Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಮಠದಲ್ಲಿ ಚಿನ್ನದಂಗಡಿ ! ದೇವರ ಹೆಸರಲ್ಲಿ ನೂತನ ಶೈಲಿಯ ಲಾಭದಾಯಕ ಹೊಸ ಉದ್ಯಮ !!

ಉಪ್ಪಿನಕಾಯಿ-39: ಶ್ರೀರಾಮ ದಿವಾಣ

 

  • ಗರ್ಭಗುಡಿಯ ಮೇಲ್ಛಾವಣಿಗೆ ಚಿನ್ನದ ಹೊದಿಕೆ ಅರ್ಪಿಸುವ ತಮ್ಮ ಯೋಜನೆಯ ನೀಲನಕ್ಷೆ ಸಿದ್ಧವಾಗಿದೆ. ತಲಾ ಒಂದು ಗ್ರಾಂನಂತೆ ಒಂದು ಲಕ್ಷ ಮಂದಿ ಒಂದೊಂದು ಚಿನ್ನದ ತುಳಸಿದಳ ಕೊಟ್ಟರೆ ನೂರು ಕೆ.ಜಿ.ಚಿನ್ನ ಸಂಗ್ರಹವಾಗಲಿದೆ. ಚಿನ್ನದ ತುಳಸಿ ದಳಗಳು ಶ್ರೀಕೃಷ್ಣ ಮಠದಲ್ಲಿಯೇ ಲಭ್ಯವಿವೆ. – ವಿದ್ಯಾಧೀಶ ತೀರ್ಥ ಸ್ವಾಮೀಜಿ (ಪರ್ಯಾಯ ಪಲಿಮಾರು ಮಠ, ಉಡುಪಿ)

#  ಮಠದಲ್ಲಿ ಚಿನ್ನದಂಗಡಿ ! ದೇವರ ಹೆಸರಲ್ಲಿ ನೂತನ ಶೈಲಿಯ ಲಾಭದಾಯಕ ಹೊಸ ಉದ್ಯಮ !!

 

  • ದೇವಸ್ಥಾನಗಳಲ್ಲಿ ದೇವರಪೂಜೆಯ ಸಂದರ್ಭದಲ್ಲಿ ಬಾರಿಸುವ ನಗಾರಿ, ಜಾಗಟೆ, ಘಂಟೆ ಇತ್ಯಾದಿಗಳು ಸಂಪೂರ್ಣವಾಗಿ ಯಂತ್ರಮಯವಾಗುತ್ತಿರುವುದು ಬೇಸರದ ಸಂಗತಿ. – ಈಶ ವಿಠಲದಾಸ ಸ್ವಾಮೀಜಿ (ಕೇಮಾರು ಸಾಂದೀಪನಿ ಸಾಧನಾಶ್ರಮ)

# ವ್ಯಾಪಾರೀ ಕೇಂದ್ರಗಳಲ್ಲಿ ಆಕರ್ಷಣೆ ಮುಖ್ಯ !

 

  • ದೇವಸ್ಥಾನಗಳಲ್ಲಿ ನಡೆಯುವ ರಥೋತ್ಸವದಿಂದ ಜನರಲ್ಲಿನ ವೈಮನಸ್ಸು, ಭೇದ-ಭಾವ ದೂರ, ಸಮಾಜದಲ್ಲಿ ಒಗ್ಗಟ್ಟು. – ಲಲಿತಕೀರ್ತಿ ಭಟ್ಟಾರಕ ಸ್ವಾಮೀಜಿ (ಕಾರ್ಕಳ ಜೈನ ಮಠ)

# ಭಯಂಕರ ಸಂಶೋಧನೆ, ಅತ್ಯದ್ಭುತ ಸಂಶೋಧನೆಗೆ ಗೌರವ ಡಾಕ್ಟರೇಟ್ ಗ್ಯಾರಂಟಿ, ಎಲ್ಲಕ್ಕೂ ಮೊದಲು ವೈಮನಸ್ಸು ಇಲ್ಲದ ಒಂದಾದರೂ ದೇವಸ್ಥಾನ ತೋರಿಸುವಂತಾಗಲಿ !

 

  • ಹಾಲಾಡಿ ಶ್ರೀನಿವಾಸ ಶೆಟ್ಟಿ ಬಿಜೆಪಿಗೆ ಸೇರ್ಪಡೆಯಾದ ಬಗ್ಗೆ ಜಾಲತಾಣಗಳಲ್ಲಿ ಪರ-ವಿರೋಧಗಳ ಬಗ್ಗೆ ಭಾರೀ ಚರ್ಚೆ. – ಪತ್ರಿಕಾ ವರದಿ.

# ಅಂಗಡಿಗಳ ಮುಂದೆ, ಹೋಟೇಲುಗಳ ಎದುರು, ರಸ್ತೆ ಬದಿ ಕಟ್ಟೆಗಳಲ್ಲೂ ಭಾರೀ ಚರ್ಚೆ ನಡೆದಿದ್ದನ್ನೂ ಸುದ್ದಿ ಮಾಡಿ !

 

  • ಹಾಂಕಾಂಗ್ ನಲ್ಲಿ 70 ವರ್ಷ ಹಿಂದೆ ಅಮೇರಿಕಾ ಹಾಕಿದ್ದ 453 ಕೆ.ಜಿ.ತೂಕದ ಬಾಂಬ್ ಶೇಲ್ ಪತ್ತೆ. – ಪತ್ರಿಕಾ ವರದಿ.

# ಬಾಂಬ್ ಹಾಕುವವರು ಭಯೋತ್ಪಾದಕರು.

 

Leave a Reply

Your email address will not be published. Required fields are marked *