Realtime blog statisticsweb statistics
udupibits.in
Breaking News
ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ- ಶಂಕಿತ ಹಂತಕ ಬಿಜಾಪುರ ಸಿಂಧಗಿಯ ಪರಶುರಾಮ ವಾಗ್ಮೊರೆ ಬಂಧನ.

ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ವೈದ್ಯರಿಂದ ಪೇಶೆಂಟ್ ಪಾರ್ಟಿಗೆ ಹಲ್ಲೆ !

ಉಡುಪಿ: ಅಜ್ಜರಕಾಡಿನಲ್ಲಿರುವ ಜಿಲ್ಲಾ ಸರಕಾರಿ ಆಸ್ಪತ್ರೆಯ ವೈದ್ಯರೊಬ್ಬರು ಮೆಡಿಕಲ್ ವಾರ್ಡ್ ನಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವ ರೋಗಿಯೊಬ್ಬರ ಜೊತೆಗಿದವರ ಮೇಲೆ ಹಲ್ಲೆ ನಡೆಸಿದ ಘಟನೆ ಇಂದು ನಡೆದಿದೆ.

ಇಂದು ಹಲ್ಲೆ ನಡೆಸಿದ ವೈದ್ಯರು ಆಸ್ಪತ್ರೆಯಲ್ಲಿ ಹೀಗೆ ಹಲ್ಲೆ ನಡೆಸುತ್ತಿರುವುದು ಇದು ಮೊದಲ ಸಲವೇನೂ ಅಲ್ಲ. ಈ ಹಿಂದೆ ಹಲವು ಬಾರಿ ಹಲ್ಲೆ ನಡೆಸಿದವರಾಗಿದ್ದಾರೆ. ಇವರಿಂದ ಹಲ್ಲೆಗೊಳಗಾದ ಮಹಿಳೆಯೊಬ್ಬರು, ಇದೇ ಕಾರಣದಿಂದ ಬಳಿಕ ಮೃತರಾಗಿದ್ದು, ಪ್ರಕರಣವನ್ನು ಮುಚ್ಚಿಹಾಕಲಾಗಿತ್ತು. ಅಸೌಖ್ಯದಿಂದ ಮೃತಪಟ್ಟಿದ್ದು ಎಂದು ದಾಖಲೆ ಸೃಷ್ಟಿಸಲಾಗಿತ್ತು ಎಂದು ಹೇಳಲಾಗಿದೆ.

ಇದಲ್ಲದೆ, ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿಗೆ ಮತ್ತು ಆಸ್ಪತ್ರೆಯಲ್ಲಿ ಉದ್ಯೋಗದಲ್ಲಿರುವ ‘ಡಿ’ ಗ್ರೂಪ್ ನೌಕರನ ಮೇಲೆಯೂ ಹಲ್ಲೆ ನಡೆಸಿದ್ದರು. ಆದರೆ, ರಾಜಕೀಯ ಪ್ರಭಾವದ ಹಿನ್ಬನೆಲೆಯಲ್ಲಿ ಈ ಆರೋಪಿ ವೈದ್ಯರನ್ನು ಪ್ರತೀ ಪ್ರಕರಣದಿಂದಲೂ ಬಚಾವ್ ಮಾಡಲಾಗಿದೆ.

ಉಡುಪಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ, ರಾಜ್ಯದ ಮೀನುಗಾರಿಕೆ ಮತ್ತು ಯುವ ಸಬಲೀಕರಣ ಸಚಿವ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಅವರ ಕೃಪಾಕಟಾಕ್ಷವೇ ಈ ವೈದ್ಯರು ಇಷ್ಟೆಲ್ಲಾ ಮಾಡಿದರೂ ಅವರಿಗೇನೂ ಆಗದೆ  ಜಿಲ್ಲಾಸ್ಪತ್ರೆಯಲ್ಲಿ ವೈದ್ಯರಾಗಿ ಮುಂದುವರಿಯಲು ಕಾರಣವಾಗಿದೆ ಎಂದು ಹೇಳಲಾಗಿದೆ.

Leave a Reply

Your email address will not be published. Required fields are marked *