Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

—– ಪಟ್ಟಿಯಲ್ಲಿ ಪ್ರವೀಣ್ ಭಾಯಿ ತೊಗಾಡಿಯಾರ ನಂತರ ಯಾರ ಹೆಸರು ಎಂಬ ಕುತೂಹಲ ಇನ್ನಿಲ್ಲ !

ಉಪ್ಪಿನಕಾಯಿ-40: ಶ್ರೀರಾಮ ದಿವಾಣ

 

 • ಬಿಜೆಪಿ ಪರಿವರ್ತನಾ ಯಾತ್ರೆಯ ಸಮಾರೋಪ ಸಮಾರಂಭಕ್ಕೆ ಅದ್ದೂರಿ ತೆರೆ, ಕಾಂಗ್ರೆಸ್ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ: ರಾಜ್ಯದಲ್ಲಿ ಹಸ್ತದ ನಡುಕ ಆರಂಭ. – ಹೊಸದಿಗಂತ.

# ನಡುಕ ಅನುಭವಿಸುತ್ತಿರುವ ಪಕ್ಷದ ವಕ್ತಾರರಿಂದ ಸ್ವ ಕುಚ ಮರ್ದನ !

 

 • ಕಾಂಗ್ರೆಸ್ ಸರಕಾರ ಭ್ರಷ್ಟಾಚಾರ ಮಾಡುವುದನ್ನೇ ಉದ್ಯೋಗ ಮಾಡಿಕೊಂಡಿದೆ. – ಜಗದೀಶ ಶೆಟ್ಟರ್ (ಬಿಜೆಪಿ ನಾಯಕ)

# ಕಾರ್ಪೋರೇಟರುಗಳ ಲಾಭಕ್ಕಾಗಿ ಪ್ರವಾಸ ಮತ್ತು ಪಕ್ಷದ ಗೆಲುವಿಗಾಗಿ ಪ್ರಚಾರ ಇವೆರಡನ್ನೇ ಆಡಳಿತವೆಂದು ತಿಳಿದುಕೊಂಡವರ  ಸಹಜ ಪ್ರಲಾಪ.

 

 • ಕೇಂದ್ರ ಮಂಡಿಸಿದ ಬಜೆಟ್ ನಲ್ಲಿ ವಿವಿಧ ರಾಜ್ಯಗಳಿಗೆ ನೀಡಿದ ಶೇ.42 ಹಣದಲ್ಲಿ ಕರ್ನಾಟಕದ ತೆರಿಗೆಯ ಪಾಲಿದೆ. – ಸಿದ್ಧರಾಮಯ್ಯ (ಮುಖ್ಯಮಂತ್ರಿಗಳು).

# ಕಾಂಗ್ರೆಸ್ ಸರಕಾರಗಳಿರುವ ರಾಜ್ಯದಿಂದ ಸಂಗ್ರಹಿಸಿದ ತೆರಿಗೆಯ ಹೆಚ್ಚಿನ ಪಾಲು, ಬಿಜೆಪಿ ಸರಕಾರಗಳಿರುವ ರಾಜ್ಯಗಳಿಗೆ ವಿತರಣೆ ! ಅಸಮಾನ ಹಂಚಿಕೆ-ಅಸಮಾನತೆಯ ಪೋಷಕ ಸರಕಾರ !!

 

 • ಆಡಂಬರ ಅನುಸರಿಸುವುದೇ ಧರ್ಮವಲ್ಲ. – ವಜುಭಾಯಿ ರೂಢಬಾಯಿ ವಾಲಾ (ಕರ್ನಾಟಕ ರಾಜ್ಯಪಾಲರು)

#   ಉಡುಪಿ ಕೃಷ್ಣ ದೇವಸ್ಥಾನದ ಪರ್ಯಾಯ ಪಲಿಮಾರು ಮಠದ ವಿದ್ಯಾಧೀಶ ತೀರ್ಥ ಸ್ವಾಮೀಜಿಗೆ ಹೇಳಿದ್ದಲ್ಲ !

 

 • ಕರ್ಮಯೋಗವೇ ನಮ್ಮ ಧರ್ಮವಾಗಬೇಕು. – ವಜುಭಾಯಿ ರೂಢಬಾಯಿ ವಾಲಾ.

