Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಜಾಣತನದ, ಅತೀ ಬುದ್ದಿವಂತಿಕೆಯ ಮೌನ, ತಮ್ಮ ನಿಜಬಣ್ಣವನ್ನು ಬಯಲು ಮಾಡಬಹುದಾದ, ಮುಖವಾಡವನ್ನು ಕಳಚಿ ಹಾಕಬಹುದಾದ ಪ್ರಕರಣಗಳ ಬಗ್ಗೆ ಮಾತ್ರ ಮೋದಿ ಮೌನೇಂದ್ರ !

ಉಪ್ಪಿನಕಾಯಿ-45: ಶ್ರೀರಾಮ ದಿವಾಣ

 

  • ಕಾಂಗ್ರೆಸ್‌–ಜೆಡಿಎಸ್‌ ಪ್ರಾಬಲ್ಯದ ಮೈಸೂರು ಭಾಗದಲ್ಲಿಚುನಾವಣಾ ಪ್ರಚಾರ ನಡೆಸಿದ ಪ್ರಧಾನಿ ನರೇಂದ್ರ ಮೋದಿ ತಮ್ಮ ಅಧಿಕಾರವಧಿಯಲ್ಲಿ ನಡೆದ ಹಗರಣಗಳ ಬಗ್ಗೆ ಯಾಕೆ ಮಾತನಾಡಿಲ್ ? ದೇಶದಲ್ಲಿ ಒಂದರ ಹಿಂದೆ ಒಂದು ಹಗರಣಗಳು ನಡೆಯುತ್ತಿದ್ದರೂ ಮೋದಿ ಮೌನ ಪಾಲಿಸುತ್ತಿರುವುದು ಯಾಕೆ ? ಅವರ ಮೌನ  ದೇಶದ ಗಮನವನ್ನು ಬೇರೆಡೆಗೆ ಸೆಳೆಯಲು ಸಹಾಯ ಮಾಡುತ್ತದೆ ಎಂದು ಅವರು ನಂಬಿರಬೇಕು. – ಕಾಂಗ್ರೆಸ್.

# ಮೌನೇಂದ್ರ ಮೋದಿ !

 

  • ಪ್ರಜಾಪ್ರಭುತ್ವ ಎಂಬುದು ನಮ್ಮ ರಕ್ತದಲ್ಲೇ ಇದೆ. – ನರೇಂದ್ರ ಮೋದಿ (ಪ್ರಧಾನಿ)

# ಪ್ರಜಾಪ್ರಭುತ್ವದಲ್ಲಿ ಸರ್ವಾಧಿಕಾರಕ್ಕೆ ಸ್ಥಾನವೇ ಇಲ್ಲ, ಇರಲೂಬಾರದು !

 

  • ಸ್ವಾಯತ್ತ ಸಂಸ್ಥೆ ‘ಪ್ರಸಾರ ಭಾರತಿ’ಯ ಅನುದಿನದ ಆಗು ಹೋಗುಗಳ ಮೇಲೆ ಪರೋಕ್ಷ ಹಿಡಿತ ಸಾಧಿಸುವ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಹುನ್ನಾರ ಹೊಸ್ತಿಲಲ್ಲೇ ಮುಗ್ಗರಿಸಿದೆ. ಹಿರಿಯ ಪತ್ರಕರ್ತ ಅರಕಲಗೂಡು ಸೂರ್ಯಪ್ರಕಾಶ್ ಅಧ್ಯಕ್ಷತೆಯ ಪ್ರಸಾರ ಭಾರತಿ ಮಂಡಳಿ ಸಿಡಿದೆದ್ದು ಈ ಹುನ್ನಾರವನ್ನು ಯಶಸ್ವಿಯಾಗಿ ಹಿಮ್ಮೆಟ್ಟಿಸಿದೆ. ವಾರ್ತಾ ಮತ್ತು ಪ್ರಸಾರ ಮಂತ್ರಿ ಸ್ಮೃತಿ ಇರಾನಿ ಅವರು ಪ್ರಧಾನಮಂತ್ರಿಯವರ ವಿಶೇಷ ವಿಶ್ವಾಸಕ್ಕೆ ಪಾತ್ರರು ಎಂದೇ ರಾಜಕೀಯ ವಲಯಗಳು ನಂಬುತ್ತ ಬಂದಿವೆ. ತಮ್ಮ ಆಯ್ಕೆಯ ಇಬ್ಬರು ಹಿರಿಯ ಪತ್ರಕರ್ತರನ್ನು (ಸಿದ್ಧಾರ್ಥ ಝುರಾಬಿ, ಅಭಿಜಿತ್ ಮಜುಮ್ದಾರ್), ತಾವೇ ನಿಗದಿ ಮಾಡಿದ ಸಂಬಳ ಸಾರಿಗೆಯ ಪ್ರಕಾರ ಪ್ರಸಾರ ಭಾರತಿಯ ಉನ್ನತ ಸಂಪಾದಕೀಯ ಹುದ್ದೆಗಳಿಗೆ ನೇಮಕ ಮಾಡುವಸ್ಮೃತಿ ಅವರ ಪ್ರಯತ್ನ ಫಲ ನೀಡಿಲ್ಲ. ಪ್ರಸಾರ ಭಾರತಿ ಸದಸ್ಯ ಮಂಡಳಿಗೆ ತಮ್ಮ ಆಯ್ಕೆಯ ಹಿರಿಯ ಐ.ಎ.ಎಸ್. ಅಧಿಕಾರಿಯೊಬ್ಬರನ್ನು ಡೆಪ್ಯೂಟೇಷನ್ ಆಧಾರದಲ್ಲಿ ನೇಮಕ ಮಾಡಬೇಕೆಂಬ ಅವರ ಇನ್ನೊಂದು ಪ್ರಮುಖ ನಡೆಗೂ ತೀವ್ರ ಮುಖಭಂಗ ಆಗಿದೆ. ಮೂರನೆಯದಾಗಿ ಆಕಾಶವಾಣಿ ಮತ್ತು ದೂರದರ್ಶನದ ಎಲ್ಲ ಗುತ್ತಿಗೆ ಆಧಾರದ ಉದ್ಯೋಗಿಗಳನ್ನು ಕೆಲಸದಿಂದ ವಜಾ ಮಾಡಬೇಕೆಂಬ ಸ್ಮೃತಿ ಅವರ ಇನ್ನೊಂದು ಆದೇಶವನ್ನೂ ಪ್ರಸಾರ ಭಾರತಿ ನೇರವಾಗಿ ತಿರಸ್ಕರಿಸಿದೆ. – ಪತ್ರಿಕಾ ವರದಿ.

