Realtime blog statisticsweb statistics
udupibits.in
Breaking News
ಉಡುಪಿ: ಅಂಚೆ ಕಚೇರಿಗಳಲ್ಲಿ ಇಂಡಿಯನ್ ಪೋಸ್ಟಲ್ ಆರ್ಡರ್ ಅಲಭ್ಯತೆ- ಸಮಸ್ಯೆ ಪರಿಹರಿಸಲು ಮಾಹಿತಿ ಹಕ್ಕು ಕಾರ್ಯಕರ್ತರಿಂದ ಪ್ರಧಾನಿಗೆ ಪತ್ರ

ಹಾಳುಗೆಡವಿದ ರಸ್ತೆಗೆ ತೇಪೆ ಹಾಕಿ ಕಣ್ಣೊರೆಸುವ ತಂತ್ರ: ದಂಡಕ್ಕೆ ಗುರಿಯಾದ ಗುತ್ತಿಗೆದಾರರ ವಿರುದ್ಧ ಮತ್ತೆ ದೂರು

ಉಡುಪಿ: ಉಡುಪಿ-ಕಾರ್ಕಳ ರಾಜ್ಯ ಹೆದ್ದಾರಿ-37ರ ದೆಂದೂರುಕಟ್ಟೆ-ಮೂಡುಬೆಳ್ಳೆ ನಡುವಿನ ತೋಕೋಳಿ ಎಂಬಲ್ಲಿ ಪೈಪ್ ಲೈನ್ ಕಾಮಗಾರಿಗಾಗಿ ರಸ್ತೆಯನ್ನು ಅಗೆದು ಹಾಳುಗೆಡವಿದ ಗುತ್ತಿಗೆದಾರ, ಇದೀಗ ಹಾಳುಗೆಡವಿದ ರಸ್ತೆಯ ಭಾಗವನ್ನು ಮುಚ್ಚಿ ಸರಿಸಪಡಿಸುವ ಕಾಮಗಾರಿ ನಡೆಸಿದ್ದು, ಈ ಕಾಮಗಾರಿ ಹರಕೆ ಸಂದಾಯ ಮಾಡುವ ಕೆಲಸವಾಗಿದೆ ಎಂದು ದೂರಲಾಗಿದೆ.

ಹಾಳುಗೆಡವಿದ ರಸ್ತೆಯನ್ನು ಮುಚ್ಚುವ ಕಾಮಗಾರಿಯನ್ನು ಕಳೆದ ಎರಡು ದಿನಗಳಿಂದ ನಡೆಸುತ್ತಿದ್ದು, ಇದೊಂದು ತೇಪೆ ಹಚ್ಚುವ ಕೆಲಸವಾಗಿದೆ. ಜಲ್ಲಿ ಇತ್ಯಾದಿ ಹಾಕಿ ಬೆಡ್ ಮಾಡುವ ಮೂಲಕ ಹಾಳು ಗೆಡವಿದ ರಸ್ತೆಯ ಭಾಗವನ್ನು ಮುಚ್ಚುತ್ತಿದ್ದರೆ ಪ್ರಯೋಜನವಾಗುತ್ತಿತ್ತು. ಆದರೆ, ಗುತ್ತಿಗೆದಾರರು ಕೇವಲ ಸಿಮೆಂಟ್ ಹಾಕಿ ಹರಕೆ ಸಂದಾಯ ಮಾಡುತ್ತಿದ್ದು, ಇದು ಹೆಚ್ಚು ದಿನ ಉಳಿಯದ ಕಾಮಗಾರಿಯಾಗಿ ಪರಿಣಮಿಸಲಿದೆ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮನೆಂಗಳಕ್ಕೆ ಹಾಕಿದ ಸಿಮೆಂಟ್ ಮೇಲೆ ಜೀಪೋ, ಲಾರಿಯೋ ಬಂದರೆ ಹಾಳಾಗಿಯ ಹೋಗುವಾಗ, ದಿನವೊಂದಕ್ಕೆ ನೂರಾರು ಲಾರಿ, ಬಸ್, ಜೀಪು ಇತ್ಯಾದಿ ವಾಹನಗಳ ಸಂಚಾರವಿರುವ ರಾಜ್ಯ ಹೆದ್ದಾರಿಯಲ್ಲಿ, ಸಿಮೆಂಟ್ ತೇಪೆ ಕಾಮಗಾರಿ ಎಷ್ಟು ದಿನ ಉಳಿಯಬಹುದು ಎಂದು ವಾಹನ ಸವಾರರೇ ಪ್ರಶ್ನಿಸತೊಡಗಿದ್ದಾರೆ.

ಕುಂತಳನಗರ-ನೆಲ್ಲಿಕಟ್ಟೆ ಮಧ್ಯೆ ತೋಕೋಳಿ ಎಂಬಲ್ಲಿ ಎರಡು ಕಡೆಗಳಲ್ಲಿ ಜಿಲ್ಲಾ ಪಂಚಾಯತ್ ನ ಕುಡಿಯುವ ನೀರಿನ ಪೈಪ್ ಲೈನ್ ಕಾಮಗಾರಿಗಳ ಗುತ್ತಿಗೆದಾರರಾದ ಶಶಿಧರ ರಾವ್ ಅವರು ಲೋಕೋಪಯೋಗಿ ಇಲಾಖೆಯಿಂದ ನಿಯಮಾನುಸಾರ ಅನುಮತಿ ಪಡೆಯದೆ ರಸ್ತೆಗಡ್ಡಲಾಗಿ ಪೈಲ್ ಲೈನ್ ಕಾಮಗಾರಿಗಾಗಿ ಅಗೆದು ಹಾಕುವ ಮೂಲಕ ಇಲಾಖೆಯ ಹಾಗೂ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದ್ದರು.

ಪರಿಣಾಮವಾಗಿ, ಲೋಕೋಪಯೋಗಿ ಇಲಾಖೆಯ ಮುಖ್ಯ ಕಾರ್ಯನಿರ್ವಾಹಕ ಇಂಜಿನಿಯರ್ ಆಗಿರುವ ಡಿ.ವಿ.ಹೆಗಡೆ ಅವರು ಗುತ್ತಿಗೆದಾರ ಶಶಿಧರ ರಾವ್ ಅವರಿಗೆ 12 ಸಾವಿರ ರು. ದಂಡ ವಿಧಿಸಿದ್ದರು. ದಂಡ ವಿಧಿಸಿದ ವಿಷಯವನ್ನು udupibits.in ವರದಿ ಮಾಡಿದ್ದು, ತರುವಾಯ ಗುತ್ತಿಗೆದಾರರು ಅಗೆದ ರಸ್ತೆಗೆ ತೇಪೆ ಹಾಕುವ ಕೆಲಸ ಆರಂಭಿಸಿದ್ದರು. ಗುತ್ತಿಗೆದಾರರ ಈ ಹರಕೆ ಸಂದಾಯದ ಕೆಲಸದ ವಿರುದ್ಧ ಇದೀಗ ಮತ್ತೆ ಇಲಾಖಾಧಿಕಾರಿಗಳಿಗೆ ದೂರು ನೀಡಲಾಗಿದೆ.

Leave a Reply

Your email address will not be published. Required fields are marked *