Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಸತ್ಯಕ್ಕೆ ಮೌನ, ಸುಳ್ಳಿಗೆ ಭಾಷಣ !, ಬಂಚ್ ಆಫ್ ಥಾಟ್ಸ್ ನಮ್ಮ ಸಂವಿಧಾನ, ಬ್ರಾಹ್ಮಣ್ಯವೇ ನಮ್ಮ ಸಂಸ್ಕೃತಿ , ಭಗವಾಧ್ವಜವೇ ನಮ್ಮ ಧ್ವಜ !

ಉಪ್ಪಿನಕಾಯಿ-46: ಶ್ರೀರಾಮ ದಿವಾಣ

 

 • ಪ್ರಖ್ಯಾತ ಚಿತ್ರನಟ ಕಮಲಹಾಸನ್‌ ಅವರ ಹೊಸ ರಾಜಕೀಯ ಪಕ್ಷ ಉದ್ಘಾಟನೆಯಾಗಿದೆ. ಪಕ್ಷದ ಹೆಸರುಮಕ್ಕಳ್ನೀದಿ ಮೈಯಂ. ‘ನಿಮ್ಮ ಮುಂದೆ ಭಾಷಣ ಮಾಡುವುದಕ್ಕಿಂತಲೂ ನಿಮ್ಮಿಂದ ಸಲಹೆ ಪಡೆಯುತ್ತೇನೆ ಎಂದು ಕಮಲ್‌ ಹೇಳಿದರು. – ಪತ್ರಿಕಾ ವರದಿ.

# ಮೋದಿ ಮಾದರಿಯಾಗದ ಕಾರಣ ಬಚಾವ್ !

 

 • ಮುಂದಿನ ಬಾರಿ ವಿದೇಶ ಪ್ರವಾಸ ಕೈಗೊಂಡು ಮರಳಿ ಬರುವಾಗ ನೀರವ್ ಮೋದಿಯನ್ನು ಕರೆತನ್ನಿ. – ಪ್ರಧಾನಿ ನರೇಂದ್ರ ಮೋದಿಗೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸಲಹೆ.

# ಬೇನಾಮಿಗಳಿಗೆ ಲಾಭಮಾಡಿಕೊಡುವುದಷ್ಟೇ ವಿಕಾಸ ಪುರುಷನ ವಿದೇಶ ಪ್ರಯಾಣದ ಉದ್ಧೇಶ !

 

 • ಇತರರನ್ನು ದೂರುವುದೇ ಬಿಜೆಪಿಯವರ ಪ್ರಮುಖ ಮಂತ್ರ. – ಮುಖ್ಯಮಂತ್ರಿ ಸಿದ್ದರಾಮಯ್ಯ.

# ತಂತ್ರವೂ ಹೌದು.

 

 • ನೀರವ್‌ ಮೋದಿ ಹಗರಣಕ್ಕೆ ಸಂಬಂಧಿಸಿ ಹಣಕಾಸು ಸಚಿವ ಅರುಣ್ ಜೇಟ್ಲಿ ಬ್ಯಾಂಕರ್‌ಗಳು ಮತ್ತು ಲೆಕ್ಕಪರಿಶೋಧಕರನ್ನು ದೂರುತ್ತಿದ್ದಾರೆ. ಬಿಎಸ್‌ವೈ ಅವರು ನನ್ನ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡುತ್ತಿದ್ದಾರೆ. ಪ್ರಧಾನಿ ಮಾತ್ರ ಮೌನವಾಗಿದ್ದಾರೆ. ಬಹುಶಃ ಅವರು ಬ್ಯಾಂಕ್‌ಗಳ ರಾಷ್ಟ್ರೀಕರಣ ಮಾಡಿದ್ದಕ್ಕಾಗಿ ಮಾಜಿ ಪ್ರಧಾನಿ ದಿವಂಗತ ಇಂದಿರಾ ಗಾಂಧಿಯವರನ್ನು ಟೀಕಿಸುವ ಬಗ್ಗೆ ಯೋಚಿಸುತ್ತಿರಬಹುದು. – ಮುಖ್ಯಮಂತ್ರಿ ಸಿದ್ಧರಾಮಯ್ಯ.