# ಧರ್ಮ ರಕ್ಷಣೆಯ ಹೆಸರಲ್ಲಿ ನಡೆಸುವ ಹಲ್ಲೆ, ಕೊಲೆ, ದರೋಡೆ ಇತ್ಯಾದಿಗಳೆಲ್ಲವೂ ಕರ್ಮಯೋಗವೇ ಅಂತಿದ್ದಾರೆ ಸಂಘ ದಕ್ಷರು !

 

 • ಓರ್ವ ರಕ್ತದಾನಿಯಿಂದ ಪಡೆಯುವ ಒಂದು ಯುನಿಟ್ ರಕ್ತವನ್ನು ಕನಿಷ್ಟ ಮೂರು ಮಂದಿಗೆ ನೀಡಬಹುದಾಗಿದೆ. – ಡಾ.ವೀಣಾ ಕುಮಾರಿ (ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆ ರಕ್ತನಿಧಿ ಬಿಭಾಗದ ಮುಖ್ಯಸ್ಥೆ).

# ಸಾಮಾಜಿಕ ಕಾಳಜಿಯ ರಕ್ತದಾನಿಗಳಿಂದ ರಕ್ತ ಪಡೆಯುತ್ತಿರುವ ಖಾಸಗಿ ಆಸ್ಪತ್ರೆಗಳ ಕಳಚಿದ ಮುಖವಾಡ !

 

 • 2014ರಲ್ಲಿ ಮಾರಾಟವಾದ ಪ್ರಾಮಿಸ್‌ ಟೂತ್‌ ಪೇಸ್ಟ್‌ ರೈತರು ಮತ್ತು ನಿರುದ್ಯೋಗಿಗಳ ಮುಖದಲ್ಲಿ ಮಂದಹಾಸ ತರುವಲ್ಲಿ ವಿಫಲವಾಗಿದ್ದು, ಅದನ್ನು ಮತ್ತೆ ಕರ್ನಾಟಕದಲ್ಲಿ ಮಾರಾಟ ಮಾಡಿದ್ದಾರೆ. – ಪ್ರಕಾಶ್ ರಾಜ್ (ಖ್ಯಾತ ಬಹುಭಾಷಾ ಚಿತ್ರ ನಟ)

# ಹಳಸಿದ ಪ್ರಾಮಿಸ್ ಟೂತ್ ಪೇಸ್ಟ್ ನ್ನು ಮೊತ್ತ ಮೊದಲ ಬಾರಿಗೆ ರಾಜಸ್ಥಾನ ತಿರಸ್ಕರಿಸಿದೆ, ಕರ್ನಾಟಕದ ಸ್ವಾಭಿಮಾನಿಗಳು ತ್ಯಾಜ್ಯಕ್ಕೆ ಎಸೆಯಲಿದ್ದಾರೆ.

 

 • ಫ್ರಾನ್ಸ್ ಜೊತೆ ಮಾಡಿಕೊಂಡಿರುವ ರಫೇಲ್ ಯುದ್ಧವಿಮಾನ ಖರೀದಿ ಒಪ್ಪಂದದಲ್ಲಿ ಹಗರಣ ನಡೆದಿದೆ. ರಫೇಲ್ ಯುದ್ಧ ವಿಮಾನ ಖರೀದಿಗೆ ಪಾವತಿಸಿದ ಮೊತ್ತವನ್ನು ಬಹಿರಂಗಪಡಿಸಲಾಗದು ಎಂದು ರಕ್ಷಣಾ ಸಚಿವರು ಹೇಳುತ್ತಿದ್ದಾರೆ. ಇದರ ಅರ್ಥವೇನು ? ಒಪ್ಪಂದದಲ್ಲಿ ಹಗರಣ ನಡೆದಿದೆ ಎಂದೇ ಅರ್ಥ. ಮೋದಿ ಅವರು ವೈಯಕ್ತಿಕ ಹಿತಾಸಕ್ತಿಯಿಂದ ಫ್ರಾನ್ಸ್‌ಗೆ ತೆರಳಿ ಒಪ್ಪಂದವನ್ನು ಬದಲಾಯಿಸಿದ್ದಾರೆ. – ರಾಹುಲ್ ಗಾಂಧಿ (ಏಐಸಿಸಿ ಅಧ್ಯಕ್ಷರು).

#  ಮೋದಿ ಮೌನಂ ಸಮ್ಮತಿ ಲಕ್ಷಣಂ !

 

 • ತಮಿಳುನಾಡು ರಾಜ್ಯದ ಮಯಿಲಾದುತುರೈನಲ್ಲಿರುವ ದೇವಸ್ಥಾನದಲ್ಲಿನ ಮೂರ್ತಿಗೆ (ದೇವತೆ) ಚೂಡಿದಾರ ತೋಡಿಸಿದ ಇಬ್ಬರು ಅರ್ಚಕರನ್ನು ದೇವಸ್ಥಾನದ ಆಡಳಿತ ಮಂಡಳಿ ಅಮಾನತು ಮಾಡಿದೆ. – ಪತ್ರಿಕಾ ವರದಿ.

