Realtime blog statisticsweb statistics
udupibits.in
Breaking News
# ನವೆಂಬರ್ 1 – 2: ಕಾರ್ಕಳ ತಾಲೂಕು ಕಾಂತಾವರದ ಕನ್ನಡ ಭವನದಲ್ಲಿ ಕಾಂತಾವರ ಉತ್ಸವ, ಪ್ರಶಸ್ತಿಗಳ ಪ್ರದಾನ, 12 ಕೃತಿಗಳ ಬಿಡುಗಡೆ, ತಾಳಮದ್ದಳೆ

ಫೆಬ್ರವರಿ 25: ಕಾಂತಾವರದಲ್ಲಿ ಪ್ರೊ. ಸಿದ್ದು ಯಾಪಲಪರವಿ ಉಪನ್ಯಾಸ

ಕಾಂತಾವರ (ಬೆಳುವಾಯಿ): ಅಲ್ಲಮ ಪ್ರಭು ಪೀಠ ಕಾಂತಾವರ ವತಿಯಿಂದ ಕಾಂತಾವರದ ಕೆ.ಬಿ.ಜಿನರಾಜ ಹೆಗ್ಡೆ ಸ್ಮಾರಕ ಕನ್ನಡ ಭವನದ ಅಲ್ಲಮ ಪ್ರಭು ವೇದಿಕೆಯಲ್ಲಿ ಫೆಬ್ರವರಿ 25 ಆದಿತ್ಯವಾರ ಮಧ್ಯಾಹ್ನ 3 ಗಂಟೆಗೆ ‘ಅನುಭವದ ನಡೆ ಅನುಭಾವದ ನುಡಿ’ಯ 74ನೇ ತಿಂಗಳ ಕಾರ್ಯಕ್ರಮ ನಡೆಯಲಿದೆ.

ಕಾರ್ಯಕ್ರಮದಲ್ಲಿ ಖ್ಯಾತ ಕವಿ, ಅನುವಾದಕ, ರಂಗನಟ ಕೊಪ್ಪಳದ ಪ್ರೊ.ಸಿದ್ದು ಯಾಪಲಪರವಿ ಅವರು ‘ಶರಣರು ಕಟ್ಟಬಯಸಿದ ಸಮಾಜ’ ಎಂಬ ವಿಷಯದಲ್ಲಿ ವಿಶೇಷ ಉಪನ್ಯಾಸ ನೀಡಲಿದ್ದಾರೆ.

ಕೊಪ್ಪಳ ಜಿಲ್ಲೆ ಕಾರಟಗಿಯಲ್ಲಿ 1965ರಲ್ಲಿ ಜನಿಸಿದ ಸಿದ್ದು ಯಾಪಲಪರವಿ ಅವರು, ಆಂಗ್ಲ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿಯನ್ನೂ, ‘ಮಾನವ ಸಂಪನ್ಮೂಲ ನಿರ್ವಹಣೆ’ಯಲ್ಲಿ ಎಂ.ಬಿ.ಎ. ಪದವಿಯನ್ನೂ ಪಡೆದುಕೊಂಡವರು. ಕೆ.ವಿ.ಎಸ್.ಆರ್.ಕಾಲೇಜಿನಲ್ಲಿ ಇಂಗ್ಲೀಷ್ ಉಪನ್ಯಾಸಕರಾಗಿರುವ ಪ್ರೊ.ಸಿದ್ದು ಯಾಪಲಪರವಿಯವರ ‘ನೆಲದ ಮರೆಯ ನಿಧಾನ’ ಎಂಬ ಕವನ ಸಂಕಲನ, ‘ಒಂದು ಬಿರುಗಾಳಿಯ ಕಥೆ’ ಎಂಬ ಅನುವಾದಿತ ಕಾದಂಬರಿ ಮತ್ತು ‘ಎತ್ತಣ ಮಾಮರ ಎತ್ತಣ ಕೋಗಿಲೆ’ ಎಂಬ ಪ್ರವಾಸ ಕಥನವನ್ನು ಪ್ರಕಟಿಸಿದ್ದಾರೆ.

ಧ್ಯಾನ ಮತ್ತು ಪ್ರಾಣಾಯಾಮಗಳೊಂದಿಗೆ ವ್ಯಕ್ತಿತ್ವ ರೂಪಿಸಿಕೊಳ್ಳಲು ಸಂಗೀತ ಹಾಗೂ ವಿಡಿಯೋ ಸಾಧನಗಳ ಬಳಕೆಯೊಂದಿಗೆ ಪ್ರಸ್ತುತಪಡಿಸುವ ವಿಶೇಷ ಉಪನ್ಯಾಸಕ್ಕೆ ಪ್ರಸಿದ್ಧರಾಗಿರುವ ಪ್ರೊ.ಸಿದ್ದು ಯಾಪಲಪರವಿ, ಎರಡು ಸಾವಿರಕ್ಕೂ ಅಧಿಕ ಉಪನ್ಯಾಸಗಳನ್ನು ನೀಡಿ, ತರಬೇತಿಗಳನ್ನು ನೀಡಿ, 200ಕ್ಕೂ ಹೆಚ್ಚು ಬೀದಿ ನಾಟಕಗಳಲ್ಲಿ ಪಾಲ್ಗೊಂಡು, ರಂಗನಟರಾಗಿ, ಸಾಕ್ಷ್ಯ ಚಿತ್ರಗಳು, ಕಲಾತ್ಮಕ ಸಿನಿಮಾಗಳು, ಧಾರವಾಹಿಗಳ ನಿರ್ಮಾಣದಲ್ಲಿ ದುಡಿದು ಖ್ಯಾತರಾದವವರು.

Leave a Reply

Your email address will not be published. Required fields are marked *