Realtime blog statisticsweb statistics
udupibits.in
Breaking News
# ಮಾಹಿತಿ ಹಕ್ಕು ಕಾಯಿದೆ ಉಲ್ಲಂಘನೆ ಮಾಡಿದವರಿಗೆ ದಂಡ, ಅರ್ಜಿದಾರರಿಗೆ ಪರಿಹಾರ ಕೊಡಿಸುವಲ್ಲಿ ರಾಜ್ಯ ಮಾಹಿತಿ ಆಯುಕ್ತರುಗಳ ಹಿಂದೇಟು: ಶ್ರೀರಾಮ ದಿವಾಣ ಆರೋಪ.

ಚುನಾವಣಾ ಚೆಕ್ ಪೋಸ್ಟ್ ನಲ್ಲಿ ಪೊಲೀಸರಿಂದ ದಲಿತ ದೌರ್ಜನ್ಯ !

ಉಡುಪಿ: ಚುನಾವಣಾ ಚೆಕ್ ಪೋಸ್ಟ್ ನ ಕಾರ್ಯನಿರ್ವಾಹಕ ದಂಡಾಧಿಕಾರಿಯಾಗಿರುವ ತೆಂಕನಿಡಿಯೂರು ಗ್ರಾಮ ಪಂಚಾಯತ್ ಕಾರ್ಯದರ್ಶಿ ಕಲ್ಲಪ್ಪ ಎಂಬವರ ಸಮಕ್ಷಮದಲ್ಲಿ, ಶಿರ್ವ ಪೊಲೀಸ್ ಠಾಣೆಯ ಕಾನ್ ಸ್ಟೇಬಲ್ ಅಂದಪ್ಪ ಹಾಗೂ ಬಿಎಸ್ಎಫ್ ಸಿಬ್ಬಂದಿಗಳು ದಲಿತ ಯುವಕನ ಮೇಲೆ ಹಲ್ಲೆ ನಡೆಸಿ ಬೆದರಿಸಿ ಒತ್ತಾಯಪೂರ್ವಕ ಸಾರ್ವಜನಿಕವಾಗಿ ಚೆಕ್ ಪೋಸ್ಟ್ ನ ಕಸಗುಡಿಸಸುವಂತೆ ಮಾಡಿ ಅಪಮಾನಿಸಿ ದೌರ್ಜನ್ಯ ಎಸಗಿದ ಘಟನೆ ಶಿರ್ವ ಪೊಲೀಸ್ ಠಾಣಾ ವ್ಯಾಪ್ತಿಯ ಮೂಡುಬೆಳ್ಳೆ ಬಳಿಯ ನೆಲ್ಲಿಕಟ್ಟೆಯಲ್ಲಿ ನಡೆದಿದೆ.

ಸಂಜೆ ಹೊತ್ತು ಈ ಅಮಾನವೀಯ ಘಟನೆ ನಡೆದಿದೆ. ಪೊಲೀಸ್ ಕಾನ್ ಸ್ಟೇಬಲ್ ಅಂದಪ್ಪ ಹಾಗೂ ಇತರ ಪೊಲೀಸ್ ಸಿಬ್ಬಂದಿಗಳು, ಕಾರ್ಯನಿರ್ವಾಹಕ ದಂಡಾಧಿಕಾರಿ ಕಲ್ಲಪ್ಪ ಹಾಗೂ ಬಿಎಸ್ಎಫ್ ಸಿಬ್ಬಂದಿಗಳು ಚೆಕ್ ಪೋಸ್ಟ್ ನಲ್ಲಿ ಕಾರ್ಯನಿರ್ವಹಿಸುತ್ತಿರುವಾಗ, ದಲಿತ ಯುವಕನೋರ್ವ ತನ್ನ ದ್ವಿಚಕ್ರ ವಾಹನದಲ್ಲಿ ಇತರ ಇಬ್ಬರನ್ನು ಕುಳ್ಳಿರಿಸಿಕೊಂಡು ಮೂಡುಬೆಳ್ಳೆ ಕಡೆಗೆ ಪ್ರಯಾಣಿಸುತ್ತಿದ್ದರು. ಬೈಕ್ ನಲ್ಲಿ ಮೂವರು ಸಂಚರಿಸುತ್ತಿರುವುದನ್ನು ಕಂಡವರೇ ಅಂದಪ್ಪ ಹಾಗೂ ಇತರರು ತಡೆದು ನಿಲ್ಲಿಸಿ ಬೈಕ್ ಸವಾರ ದಲಿತ ಯುವಕನ ಮೇಲೆ ಏಕಾಏಕಿ ಗಂಭೀರವಾಗಿ ಹಲ್ಲೆ ನಡೆಸಿದ್ದಾರೆ.

