Realtime blog statisticsweb statistics
udupibits.in
Breaking News
ಉಡುಪಿ: ಜೂನ್ 6 ಬೆಳಗ್ಗೆ 11ಕ್ಕೆ ಉಡುಪಿ ಡಿಸಿ ಕಚೇರಿ ಸಭಾಂಗಣದಲ್ಲಿ ಕರ್ನಾಟಕ ಮಾಹಿತಿ ಆಯೋಗದಿಂದ ಮಾಹಿತಿ ಹಕ್ಕು ಅರ್ಜಿಗಳ ವಿಚಾರಣೆ.

1 ಎಕರೆ ಜಾಗದಲ್ಲಿ ಕೆ.ಕೆ. ಹೆಬ್ಬಾರ್ ಥೀಂ ಪಾರ್ಕ್: ಬೆಳ್ಳೆ ಗ್ರಾಪಂ ನಿರ್ಣಯ; ಮಾದರಿಯಾದ ಸಾಮಾನ್ಯ ಸಭೆ

ಉಡುಪಿ: ಜಗದ್ವಂದ್ಯ ಚಿತ್ರ ಕಲಾವಿದ ಪದ್ಮಶ್ರೀ, ಪದ್ಮಭೂಷಣ ಡಾ// ಕೆ.ಕೆ. ಹೆಬ್ಬಾರ್ (ಕಟ್ಟಿಂಗೇರಿ ಕೃಷ್ಣ ಹೆಬ್ಬಾರ್) ಅವರ ಸ್ಮಾರಕವನ್ನು ಹುಟ್ಟೂರು ಕಟ್ಟಿಂಗೇರಿಯಲ್ಲಿ ನಿರ್ಮಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಫೆಬ್ರವರಿ 20ರಂದು ನಡೆದ ಬೆಳ್ಳೆ ಗ್ರಾಮ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಬಹುಮುಖ್ಯವಾದ ನಿರ್ಣಯವನ್ನು ತೆಗೆದುಕೊಳ್ಳಲಾಗಿದ್ದು, ಕಳೆದ 3 ತಿಂಗಳಿಂದ ನಡೆಯುತ್ತಿರುವ ಹೋರಾಟಕ್ಕೆ ಫಲಶ್ರುತಿ ದೊರೆತಂತಾಗಿದೆ.

ಕಟ್ಟಿಂಗೇರಿ ಕೆರೆ ಬಳಿಯ ಒಂದು ಎಕರೆ ಜಾಗದಲ್ಲಿ ಕೆ.ಕೆ. ಹೆಬ್ಬಾರ್ ಥೀಂ ಪಾರ್ಕ್ ರಚಿಸುವ ಸಂಬಂಧ ಗ್ರಾಪಂ ಮಹುತ್ತ್ವದ ನಿರ್ಣಯವನ್ನು ಇಂದು ಗ್ರಾಪಂ ಸಾಮಾನ್ಯ ಸಭೆಯಲ್ಲಿ ಸರ್ವಾನುಮತದಿಂದ ತೆಗೆದುಕೊಂಡಿತು. ಸ್ಥಳವನ್ನು ಮೀಸಲಿರಿಸಿ ಆದೇಶಿಸುವಂತೆ ಜಿಲ್ಲಾಧಿಕಾರಿ/ಉಪವಿಭಾಗಾಧಿಕಾರಿಗಳ ಸಕ್ಷಮ ಪ್ರಾಧಿಕಾರಕ್ಕೆ ಪ್ರಸ್ತಾವನೆ ಸಲ್ಲಿಸಲೂ ಸಾಮಾನ್ಯ ಸಭೆಯು ತೀರ್ಮಾನಿಸಿತು. ಕಳೆದ 2 ತಿಂಗಳ ಸಮಾನ್ಯ ಸಭೆಗಳಲ್ಲೂ ಸ್ಮಾರಕ ನಿರ್ಮಾಣಕ್ಕೆ ಸಂಬಂಧಿಸಿದಂತೆ ಯಾವುದೇ ಸ್ಪಷ್ಟ ತೀರ್ಮಾನ ತೆಗೆದುಕೊಳ್ಳುವಲ್ಲಿ ಗ್ರಾಪಂ ವಿಫಲವಾಗಿತ್ತು.

