತು ಅಸ್ಪೃಶ್ಯತೆಗಳು ಸಡಿಲಿಕೆ ಆಗುತ್ತಿವೆ. – ನಿಜಶರಣ ಅಂಬಿಗರ ಚೌಡಯ್ಯನವರ ಗುರು ಪೀಠಾಧ್ಯಕ್ಷ ಶಾಂತಭೀಷ್ಮ ಚೌಡಯ್ಯ ಸ್ವಾಮೀಜಿ.

# ಯಾವ ಸಮಾಜದಲ್ಲಿ ಸ್ವಾಮೀಜಿಗಳೇ ? ಬ್ರಾಹ್ಮಣ ಸ್ವಾಮೀಜಗಳ ಜೊತೆ ಬ್ರಾಹ್ಮಣೇತರ ಸ್ವಾಮೀಜಿಗಳಿಗೂ ಸಮಾನತೆ ಸಿಗುತ್ತಾ ? ಬ್ರಾಹ್ಮಣರು ಬ್ರಾಹ್ಮಣ ಸ್ವಾಮೀಜಿಗಳನ್ನು ಗೌರವಿಸುವಂತೆ ನಿಮ್ಮನ್ನು ಗೌರವಿಸುತ್ತಾರಾ ?

 

  • ದೀಪಕ್ ರಾವ್ ಕೊಲೆಗೆ ಪ್ರತೀಕಾರವಾಗಿ ಬಶೀರ್ ಅವರ ಕೊಲೆ ನಡೆದಿದೆ. ಇದರಿಂದ ನಮಗೆ ಚಿಂತೆ ಏನೂ ಇಲ್ಲ. – ವಿಎಚ್‌ಪಿ ಜಿಲ್ಲಾ ಘಟಕದ ಅಧ್ಯಕ್ಷ ಜಗದೀಶ್ ಶೇಣವ.

# ನಿಮಗ್ಯಾಕೆ ಚಿಂತೆ ? ನೀವು ಆರೋಪಿಯೂ ಅಲ್ಲ, ಸಂತ್ರಸ್ತರೂ ಅಲ್ಲ, ಇಲ್ಲಿ ಹೀಗೆ ಬೀಳುವ ಹೆಣಗಳ ಮೇಲೆಯೇ ಅಲ್ಲವೇ ಕೆಲವು ಮಂದಿ ಫಲಾನುಭವಿಗಳು ಅಧಿಕ್ಕಾರಕ್ಕೇರುವುದು ?

 

  • ಕೋಮು ಗಲಭೆಗಳಲ್ಲಿ ಎಲ್ಲ ಮುಗ್ಧರ ವಿರುದ್ಧ ದಾಖಲಾಗಿರುವ ಪ್ರಕರಣಗಳನ್ನು ಹಿಂದಕ್ಕೆ ಪಡೆಯುವ ಸಂಬಂಧ ಗೃಹ ಇಲಾಖೆ ಶನಿವಾರ ಹೊಸ ಸುತ್ತೋಲೆ ಹೊರಡಿಸಿದ್ದು, ಅದರಲ್ಲಿ ‘ಅಲ್ಪಸಂಖ್ಯಾತರು’ ಎಂಬ ಪದ ತೆಗೆದು ಹಾಕಿದೆ. ಸುತ್ತೋಲೆ ಹೊರಡಿಸುವಾಗ ‘ಮುಗ್ಧ ಅಲ್ಪಸಂಖ್ಯಾತರ ವಿರುದ್ಧದ ಪ್ರಕರಣ’ ಎಂಬ ವಾಕ್ಯ ಕಣ್ತಪ್ಪಿನಿಂದ ನಮೂದಾಗಿತ್ತು ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಅವರು ಶನಿವಾರ ತಿಳಿಸಿದರು. – ಪತ್ರಿಕಾ ವರದಿ.

# ದಾರಿ ತಪ್ಪಿದ್ದು, ಎಡವಿದ್ದು ಹೌದು ಎನ್ನಿ !

 

  • ಈ ಹಿಂದೆ ಭಾರತದಲ್ಲಿ ರಾಜನೂ ಇರಲಿಲ್ಲ; ರಾಜ್ಯವೂ ಇರಲಿಲ್ಲ. ದಂಡಕರೂ ಇರಲಿಲ್ಲ; ಶಿಕ್ಷೆಗೆ ಒಳಗಾಗುವವರೂ ಇರಲಿಲ್ಲ. ಪರಸ್ಪರ ಅರಿತು ಜನರೇ ಸಮಾಜವನ್ನು ಮುನ್ನಡೆಸುತ್ತಿದ್ದರು. ಆದರೆ, ಇತ್ತೀಚಿನವರು, ಇತಿಹಾಸ ಬರೆದವರು ರಾಜ–ಮಹಾರಾಜರದ್ದೇ ದೇಶದ ಇತಿಹಾಸ ಎಂದು ಬಿಂಬಿಸುತ್ತಿದ್ದಾರೆ. – ಅನಂತ ಕುಮಾರ್ ಹೆಗಡೆ (ಕೇಂದ್ರ ಮಂತ್ರಿಗಳು)

# ರಾಮರಾಜ್ಯದ ಬಗ್ಗೆ ಹೇಳ್ತಿದ್ದೀರಾ !?

 

  • ಇಂದಿನ ರಾಜಕೀಯ ವ್ಯವಸ್ಥೆ ವಿಕಾರವಾಗಿದೆ. ಅದನ್ನು ಸರಿದಾರಿಗೆ ತರುವ ಶಕ್ತಿ ಕೇಸರಿ ಕಾವಿ ಬಟ್ಟೆಯ ಸಂತರಿಗೆ ಮಾತ್ರ ಇದೆ. – ಅನಂತಕುಮಾರ್ ಹೆಗಡೆ.

