Realtime blog statisticsweb statistics
udupibits.in
Breaking News
# ಶೃಂಗೇರಿ ಜಗದ್ಗುರುಗಳ ನೇತೃತ್ವದ ಸನಾತನ ಧರ್ಮ ಸಂವರ್ಧಿನೀ ಸಭಾದ ನಿರ್ಣಯದಂತೆ ಅತ್ಯಾಚಾರ, ಅನೈತಿಕ ಸಂಬಂಧದ ಆರೋಪವಿರುವ ಮಠಾಧಿಪತಿಗಳನ್ನು ಸಭಾದಿಂದ ಕೈಬಿಡಲಾಗಿದೆ. ಆದುದರಿಂದ, ಅಂಥ ಮಠಾಧೀಶರನ್ನು ಯಾರೂ ಬೆಂಬಲಿಸಬಾರದು. – ಅಖಿಲ ಹವ್ಯಕ ಒಕ್ಕೂಟ.

ಮಣಿಪಾಲ ಟ್ಯಾಪ್ಮಿ ಬಳಿ ಅರಣ್ಯಕ್ಕೆ ಬೆಂಕಿ: ನೂರಾರು ಗಿಡ-ಮರ-ಪಕ್ಷಿ ಸಂಕುಲ ಬೆಂಕಿಗಾಹುತಿ !

ಉಡುಪಿ: ಮಣಿಪಾಲ – ಅಲೆವೂರು ರಸ್ತೆಯ ಟ್ಯಾಪ್ಮಿ ಸಂಸ್ಥೆಯ ಬಳಿ ರಸ್ತೆ ಬದಿಯ ಅರಣ್ಯ, ಫೆಬ್ರವರಿ 28ರಂದು ಸಂಜೆ ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿದೆ.

ಬುಧವಾರ ಮಧ್ಯಾಹ್ನ ಟ್ಯಾಪ್ಮಿ ಪರಿಸರದ ಅರಣ್ಯದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಇದು ಅಕಸ್ಮಿಕವೋ, ದುಷ್ಕೃತ್ಯವೋ, ಅಲ್ಲಾ ಯಾವುದಾದರೂ ಕಟ್ಟಡ ಕಟ್ಟುವ ಉದ್ಧೇಶದಿಂದ ಉದ್ಧೇಶಪೂರ್ವಕವಾಗಿಯೇ ಅಧಿಕೃತರು ಬೆಂಕಿ ಕೊಟ್ಟು ಅರಣ್ಯವನ್ನು ನಾಶಪಡಿಸಿದರೋ ಎಂಬುದು ಸ್ಪಷ್ಟವಾಗಿಲ್ಲ.

ಆದರೆ, ಬೆಂಕಿಯಿಂದಾಗಿ ಟ್ಯಾಪ್ಮಿ ರಸ್ತೆಯ ತಾಂಗೊಡೆ ಅಡ್ಡ ರಸ್ತೆಯಲ್ಲಿರುವ ಅರಣ್ಯದಲ್ಲಿ ಬೆಳೆದು ನಿಂತಿದ್ದ ನೂರಾರು ಗಿಡ ಮರಗಳು ಬೆಂಕಿಗೆ ಆಹುತಿಯಾಗಿವೆ. ಮಾತ್ರವಲ್ಲ, ಸಾವಿರಾರು ಪಕ್ಷಿಗಳು, ಕ್ರಿಮಿ ಕೀಟಗಳು ನಾಶವಾಗಿವೆ.

Leave a Reply

Your email address will not be published. Required fields are marked *