Realtime blog statisticsweb statistics
udupibits.in
Breaking News
ಉಡುಪಿ: ನೌಕರರಿಗೆ ಕಿರುಕುಳ ಆರೋಪ- ಬ್ರಹ್ಮಾವರ ಸಮುದಾಯ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಮಹೇಶ್ ಐತಾಳ್ ಅಮಾನತಿಗೆ ಶ್ರೀರಾಮ ದಿವಾಣ ಒತ್ತಾಯ

ಸಿಎಂ ಸಿದ್ಧರಾಮಯ್ಯಗೆ ಡಾ.ಪಿ.ವಿ.ಭಂಡಾರಿ ಫೆಸ್ಬುಕ್ ಲ್ಲಿ ಕೇಳಿದ ‘ಒಂದೇ ಪ್ರಶ್ನೆ ಉಡುಪಿಯ ಆಸ್ಪತ್ರೆ ಎಷ್ಟಕ್ಕೆ ಮಾರಿದ್ದು’ 372 ಶೇರ್ !

ಉಡುಪಿ: ಸಾಮಾಜಿಕ ಜಾಲತಾಣ ಫೇಸ್ ಬುಕ್ ನ ತಮ್ಮ ವಾಲ್ ನಲ್ಲಿ ಖ್ಯಾತ ಮನೋವೈದ್ಯರೂ, ಸಾಮಾಜಿಕ ಕಾರ್ಯಕರ್ತರೂ ಆಗಿರುವ ಉಡುಪಿಯ ಡಾ.ಪಿ.ವಿ.ಭಂಡಾರಿ ಅವರು ಕೇಳಿರುವ ಅತ್ಯಂತ ಮಹತ್ವಪೂರ್ಣವಾದ ಪ್ರಶ್ನೆಯೊಂದು ಕೇವಲ ನಾಲ್ಕೇ ದಿನಗಳಲ್ಲಿ 372 ಶೇರ್ ಕಂಡಿದ್ದು, ಇದು ಉಡುಪಿಯ ಹಾಜಿ ಅಬ್ದುಲ್ಲಾ ಸ್ಮಾರಕ ಸರಕಾರಿ ತಾಯಿ-ಮಕ್ಕಳ ಆಸ್ಪತ್ರೆಯನ್ನು ಜಮೀನು ಸಹಿತ ಖಾಸಗಿ ಉದ್ಯಮಿಯೊಬ್ಬರಿಗೆ ರಾಜ್ಯ ಸರಕಾರ ನೀಡಿದ್ದರ ವಿರುದ್ಧ ಸಾರ್ವಜನಿಕರಲ್ಲಿ ಮನೆ ಮಾಡಿರುವ ಆಕ್ರೋಶಕ್ಕೆ ಹಿಡಿದ ಕೈಗನ್ನಡಿಯಾಗಿದೆ.

ರಾಜ್ಯ ಕಾಂಗ್ರೆಸ್ ಸರಕಾರದಲ್ಲಿ ಮುಖ್ಯಮಂತ್ರಿಯಾಗಿರುವ ಸಿದ್ದರಾಮಯ್ಯ ಅವರು ಇತ್ತೀಚೆಗೆ ಬರಲಿರುವ ರಾಜ್ಯ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ವಿರೋಧ ಪಕ್ಷದ ನಾಯಕರಾದ ಬಿಜೆಪಿಯ ಬಿ.ಎಸ್.ಯಡಿಯೂರಪ್ಪನವರಿಗೆಮಾಧ್ಯಮಗಳ ಮೂಲಕ ಹತ್ತು ಪ್ರಶ್ನೆಗಳನ್ನು ಕೇಳಿದ್ದರು.

ಸಿದ್ದರಾಮಯ್ಯರು ಯಡಿಯೂರಪ್ಪನವರಿಗೆ ಕೇಳಿದ ಹತ್ತು ಪ್ರಶ್ನೆಗಳಿಗೆ ಪ್ರತಿಯಾಗಿ, ಡಾ.ಪಿ.ವಿ.ಭಂಡಾರಿಯವರು ‘’ಬಿಎಸ್ ವೈಗೆ ಹತ್ತು ಪ್ರಶ್ನೆ ಕೇಳಿದ ಸಿಎಂ ಸಿದ್ದರಾಮಯ್ಯ: ಸಿಎಂಗೆ ನನ್ನದು ಒಂದೇ ಪ್ರಶ್ನೆ ಉಡುಪಿಯ ಆಸ್ಪತ್ರೆ ಎಷ್ಟಕ್ಕೆ ಮಾರಿದ್ದು’’ ಎಂಬ ಪ್ರಶ್ನೆಯನ್ನು ಕೇಳಿ ತಮ್ಮ ಫೆಸ್ ಬುಕ್ ವಾಲ್ ಗೆ ಪೋಸ್ಟ್ ಮಾಡಿದ್ದರು. ಹೀಗೆ ಮಾಡಿದ್ದು ಎಪ್ರಿಲ್ 12ರಂದು.

ಡಾ.ಪಿ.ವಿ.ಭಂಡಾರಿಯವರ ಈ ಮಹತ್ವಪೂರ್ಣವಾದ ಪ್ರಶ್ನೆಯ ಪೋಸ್ಟ್, ಇಂದು ಸಂಜೆಯಾಗುವಷ್ಟರಲ್ಲಿ 372 ಶೇರ್ ಆಗಿದ್ದು  ಇದರ ಸಂಖ್ಯೆ ಇನ್ನೂ ಹೆಚ್ಚುತ್ತಲಿದೆ. ಡಾ.ಭಂಡಾರಿಯವರ ಈ ಪೋಸ್ಟ್ ಈ ಮಟ್ಟದಲ್ಲಿ ಶೇರ್ ಆಗಲು, ಉಡುಪಿಯ ಹಾಜಿ ಅಬ್ದುಲ್ಲಾ ಸ್ಮಾರಕ ಸರಕಾರಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯನ್ನು ಬಹುಕೋಟಿ ಮೊತ್ತದ ಜಮೀನು ಸಹಿತವಾಗಿ ಅನಿವಾಸಿ ಉದ್ಯಮಿ ಬಿ.ಆರ್.ಶೆಟ್ಟಿ ಅವರಿಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ನೀಡಿರುವ ಬಗ್ಗೆ ಪ್ರಜ್ಞಾವಂತ ನಾಗರಿಕ ಸಮೂಹಕ್ಕೆ ಇರುವ ಅಸಮಾಧಾನ ಮತ್ತು ಆಕ್ಷೇಪಗಳೇ ಕಾರಣವೆಂದು ಅಂದಾಜಿಸಲಾಗಿದೆ.

* ಡಾ.ಪಿ.ವಿ.ಭಂಡಾರಿ

Leave a Reply

Your email address will not be published. Required fields are marked *