Realtime blog statisticsweb statistics
udupibits.in
Breaking News
# ಮಾಹಿತಿ ಹಕ್ಕು ಕಾಯಿದೆ ಜಾರಿಯಾಗಿ 13 ವರ್ಷ ಕಳೆದರೂ ಸಾರ್ವಜನಿಕ ಮಾಹಿತಿ ಅಧಿಕಾರಿಯನ್ನು ನೇಮಕ ಮಾಡದ ಬೀದರ್ ಜಿಲ್ಲಾ ಸರಕಾರಿ ಆಸ್ಪತ್ರೆ !

ಎಪ್ರಿಲ್ 14: ಅಂಬೇಡ್ಕರ್ ಯುವಸೇನೆಯಿಂದ ಉಡುಪಿಯಲ್ಲಿ ಬಹಿರಂಗ ಸಭೆ, ಬೃಹತ್ ವಾಹಾನ ಜಾಥಾ

ಉಡುಪಿ: ಉಡುಪಿಯ ‘ಅಂಬೇಡ್ಕರ್ ಯುವಸೇನೆ’ ವತಿಯಿಂದ ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ ಅಂಬೇಡ್ಕರ್ ಅವರ 127ನೇ ಜನ್ಮ ದಿನಾಚರಣೆ ಅಂಗವಾಗಿ ಮತ್ತು ಸಂವಿಧಾನ ರಕ್ಷಣೆಗಾಗಿ ಎಪ್ರಿಲ್ 14ರಂದು ಬಹಿರಂಗ ಜನಜಾಗೃತಿ ಸಭೆ ಹಾಗೂ ಡಾ.ಅಂಬೇಡ್ಕರ್ ರವರ ಜೀವನ ಮತ್ತು ಹೋರಾಟದ ಜೀವನವನ್ನು ಪರಿಚಯಿಸುವ ಬೃಹತ್ ವಾಹನ ಮೆರವಣಿಗೆ ಇತ್ಯಾದಿ ಕಾರ್ಯಕ್ರಮಗಳೊಂದಿಗೆ ‘ಭೀಮಾಯಾನ’ ಎಂಬ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿದೆ.

ಶನಿವಾರ ಬೆಳಗ್ಗೆ 10 ಗಂಟೆಗೆ ಮಲ್ಪೆ ವಡಭಾಂಡೇಶ್ವರ ಸರ್ಕಲ್ ನಲ್ಲಿ ಬಹಿರಂಗ ಜನಜಾಗೃತಿ ಸಭೆ ನಡೆಯಲಿದೆ. ಇದರಲ್ಲಿ ಬೆಂಗಳೂರಿನ ಖ್ಯಾತ ಪತ್ರಕರ್ತರೂ, ‘ನಾವೇ – ಕರ್ನಾಟಕ’ ಇದರ ಅಧ್ಯಕ್ಷರೂ ಆದ ಪಾರ್ವತೀಶ ಬಿಳಿದಾಳೆ, ಹೈಕೋರ್ಟ್ ವಕೀಲರಾದ ಬೆಂಗಳೂರಿನ ಶಿವಮಣಿ, ಶಿವಮೊಗ್ಗದ ಉಪನ್ಯಾಸಕರಾದ ಎಸ್.ಸುಂದರ್, ಉಡುಪಿಯ ಗುರುಮಾಚಿದೇವ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಅಧ್ಯಕ್ಷರಾದ ಆನಂದ ಮಡಿವಾಳ ಹಾಗೂ ಖ್ಯಾತ ದಲಿತ ಚಿಂತಕರೂ, ಲೇಖಕರೂ, ಸಂಘಟಕರೂ, ಜನಪರ ಹೋರಾಟಗಾರರೂ ಆದ ಜಯನ್ ಮಲ್ಪೆ ಮೊದಲಾದವರು ಭಾಷಣಕಾರರಾಗಿ ಭಾಗವಹಿಸಲಿದ್ದಾರೆ.

ಬಹಿರಂಗ ಸಭೆಯ ಬಳಿಕ ವಡಭಾಂಡೇಶ್ವರ ಸರ್ಕಲ್ ನಿಂದ ವಾಹನ ಜಾಥಾ ಹೊರಡಲಿದೆ. ಇದು ಮಲ್ಪೆ, ಕಡಲ ಕಿನಾರೆಯ ಕೊಳ ಮಾರ್ಗವಾಗಿ ತೊಟ್ಟಂ, ಕದ್ಕೆ, ಗುಜ್ಜರಬೆಟ್ಟು, ಕೆಮ್ಮಣ್ಣು, ನೇಜಾರು, ಕಲ್ಯಾಣಪುರ ಸಂತೆಕಟ್ಟೆ, ಲಕ್ಷ್ಮೀನಗರ, ಪಾಳೆಕಟ್ಟೆ, ಕೊಡವೂರು, ಮೂಡಬೆಟ್ಟು, ಕಂಬಳಕಟ್ಟ, ಪುತ್ತೂರು, ಬೈಪಾಸ್ ಮಾರ್ಗವಾಗಿ ಬನ್ನಂಜೆ, ಉಡುಪಿ ಸಿಟಿ ಬಸ್ ನಿಲ್ದಾಣ, ಕವಿ ಮುದ್ದಣ ಮಾರ್ಗ, ಜೋಡುಕಟ್ಟೆ, ಅಂಬಲಪಾಡಿ, ಕಪ್ಪೆಟ್ಟು ಮೂಲಕ ಮಲ್ಪೆ ವಡಭಾಂಡೇಶ್ವರಕ್ಕೆ ಮರಳಿ ಸಮಾಪ್ತಿಗೊಳ್ಳಲಿದೆ.

Leave a Reply

Your email address will not be published. Required fields are marked *