Realtime blog statisticsweb statistics
udupibits.in
Breaking News
ಉಡುಪಿ: ಜಿಲ್ಲೆಯ 25 ಮಂದಿ ಪೊಲೀಸ್ ವಾಹನ ಚಾಲಕ ಸಿಬ್ಬಂದಿಗಳ ಪರಸ್ಪರ ವರ್ಗಾವಣೆ.

ಉರಗತಜ್ಞ ಗುರುರಾಜ ಸನಿಲ್ ಅವರಿಗೆ ‘ಡಾ.ಕೃಷ್ಣಾನಂದ ಕಾಮತ್ ಸಾಹಿತ್ಯ ಪ್ರಶಸ್ತಿ’

ಉಡುಪಿ; ಖ್ಯಾತ ಉರಗತಜ್ಞ, ಬರೆಹಗಾರ, ಸಮಾಜಸೇವಕ, ಉಡುಪಿಯ ಗುರುರಾಜ್ ಸನಿಲ್ ಅವರಿಗೆ 2017-18ನೇ ಸಾಲಿನ ‘ಡಾ.ಕೃಷ್ಣಾನಂದ ಸಾಹಿತ್ಯ ಪ್ರಶಸ್ತಿ’ ಪ್ರಕಟಿಸಲಾಗಿದೆ.

ಪ್ರವಾಸ, ಪರಿಸರ ಜಾಗೃತಿ, ವಿಜ್ಞಾನ, ಬುಡಕಟ್ಟು ಜನಾಂಗ ಪರಿಚಯ, ಛಾಯಾಚಿತ್ರಗ್ರಹಣ ಇತ್ಯಾದಿ ಕ್ಷೇತ್ರಗಳಲ್ಲಿ ಪ್ರಸಿದ್ದಿ ಪಡೆದಿದ್ದ ಡಾ.ಕೃಷ್ಣಾನಂದ ಕಾಮತ್ (ಜನನ:1934, ನಿಧನ:2001) ನೆನಪಿನಲ್ಲಿ ಹೊನ್ನಾವರದಲ್ಲಿ ಸ್ಥಾಪನೆಯಾಗಿರುವ ಪ್ರತಿಷ್ಠಾನವು ‘ಡಾ.ಕೃಷ್ಣಾನಂದ ಸಾಹಿತ್ಯ ಪ್ರಶಸ್ತಿ’ಯನ್ನು ಸ್ಥಾಪಿಸಿದ್ದು, ಇದೀಗ ಉರಗ ತಜ್ಞರಾಗಿರುವ ಗುರುರಾಜ ಸನಿಲ್ ಅವರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಿದೆ. ಪ್ರಶಸ್ತಿಯು ಪ್ರಶಸ್ತಿ ಫಲಕ ಮತ್ತು 25 ಸಾವಿರ ರು.ಗಳನ್ನು ಹೊಂದಿದೆ.

ಉರಗಗಳ ಮೇಲೆ ಅಧ್ಯಯನ ನಡೆಸಿ ಏಳು ಸಂಶೋಧನಾತ್ಮಕ ಗ್ರಂಥಗಳನ್ನು ಪ್ರಕಟಿಸಿರುವ ಗುರುರಾಜ ಸನಿಲ್ ಅವರಿಗೆ, ಹತ್ತು ಹಲವಾರು ಪ್ರತಿಷ್ಠಿತ ಪ್ರಶಸ್ತಿಗಳು ಲಭಿಸಿವೆ. ಅನೇಕ ಸಂಘ ಸಂಸ್ಥೆಗಳು ಸಮ್ಮಾನಿಸಿ ಗೌರವಿಸಿವೆ. ಶಾಲೆ ಕಾಲೇಜುಗಳಲ್ಲಿ ಸಂಘ ಸಂಸ್ಥೆಗಳಲ್ಲಿ ಉರಗಗಳ ಬಗ್ಗೆ ಪ್ರದರ್ಶಿಸುವುದರ ಜೊತೆಗೆ ಮಾಹಿತಿ ಮತ್ತು ಜನಜಾಗೃತಿ ನಡೆಸುತ್ತಿರುವ ಗುರುರಾಜ ಸನಿಲ್ ಸಾಧನೆ ಅಮೋಘವಾದುದು.

    

Leave a Reply

Your email address will not be published. Required fields are marked *