Breaking News
ಉಡುಪಿ: ಜಿಲ್ಲಾ ಸರಕಾರಿ ಆಸ್ಪತ್ರೆಯ ಸಾರ್ವಜನಿಕ ಮಾಹಿತಿ ಅಧಿಕಾರಿಯಿಂದ ಮಾಹಿತಿ ಹಕ್ಕು ಕಾಯಿದೆ ಉಲ್ಲಂಘನೆ.
‘18-ಹದಿನಂಟು: ಏನಿಲ್ಲ, ಏನುಂಟು !?’ ಅನುಭವದ ಗಟ್ಟಿ ತಳಹದಿ ಇರುವ ಕೃತಿ: ಡಾ.ಮಹಾಬಲೇಶ್ವರ ರಾವ್
- Updated: April 26, 2018

ಉಡುಪಿ: ಖ್ಯಾತ ಮನೋವೈದ್ಯರಾದ ಡಾ.ಪಿ.ವಿ.ಭಂಡಾರಿ ಹಾಗೂ ಹರೀಶ್ ಶೆಟ್ಟಿ ಬಂಡ್ಸಾಲೆಯವರ ನೂತನ ಕೃತಿ ‘’18 ಹದಿನಂಟು ಏನಿಲ್ಲ, ಏನುಂಟು !?’’ ಅನುಭವದ ಗಟ್ಟಿ ತಳಹದಿ ಇರುವ ಕೃತಿಯಾಗಿದೆ ಎಂದು ಉಡುಪಿಯ ಟಿ.ಎಂ.ಎ.ಪೈ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಹಿರಿಯ ಶಿಕ್ಷಣ ತಜ್ಞ ಡಾ.ಮಹಾಬಲೇಶ್ವರ ರಾವ್ ಅವರು ಹೇಳಿದರು.
ಡಾ.ಭಂಡಾರಿಯವರ ಜನ್ಮದಿನವಾದ ಎಪ್ರಿಲ್ 24ರಂದು ಸಂಜೆ ಕುಕ್ಕಿಕಟ್ಟೆ ಶ್ರೀಕೃಷ್ಣ ಬಾಲನಿಕೇತನದಲ್ಲಿ ಆಯೋಜಿಸಲಾದ ‘ಸಾವಣ್ಣ ಪ್ರಕಾಶನ’ದ 73ನೇ ನೂತನ ಕೃತಿಯ ಬಿಡುಗಡೆ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.
‘ರೈಲ್ವೆ ಚಿಲ್ಡ್ರನ್ಸ್’ ಚಲನಚಿತ್ರದಲ್ಲಿನ ನಟನೆಗಾಗಿ ರಾಷ್ಟ್ರೀಯ ಮತ್ತು ರಾಜ್ಯ ಅತ್ಯುತ್ತಮ ಬಾಲನಟ ಪ್ರಶಸ್ತಿ ಪುರಸ್ಕೃತರಾದ ಮಾಸ್ಟರ್ ಕೆ. ಮನೋಹರ್ ಅವರು ಕೃತಿ ಬಿಡುಗಡೆಗೊಳಿಸಿದರು. ಜ್ಞಾನ ವೃದ್ಧಿಸುವ ಪುಸ್ತಕಗಳು ಗುರು ಮತ್ತು ಮಾರ್ಗದರ್ಶಕಗಳು ಎಂದು ಅವರು ತಿಳಿಸಿದರು.
ಮಣಿಪಾಲ ಕೆಎಂಸಿ ಮಾನಸಿಕ ವಿಭಾಗದ ಯುನಿಟ್-2ರ ಮುಖ್ಯಸ್ಥರಾದ ಪ್ರೊ.ಡಾ.ಶ್ರೀಪತಿ ಎಂ.ಭಟ್, ಖ್ಯಾತ ಲೇಖಕಕರಾದ ಉಡುಪಿ ದೊಡ್ಡಣಗುಡ್ಡೆಯ ಡಾ.ಎ.ವಿ.ಬಾಳಿಗಾ ಸ್ಮಾರಕ ಆಸ್ಪತ್ರೆಯ ಖ್ಯಾತ ಮನೋವೈದ್ಯ ಡಾ.ವಿರೂಪಾಕ್ಷ ದೇವರಮನೆ, ‘’18 ಹದಿನಂಟು ಏನಿಲ್ಲ ಏನುಂಟು !?’’ ಕೃತಿಯ ಪ್ರಕಾಶಕರಾದ ಸಾವಣ್ಣ ಪ್ರಕಾಶನದ ಜಮೀಲ್ ಸಾವಣ್ಣ ಅವರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ಸಮಾರಂಭದಲ್ಲಿ ಉಪಸ್ಥಿತರಿದ್ದ ಕೆನರಾ ಬ್ಯಾಂಕ್ ನಿವೃತ್ತ ಹಿರಿಯ ಪ್ರಬಂಧಕರಾದ ಶ್ರೀಮತಿ ಮೀನಾಕ್ಷಿ ವಿ.ಭಂಡಾರಿಯವರು, ಡಾ.ಪಿ.ವಿ.ಭಂಡಾರಿಯವರಿಂದ ಇನ್ನಷ್ಟೂ ನೂತನ ಕೃತಿಗಳು ಹೊರಬರುವಂತಾಗಬೇಕು ಎಂದು ಹರಸಿ ಹಾರೈಸಿದರು.
ಕಾರ್ಯಕ್ರಮದಲ್ಲಿ ಮಾಸ್ಟರ್ ಕೆ. ಮನೋಹರ್ ಅವರನ್ನು ಸನ್ಮಾನಿಸಲಾಯಿತು.