Realtime blog statisticsweb statistics
udupibits.in
Breaking News
ಮಂಗಳೂರು: ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣರಿಂದ ಹೇಳಿಕೆ- ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಆರೋಪ

ಎಪ್ರಿಲ್ 24: ಡಾ.ಪಿ.ವಿ.ಭಂಡಾರಿ, ಹರೀಶ್ ಶೆಟ್ಟಿ ಬಂಡ್ಸಾಲೆಯವರ ‘ಹದಿನೆಂಟು: ಏನಿಲ್ಲ, ಏನುಂಟು !?’ ಕೃತಿ ಬಿಡುಗಡೆ

ಉಡುಪಿ: ಡಾ.ಎ.ವಿ.ಬಾಳಿಗಾ ಸ್ಮಾರಕ ಆಸ್ಪತ್ರೆಯ ಆಡಳಿತ ನಿರ್ದೇಶಕರೂ, ಖ್ಯಾತ ಮನೋವೈದ್ಯರೂ, ಪ್ರತಿಷ್ಠಿತ ‘ಸಂಯಮ’ ಪ್ರಶಸ್ತಿ ಪುರಸ್ಕೃತರೂ ಆದ ಡಾ.ಪಿ.ವಿ.ಭಂಡಾರಿ ಹಾಗೂ ಭಾರತ ಸರಕಾರದ ಕಾರ್ಮಿಕ ಮತ್ತು ಉದ್ಯೋಗ ಇಲಾಖೆಯ ರಾಷ್ಟ್ರೀಯ ವೃತ್ತಿ ಸೇವೆ (ಎನ್.ಸಿ.ಎಸ್) ಯೋಜನೆಯಡಿಯಲ್ಲಿ ‘ಯಂಗ್ ಪ್ರೋಫೇಶನಲ್’ ಆಗಿ ಸೇವೆ ಸಲ್ಲಿಸುತ್ತಿರುವ ಹರೀಶ್ ಶೆಟ್ಟಿ ಬಂಡ್ಸಾಲೆ ಇವರು ಬರೆದಿರುವ ”ಹದಿನೆಂಟು: ಏನಿಲ್ಲ, ಏನುಂಟು !?” ಲೇಖನಗಳ ಸಂಕಲನದ ಬಿಡುಗಡೆ ಸಮಾರಂಭವು ಎಪ್ರಿಲ್ 24 ಮಂಗಳವಾರ ಸಂಜೆ 5 ಗಂಟೆಗೆ ಉಡುಪಿ ಕುಕ್ಕಿಕಟ್ಟೆಯ ಶ್ರೀಕೃಷ್ಣ ಬಾಲನಿಕೇತನದಲ್ಲಿ ನಡೆಯಲಿದೆ.

ಮುಂಬೈನ ಡಾ.ಎ.ವಿ.ಬಾಳಿಗಾ ಚಾರಿಟೀಸ್ ಮತ್ತು ಕಮಲ್ ಬಾಳಿಗಾ ಚಾರಿಟೇಬಲ್ ಟ್ರಸ್ಟ್ ವಿಶ್ವಸ್ಥರಾದ ಡಾ.ಆರ್.ವಿ. ಬಾಳಿಗಾ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಸಮಾರಂಭದಲ್ಲಿ, ರಾಷ್ಟ್ರೀಯ ಮತ್ತು ರಾಜ್ಯ ಅತ್ಯುತ್ತಮ ಬಾಲನಟ ಪ್ರಶಸ್ತಿ ವಿಜೇತ ಮಾಸ್ಟರ್ ಕೆ.ಮನೋಹರ್ ನೂತನ ಕೃತಿಯನ್ನು ಬಿಡುಗಡೆ ಮಾಡಲಿದ್ದಾರೆ.

ಮಣಿಪಾಲ ಕೆಎಂಸಿ ಮಾನಸಿಕ ವಿಭಾಗದ ಯುನಿಟ್ 2ರ ಮುಖ್ಯಸ್ಥರಾದ ಪ್ರೊ. ಡಾ.ಶ್ರೀಪತಿ ಎಂ.ಭಟ್, ಟಿ.ಎಂ.ಎ.ಪೈ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ.ಮಹಾಬಲೇಶ್ವರ ರಾವ್, ಡಾ.ಎ.ವಿ.ಬಾಳಿಗಾ ಸ್ಮಾರಕ ಆಸ್ಪತ್ರೆಯ ಮನೋವೈದ್ಯರಾದ ಡಾ.ವಿರೂಪಾಕ್ಷ ದೇವರಮನೆ ಹಾಗೂ ”ಹದಿನೆಂಟು: ಏನಿಲ್ಲ, ಏನುಂಟು !?”ಕೃತಿಯ ಪ್ರಕಾಶಕರಾದ ಸಾವಣ್ಣ ಪ್ರಕಾಶನದ ಜಮೀಲ್ ಸಾವಣ್ಣ ಮುಖ್ಯ ಅಥಿಗಳಾಗಿ ಭಾಗವಹಿಸಲಿದ್ದಾರೆ. ಕೆನರಾ ಬ್ಯಾಂಕ್ ನ ನಿವೃತ್ತ ಹಿರಿಯ ಪ್ರಬಂಧಕರಾದ ಶ್ರೀಮತಿ ಮೀನಾಕ್ಷಿ ವಿ.ಭಂಡಾರಿ ಅವರು ಉಪಸ್ಥಿತರಿರುವರು.

ಡಾ.ಪಿ.ವಿ.ಭಂಡಾರಿ                                     ಹರೀಶ್ ಶೆಟ್ಟಿ ಬಂಡ್ಸಾಲೆ

 

 

Leave a Reply

Your email address will not be published. Required fields are marked *