# ಸತ್ಯಕ್ಕೆ ಮೌನ, ಸುಳ್ಳಿಗೆ ಭಾಷಣ !

 

 • ವಿಶ್ವವಿದ್ಯಾಲಯ ಸುಧಾರಣೆ ಹೆಸರಿನಲ್ಲಿ ಹೊಸ ವಿಧೇಯಕ (ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ವಿಧೇಯಕ-2017) ತಂದಿರುವ ಸರಕಾರ, ರಾಜಕಾರಣಿಗಳಿಗೂ ಗೌರವ ಡಾಕ್ಟರೇಟ್ ಪ್ರದಾನ ಮಾಡಲು ಅವಕಾಶ ಕಲ್ಪಿಸಿಕೊಂಡಿದೆ. – ಪತ್ರಿಕಾ ವರದಿ.

# ಹೀಗಾದರೂ ರಾಜಕಾರಣಿಗಳಿಗೆ ಗೌರವ ದಕ್ಕಿಸಿಕೊಳ್ಳುವ ಪ್ರಯತ್ನ !

 

 • ಕಾಶ್ಮೀರದಿಂದ ಕನ್ಯಾಕುಮಾರಿ ತನಕ ಒಂದು ಸಂವಿಧಾನ, ಒಂದು ಸಂಸ್ಕೃತಿ, ಒಂದು ಧ್ವಜದ ರಾಷ್ಟ್ರೀಯ ಹಿತಾಸಕ್ತಿಗೆ ಬಿಜೆಪಿ ಬದ್ಧವಾಗಿದೆ. – ಮುರಳಿಧರ ರಾವ್ (ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ)

# ಬಂಚ್ ಆಫ್ ಥಾಟ್ಸ್ ನಮ್ಮ ಸಂವಿಧಾನ, ಬ್ರಾಹ್ಮಣ್ಯವೇ ನಮ್ಮ ಸಂಸ್ಕೃತಿ , ಭಗವಾಧ್ವಜವೇ ನಮ್ಮ ಧ್ವಜ !

 

 • ಮಂಗಳೂರು ಮಹಾನಗರಪಾಲಿಕೆ ಮೇಯರ್ ಸ್ಥಾನ ಮುಸ್ಲೀಮರಿಗೆ ನೀಡಬೇಕು. ಉಪ ಮೇಯರ್ ಸ್ಥಾನ ಕೊಟ್ಟು ಸಮಾಧಾನ ಪಡಿಸುವುದು ಬೇಡ. ನಮ್ಮ ಬೇಡಿಕೆಗೆ ಪಕ್ಷದ ಹಿರಿಯ ನಾಯಕರು ಸ್ಪಂದಿಸದಿದ್ದರೆ ಸಾಮೂಹಿಕ ರಾಜೀನಾಮೆ ನೀಡೋಣ ಎಂದು ಕಾಂಗ್ರೆಸ್ ಪಕ್ಷದ ಮುಸ್ಲೀಮ್ ಮುಖಂಡರು ಹಾಗೂ ಕಾರ್ಯಕರ್ತರ ಸಭೆಯಲ್ಲಿ ಆಗ್ರಹ ವ್ಯಕ್ತವಾಗಿದೆ. – ಪತ್ರಿಕಾ ವರದಿ.

# ಜಾತ್ಯಾತೀತ ಪಕ್ಷದಲ್ಲಿ ಜಾತಿವಾದ !

 

 • ಕಾಪು ವಿಧಾನಸಭಾ ಕ್ಷೇತ್ರದ ಶಾಸಕರಾದ ವಿನಯಕುಮಾರ ಸೊರಕೆ ಅವರು ತನ್ನ ಆತ್ಮೀಯ ಗುತ್ತಿಗೆದಾರ ವಾಸುದೇವ ಶೆಟ್ಟಿಯವರ ಬಿಲ್ ಪಾಸ್ ಮಾಡಿಸುವ ಸಲುವಾಗಿ, ಯಾವುದೇ ಮುಂಜಾಗ್ರತೆ ವಹಿಸದೆ ಕಾಮಗಾರಿ ನಡೆಸುತ್ತಿರುವ ಪರಿಣಾಮವಾಗಿ ಇಬ್ಬರು ಕೂಲಿ ಕಾರ್ಮಿಕರು ಮೃತಪಟ್ಟಿದ್ದಾರೆ. – ಬಿಜೆಪಿ ಗಂಭೀರ ಆರೋಪ.

