Realtime blog statisticsweb statistics
udupibits.in
Breaking News
ಮಂಗಳೂರು: ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣರಿಂದ ಹೇಳಿಕೆ- ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಆರೋಪ

ಮಾರ್ಚ್ 11: ಕಾಂತಾವರದಲ್ಲಿ ‘ದ್ರೌಪತಿ-ಕುಂತಿ’ ಕುರಿತು ಉಪನ್ಯಾಸ

ಕಾಂತಾವರ (ಬೆಳುವಾಯಿ): ಕನ್ನಡ ಸಂಘ ಕಾಂತಾವರ (ರಿ) ಇದರ 123ನೇ ‘ನುಡಿನಮನ’  ‘ಕುಮಾರವ್ಯಾಸನ ಕಾವ್ಯ ರಸಗ್ರಹಣ’ ಕಾರ್ಯಕ್ರಮವು ಮಾರ್ಚ್ 11 ಆದಿತ್ಯವಾರ ಮಧ್ಯಾಹ್ನ 3 ಗಂಟೆಗೆ ಕಾಂತಾವರ ಕನ್ನಡ ಭವನದಲ್ಲಿ ನಡೆಯಲಿದೆ.

‘ನುಡಿನಮನ-123 ‘ದ್ರೌಪತಿ ಮತ್ತು ಕುಂತಿ’ ಎಂಬ ವಿಷಯದಲ್ಲಿ ನಡೆಯಲಿದೆ. ಡಾ.ಟಿ.ಸಿ.ಪೂರ್ಣಿಮಾ ಅವರು ಉಪನ್ಯಾಸ ನೀಡಲಿದ್ದಾರೆ. ಉಮೇಶ್ ಗೌತಮ್ ನಾಯಕ್ ಅವರು ಕಾವ್ಯವಾಚನ ಮಾಡಲಿದ್ದಾರೆ.

ಡಾ.ಟಿ.ಸಿ.ಪೂರ್ಣಿಮಾ

ಭಾರತ ಸರಕಾರದ ಭಾರತೀಯ ವಾರ್ತಾ ಸೇವೆ (ಐಐಎಸ್)ಗೆ ಕರ್ನಾಟಕದಿಂದ ಆಯ್ಕೆಯಾದ ಮೊದಲ ಮಹಿಳಾ ಅಧಿಕಾರಿಯಾಗಿರುವ ಡಾ.ಟಿ.ಸಿ.ಪೂರ್ಣಿಮಾ ಅವರು, ರಾಜ್ಯದ ಮೂವರು ಮುಖ್ಯಮಂತ್ರಿಗಳಿಗೆ ಮಾಧ್ಯಮ ವಿಶೇಷಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ ರಾಜ್ಯದ ಮೊದಲ ಮಹಿಳಾ ಅಧಿಕಾರಿಯೂ ಆಗಿದ್ದಾರೆ. ಸಂವಹನ ಮಾಧ್ಯಮದಲ್ಲಿ ಸಂಶೋಧನೆ ಕೈಗೊಂಡು ಪಿಎಚ್.ಡಿ. ಪದವಿ ಪಡೆದಿರುವ ಡಾ.ಪೂರ್ಣಿಮಾ ಅವರು, ‘ಅತ್ಯುತ್ತಮ ಸುದ್ಧಿ ಸಂಪಾದಕರು’’ ಎಂಬ ರಾಷ್ಟ್ರಮಟ್ಟದ ಪ್ರಶಸ್ತಿಗೂ ಭಾಜನರಾದ ರಾಜ್ಯದ ಮೊದಲ ವಾರ್ತಾ ಅಧಿಕಾರಿಯಾಗಿದ್ದಾರೆ.

ಮೂರು ಕವನ ಸಂಕಲನ, ಏಳು ಅನುವಾದಿತ ಕೃತಿಗಳು, ಒಂದು ಲೇಖನ ಸಂಕಲನ, ಎರಡು ಮಕ್ಕಳ ಸಾಹಿತ್ಯ, ಐದು ಜೀವನ ಚರಿತ್ರೆ, ಐದು ಸಂಶೋಧನಾ ಗ್ರಂಥಗಳನ್ನು ರಚಿಸಿ ಪ್ರಕಟಿಸಿದ್ದಾರೆ. ಇವರ ‘ಗಾಂಧಿ… ಗಾಂಧಿ… ಗಾಂಧಿ’ ಎಂಬ ರೂಪಕ ಕೃತಿಯು ರಾಷ್ಟ್ರ ಪ್ರಶಸ್ತಿಗೆ ಪಾತ್ರವಾಗಿದೆ. ಪ್ರಸ್ತುತ, ಮೈಸೂರಿನ ಕ್ಷೇತ್ರ ಪ್ರಚಾರ ನಿರ್ದೇಶನಾಲಯದ ಸಹಾಯಕ ನಿರ್ದೇಶಕರಾಗಿ ಮತ್ತು ಘಟಕ ಮುಖ್ಯಸ್ಥರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಗೌತಮ್ ಉಮೇಶ್ ನಾಯಕ್

ನಿವೃತ್ತ ಶಿಕ್ಷಕರಾಗಿರುವ ಗೌತಮ್ ಉಮೇಶ್ ನಾಯಕ್ ಅವರು ಕನ್ನಡ, ಕೊಂಕಣಿ ಮತ್ತು ಹಿಂದಿ ಭಾಷೆಗಳಲ್ಲಿ ಅಷ್ಠಾವಧಾನ ಮಾಡಬಲ್ಲದ ಸಾಧಕರು. ಗದುಗಿನ ಕುಮಾರವ್ಯಾಸ ಪ್ರತಿಷ್ಠಾನ ಕೊಡಮಾಡುವ ‘ಕುಮಾರವ್ಯಾಸ ಗೌರವ ಪ್ರಶಸ್ತಿ’ ಪುರಸ್ಕೃತರಾಗಿರುವ ನಾಯಕ್ ಅವರು, ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಸಾಹಿತ್ಯ, ಸಾಮಾಜಿಕ, ಸಾಂಸ್ಕೃತಿಕ ಮತ್ತು ಜನಪದ ಕ್ಷೇತ್ರಕ್ಕೆ ಸಂಬಂಧಿಸಿದಂತೆ ವಿವಿಧ ಪ್ರಕಾರಗಳ ರಚಿನೆಯಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡವರು.

 

Leave a Reply

Your email address will not be published. Required fields are marked *