Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಭಾರತದ ಸಂವಿಧಾನ, ಕಾನೂನಿಗೆ ಸವಾಲು !

ಉಪ್ಪಿನಕಾಯಿ-42: ಶ್ರೀರಾಮ ದಿವಾಣ

 

 • ಮುಸ್ಲಿಂ ವೈಯಕ್ತಿಕ ಕಾನೂನುಗಳಲ್ಲಿ ಕೇಂದ್ರ ಸರ್ಕಾರ ಅನಗತ್ಯವಾಗಿ ಮೂಗು ತೂರಿಸುತ್ತಿದೆ. ಮುಸ್ಲಿಂ ವೈಯಕ್ತಿಕ ಕಾನೂನಿಗೆ ತ್ರಿವಳಿ ತಲಾಖ್ ನಿಷೇಧ ಮಸೂದೆ ಅಪಾಯಕಾರಿಯಾಗಿದೆ. ಅದು ಜಾರಿಯಾಗದಂತೆ ತಡೆಯಬೇಕಿದೆ. – ಮೌಲಾನ ವಲಿ ರೆಹಮಾನಿ, ಪ್ರಧಾನ ಕಾರ್ಯದರ್ಶಿ, ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ (ಎಐಎಂಪಿಎಲ್‌ಬಿ).

# ಮುಸ್ಲಿಂ ವೈಯುಕ್ತಿಕ ಕಾನೂನು ! ಹ್ಹ ಹ್ಹ ಹ್ಹ… ಭಾರತದ ಸಂವಿಧಾನ, ಕಾನೂನು ನಮಗಲ್ಲ, ಅದು ಮುಸ್ಲೀಮೇತರರಿಗೆ ಮಾತ್ರ !!

 

 • ಭಾರತದ ಒಟ್ಟು ಆಂತರಿಕ ಉತ್ಪನ್ನ (ಜಿಡಿಪಿ) 30 ವರ್ಷಗಳ ಸರಾಸರಿಗಿಂತ ಕೆಳಗೆ ಕುಸಿದಿದೆ. ಎನ್‌ಡಿಎ ಆಡಳಿತದಲ್ಲಿ ದೇಶದ ಆರ್ಥಿಕತೆ ತೆವಳುತ್ತಿದೆ. ಆದರೆ, ಆರ್ಥಿಕ ಸ್ಥಿತಿ (ಜಿಡಿಪಿ) ಸಾಕಷ್ಟು ಸುಧಾರಿಸುತ್ತಿದೆ ಎಂದು ಹಣಕಾಸು ಸಚಿವ ಅರುಣ್‌ ಜೇಟ್ಲಿ ಹಸಿ ಸುಳ್ಳು ಹೇಳುತ್ತಿದ್ದಾರೆ. – ಪಿ.ಚಿದಂಬರಂ (ಮಾಜಿ ಕೇಂದ್ರ ಮಂತ್ರಿ)

# ಸುಳ್ಳನ್ನೇ ಹೇಳಬೇಕು, ಸುಳ್ಳನ್ನೇ ಕೇಳಬೇಕು, ಸುಳ್ಳನ್ನೇ ನೋಡಬೇಕು !

 

 • ಕೇಂದ್ರ ಸರ್ಕಾರ ಮೇಲಿಂದ ಮೇಲೆ ಪೆಟ್ರೋಲ್‌ ಮತ್ತು ಡಿಸೇಲ್‌ ಮೇಲಿನ ಎಕ್ಸೈಜ್‌ ಸುಂಕ ಏರಿಸುವ ಮೂಲಕ ಜನರ ರಕ್ತ ಹೀರುತ್ತಿದೆ.ಕೇಂದ್ರದ ಬಜೆಟ್‌ ‘ರಕ್ತ ಹೀರುವ’ ವ್ಯವಸ್ಥೆಯಾಗಿದೆ. ದೇಶ ಎದುರಿಸುತ್ತಿರುವ ಸಮಸ್ಯೆಗಳಿಗೆ ಹೊಸ ಸರ್ಕಾರವೇ ಜವಾಬ್ದಾರಿ. ಕೇಂದ್ರ ಸರ್ಕಾರ ರೋಗಗ್ರಸ್ತವಾಗಿದೆ. ಅದು ಭಯಾನಕ ರೋಗಿ. – ಪಿ.ಚಿದಂಬರಮ್.

