Realtime blog statisticsweb statistics
udupibits.in
Breaking News
ಉಡುಪಿ: ಅಂಚೆ ಕಚೇರಿಗಳಲ್ಲಿ ಇಂಡಿಯನ್ ಪೋಸ್ಟಲ್ ಆರ್ಡರ್ ಅಲಭ್ಯತೆ- ಸಮಸ್ಯೆ ಪರಿಹರಿಸಲು ಮಾಹಿತಿ ಹಕ್ಕು ಕಾರ್ಯಕರ್ತರಿಂದ ಪ್ರಧಾನಿಗೆ ಪತ್ರ

ಸ್ಥಾವರಕ್ಕೆ 3 ಸಾವಿರ ಕೋಟಿ- ಸ್ವಯಂಘೋಷಿತ ಫಕೀರನ ವಿಕಾಸ ಯೋಜನೆ !

ಉಪ್ಪಿನಕಾಯಿ-43: ಶ್ರೀರಾಮ ದಿವಾಣ

 

  • ನಮ್ಮದು 10 ಪರ್ಸೆಂಟ್ ಸರ್ಕಾರ ಎಂದು ಆರೋಪ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, ಮುಂದಿನ ಸಲ ಬೆಂಗಳೂರಿಗೆ ಬರುವಾಗ ದಾಖಲೆ ಬಿಡುಗಡೆ ಮಾಡಲಿ ಎಂದು ಮುಖ್ಯಮಂತ್ರಿ ಸವಾಲು ಹಾಕಿದ್ದಾರೆ. – ಪತ್ರಿಕಾ ವರದಿ.

# ಹೊಡೆದು ಓಡುವ ರಾಜಕಾರಣ ನಡೆಸುವವರು ಯಾವತ್ತೂ ಸವಾಲಿಗೆ ಉತ್ತರಿಸುವುದಿಲ್ಲ !

 

  • ಅಯೋಧ್ಯೆಯಲ್ಲಿ ಭವ್ಯವಾದ ರಾಮ ಮಂದಿರ ನಿರ್ಮಿಸುವ ಉದ್ದೇಶದ ‘ರಾಮರಾಜ್ಯ ರಥಯಾತ್ರೆ’ಗೆ ಮಂಗಳವಾರ ಚಾಲನೆ ನೀಡಲಾಯಿತು. – ಪತ್ರಿಕಾ ವರದಿ.

# ಅಧಿಕಾರಕ್ಕೆ ಬರಲೂ ರಾಮ ಮಂದಿರ, ಅಧಿಕಾರಕ್ಕೆ ಬಂದ ಮೇಲೆ 4 ವರ್ಷ ಎಲ್ಲರ ಮೌನ ಮಂದಿರ, ಅಧಿಕಾರ ಸಿಕ್ಕಿದ ಮೇಲೆ ಅಧಿಕಾರ ಉಳಿಸಿಕೊಳ್ಳಲೂ ರಾಮ ಮಂದಿರ, ಉಳಿದರೆ ಮತ್ತೆ 4 ವರ್ಷ ರಾಮನಿಗೆ ನಾಮ !

 

  • ಬಿಜೆಪಿಯವರು ಪ್ರತಿ ಬಾರಿ ದಲಿತರ ಮನೆಯಲ್ಲಿ ಊಟ ಮಾಡಿದೆವು, ಉಪಾಹಾರ ಸೇವಿಸಿದೆವು, ದಲಿತರ ಮನೆಯಲ್ಲಿ ವಾಸ್ತವ್ಯ ಮಾಡಿದೆವು ಎಂದು ಹೇಳುತ್ತಾರೆ. ದಲಿತರೇನು ಪಾಪಿಗಳಾ ? – ಮಲ್ಲಿಕಾರ್ಜುನ ಖರ್ಗೆ (ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕರು)

# ಅವರು ಬೇರೆ ಯಾವುದೇ ದಿನ ದಲಿತರ ಮನೆಗೆ ಸಹಜವಾಗಿ ಹೋಗುವುದಿಲ್ಲ ಎಂಬುದಂತೂ ಸರಳ ಸತ್ಯ.

 