# ಪುರುಷ ದೇವರಿಗೆ ಸೀರೆ ತೊಡಿಸಿದ ಅರ್ಚಕರನ್ನು ಏನು ಮಾಡಬೇಕು ?

 

 • ಮುಖ್ಯಮಂತ್ರಿ ಸಿದ್ಧರಾಮಯ್ಯ ಸರಕಾರ ಅಧಿಕಾರಕ್ಕೆ ಬರಲು ಬಿಜೆಪಿಯ ದರ್ಪ ಮತ್ತು ದುರಾಡಳಿವೇ ಕಾರಣ. – ಪ್ರಮೋದ್ ಮುತಾಲಿಕ್ (ಶ್ರೀರಾಮ ಸೇನೆ ಸಂಸ್ಥಾಪಕರು).

# ಸದನದಲ್ಲಿ ಬ್ಲೂಫಿಲಂ ವೀಕ್ಷಿಸಿದ್ದು, ಸದನದ ಹೊರಗಡೆ ರಾಸಲೀಲೆಯಾಡಿದ್ದು ಇತ್ಯಾದಿಗಳೂ ಕಾರಣವೆನ್ನಿ !

 

 • ಕಳೆದ 50 ವರ್ಷಗಳಲ್ಲಿ ಕಾಂಗ್ರೆಸ್ ಲೂಟಿ ಮಾಡಿದ್ದಕ್ಕಿಂತ ಹೆಚ್ಚು 5 ವರ್ಷದಲ್ಲಿ ಬಿಜೆಪಿಯವರು ಲೂಟಿ ಮಾಡಿದ್ದಾರೆ. – ಪ್ರಮೋದ್ ಮುತಾಲಿಕ್.

# —– ಪಟ್ಟಿಯಲ್ಲಿ ಪ್ರವೀಣ್ ಭಾಯಿ ತೊಗಾಡಿಯಾರ ನಂತರ ಯಾರ ಹೆಸರು ಎಂಬ ಕುತೂಹಲ ಇನ್ನಿಲ್ಲ !

 

 • ಕರ್ನಾಟಕದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು, ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯ ಅಪರಾಧ ಕೃತ್ಯಗಳಿಗೆ ಕುಖ್ಯಾತಿ ಪಡೆದುಕೊಳ್ಳುತ್ತಿದೆ ಎಂದು ಆರೋಪಿಸಿ ವಿಧಾನ ಮಂಡಲದ ುಭಯ ಸದನಗಳಲ್ಲಿ ಬಿಜೆಪಿಯಿಂದ ಗದ್ದಲ ಸೃಷ್ಠಿಸಿ ಅರ್ಧ ದಿನದ ಕಲಾಪ ಆಹುತಿ. – ಪತ್ರಿಕಾ ವರದಿ.

# ಪ್ರಧಾನಿ ನರೇಂದ್ರ ಮೋದಿ ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಬಿಜೆಪಿ ನಾಯಕರುಗಳ ಮೂಗಿನ ನೇರಕ್ಕೆ 2000ಕ್ಕೂ ಅಧಿಕ ಮಂದಿ ಮನುಷ್ಯರು ಕೋಮು ದಳ್ಳುರಿಗೆ ಬಲಿಯಾದ ಹಿಂಸಾಚಾರ ಕರ್ನಾಟಕದ ಬಿಜೆಪಿ ನಾಯಕರಿಗೆ ಮರೆತುಹೋಗಿರಬೇಕು, ಪಾಪ !

 

 • ಕೋಮುವಾದದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಸಂಘ ಪರಿವಾರದಿಂದ 13 ಜನರ ಕೊಲೆಯಾಗಿದೆ. ಈ ಎಲ್ಲಾ ಹತ್ಯೆಗಳ ಹಿಂದೆ ಸಂಘ ಪರಿವಾರ ಹಾಗೂ ಇದರ ಅಂಗ ಸಂಸ್ಥೆಗಳ ಕಾರ್ಯಕರ್ತರೇ ಆರೋಪಿಗಳಾಗಿದ್ದಾರೆ. – ರಾಮಲಿಂಗಾ ರೆಡ್ಡಿ (ಗೃಹ ಸಚಿವರು)

# ಬೇಕಿತ್ತೆ ಬಿಜೆಪಿಗೆ, ಕೋಲು ಕೊಟ್ಟು ಪೆಟ್ಟು ತಿನ್ನುವ ಕೆಲಸ ?

 