ಹಲ್ಲೆಯ ಪರಿಣಾಮವಾಗಿ ಸಹಜವಾಗಿ ನಡೆಯಲಾಗದೆ ಕುಂಟುತ್ತಾ ನಡೆಯುವ ಸ್ಥಿತಿಗೆ ತಲುಪಿದ ದಲಿತ ಯುವಕನ ಪಾಡನ್ನು ಕಂಡು ಸ್ವಲ್ಪವೂ ಕರುಣೆ ತೋರಿಸದ ಸಿಬ್ಬಂದಿಗಳು, ಚೆಕ್ ಪೋಸ್ಟ್ ಪಕ್ಕದಲ್ಲಿರುವ ಬಾಡಿಗೆ ಮನೆಯವರಿಂದ ಹಿಡಿಸೂಡಿಯನ್ನು ತರಿಸಿ ದಲಿತ ಯುವಕನಿಂದ ಕಸ ಗುಡಿಸುವಂತೆ ಮಾಡಿ ದಲಿತ ದೌರ್ಜನ್ಯವೆಸಗಿದ್ದಾರೆ. ಹೀಗೆ ದೌರ್ಜನ್ಯವೆಸಗುವ ಸಂದರ್ಭದಲ್ಲಿ ಸಿಸಿ ಕ್ಯಾಮರಾಕ್ಕೆ ಕಾಣದಂತೆ ಬದಿಗೆ ಎಳೆದೊಯ್ದು ಹಲ್ಲೆ ನಡೆಸಿರುವುದನ್ನು ಗಮಿಸಿದರೆ, ತೆರೆಮರೆಯಲ್ಲಿ ಇವರು ಈವರೆಗೆ ಏನೆಲ್ಲಾ ಅಕ್ರಮ ಕೃತ್ಯಗಳನ್ನು ನಡೆಸಿರಬಹುದು ಎಂಬ ಪ್ರಶ್ನೆ ಮೂಡಿದೆ.

ಇದೊಂದು ಮಾನವ ಹಕ್ಕುಗಳ ಸ್ಪಷ್ಟ ಉಲ್ಲಂಘನೆಯ ಪ್ರಕರಣ ಮತ್ತು ಸರಕಾರಿ ನೌಕರರು ಎಸಗಿದ ಕ್ರಿಮಿನಲ್ ಕೃತ್ಯವೂ ಆಗಿದೆ. ಪಿಸಿ ಅಂದಪ್ಪ ಚೆಕ್ ಪೋಸ್ಟ್ ನಲ್ಲಿ ಕರ್ತವ್ಯದಲ್ಲಿರುವ ಇತರರು, ಚೆಕ್ ಪೋಸ್ಟ್ ನಲ್ಲಿ ಇಂಥ ಅನೇಕ ಅಂಧಾದುಂಧಿಗಳನ್ನು ಪ್ರತಿದಿನ ಎಂಬಂತೆ ನಡೆಸುತ್ತಿರುವ ಬಗ್ಗೆ ವ್ಯಾಪಕ ದೂರುಗಳಿವೆ. ಚೆಕ್ ಪೋಸ್ಟ್ ಮೂಲಕ ಹಾದುಹೋಗುವ ವಾಹನಗಳಿಂದ ಹಣ್ಣು, ತಿಂಡಿ, ತಂಪು ಪಾನೀಯ, ಬಾರ್ ಗಳಿಗೆ ಸಾಗಿಸುವ ಮದ್ಯದ ಬಾಟಲಿಗಳನ್ನು ಒತ್ತಾಯಪೂರ್ವಕವಾಗಿ ಮತ್ತು ಬೆದರಿಸಿ ಸಿಸಿ ಕ್ಯಾಮರಾಕ್ಕೆ ಕಾಣದಂತೆ ಬಸ್ ನಿಲ್ದಾಣದ ಮರೆಯಲ್ಲಿ ಕಿತ್ತುಕೊಳ್ಳುವ ಕೃತ್ಯಗಳನ್ನೂ ನಡೆಸುವುದು ಯಾವುದೇ ಅಡೆತಡೆಯೂ ಇಲ್ಲದೆ ಇಲ್ಲಿ ನಡೆಯುತ್ತಿದೆ.

ನೆಲ್ಲಿಕಟ್ಟೆ ಚೆಕ್ ಪೋಸ್ಟ್ ನಲ್ಲಿ ಕರ್ತವ್ಯ ನಿರತ ಸಿಬ್ಬಂದಿಗಳು ಇಂಥ ಕುಕೃತ್ಯಗಳನ್ನು ನಡೆಸಲು ಶಿರ್ವ ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಅಬ್ದುಲ್ ಖಾದರ್ ಅವರ ಪರೋಕ್ಷ ಬೆಂಬಲವೇ ಕಾರಣವೆನ್ನಲಾಗಿದೆ.

Leave a Reply

Your email address will not be published. Required fields are marked *