  • 70 ಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಗುರುವಾರ ವಜ್ರದ ವ್ಯಾಪಾರಿ ನೀರವ್‌ ಮೋದಿ ಅವರ ವಿವಿಧ ಸ್ಥಳಗಳಲ್ಲಿ ದಾಳಿ ನಡೆಸಿದೆ. ಸರ್ಕಾರಿ ಸ್ವಾಮ್ಯದ ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ನಲ್ಲಿ (ಪಿಎನ್‌ಬಿ) 11,346 ಕೋಟಿಗಳಷ್ಟು ವಂಚನೆ ಎಸಗಿರುವುದನ್ನು ಬುಧವಾರ ಬ್ಯಾಂಕ್‌ ಮುಂಬೈ ಷೇರುಪೇಟೆಗೆ ಮಾಹಿತಿ ನೀಡಿತ್ತು. ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ ಸಿಬಿಐನಲ್ಲಿ ದೂರು ದಾಖಲಿಸುವುದಕ್ಕೂ ಮುನ್ನವೇ, ಜ.1ರಂದು ನೀರವ್‌ ಮೋದಿ ದೇಶ ತೊರೆದಿದ್ದಾರೆ. ಮೋದಿ ಮತ್ತು ಅವರ ಕುಟುಂಬದ ಸದಸ್ಯರು ಸ್ವಿಟ್ಜರ್ಲೆಂಡ್‌ನಲ್ಲಿ ಇರುವ ಕುರಿತು ಮಾಹಿತಿ ಇರುವುದಾಗಿ ಅಧಿಕಾರಿಗಳು ಹೇಳಿದ್ದಾರೆ. ಜ.23ರಂದು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಭಾರತದ ಸಿಇಒಗಳು ಇರುವ ಫೋಟೋದಲ್ಲಿ ನೀರವ್‌ ಮೋದಿ ಇರುವುದನ್ನು ಗುರುತಿಸಲಾಗಿದೆ. – ಪತ್ರಿಕಾ ವರದಿ.

#  ದೇಶ ತೊರೆದ ಬಳಿಕ ವಂಚಕ ವಿದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಜೊತೆ ! ನೀರವ್ ಮೋದಿ-ನರೇಂದ್ರ ಮೋದಿ ಸಂಪರ್ಕ-ಸಂಬಂಧ ಬಗ್ಗೆ ತನಿಖೆಯಾಗಬೇಡವೇ ?

 

  • ಸರ್ದಾರ್ ವಲ್ಲಭಭಾಯ್ ಪಟೇಲ್ ಪ್ರತಿಮೆಯನ್ನು ಅವರ ಜನ್ಮದಿನವಾದ ಅಕ್ಟೋಬರ್ 31ರಂದು ಅನಾವರಣಗೊಳಿಸಲು ಗುಜರಾತ್ ಸರ್ಕಾರ ಉದ್ದೇಶಿಸಿದೆ. 2013ರ ಅಕ್ಟೋಬರ್‌ 13ರಂದು, ಗುಜರಾತ್‌ನ ಅಂದಿನ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು 3 ಸಾವಿರ ಕೋಟಿ ವೆಚ್ಚದ ಪ್ರತಿಮೆ ನಿರ್ಮಾಣ ಯೋಜನೆಗೆ ಶಂಕುಸ್ಥಾಪನೆ ಮಾಡಿದ್ದರು. ಪ್ರತಿಮೆಯನ್ನು ಸಾರ್ವಜನಿಕ–ಖಾಸಗಿ ಸಹಭಾಗಿತ್ವದಲ್ಲಿ (ಪಿಪಿಪಿ) ನಿರ್ಮಿಸಲಾಗುತ್ತಿದೆ. – ಪತ್ರಿಕಾ ವರದಿ.

#  ಸ್ಥಾವರಕ್ಕೆ 3 ಸಾವಿರ ಕೋಟಿ- ಸ್ವಯಂಘೋಷಿತ ಫಕೀರನ ವಿಕಾಸ ಯೋಜನೆ !

 

  • ‘ಒರು ಅಡಾರ್ ಲವ್’ ಚಿತ್ರದ ‘ಮಾಣಿಕ್ಯಾಲ ಮಲಾರಯ ಪೂವಿ’ ಗೀತೆಯಲ್ಲಿ ಪ್ರವಾದಿ ಮೊಹಮ್ಮದ್ ಅವರ ಹೆಂಡತಿ ಖದೀಜಾ ಅವರ ಹೆಸರು ಪ್ರಸ್ತಾಪಿಸಲಾಗಿದೆ. ಇದರಿಂದ ನಮ್ಮ ಭಾವನೆಗೆ ಧಕ್ಕೆ ಆಗಿದೆ ಎಂದು ಕೆಲ ಮುಸ್ಲಿಂ ಯುವಕರ ಗುಂಪು, ಫಲಕ್‌ನುಮಾ ಪೊಲೀಸರಿಗೆ ದೂರು ನೀಡಿದೆ. – ಪತ್ರಿಕಾ ವರದಿ.

# ನೋಡಬಾರದ್ದನ್ನು ನೋಡಬೇಡಿ, ಕೇಳಬಾರದ್ದನ್ನು ಕೇಳಬೇಡಿ, ಹೇಳಬಾರದ್ದನ್ನು ಹೇಳಬೇಡಿ. ‘ಭಾವನೆಗಳಿಗೆ ಧಕ್ಕೆ’ ಎಂಬ ಹೆಸರಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯದ ವಿರುದ್ಧ ಧ್ವನಿ ಎತ್ತಿ, ಅಸಹಿಷ್ಣುತೆ ಪ್ರದರ್ಶಿಸಬೇಡಿ.

 

 

Leave a Reply

Your email address will not be published. Required fields are marked *