Realtime blog statisticsweb statistics
udupibits.in
Breaking News
ಉಡುಪಿ: ಅಂಚೆ ಕಚೇರಿಗಳಲ್ಲಿ ಇಂಡಿಯನ್ ಪೋಸ್ಟಲ್ ಆರ್ಡರ್ ಅಲಭ್ಯತೆ- ಸಮಸ್ಯೆ ಪರಿಹರಿಸಲು ಮಾಹಿತಿ ಹಕ್ಕು ಕಾರ್ಯಕರ್ತರಿಂದ ಪ್ರಧಾನಿಗೆ ಪತ್ರ

ಅಜ್ಜರಕಾಡು ಪಾರ್ಕ್: ಖಾಸಗಿ ಗೊಬ್ಬರ ತಯಾರಿಗೆ ನೀರು, ಗಿಡಗಳಿಗೆ ಮರಣ ದಂಡನೆ ಶಿಕ್ಷೆ- ಬುದ್ಧಿಗೇಡಿ ಉಡುಪಿ ನಗರಸಭೆ !

ಉಡುಪಿ: ನೀರಿದ್ದರೂ ಗಿಡಗಳಿಗೆ ನೀರು ಹಾಯಿಸದೆ ಸಾಯಿಸುವ ಮೂಲಕ ಮತ್ತು ನೆಟ್ಟ ಗಿಡಗಳನ್ನು ಮತ್ತೆ ಅದೇನೋ ಕಾಮಗಾರಿಯ ಹೆಸರಲ್ಲಿ ಕಿತ್ತೆಸೆಯುವ ಮೂಲಕ ಉಡುಪಿ ನಗರಸಭೆಯ ಪರಿಸರ ವಿರೋಧಿ ಹೊಣೆಗೇಡಿ ಕಾಂಗ್ರೆಸ್ ಆಡಳಿತ ನಾಗರಿಕರ ಶಾಪಕ್ಕೆ ಗುರಿಯಾಗಿದೆ.

ಉಡುಪಿ ನಗರದ ಅಜ್ಜರಕಾಡು ಭುಜಂಗ ಪಾರ್ಕ್ ನಲ್ಲಿದ್ದ ಅನೇಕ ಗಿಡಗಳು ನೀರಿಲ್ಲದೆ ಈಗಾಗಲೇ ಸತ್ತಿದೆ ಮತ್ತು ಹಲವು ಗಿಡಗಳು ಸಾಯುವ ಹಂತದಲ್ಲಿದೆ. ಇದೇ ಪಾರ್ಕ್ ನಲ್ಲಿ ಖಾಸಗಿಯವರ ಗೊಬ್ಬರ ತಯಾರಿಗೆ ನಗರಸಭೆ ಬೇಕಾದಷ್ಟು ನೀರು ನೀಡುತ್ತಿದೆಯಾದರೂ, ಗಿಡಗಳಿಗೆ ನೀರು ಹಾಯಿಸಲು ಬೇಕಾದ ವ್ಯವಸ್ಥೆ ಕಲ್ಪಿಸುವ ಯೋಗ್ಯತೆ ಮಾತ್ರ ಆಡಳಿತಕ್ಕೆ ಇಲ್ಲದಿರುವುದರ ವಿರುದ್ಧ ಮಹಿಳೆಯರು ಹಾಗೂ ನಾಗರಿಕರು ಆಖ್ರೋಶ ವ್ಯಕ್ತಪಡಿಸಿದ್ದಾರೆ.

ಈ ನಡುವೆ, ಪಾರ್ಕ್ ನ್ನು ಸುಂದರವಾಗಿ ಕಾಣುವಂತೆ ಮಾಡುವ ಯೋಜನೆಯ ಹೆಸರಿನಲ್ಲಿ, ಕಾಮಗಾರಿಯ ನೆಪದಲ್ಲಿ ಬಹಳಷ್ಟು ಗಿಡಗಳನ್ನು ಸ್ವಲ್ಪವೂ ಯೋಚಿಸದೆ ಕಿತ್ತೆಸೆಯುವ ಮೂಲಕ ನಗರಸಭೆ ಆಡಳಿತ ಬುದ್ಧಿಗೇಡಿಯಾಗಿ ವರ್ತಿಸಿದೆ.

ವನಮಹೋತ್ಸವದ ಸಂದರ್ಭದಲ್ಲಿ ಗಿಡಗಳನ್ನು ನೆಟ್ಟು ಫೋಟೋಗಳಿಗೆ ಪೋಸು ಕೊಟ್ಟವರು ಈಗ ಜಾಣ ಮೌನ ವಹಿಸಿದ್ದಾರೆ. ಗಿಡ ನೆಡಲು ಅಷ್ಟು ವೆಚ್ಚ ತಗಲಿತು, ಇಷ್ಟು ವೆಚ್ಚ ತಗಲಿತು ಎಂದು ಲೆಕ್ಕ ತೋರಿಸುವ ಆಡಳಿತ ವ್ಯವಸ್ಥೆಯ ಪ್ರಮುಖರು, ಈಗ ಕಿತ್ತೆಸೆದ ಗಿಡಗಳ ಅಂಕಿ ಅಂಶ ತೋರಿಸಲು, ಬಹಿರಂಗಪಡಿಸಲು ಮುಂದಾಗದಿರುವ ಬಗ್ಗೆ ನಾಗರಿಕರು ನಗರಸಭೆಯನ್ನು ಸಾರ್ವಜನಿಕವಾಗಿಯೇ ಪ್ರಶ್ನಿಸುತ್ತಿದ್ದಾರೆ.

 

Leave a Reply

Your email address will not be published. Required fields are marked *