 • ಕೇಂದ್ರ ಸರಕಾರದ ಮಂತ್ರಿಗಳ ಸ್ಥಾನ ಮಾನ ಕುಸಿಯುತ್ತಿದೆ. ಬಹಳಷ್ಟು ಜನರಿಗೆ ಸರಕಾರದ ಶೇಕಡಾ 80 ರಷ್ಟು ಮಂತ್ರಿಗಳ ಅರಿವೂ ಇರಲಿಕ್ಕಿಲ್ಲ. ಏಕ ವ್ಯಕ್ತಿ ಪ್ರದರ್ಶನ ಮತ್ತು ಇಬ್ಬರು ವ್ಯಕ್ತಿಗಳ ಸೈನ್ಯದಂತೆ ಕಾಣುತ್ತಿದೆ. – ಶತ್ರುಘ್ನ ಸಿನ್ಹಾ (ಬಿಜೆಪಿ ಸಂಸದರು)

#  ಏಕವ್ಯಕ್ತಿಯ ಪ್ರದರ್ಶನಕ್ಕೆ ಮೇಜು ಕುಟ್ಟುವಲ್ಲಿ ಮಂತ್ರಿಗಳೆಂಬ, ಎಂಪಿಗಳೆಂಬ ಸೈನ್ಯದ ಸ್ಥಾನಮಾನ ಇದ್ದೇ ಇದೆ ! ಸೈನ್ಯ ಎಲ್ಲಿದೆ ? ಉಳಿದದ್ದು ಸೇನಾಧಿಕಾರಿಯ ಏಕವ್ಯಕ್ತಿಯ ಪ್ರದರ್ಶನವಷ್ಟೆ !  

 

 • ಶ್ರವಣ ಬೆಳಗೊಳ ಧಾರ್ಮಿಕ ಕ್ಷೇತ್ರ. ಪ್ರವಾಸೀ ತಾಣದಂತೆ ಆಕರ್ಷಿಸಲಾರದು. ಭಕ್ತಿ ಇದ್ದವರು ಸದಾ ಬರುತ್ತಿರುತ್ತಾರೆ. ಪ್ರವಾಸಿಗರು ನದಿ, ಕಡಲ ತೀರ, ಜಂಗಲ್ ರೆಸಾರ್ಟ್ ನಂತಹ ತಾಣಗಳನ್ನು ಅಪೇಕ್ಷಿಸುತ್ತಾರೆ. ಶ್ರವಣ ಬೆಳಗೊಳ ಪ್ರವಾಸೀ ತಾಣವಲ್ಲ. – ಸ್ವಸ್ಥಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ (ಶ್ರವಣ ಬೆಳಗೊಳ ಜೈನ ಮಠ)

# ನಮ್ಮದು ನಿಮ್ಮ ಹಾಗೆ ಅಲ್ಲ. ನಮ್ಮದು ಧಾರ್ಮಿಕೋದ್ಯಮ ಕ್ಷೇತ್ರ. ಪ್ರವಾಸೀ ತಾಣದಂತೆ ಆಕರ್ಷಿಸಲು ಚಿನ್ನದ ರಥ, ನವರತ್ನ ರಥ, ವಜ್ರದ ಕವಚ ಮಾಡಿಟ್ಟಿದ್ದೇವೆ. ಗೋಪುರಕ್ಕೆ ಚಿನ್ನದ ಹೊದಿಕೆ ಅಳವಡಿಸಲಿದ್ದೇವೆ. ಆನೆ, ಕುದುರೆಗಳನ್ನು ಅವುಗಳ ಇಷ್ಟಕ್ಕೆ ವಿರುದ್ಧವಾಗಿಯಾದರೂ ಪ್ರದರ್ಶನಕ್ಕಿಡುತ್ತೇವೆ.  

 

 • ಕಳೆದ ನಾಲ್ಕು ವರ್ಷಗಳಲ್ಲಿ ಆಹಾರ ಅರಸಿಕೊಂಡು ಕಾಡಿನಿಂದ ನಾಡಿಗೆ ಬಂದ 143 ಚಿರತೆಗಳ ಸೆರೆ. – ಪತ್ರಿಕಾ ವರದಿ.

# ನಾಡಿನಲ್ಲೇ ಇರುವ ಅತ್ಯಾಚಾರಿಗಳು, ಕೊಲೆಗಡುಕರು, ಭ್ರಷ್ಟಾಚಾರಿಗಳು ಸ್ವಚ್ಛಂದ, ಮುಕ್ತ ಮುಕ್ತ…         

Leave a Reply

Your email address will not be published. Required fields are marked *