# ರಕ್ತ ಹರಿಸಿಯೇ ಹೀರೋ ಆದವರ ವ್ಯವಸ್ಥೆ ! 

 

 • ಕರ್ನಾಟಕವನ್ನು ಲೂಟಿಕೋರರ ರಾಜ್ಯವನ್ನಾಗಿ ಮಾಡಿದ ಕೀರ್ತಿ ಮುಖ್ಯಮಂತ್ರಿಗೆ ಸಲ್ಲುತ್ತದೆ. – ಎಚ್‌.ಡಿ.ಕುಮಾರಸ್ವಾಮಿ (ಮಾಜಿ ಮುಖ್ಯಮಂತ್ರಿ)

# ಹ್ಯೂಬ್ಲೋಟ್ ವಾಚ್ ನ್ನು ಮುಖ್ಯಮಂತ್ರಿಗಳು ಲೂಟಿ ಹೊಡೆದದ್ದಲ್ಲ !

 

 • ಕಾಂಗ್ರೆಸ್ ಸರ್ಕಾರ ಮಾಡಿದಷ್ಟು ಹಿಂದೂಪರವಾದ ಕೆಲಸವನ್ನು ಬೇರೆ ಯಾವ ಸರ್ಕಾರವೂ ಮಾಡಿಲ್ಲ. – ಪ್ರಮೋದ್ ಮಧ್ವರಾಜ್ (ಕ್ರೀಡೆ ಮತ್ತು ಯುವ ಸಬಲೀಕರಣ ಸಚಿವ)

# ಸಂಶಯವೇ ಇಲ್ಲ. ಸಂಘ ಪರಿವಾರ ಪರವಾದ ಕೆಲಸವನ್ನೂ ನೀವು, ನಿಮ್ಮ ಪಕ್ಷ ಮತ್ತು ನಿಮ್ಮ ಸರಕಾರ ಮಾಡಿದೆ, ಅಭಿನಂದನೆಯ ಫ್ಲೆಕ್ಸ್ ಹಾಕಲು ಹೇಳಿಬಿಡಿ.

 

 • ಮುಸ್ಲಿಂ ಮಹಿಳೆಯರು ತಮ್ಮ ರಕ್ತ ಸಂಬಂಧಿಗಳ ಹೊರತು ಬೇರೆ ಯಾರಿಂದಲೂ ಬಳೆಗಳನ್ನು ಹಾಕಿಸಿಕೊಳ್ಳಬಾರದು. – ದಾರುಲ್‌ ಉಲೂಮ್‌ ಧಾರ್ಮಿಕ ಕೇಂದ್ರದ ಫತ್ವಾ.

# ಭಾರತದ ಸಂವಿಧಾನ, ಕಾನೂನಿಗೆ ಸವಾಲು !

 

 • ನಗುವಿನ ಮೇಲೆ ಜಿಎಸ್‍ಟಿ ಇಲ್ಲ. ನಗಲು ನನಗೆ ಯಾರ ಅನುಮತಿಯೂ ಬೇಕಾಗಿಲ್ಲ. – ರೇಣುಕಾ ಚೌಧರಿ (ಕಾಂಗ್ರೆಸ್ ಸಂಸದೆ)

# ದುಶ್ಯಾಸನ ಸಂತತಿಯ ಜನರು ಮಾತ್ರವೇ ಮಹಿಳೆಯರನ್ನು ಕೀಳಾಗಿ ಕಾಣಲು ಸಾಧ್ಯ.

 

 • ಸಂತರಿಗೆ ಶಾಂತವಾಗಿರಲು ಬಿಡಬೇಕು. – ಸಂತ ಸೇವಕ ಸಮಿತಿ.

