Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಇತರ ಪಕ್ಷಗಳನ್ನು ಒಡೆಯಲು ಸಮಾನ ಮನಸ್ಕ ಮೈತ್ರಿಕೂಟವಾ ?

ಉಪ್ಪಿನಕಾಯಿ-41: ಶ್ರೀರಾಮ ದಿವಾಣ

 

  • ವಸತಿ ಪ್ರದೇಶಗಳಲ್ಲಿರುವ ಧಾರ್ಮಿಕ ಸ್ಥಳಗಳಲ್ಲಿ ಧ್ವನಿವರ್ಧಕಗಳನ್ನು ಬಳಸಬಾರದು. – ಚಿತ್ರ ಸಾಹಿತಿ ಜಾವೇದ್ ಅಖ್ತರ್.

# ದೇವರು, ಧರ್ಮ, ನಂಬಿಕೆ, ಯಕ್ಷಗಾನ, ಹೊನಲು ಬೆಳಕಿನ ಪಂದ್ಯಾಟ ಇತ್ಯಾದಿಗಳ ಹೆಸರಲ್ಲಿ ಧ್ವನಿವರ್ಧಕದ ಮೂಲಕ ಅನಗತ್ಯ-ಅತಿಯಾದ ಶಬ್ದ ಮಾಲಿನ್ಯ ಮತ್ತು ಬೇಕಾಬಿಟ್ಟಿ ವಿದ್ಯುತ್ ದುರ್ಬಳಕೆಗೆ ಕೊನೆ ಯಾವಾಗ ?  

 

  • ನೀತಿ ಆಯೋಗ ಮತ್ತು ಕೇಂದ್ರ ಆರೋಗ್ಯ ಸಚಿವಾಲಯ ಸಿದ್ಧಪಡಿಸಿರುವ ಆರೋಗ್ಯ ಸೂಚ್ಯಂಕ ವರದಿಯಲ್ಲಿ ಕೇರಳ ಮೊದಲ ಸ್ಥಾನ ಪಡೆದಿದ್ದು, ಉತ್ತರ ಪ್ರದೇಶ ಕಳಪೆ ಸಾಧನೆ ಮಾಡಿರುವುದು ತಿಳಿದುಬಂದಿದೆ. – ಪತ್ರಿಕಾ ವರದಿ.

# ಬಿಜೆಪಿ-ಆರ್.ಎಸ್.ಎಸ್. ಪರಿವಾರದ ಅನಾರೋಗ್ಯಕ್ಕೆ ಈ ವರದಿ ಸಾಕು !

 

  • ಆಂಧ್ರ ಪ್ರದೇಶ ಭಾರತದಲ್ಲಿಲ್ಲ ಎಂಬಂತೆ ಕೇಂದ್ರ ಸರ್ಕಾರ ವರ್ತಿಸುತ್ತಿದೆ. – ಚಂದ್ರಬಾಬು ನಾಯ್ಡು (ಆಂಧ್ರಪ್ರದೇಶ ಮುಖ್ಯಮಂತ್ರಿ)

# ಮೋದಿ-ಶ (ಗೆ)ರಣಾದರೆ ಆಂಧ್ರಕ್ಕೆ, ನಾಯ್ಡುಗೆ ಅಚ್ಛೆ ದಿನ್ ?

 

  • ಪಾಕಿಸ್ತಾನ ಗೂಢಚಾರ ಸಂಸ್ಥೆ (ಐಎಸ್‌ಐ) ಸಂಸ್ಥೆಯ ಏಜೆಂಟ್‌ ಯುವತಿಯೊಂದಿಗೆ ಹನಿಟ್ರ್ಯಾಪ್‌ ಜಾಲದಲ್ಲಿ ಸಿಲುಕಿ, ರಹಸ್ಯ ರಕ್ಷಣಾ ಮಾಹಿತಿಯನ್ನು ವಾಟ್ಸ್‌ಆ್ಯಪ್ ಮೂಲಕ ವಿನಿಮಯ ಮಾಡಿಕೊಂಡ ಆರೋಪದಲ್ಲಿ ಭಾರತೀಯ ವಾಯುಪಡೆಯ ಹಿರಿಯ ಅಧಿಕಾರಿ ಅರುಣ್ ಮರ್ವಾಹ ಅವರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.

# ವಿದೇಶಿ ಹೆಣ್ಣಿನ ಮಾಯೆಗೆ ಬಲಿಯಾಗುವ ದೇಶ ರಕ್ಷಕರಿಂದ ಮಾಯವಾದೀತು ದೇಶ !

 

  • ಬಂದೂಕಿನ ಮೇಲೆ ನಂಬಿಕೆ ಇಟ್ಟಿರುತ್ತಾರೋ ಅಂಥವರಿಗೆ ಬಂದೂಕಿನ ಭಾಷೆಯಲ್ಲೇ ಉತ್ತರ ನೀಡಲಾಗುವುದು.                – ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್.