ಗಂಭೀರ ಹಾಗೂ ಗೌರವದ ಸಭೆ

ಕೆ.ಕೆ. ಹೆಬ್ಬಾರ್ ಅವರ ಸ್ಮಾರಕ ನಿರ್ಮಾಣಕ್ಕೆ ಸಂಬಂಧಿಸಿದಂತೆ ಕಳೆದ 2 ತಿಂಗಳ ಸಾಮಾನ್ಯ ಸಭೆಯಲ್ಲಿ ಗದ್ದಲ ಹಾಗೂ ಅಗೌರವದ ಹೇಳಿಕೆಗಳು ದಾಖಲಾದವೇ ಹೊರತು ಯಾವುದೇ ಸ್ಪಷ್ಟ ಹಾಗೂ ಮಾದರಿ ತೀರ್ಮಾನ ತೆಗೆದುಕೊಳ್ಳುವಲ್ಲಿ ಗ್ರಾಪಂ ವಿಫಲವಾಗಿತ್ತು. ಆದರೆ ಫೆ. 20ರಂದು ನಡೆದ ಸಾಮಾನ್ಯ ಸಭೆ ಇದಕ್ಕೆಲ್ಲ ಭಿನ್ನ ಎಂಬಂತಿತ್ತು. ಸಭೆಯಲ್ಲಿ ಹಿಂದೆಂದೂ ಆಗದ ರೀತಿಯಲ್ಲಿ ಅತ್ಯಂತ ಗಂಭೀರ ಹಾಗೂ ಗೌರವದ ಚರ್ಚೆ ನಡೆದು ಸರ್ವಾನುಮತದ ತೀರ್ಮಾನ ತೆಗೆದುಕೊಳ್ಳಲಾಯಿತು.

ಗ್ರಾಪಂ ಅಧ್ಯಕ್ಷೆ ಶ್ರೀಮತಿ ರಂಜನಿ ಎಸ್. ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ಹಿಂದಿನ ಎರಡೂ ಸಭೆಗಳಲ್ಲಿ ಉಪಸ್ಥಿತರಿದ್ದ ಉಪಾಧ್ಯಕ್ಷ ಹರೀಶ ಶೆಟ್ಟಿ ಗೈರಾಗಿದ್ದರು. ಮಾಜಿ ಅಧ್ಯಕ್ಷರಾಗಿದ್ದ ಶಿವಾಜಿ ಸುವರ್ಣ, ರಾಜೇಂದ್ರ ಶೆಟ್ಟಿ ಉಪಸ್ಥಿತರಿದ್ದರು.

ಸ್ಮಾರಕಕ್ಕೆ ಭೂಮಿ ಮೀಸಲಿರಿಸುವ ಸಂಬಂಧ ಗ್ರಾಪಂ ಸದಸ್ಯ ಸುಧಾಕರ ಪೂಜಾರಿ ಅವರು ನೀಡಿದ ಮನವಿಯನ್ನು ಸಭೆಯಲ್ಲಿ ಓದಿ ಹೇಳಲಾಯಿತು. ಇದಕ್ಕೆ ರಾಜೇಂದ್ರ ಶೆಟ್ಟಿಯವರು ದನಿಗೂಡಿಸಿ ಸ್ಮಾರಕದ ಮಹತ್ತ್ವದ ಬಗ್ಗೆ ಸಭೆಗೆ ಮನವರಿಕೆ ಮಾಡಿದರು. ಇದಕ್ಕೆ ಸಮ್ಮತಿ ಸೂಚಿಸಿದ ಅಧ್ಯಕ್ಷೆ ರಂಜನಿ ಹೆಗ್ಡೆ ಅವರು, ಸ್ಮಾರಕ ನನ್ನ ಅವಧಿಯಲ್ಲಿ ನಿರ್ಮಾಣವಾಗುವುದು ಅತ್ಯಂತ ಹೆಮ್ಮೆಯ ಹಾಗೂ ಅಭಿಮಾನದ ಸಂಗತಿ ಎಂದು ಅಭಿಪ್ರಾಯಪಟ್ಟರು. ಜತೆಗೆ ಈ ಬಗ್ಗೆ ಸಕ್ಷಮ ಪ್ರಾಧಿಕಾರಗಳಿಗೆ ಪ್ರಸ್ತಾವನೆ ಸಲ್ಲಿಸುವ ಒಮ್ಮತದ ತೀರ್ಮಾನಕ್ಕೆ ಬರಲಾಯಿತು.

