Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಮಾರ್ಚ್ 14-18: ಕಾಂತಾವರದಲ್ಲಿ ಸಾಂಸ್ಕೃತಿಕ ಉತ್ಸವ

ಕಾಂತಾವರ (ಬೆಳುವಾಯಿ): ಅಲ್ಲಮಪ್ರಭು ಪೀಠ ಕಾಂತಾವರ (ರಿ) ಇದರ ವತಿಯಿಂದ ಮಾರ್ಚ್ 14ರಿಂದ 18ರ ವರೆಗೆ ಕಾಂತಾವರದ ‘ಚೌಟರ ಚೌಕಿ’ ಬಯಲು ರಂಗ ಮಂಟಪದಲ್ಲಿ ‘ಸಾಂಸ್ಕೃತಿಕ ಉತ್ಸವ-2018’ ನಡೆಯಲಿದೆ.

ಮಾರ್ಚ್ 14 ಬುಧವಾರ ಸಂಜೆ ಗಂಟೆ 6.30ಕ್ಕೆ ಕಿಶೋರ್ ಆಳ್ವ ಉತ್ಸವವನ್ನು ಉದ್ಘಾಟಿಸಲಿದ್ದಾರೆ. ಧಾರವಾಡದ ಹಿರಿಯ ರಾಜಕೀಯ ಮುತ್ಸದ್ದಿ, ಸಂಸ್ಕೃತಿ ಚಿಂತಕರಾದ ಚಂದ್ರಕಾಂತ ಬೆಲ್ಲದ್ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಹಿರಿಯ ಸಾಹಿತಿ, ಶಿಕ್ಷಣ ತಜ್ಞರಾದ ಪ್ರೊ.ಕೆ.ಇ.ರಾಧಾಕೃಷ್ಣ ಹಾಗೂ ಉಡುಪಿ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಡಾ.ಬಿ.ದೇವದಾಸ ಪೈ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಸಭಾ ಕಾರ್ಯಕ್ರಮದ ಬಳಿಕ, ಉಡುಪಿಯ ‘ಯಕ್ಷಸಂಗೀತ ನಾದವೈಭವಂ’ ಅರ್ಪಿಸುವ ನಾರಾಯಣ ಶಬರಾಯ ನಿರ್ದೇಶನದ ಪ್ರೊ.ಕೆ.ಇ.ರಾಧಾಕೃಷ್ಣ ಕೃತಿ ಆಧಾರಿತ ‘ಗೋಪಿಕೋನ್ಮಾದ’ ಎಂಬ ಯಕ್ಷಗಾನ ರೂಪಕ ಪ್ರದರ್ಶನಗೊಳ್ಳಲಿದೆ.

ಮಾರ್ಚ್ 15ರಂದು ಸಂಜೆ 7 ಗಂಟೆಗೆ ಉಡುಪಿಯ ‘ಸಮೂಹ’ ಲಾಂಛನದಡಿಯಲ್ಲಿ ಪ್ರಸಿದ್ಧ ರಂಗಕರ್ಮಿ ಪ್ರೊ.ಉದ್ಯಾವರ ಮಾಧವ ಆಚಾರ್ಯ ನಿರ್ದೇಶನ ಮತ್ತು ರಂಗಕೃತಿ ಆಧಾರಿತ ‘ಉರ್ವಶಿ’ ಎಂಬ ‘ವಿಲಾಸ-ವಿಲಾಪ-ನೃತ್ಯಾಲಾಪ’ ಪ್ರದರ್ಶನಗೊಳ್ಳಲಿದೆ. ಶ್ರೀಮತಿ ಭ್ರಮರಿ ಶಿವಪ್ರಕಾಶ್ ನೃತ್ಯಾಲಾಪ ಪ್ರಸ್ತುತಪಡಿಸಲಿದ್ದಾರೆ. ಹಿರಿಯ ಸಾಹಿತಿ, ಸಂಘಟಕರಾದ ಶಿವಮೊಗ್ಗದ ಜಯದೇವಪ್ಪ ಜೈನಕೇರಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.

ಮಾರ್ಚ್ 16ರಂದು ಸಂಜೆ 7 ಗಂಟೆಗೆ ಶಿವಮೊಗ್ಗದ ಕಿನ್ನರ ಮೇಳ ತುಮರಿ ಅರ್ಪಿಸುವ ಕೆ.ಜಿ.ಕೃಷ್ಣಮೂರ್ತಿ ನಿರ್ದೇಶನದಲ್ಲಿ ಡಾ.ಚಮದ್ರಶೇಖರ ಕಂಬಾರ ಅವರ ನಾಟಕ ‘ಹುಲಿಯ ನೆರಳು’ ಪ್ರದರ್ಶನಗೊಳ್ಳಲಿದೆ. ಮಂಗಳೂರಿನ ಉದ್ಯಮಿ ಲಕ್ಷ್ಮೀಶ ಭಂಡಾರಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.

ಮಾರ್ಚ್ 17ರಂದು ಸಂಜೆ 7 ಗಂಟೆಗೆ ಹೆಗ್ಗೋಡಿನ ಸಾಕೇತ ಕಲಾವಿದರು ‘ಲವ ಕುಶ’ ಯಕ್ಷಗಾನವನ್ನು ಪ್ರದರ್ಶಿಸಲಿದ್ದಾರೆ. ಪ್ರಸಿದ್ಧ ರಂಗಕರ್ಮಿ ಮೂಡುಬಿದಿರೆಯ ಜೀವನರಾಂ ಸುಳ್ಯ ಮುಖ್ಯ ಅತಿಥಿಯಾಗಿ ಬಾಗವಹಿಸಲಿದ್ದಾರೆ.

ಮಾರ್ಚ್ 18ರಂದು ಸಂಜೆ 7 ಗಂಟೆಗೆ ಕಿನ್ನರ ಮೇಳ ತುಮರಿ ಅರ್ಪಿಸುವ ಕೆ.ಜಿ.ಕೃಷ್ಣಮೂರ್ತಿ ರೂಪಾಂತರಿಸಿ ನಿರ್ದೇಶಿಸಿದ ಸ್ವೀಡಿಷ್ ನಾಟಕ ‘ಅದಲು ಬದಲು’ ಮತ್ತು ಡಾ.ಬಿ.ಜನಾರ್ದನ ಭಟ್ ಅನುವಾದಿಸಿದ ‘ಸ್ಟೀವ್ ಗೊಂದು ಕ್ಯಾಶ್’ ನಾಟಕ ಪ್ರದರ್ಶನಗೊಳ್ಳಲಿದೆ. ಮಂಗಳೂರು ಭಾರತೀಯ ವಿದ್ಯಾಭವನದ ಪ್ರೊ.ಜಿ.ಆರ್.ರೈ ಹಾಗೂ ಹಿರಿಯ ಸಾಹಿತಿ, ವಿಮರ್ಶಕರಾದ ಬೆಳ್ಮಣ್ಣುವಿನ ಡಾ.ಬಿ.ಜನಾರ್ದನ ಭಟ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

 

Leave a Reply

Your email address will not be published. Required fields are marked *