Realtime blog statisticsweb statistics
udupibits.in
Breaking News
# ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕಮಲಾದೇವಿ ಚಟ್ಟೋಪಾಧ್ಯಾಯ ಹೆಸರಿಡಲು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ನಿವೃತ್ತ ಪತ್ರಕರ್ತ ಅಮ್ಮೆಂಬಳ ಆನಂದರಿಂದ ಸಿಎಂ ಕುಮಾರಸ್ವಾಮೀಗೆ ಮನವಿ.

ಕವನ: ‘ಲೆನಿನ್’, ಕವಿ: ಕುವೆಂಪು

 

ಧಮನಿಯಲಿ ಬಿಸಿನೆತ್ತರುಕ್ಕದೆ ನೆನೆಯಲಾರೆ
ನಿನ್ನಂ , ಲೆನಿನ್ ! ನಿನ್ನ ಹೆಸರದು ಸಿಡಿಲ್ ಸದ್ದು
ದೊರೆಗಿವಿಗೆ ; ನಿನ್ನ ಸ್ವಾರ್ಥನೆಯನುರಿದೋರೆ
ದಹಿಸಿ , ನಿಃಸ್ವಾರ್ಥತೆಯ ಬೆಂಕಿಯಿಂ ಹೃತ್ಕುಂಡ
ಸರ್ವದಾ ಪ್ರಜ್ವಲಿಸುವಂತೆಸಗೆ. ಜಮದಗ್ನಿ 
ಸುತನಂತೆ ನೀನು ಪಾರ್ಥಿವ ಕುಲಕೆ ಬಡಬಾಗ್ನಿ :
ದುಡಿವ ದೀನರ ದೈವವನ್ಯರ್ಗೆ ಯಮದಂಡ !
ಗೆಯ್ಯುವರ್ಗೇನಿಲ್ಲ , ಕುಳಿತುಂಬರಿಗೆ ಬೆಲ್ಲ ;
ಮುಳ್ಳುನೋವಾಳಿಂಗೆ , ಕಂಪು ಹೂವೊಡೆಯಂಗೆ ;
ಗೋಳವಗೆ , ಸೊಂಪಿವಗೆ . ಈ ತರತಮವನೆಲ್ಲ
ಮುರಿಯೆ ಬಹನಲ್ಲಲ್ಲಿ ಕಲ್ಕಿ . ರಕ್ತದ ಗಂಗೆ
ಸಿರಿ ನಾಳದಿಂ ಮರಳಿ ಬಡತನದೊಣಗು ಮೈಗೆ
ಹರಿದಕ್ಕೆ ದೊರೆಗೊಳಸಿ ಕೂಲಿರೈತರ ಕೈಗೆ !

– ಕುವೆಂಪು

# ತ್ರಿಪುರಾ ರಾಜ್ಯದ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಬಹುಮತ ಪಡೆದುಕೊಂಡು ಅಧಿಕಾರಕ್ಕೆ ಬಂದ ಬೆನ್ನಿಗೆ ಲೆನಿನ್ ಪ್ರತಿಮೆಯನ್ನು ಪಕ್ಷದ ಕಾರ್ಯಕರ್ತರು ಜೆಸಿಬಿ ಸಹಾಯದಿಂದ ನೆಲಸಮಗೊಳಿಸಿದರು. ನಾಡಿನ ಶ್ರೇಷ್ಠ ವಿಶ್ವ ಮಾನವ ಚಿಂತಕ, ಕವಿ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಕುವೆಂಪು ಅವರು ಲೆನಿನ್ ಬಗ್ಗೆ ಬರೆದ ಕವನವನ್ನು ಇಲ್ಲಿ ಈ ಸಂದರ್ಭದಲ್ಲಿ ಕೊಡಲಾಗಿದೆ. – ಶ್ರೀರಾಮ ದಿವಾಣ, ಸಂಪಾದಕ, udupibits.in

Leave a Reply

Your email address will not be published. Required fields are marked *