# ಗುತ್ತಿಗೆದಾರರೇ ತಾನೇ ಶಾಸಕರ ಸ್ವಂತಕ್ಕೆ ಲಾಭ ಮಾಡಿಕೊಡುವವರು, ಚುನಾವಣೆಯ ಸಮಯದಲ್ಲಿ ಅನಧಿಕೃತ ಖರ್ಚು ವೆಚ್ಚ ನೋಡಿಕೊಳ್ಳುವವರು ! ?

 

 • ರಾಜ್ಯ ರೈತ ಸಂಘಕ್ಕೆ ಶಕ್ತಿಯಾಗಿದ್ದ ಕೆ.ಎಸ್.ಪುಟ್ಟಣ್ಣಯ್ಯನವರ ನಿಧನದ ಬಳಿಕ ಆ ಸ್ಥಾನಕ್ಕೆ ಅವರ ಪತ್ನಿ ಅಥವಾ ಪುತ್ರನನ್ನು ಕರೆತರುವ ಪ್ರಯತ್ನಗಳು ನಡೆಯುತ್ತಿವೆ. – ಪತ್ರಿಕಾ ವರದಿ.

# ರಾಜ ಪ್ರಭುತ್ವದ ಮನಸ್ಥಿತಿ !

 

 • ಕಾಂಗ್ರೆಸ್ ವಿರುದ್ಧ ಬಿಜೆಪಿ ನಾಯಕರಿಂದ, ಬಿಜೆಪಿ ವಿರುದ್ಧ ಕಾಂಗ್ರೆಸ್ ನಾಯಕರಿಂದ ಹಗರಣಗಳ ದಾಖಲೆಗಳ ಬಿಡುಗಡೆ. – ಪತ್ರಿಕಾ ವರದಿ.

#  ದಾಖಲೆಗಳ ಬಿಡುಗಡೆ, ಆರೋಪ-ಪ್ರತ್ಯಾರೋಪ ಸಾಕು; ಲೋಕಾಯುಕ್ತ, ಎಸಿಬಿ, ನ್ಯಾಯಾಲಯದ ಮೆಟ್ಟಿಲು ಹತ್ತಿ ನೋಡೋಣ.

 

 • ಕಾದಿಹರು ಜನರು ಲೋಕಪಾಲರಿಗಾಗಿ: ನೇಮಕಾತಿ ಕಗ್ಗಂಟು. – ಉದಯವಾಣಿ ಪತ್ರಿಕಾ ಸಂಪಾದಕೀಯ.

# ಕಗ್ಗಂಟು ಏನೂ ಇಲ್ಲ, ಬಿಜೆಪಿ ಸರಕಾರದ ಪಲಾಯನವಾದ ಅಷ್ಟೆ !

 

 • ಸುಪ್ರೀಂ ಕೋರ್ಟಿಗೆ ಹಾಗೂ ಹಿಮಾಚಲ ಪ್ರದೇಶ ಹೈಕೋರ್ಟಿಗೆ ನ್ಯಾಯಾಧೀಶರನ್ನು ನೇಮಿಸುವಂತೆ ಕೋರಿ ಸುಪ್ರೀಂ ಕೋರ್ಟ್ ಕೊಲೀಜಿಯಂ ಸಲ್ಲಿಸಿದ್ದ ಇಬ್ಬರು ನ್ಯಾಯಮೂರ್ತಿಗಳ ಹೆಸರುಗಳ ಶಿಫಾರಸಿಗೆ ಕೇಂದ್ರ ಸರಕಾರ ತಡೆ ನೀಡಿದೆ. – ಪತ್ರಿಕಾ ವರದಿ.

# ಪ್ರಧಾನಿ ಮೋದಿಗೆ ಒಪ್ಪಿಗೆಯಾಗಬೇಕಲ್ವೆ ?

Leave a Reply

Your email address will not be published. Required fields are marked *