# ಸಂತರು ಶಾಂತಿಯಿಂದ ಇರಬೇಕಾದರೆ, ಬದುಕನ್ನು ಧರ್ಮಾಧ್ಯಯನ, ತಪಸ್ಸು, ಯೋಗ, ಧ್ಯಾನದಲ್ಲಿ ನಿರತರಾಗಬೇಕು, ಧರ್ಮವನ್ನು ಸ್ವಾರ್ಥಕ್ಕೆ ಮತ್ತು ಧರ್ಮವನ್ನು ಉದ್ಯಮವನ್ನಾಗಿ ಪರಿವರ್ತಿಸಿ ಸಂಪತ್ತು ಕ್ರೋಢೀಕರಿಸುವುದನ್ನು ನಿಲ್ಲಿಸಬೇಕು.

 

 • ಗೋರಬಾಳ ನಾಕಾ ಸಮೀಪದ ಹಿರೇಹಳ್ಳದಲ್ಲಿ ಭಾನುವಾರ 2 ಸಾವಿರ ಮುಖಬೆಲೆಯ 500 ನಕಲಿ ನೋಟುಗಳು ಪತ್ತೆಯಾಗಿದ್ದು, ಪೊಲೀಸರು ವಶಕ್ಕೆ ಪಡೆದಿದ್ದಾರೆ. – ಪತ್ರಿಕಾ ವರದಿ.

# ತಲೆಕೆಳಗಾದ ಪ್ರಧಾನಿ ನರೇಂದ್ರ ಮೋದಿ ಉದ್ಧೇಶ !

 

 • ನಮ್ಮದು ಮೌಲ್ಯಾಧಾರಿತ ಆಲೋಚನಾ ಪದ್ಧತಿ. ಅದನ್ನು ಭವಿಷ್ಯದ ಪೀಳಿಗೆಗೆ ವರ್ಗಾಯಿಸುವ ವಾಹಕ ರಾಷ್ಟ್ರೀಯ ಸ್ವಯಂ ಸೇವಕ ಸಂಘ. – ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಮ್‌ ಮಾಧವ್.

#  ಕೊಲೆ ಮಾಡುವುದು, ಮಾಡಿಸುವುದು, ಧ್ವೇಷವನ್ನೇ ಉಸಿರಾಡುವಂತೆ ಮಾಡುವುದು, ಅತ್ಯಂತ ಕೀಳು ಮಟ್ಟದ ಭಾಷಣ ಮಾಡುವುದು, ಅವಹೇಳನ ಮಾಡುವುದು ಇತ್ಯಾದಿಗಳು ಮಾತ್ರ ಮನುಕುಲದ ಅಪಮೌಲ್ಯಗಳಾಗಿವೆ.

 

 • ಸಂಘಟನೆಗಳು ಒಂದು ಚೌಕಟ್ಟಿನ ಒಳಗೆ ಕೆಲಸ ಮಾಡುತ್ತವೆ. ಆದರೆ, ಆರ್‌ಎಸ್‌ಎಸ್‌ಗೆ ಆ ಚೌಕಟ್ಟು ಇಲ್ಲ. – ರಾಮ್ ಮಾಧವ್.

# ಆರ್ ಎಸ್ ಎಸ್ ಸಂಘಟನೆಗೆ ಚೌಕಟ್ಟು ಎಲ್ಲ ಎನ್ನುವುದು ಅನೇಕ ಮಂದಿ ಸಾಮಾನ್ಯ ಮುಗ್ದ ಆರ್ ಎಸ್ ಎಸ್ ಕಾರ್ಯಕರ್ತರಿಗೆ ಗೊತ್ತಿಲ್ಲದೇ ಇರುವುದೇ ಸಮಸ್ಯೆ !

 

Leave a Reply

Your email address will not be published. Required fields are marked *