# ಸರಕಾರ ನಂಬಿಕೆ ಇಟ್ಟಿರುವುದೂ ಬಂದೂಕುಗಳ ಮೇಲೆಯೇ !

 

  • ಜನರ ಹಣವನ್ನು ಖರ್ಚು ಮಾಡಿದರೆ ಅದರ ವಿವರಗಳನ್ನು ಸಂಸತ್ತಿಗೆ ನೀಡುವ ಉತ್ತರಾದಾಯಿತ್ವ ಸರ್ಕಾರದ್ದು. – ಶಶಿ ತರೂರ್ (ಕಾಂಗ್ರೆಸ್ ಸಂಸದ)

# ಈಗ ಎಲ್ಲರೂ ಮೋದಿಗೆ ಉತ್ತರದಾಯಿಯಾಗಿದ್ದರೆ ಸಾಕಂತೆ !

 

  • ಕೇಂದ್ರ ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಆರೋಪಗಳನ್ನು ‘ಸೃಷ್ಟಿಸುವುದಕ್ಕಾಗಿ’ ರಫೇಲ್‌ ಯುದ್ಧ ವಿಮಾನ ಖರೀದಿಯಲ್ಲಿ ಅವ್ಯವಹಾರ ನಡೆದಿದೆ ಎಂದು ಕಾಂಗ್ರೆಸ್‌ ಹೇಳುತ್ತಿದೆ. ಇದು ವಿರೋಧ ಪಕ್ಷದ ಹೊಸ ತಂತ್ರ.                                                  – ಅರುಣ್ ಜೇಟ್ಲಿ (ಕೇಂದ್ರ ಹಣಕಾಸು ಸಚಿವರು)

# ಕಾಂಗ್ರೆಸ್ ನೇತೃತ್ವದ ಯುಪಿಎ  ಸರಕಾರದ ಅವಧಿಯಲ್ಲಿ ವಿರೋಧ ಪಕ್ಷವಾಗಿದ್ದ ಬಿಜೆಪಿ ಮಾಡಿದ್ದೂ ಇದನ್ನೇ ಅಂತನಾ ?

 

  • ಕೇಂದ್ರ ಸರ್ಕಾರದ ವಿರುದ್ಧ ಸೃಷ್ಟಿಯಾಗಿರುವ ಅಸಮಾಧಾನವನ್ನು ಪಕ್ಷದ ಬೆಂಬಲವಾಗಿ ಪರಿವರ್ತಿಸಬೇಕು. – ಸೋನಿಯಾ ಗಾಂಧಿ (ಏಐಸಿಸಿ ಮಾಜಿ ಅಧ್ಯಕ್ಷರು)

#  ಅಷ್ಟು ಬಿಟ್ಟರೆ ಕಾಂಗ್ರೆಸ್ ಗೆ ಗೆಲ್ಲಲು ಬೇರೇನಿದೆ ಅಂತ ಬೇಕಲ್ಲ ?

 

  • ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸುವುದಕ್ಕಾಗಿ ‘ಸಮಾನ ಮನಸ್ಕ’ ರಾಜಕೀಯ ಪಕ್ಷಗಳ ಮೈತ್ರಿಕೂಟ ರಚನೆಯ ಅಗತ್ಯ ಇದೆ ಎಂದು ಕಾಂಗ್ರೆಸ್‌ ಸಂಸದೀಯ ಪಕ್ಷ ಸಭೆಯಲ್ಲಿ ಪಕ್ಷದ ಮಾಜಿ ಅಧ್ಯಕ್ಷೆ ಸೋನಿಯಾಗಾಂಧಿ ಹೇಳಿದ್ದಾರೆ. – ಪತ್ರಿಕಾ ವರದಿ.

#  ಇತರ ಪಕ್ಷಗಳನ್ನು ಒಡೆಯಲು ಸಮಾನ ಮನಸ್ಕ ಮೈತ್ರಿಕೂಟವಾ ?

 

  • ಪಾಟ್ನಾದಲ್ಲಿ ಹಿಂದೂ ಯುವಕನೊಬ್ಬ ಮುಸ್ಲಿಂ ವ್ಯಕ್ತಿಯೊಬ್ಬರ ಕಪಾಳಕ್ಕೆ ಹೊಡೆದು, ‘ಜೈ ಶ್ರೀ ರಾಂ’ ಎಂದು ಹೇಳುವಂತೆ ಒತ್ತಾಯಿಸುತ್ತಿರುವ ದೃಶ್ಯವಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವಿನಯ್ ಕುಮಾರ್ (22) ಎಂಬಾತ ಮೊಹಮ್ಮದ್ ಸಲೀಂ (45) ಎಂಬುವರ ಕಪಾಳಕ್ಕೆ 25 ಬಾರಿ ಹೊಡೆಯುತ್ತಾನೆ. ಅದರ ಮಧ್ಯೆ ‘ಜೈ ಶ್ರೀ ರಾಂ’ ಎಂದು ಹೇಳುವಂತೆ ಸಲೀಂ ಅವರನ್ನು ಒತ್ತಾಯಿಸುತ್ತಾನೆ. ಆದರೆ ಸಲೀಂ ‘ದೇವರು ಎಲ್ಲರಗಿಂತ ದೊಡ್ಡವನು’ ಎಂದು ಹೇಳುವುದು ವಿಡಿಯೊದಲ್ಲಿದೆ. – ಪತ್ರಿಕಾ ವರದಿ.

# ಇದುವಾ ಪರಿವಾರದ ಹಿಂದುತ್ವ ?

Leave a Reply

Your email address will not be published. Required fields are marked *