# ಪ್ರಧಾನಿ ನರೇಂದ್ರ ಮೋದಿಯವರ ವಿಶೇಷ ವಿಶ್ವಾಸಕ್ಕೆ ಪಾತ್ರರಾದವರು, ಪ್ರಧಾನಿಯವರ ಆಶಯ, ಉದ್ಧೇಶಗಳನ್ನು ಈಡೇರಿಸುವ ಕೆಲಸವನ್ನೇ ಮಾಡಿರಬೇಕು !

 

  • ಪರೀಕ್ಷೆ ಬರೆಯುವುದು ಹೇಗೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ವಿದ್ಯಾರ್ಥಿಗಳಿಗೆ ಎರಡು ತಾಸು ಪಾಠ ಮಾಡಿದ್ದಾರೆ. ಆದರೆ 22 ಸಾವಿರ ಕೋಟಿ ಬ್ಯಾಂಕ್‌ ಹಗರಣದ ಬಗ್ಗೆ ಎರಡು ನಿಮಿಷವೂ ಮಾತನಾಡುತ್ತಿಲ್ಲ. ಜೇಟ್ಲಿ ಅಡಗಿಕೊಂಡಿದ್ದಾರೆ. – ರಾಹುಲ್‌ ಗಾಂಧಿ (ಕಾಂಗ್ರೆಸ್‌ ಅಧ್ಯಕ್ಷ)

#  ಜಾಣತನದ, ಅತೀ ಬುದ್ದಿವಂತಿಕೆಯ ಮೌನ, ತಮ್ಮ ನಿಜಬಣ್ಣವನ್ನು ಬಯಲು ಮಾಡಬಹುದಾದ, ಮುಖವಾಡವನ್ನು ಕಳಚಿ ಹಾಕಬಹುದಾದ ಪ್ರಕರಣಗಳ ಬಗ್ಗೆ ಮಾತ್ರ ಮೋದಿ ಮೌನೇಂದ್ರ !

 

  • ನೀರವ್‌ ಮೋದಿ ದೇಶ ಬಿಟ್ಟು ಹೋಗುವಾಗ ನಮ್ಮ ಚೌಕಿದಾರ (ಪ್ರಧಾನಿ ಮೋದಿ) ಏನು ಮಾಡುತ್ತಿದ್ದರು ?. – ಶಿವಸೇನಾ.

# ಚೌಕಿದಾರ ಯಾವತ್ತೂ ಚೌಕಿಯ ಹಿಂದೆಯೇ ಇರ್ತಾರೆ ! ಎದುರುಗಡೆಗೆ ಬೇರೆ ಯಾರನ್ನಾದರೂ ಬಿಡ್ತಾರೆ !!

 

 

Leave a Reply

Your email address will not be published. Required fields are marked *