Realtime blog statisticsweb statistics
udupibits.in
Breaking News
ಉಡುಪಿ: ಜಿಲ್ಲಾ ಸರಕಾರಿ ಆಸ್ಪತ್ರೆಯ ಸಾರ್ವಜನಿಕ ಮಾಹಿತಿ ಅಧಿಕಾರಿಯಿಂದ ಮಾಹಿತಿ ಹಕ್ಕು ಕಾಯಿದೆ ಉಲ್ಲಂಘನೆ.

ಕಾಮಗಾರಿ ಹೆಸರಲ್ಲಿ ರಾಜ್ಯ ಹೆದ್ದಾರಿ ಅಗೆತ: ಗುತ್ತಿಗೆದಾರನಿಗೆ ದಂಡ ವಿಧಿಸಿ PWDಯಿಂದ ಐತಿಹಾಸಿಕ ಶಿಸ್ತುಕ್ರಮ

ಉಡುಪಿ: ರಾಜ್ಯ ಹೆದ್ದಾರಿಯನ್ನು ಕಾಮಗಾರಿ ಹೆಸರಿನಲ್ಲಿ ಅಡ್ಡಲಾಗಿ ಅಗೆದು ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಉಡುಪಿ ಲೋಕೋಪಯೋಗಿ ಇಲಾಖೆಯ ಮುಖ್ಯ ಕಾರ್ಯನಿರ್ವಾಹಕ ಇಂಜಿನಿಯರ್ ಡಿ.ವಿ.ಹೆಗಡೆ ಅವರು  ಗುತ್ತಿಗೆದಾರರಿಗೆ 12 ಸಾವಿರ ರು. ದಂಡ ವಿಧಿಸಿದ್ದಾರೆ.

ಉಡುಪಿ ಜಿಲ್ಲಾ ಪಂಚಾಯತ್ ಕುಡಿಯುವ ನೀರಿನ ಪೈಪ್ ಲೈನ್ ಕಾಮಗಾರಿಯ ಗುತ್ತಿಗೆದಾರರಾದ ಶಶಿಧರ ರಾವ್ ಎಂಬವರು ದಂಡ ಎಂಬ ಶಿಸ್ತು ಕ್ರಮದ ದಂಡನೆಗೆ ಗುರಿಯಾದವರಾಗಿದ್ದಾರೆ.

ಉಡುಪಿ- ಕಾರ್ಕಳ ರಾಜ್ಯ ಹೆದ್ದಾರಿಯ ಭಾಗವಾದ ದೆಂದೂರುಕಟ್ಟೆ-ಮೂಡುಬೆಳ್ಳೆ ನಡುವೆ ತೋಕೋಳಿ ಎಂಬಲ್ಲಿ ಎರಡು ಕಡೆ ನೀರಿನ ಪೈಪ್ ಲೈನ್ ಕಾಮಗಾರಿಗಾಗಿ ಹೆದ್ದಾರಿಯನ್ನು ಅಡ್ಡವಾಗಿ ಅಗೆದು ಹಾಕಲಾಗಿತ್ತು. ಕಾಮಗಾರಿ ನಡೆಸಲು ಗುತ್ತಿಗೆದಾರರಾದ ಶಶಿಧರ ರಾವ್ ಅವರು ಲೋಕೋಪಯೋಗಿ ಇಲಾಖೆಯಿಂದ ಯಾವುದೇ ರೀತಿಯ ಅನುಮತಿಯನ್ನೂ ಪಡೆದಿರಲಿಲ್ಲ.

ರಾಜ್ಯ ಹೆದ್ದಾರಿಯನ್ನು ಹಾಳುಗೆಡವಿದ್ದು, ಅನುಮತಿಯನ್ನು ಪಡೆದುಕೊಳ್ಳದೆ ಕಾಮಗಾರಿ ನಡೆಸಿದ್ದು ಮತ್ತು ಕಾಮಗಾರಿ ಮಾಡಿದ ಬಳಿಕವೂ ಹೆದ್ದಾರಿಯನ್ನು ಡಾಮರು ಹಾಕಿ ಸರಿಪಡಿಸದೆ ಇದ್ದುದು ಇತ್ಯಾದಿಗಳು ಲೋಕೋಪಯೋಗಿ ಇಲಾಖೆಯ ರಾಜ್ಯ ಹೆದ್ದಾರಿ ಕಾನೂನಿನಲ್ಲಿ ಕಾನೂನು ಬಾಹಿರವಾಗಿದ್ದು, ಈ ಹಿನ್ನೆಲೆಯಲ್ಲಿ ಉಡುಪಿ ಲೋಕೋಪಯೋಗಿ ಇಲಾಖೆಯು ಪೈಪ್ ಲೈನ್ ಗುತ್ತಿಗೆದಾರ ಶಶಿಧರ ರಾವ್ ಅವರಿಗೆ 12 ಸಾವಿರ ರು. ದಂಡ ವಿಧಿಸಿತು.

ಕಾಮಗಾರಿ ಹೆಸರಿನಲ್ಲಿ ರಸ್ತೆ ಹಾಳುಗೆಡವಿದ ಕಾರಣಕ್ಕೆ ಗುತ್ತಿಗೆದಾರರೊಬ್ಬರಿಗೆ ಲೋಕೋಪಯೋಗಿ ಇಲಾಖೆಯು ಹೆದ್ದಾರಿ ಹಾಳುಗೆಡವಿದ ಎರಡೇ ದಿನಗಳ ಅಂತರದಲ್ಲಿ ದಂಡ ವಿಧಿಸಿದ ಪ್ರಕರಣ ಉಡುಪಿ ಜಿಲ್ಲೆಯ ಇತಿಹಾಸದಲ್ಲಿಯೇ ಇದುವೇ ಮೊದಲಿನದು ಎನ್ನಲಾಗಿದೆ.

12 ಸಾವಿರ ರು. ದಂಡ ಪಾವತಿಸಲು ಗುತ್ತಿಗೆದಾರ ವಿಫಲವಾದಲ್ಲಿ ಅಥವಾ ಹಿಂದೇಟು ಹಾಕಿದಲ್ಲಿ ಗುತ್ತಿಗೆದಾರರಿಗೆ ಪಂಚಾಯತ್ ರಾಜ್ ಇಲಾಖೆಯಿಂದ ಬಿಡುಗಡೆಯಾಗುವ ಅನುದಾನದ ಕಾಮಗಾರಿಯ ಬಿಲ್ ಮೊತ್ತದಿಂದಲೇ ದಂಡದ ಮೊತ್ತವನ್ನು ನೇರವಾಗಿ ಕಡಿತಗೊಳಿಸುವ ಅಧಿಕಾರ ಕೂಡಾ ಲೋಕೋಪಯೋಗಿ ಇಲಾಖೆಗೆ ಇದೆ ಎನ್ನಲಾಗಿದೆ.

 

Leave a Reply

Your email address will not be published. Required fields are marked *