ಏಕ ವಚನ, ಏರು ದನಿ ಇಲ್ಲ

ಕಳೆದೆರಡು ಸಭೆಗಳಲ್ಲಿದ್ದಂತೆ ಏಕವಚನ ಪ್ರಯೋಗ, ವೈಯಕ್ತಿಕ ಉಲ್ಲೇಖಗಳು, ಏರು ದನಿ ಯಾವುದೇ ಇಲ್ಲದೆ ವಿಷಯಾಧಾರಿತವಾಗಿ ನಡೆದ ಮೊದಲ ಸಭೆ ಎಂಬ ಹೆಗ್ಗಳಿಕೆ ಫೆ. 20ರ ಸಭೆಗೆ ದೊರೆತಿದೆ. ಈ ಸಭೆ ಇಷ್ಟು ಶಿಸ್ತಿನಿಂದ ನಡೆದಿದ್ದು, ಉಪಾಧ್ಯಕ್ಷರೊಬ್ಬರನ್ನು ಹೊರತುಪಡಿಸಿದರೆ ಇದೇ ಸಭೆಯಲ್ಲಿದ್ದವರೇ ಇದ್ದ ಹಿಂದಿನ ಸಭೆಗಳೇಕೆ ಮಾದರಿಯಾಗಲಿಲ್ಲ ಎಂಬುದು ಪ್ರಶ್ನೆಯಾಗಿಯೇ ಉಳಿದಿದೆ. ಈ ಸಭೆಯ ಮಾದರಿಯಲ್ಲೇ ಸಾಮಾನ್ಯ ಸಭೆಗಳು ನಡೆದರೆ ಬೆಳ್ಳೆ ಗ್ರಾಪಂ ಅಭಿವೃದ್ಧಿ ಪಥದಲ್ಲಿ ಸಾಗುವುದರಲ್ಲಿ ಮತ್ತು ರಾಜ್ಯಕ್ಕೇ ಮಾದರಿಯಾಗುವುದರಲ್ಲೂ ಯಾವುದೇ ಸಂದೇಹವಿಲ್ಲ.

ಕೆ.ಕೆ.ಹೆಬ್ಬಾರ್ ಸ್ಮರಿಸಿದ್ದ udupibits.in

ಕೆ.ಕೆ.ಹೆಬ್ಬಾರ್ ಬಗ್ಗೆ ಮೊದಲಿಗೆ www.udupibits.in ಒಂದು ಲೇಖನವನ್ನು ಮೊದಲಿಗೆ ಪ್ರಕಟಿಸಿತ್ತು. ಈ ಲೇಖನ ಪ್ರಕಟವಾದ ಬಳಿಕ ಪತ್ರಕರ್ತರೂ, ಸಮಾಜಿಕ ಕಾರ್ಯಕರ್ತರೂ ಆದ ಅಶ್ವಿನ್ ಲಾರೆನ್ಸ್ ಮೂಡುಬೆಳ್ಳೆ ಹಾಗೂ ಶ್ರೀರಾಮ ದಿವಾಣ ಅವರು ಜಂಟಿಯಾಗಿ ಗ್ರಾಪಂಗೆ ಮನವಿ ಸಲ್ಲಿಸಿ ಕೆ.ಕೆ.ಹೆಬ್ಬಾರ್ ಸ್ಮಾರಕ ನಿರ್ಮಾಣಕ್ಕೆ ಒತ್ತಾಯಿಸಿದ್ದರು. ಗ್ರಾಪಂ ಸದಸ್ಯರಾದ ರಾಜೇಂದ್ರ ಶೆಟ್ಟಿ ಹಾಗೂ ಸುಧಾಕರ ಪೂಜಾರಿ ಅವರು ಕಳೆದೆರಡು ಗ್ರಾಪಂ ಸಾಮಾನ್ಯ ಸಭೆಗಳಲ್ಲಿಯೂ ಈ ಮನವಿಗೆ ಪೂರಕವಾಗಿ ಮತ್ತು ಕಾಳಜಿಯಿಂದ ಸ್ಪಂದಿಸಿ ಸ್ಮಾರಕದ ಪರವಾಗಿ ಧ್ವನಿ ಎತ್ತಿದ್ದರು.

ಕೆ.ಕೆ.ಹೆಬ್ಬಾರ್ ಸ್ಮಾರಕ ನಿರ್ಮಾಣದ ವಿಷಯದಲ್ಲಿ ಆಸಕ್ತಿ ಮತ್ತು ಗಂಭೀರವಾಗಿ ತೊಡಗಿಸಿಕೊಂಡಿರುವ ಬೆಳ್ಳೆ ಗ್ರಾಪಂನ ಅಧ್ಯಕ್ಷರಾದ ರಂಜಿನಿ ಹೆಗ್ಡೆ, ಸದಸ್ಯರಾದ ರಾಜೇಂದ್ರ ಶೆಟ್ಟಿ, ಸುಧಾಕರ ಪೂಜಾರಿ ಸಹಿತ ಫೆಬ್ರವರಿ 20ರಂದು ಉಪಸ್ಥಿತರಿದ್ದ ಎಲ್ಲಾ ಸದಸ್ಯರನ್ನೂ ಉಡುಪಿಬಿಟ್ಸ್ ಡಾಟ್ ಇನ್ ಹಾರ್ದಿಕವಾಗಿ ಅಭಿನಂದಿಸಿದೆ.

 

 

Leave a Reply

Your email address will not be published. Required fields are marked *