Realtime blog statisticsweb statistics
udupibits.in
Breaking News
ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ- ಶಂಕಿತ ಹಂತಕ ಬಿಜಾಪುರ ಸಿಂಧಗಿಯ ಪರಶುರಾಮ ವಾಗ್ಮೊರೆ ಬಂಧನ.

ಅಂಬಲಪಾಡಿ ದೇವಾಲಯದ ಮೊಕ್ತೇಸರ ಡಾ.ವಿಜಯ ಬಲ್ಲಾಳರ ಪ್ರತಿಷ್ಠೆ ಮೆರೆಸಲು ರಜಾದಿನ ಶಾಲಾ ಮಕ್ಕಳ ದುರ್ಬಳಕೆ !

ಉಡುಪಿ: ಆದಿ ಉಡುಪಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರು ತಮ್ಮ ಸ್ವಾರ್ಥಕ್ಕೆ ಮತ್ತು ತೀಟೆ ತೀರಿಸಿಕೊಳ್ಳುವ ಸಲುವಾಗಿ ಆದಿತ್ಯವಾರದ ರಜಾ ದಿನವಾದ ಇಂದು (ಎಪ್ರಿಲ್ 8, 2018) ಶಾಲಾ ಮಕ್ಕಳನ್ನು ದುರ್ಬಳಕೆ ಮಾಡಿಕೊಂಡ ವಿದ್ಯಾಮಾನ ನಡೆದಿದೆ.

ನಡು ಮಧ್ಯಾಹ್ನದ ಸುಡು ಬಿಸಿಲಿನಲ್ಲಿ ಶಾಲಾ ಮಕ್ಕಳನ್ನು ಶಿಕ್ಷಕರೊಬ್ಬರು ಆದಿ ಉಡುಪಿಯಿಂದ ಅಂಬಲಪಾಡಿಯಲ್ಲಿರುವ ಡಾ.ನೀ.ಬೀ.ವಿಜಯ ಬಲ್ಲಾಳ ಅವರ ಮನೆಗೆ ನಡೆಸಿಕೊಂಡು ಬಂದಿದ್ದಾರೆ. ಬಲ್ಲಾಳರ ಮನೆಗೆ ಕರೆದುಕೊಂಡು ಬಂದವರೆ ಮಕ್ಕಳಿಗೆ ಡಾ.ಬಲ್ಲಾಳರ ಕಾಲಿಗೆರಗುವಂತೆ ಆದೇಶಿಸಿದ್ದಾರೆ. ಮುಗ್ದ ಮಕ್ಕಳು ಡಾ.ಬಲ್ಲಾಳರ ಕಾಲಿಗೆರಗಿದ್ದಾರೆ.

ಇಷ್ಟಾದ ಬಳಿಕ, ಶಿಕ್ಷಕರು ಮಕ್ಕಳನ್ನು ಶ್ರೀ ಮಹಾಕಾಳಿ ಜನಾರ್ದನ ದೇವಸ್ಥಾನಕ್ಕೆ ನಡೆಸಿಕೊಂಡು ಹೋಗಿದ್ದಾರೆ. ಇಲ್ಲಿ ಮಕ್ಕಳಿಗೆ ಮಧ್ಯಾಹ್ನದೂಟ ಮಾಡಿಸಿ ಮತ್ತೆ ಆದಿ ಉಡುಪಿಗೆ ಸುಡು ಬಿಸಿಲಿನಲ್ಲಿಯೇ ನಡೆಸಿಕೊಂಡು ಕರೆದೊಯ್ದಿದ್ದಾರೆ. ಈ ಅವಧಿಯಲ್ಲಿ ಮಕ್ಕಳು ಯೂನಿಫಾರಂನಲ್ಲಿ ಇದ್ದರು.

ಅಂಬಲಪಾಡಿ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರರಾಗಿರುವ ಡಾ.ವಿಜಯ ಬಲ್ಲಾಳ್ ಅವರ ಜನ್ಮದಿನ ಇಂದು ಎಂದು ಹೇಳಲಾಗಿದ್ದು, ಈ ನಿಮಿತ್ತ ಆದಿ ಉಡುಪಿ ಶಾಲೆಯ ಅಧಿಕೃತರು ರಜಾ ದಿನವಾದ ಇಂದು ಊಟದ ಅಮಿಷವನ್ನೊಡ್ಡಿ ಮಕ್ಕಳನ್ನು ಯೂನಿಫಾರಂ ಧರಿಸಿಕೊಂಡು ಬರುವಂತೆ ಮಾಡಿ ತಮ್ಮ ಸ್ವಾರ್ಥ ಸಾಧಿಸಿಕೊಂಡಿದ್ದಾರೆ.

ಒಬ್ಬ ವ್ಯಕ್ತಿಯ ಪ್ರತಿಷ್ಠೆಯನ್ನು ಮೆರೆಸುವ ಸಲುವಾಗಿ ರಜಾ ದಿನವಾದ ಆದಿತ್ಯವಾರ ಶಾಲಾ ಮಕ್ಕಳನ್ನು ಶಿಕ್ಷಕರು ದುರುಪಯೋಗಪಡಿಸಿಕೊಂಡದ್ದು ಮತ್ತು ನಡು ಮಧ್ಯಾಹ್ನ ಸುಡು ಬಿಸಿಲಿನಲ್ಲಿ ಎರಡು ಕಿಮೀ ನಡೆಸಿದ್ದು ಅಕ್ರಮವಾಗಿದೆ ಮತ್ತು ಅಮಾನವೀಯವಾಗಿದೆ.

Leave a Reply

Your email address will not be published. Required fields are marked *