# ಸರಿಯಾದ ಆತ್ಮಾವಲೋಕನದ ಮಾತು, ಕೇಸರಿ ಕಾವಿ ಬಟ್ಟೆಯ ಸಂತರು ಚಿನ್ನದ ಗೋಪುರ ನಿರ್ಮಿಸುವ ಯೋಜನೆಯಲ್ಲಿ ಬಿಜಿಯಾಗಿದ್ದಾರೆ.

 

  • ತ್ರಿವಳಿ ತಲಾಖ್‌ ನಿಷೇಧ ಕಾನೂನು ಜಾರಿಗೆ ಬಂದರೆ ತ್ರಿವಳಿ ತಲಾಖ್‌ ನಿಲ್ಲುವುದೇ ಎಂದು ಎಐಎಂಐಎಂ ಅಧ್ಯಕ್ಷ ಮತ್ತು ಸಂಸದ ಅಸಾದುದ್ದಿನ್‌ ಓವೈಸಿ ಪ್ರಶ್ನಿಸಿದ್ದಾರೆ. – ಪತ್ರಿಕಾ ವರದಿ.

# ಇಲ್ಲ, ಖಂಡಿತಾ ನಿಲ್ಲದು. ದೇಶದ ಸಂವಿಧಾನವೇ ಧರ್ಮವಾದಾಗ, ಕಾನೂನಿಗೆ ಗೌರವ ಕೊಡಲು ಕಲಿತಾಗ ಮಾತ್ರ ನಿಲ್ಲಬೇಕಾದ್ದು ನಿಲ್ಲಬಹುದು !

 

  • ಆನ್‌ಲೈನ್‌ ಪರೀಕ್ಷೆ ನಿಲ್ಲಿಸುವವರೆಗೂ ಬಿಜೆಪಿಗೆ ಯಾವುದೇ ರೀತಿ ಬೆಂಬಲ ನೀಡುವುದಿಲ್ಲ ಹಾಗೂ ಆ ಪಕ್ಷಕ್ಕೆ ಮತ ನೀಡುವುದಿಲ್ಲ ಎಂದು ಮಧ್ಯಪ್ರದೇಶದ ಇಟರ್ಸಿಯ ತರಬೇತಿ ಸಂಸ್ಥೆಯ ವಿದ್ಯಾರ್ಥಿಗಳು ಪ್ರತಿಜ್ಞೆ ತೆಗೆದುಕೊಂಡಿದ್ದಾರೆ. – ಪತ್ರಿಕಾ ವರದಿ.

# ಪರಿಣಾಮಕಾರಿ ಮತದಾನ ಜಾಗೃತಿ ಕಾರ್ಯಕ್ರಮ, ಮಾದರಿ ಪ್ರತಿಭಟನೆ.

 

  • ಕೇಂದ್ರ ಸರ್ಕಾರದ ಪರಿಸರ ನೀತಿಗಳು ಕೈಗಾರಿಕೋದ್ಯಮಿಗಳ ಪರವಾಗಿವೆ. ಪರಿಸರ ಕಾನೂನುಗಳನ್ನು ದುರ್ಬಲಗೊಳಿಸಲಾಗುತ್ತಿದೆ. ಪರಿಸರ ಸಂರಕ್ಷಣೆ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ಭಾಷಣ ಮಾಡುತ್ತಾರೆಯೇ ಹೊರತು ಆಚರಣೆಯಲ್ಲಿ ಪಾಲಿಸುವುದಿಲ್ಲ. – ಜೈರಾಂ ರಮೇಶ್ (ಮಾಜಿ ಕೇಂದ್ರ ಮಂತ್ರಿ)

# ಕೇಂದ್ರ ಸರಕಾರದ ಎಲ್ಲಾ ನೀತಿಗಳೂ ಕೈಗಾರಿಕೋದ್ಯಮಿಗಳ ಪರವೇ ಆಗಿದೆಯಂತಲ್ಲ ? ಭಕ್ತರಿಗೂ ಬೇಕಾಗಿರೋದು ಭಾಷಣ ಮಾತ್ರವಂತೆ !

 

  • ಪ್ರಧಾನಿ ನರೇಂದ್ರ ಮೋದಿ ಅವರು ನುಡಿದಂತೆ ನಡೆಯುತ್ತಿಲ್ಲ. – ಜೈರಾಂ ರಮೇಶ್‌ (ಕಾಂಗ್ರೆಸ್ ನಾಯಕ)

# ನುಡಿದಂತೆ ನಡೆಯಲು ಮೋದಿ ಕರ್ಣನೂ ಅಲ್ಲ, ಸತ್ಯ ಹರಿಶ್ಚಂದ್ರನೂ ಅಲ್ವಲ್ಲ ?

 

Leave a Reply

Your email address will not be published. Required fields are marked *